ಕಿರಿಕ್ ಪಾರ್ಟಿ ಮುಗಿದು ಏಳು ವರ್ಷ ಆಯ್ತು: 'ಬ್ಯಾಚುಲರ್ ಪಾರ್ಟಿ'ಗೆ ರೆಡಿಯಾಗಿ ಎಂದ ರಕ್ಷಿತ್ ಶೆಟ್ಟಿ!

'ಕಿರಿಕ್ ಪಾರ್ಟಿ' ಚಿತ್ರ ಬಿಡುಗಡೆಯಾಗಿ, ಭರ್ಜರಿ ಯಶಸ್ಸು ಗಳಿಸಿ ಏಳು ವರ್ಷಗಳ ನಂತರ, ರಕ್ಷಿತ್ ಶೆಟ್ಟಿ ಮತ್ತು ತಂಡ ಮತ್ತೊಂದು ಸಕತ್ ಮನರಂಜನೆ ನೀಡುವ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದ್ದಾರೆ. 'ಕಿರಿಕ್ ಪಾರ್ಟಿ'ಯ ಗುಂಗಲ್ಲಿ ಏಳು ವರ್ಷ ಕಳೆದಾಯಿತು ಈಗ 'ಬ್ಯಾಚುಲರ್ ಪಾರ್ಟಿ' ಮಾಡೋಣ ಅಂತಿದ್ದಾರೆ.

2016 ರಲ್ಲಿ ಬಿಡುಗಡೆಯಾದ ಚಿತ್ರ ಕಿರಿಕ್ ಪಾರ್ಟಿ ಬಾಕ್ಸ್ ಆಫೀಸ್ ಹಿಟ್ ಆಗಿತ್ತು. ಕಳೆದ ವರ್ಷವೇ ಬ್ಯಾಚುಲರ್ ಪಾರ್ಟಿ ಘೋಷಣೆಯಾಗಿತ್ತು. ಆದರೆ, ನಂತರ ಅದರ ಅಪ್‌ಡೇಟ್ ಏನು ಸಿಕ್ಕಿರಲಿಲ್ಲ. ಅಪ್ಡೇಟ್ ಹಂಚಿಕೊಳ್ಳಿ ಎನ್ನುತ್ತಿದ್ದ ಪ್ರೇಕ್ಷಕರ ಮುಂದೆ ನಟ ರಕ್ಷಿತ್ ಶೆಟ್ಟಿ 'ಬ್ಯಾಚುಲರ್ ಪಾರ್ಟಿ' ಆಯೋಜಿಸಿದ್ದಾರೆ.

After Seven years of Kirik Party, Rakshit Shetty team will host a Bachelor Party

'ಬ್ಯಾಚುಲರ್ ಪಾರ್ಟಿ' ನೀಡಲಿದ್ದಾರೆ ರಕ್ಷಿತ್ ಶೆಟ್ಟಿ

ಈ ಬಾರಿ ನಟ ರಕ್ಷಿತ್ ಶೆಟ್ಟಿ ತಮ್ಮ ಹೋಮ್ ಬ್ಯಾನರ್ ಪರವಃ ಸ್ಟೋಡಿಯೋಸ್ ಅಡಿಯಲ್ಲಿ ಬ್ಯಾಚುಲರ್ ಪಾರ್ಟಿ ಆಯೋಜಿಸುತ್ತಿದ್ದಾರೆ. ಕಿರಿಕ್ ಪಾರ್ಟಿಗೆ ಆಕ್ಷನ್ ಕಟ್ ಹೇಳಿದ್ದ ರಿಷಬ್ ಶೆಟ್ಟಿ ಈಗ ಕಾಂತಾರ ಪ್ರಿಕ್ವೆಲ್‌ನಲ್ಲಿ ಬ್ಯುಸಿಯಾಗಿದ್ದು, ಬ್ಯಾಚುಲರ್ ಪಾರ್ಟಿ ಸಿನಿಮಾಗೆ ಅಭಿಜಿತ್ ಮಹೇಶ್ ಆಕ್ಷನ್ ಕಟ್ ಹೇಳಲಿದ್ದಾರೆ. ಇದು ಅಭಿಜಿತ್ ಮಹೇಶ್‌ಗೆ ಮೊದಲ ಸಿನಿಮಾ.

ಈ ಹಿಂದೆ 'ಕಿರಿಕ್ ಪಾರ್ಟಿ'ಗೆ ಬರಹಗಾರರಾಗಿದ್ದ ಅಭಿಜಿತ್ ಮಹೇಶ್ ಬ್ಯಾಚುಲರ್ ಪಾರ್ಟಿ ನಿರ್ದೇಶಿಸಲಿದ್ದಾರೆ. ಶೆಟ್ಟೆ ತಮಡದ ಹಲವು ಸಿನಿಮಾಗಳು ಸೇರಿ ಕನ್ನಡದ ಬೇರೆ ಬೇರೆ ಸಿನಿಮಾಗಳಲ್ಲಿ ಕೆಲಸ ಮಾಡಿದ ಅನುಭವ ಅವರ ಬೆನ್ನಿಗಿದೆ. ಇನ್ನು, 'ಬ್ಯಾಚುಲರ್ ಪಾರ್ಟಿ'ಯ ಅಪ್‌ಡೇಟ್‌ ಅನ್ನು ನಟ, ನಿರ್ಮಾಪಕ ರಕ್ಷಿತ್ ಶೆಟ್ಟಿ ತಮ್ಮ ಸೋಶಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡಿದ್ದಾರೆ.

After Seven years of Kirik Party, Rakshit Shetty team will host a Bachelor Party

ಮೋಡಿ ಮಾಡಲಿದ್ದಾರೆ ದಿಗಂತ್, ಲೂಸ್ ಮಾದ, ಅಚ್ಯುತ್ ಕುಮಾರ್!

ಅಭಿಜಿತ್ ಮಹೇಶ್ ನಿರ್ದೇಶಿಸಲಿರುವ ಈ ಸಿನಿಮಾ 'ಕಿರಿಕ್ ಪಾರ್ಟಿ'ಯಂತೆಯೇ ಸಕತ್ ಕಿಕ್ ಕೊಡಲಿದೆ ಎನ್ನುವುದನ್ನು ಅದರ ಟೈಟಲ್ ಅನಾವರಣದ ಝಲಕ್ ನೀಡುತ್ತಿದೆ. ಈ ಸಿನಿಮಾದಲ್ಲಿ ದೂದ್‌ಪೇಡ ದಿಗಂತ್ ಮಂಚಾಲೆ, ಲೂಸ್ ಮಾದ ಯೋಗಿ ಮತ್ತು ಅಚ್ಯುತ್ ಕುಮಾರ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಬ್ಯಾಚುಲರ್ ಪಾರ್ಟಿ ಚಿತ್ರವು ಕಳೆದ ವರ್ಷವೇ ಘೋಷಣೆಯಾಗಿತ್ತು. ಅದರಲ್ಲಿ ದಿಗಂತ್ ಮಂಚಾಲೆ, ರಿಷಬ್ ಶೆಟ್ಟಿ ಮತ್ತು ಅಚ್ಯುತ್ ಕುಮಾರ್ ನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ ಮತ್ತು ರಕ್ಷಿತ್ ಶೆಟ್ಟಿ ಅತಿಥಿ ಪಾತ್ರ ಮಾಡುತ್ತಾರೆ ಎನ್ನಲಾಗಿದೆ. ಆದರೆ, ಬ್ಯಾಚುಲರ್ ಪಾರ್ಟಿ ಘೋಷಣೆ ಬಳಿಕ ಕನ್ನಡದ ದೊಡ್ಡ ಹಿಟ್ 'ಕಾಂತಾರ' ಬಂದು ರಿಷಬ್ ಶೆಟ್ಟಿ ಬಹುಬೇಡಿಕೆಯ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. ಹೀಗಾಗಿ ರಿಷಬ್ ಶೆಟ್ಟಿ ಸ್ಥಾನದಲ್ಲಿ ಲೂಸ್ ಮಾದ ಯೋಗಿ ನಟಿಸಿದ್ದಾರೆ.

ಸಿನಿಮಾದಲ್ಲಿ ಸ್ವಾತಿ ಮುತ್ತಿನ ಮಳೆ ಹನಿಯೇ ನಾಯಕಿ ಸಿರಿ ರವಿಕುಮಾರ್ ಮತ್ತು ಥಾಯ್ಲೆಂಡ್ ಮೂಲದ ಸಾಮಾಜಿಕ ಮಾಧ್ಯಮದ ಪ್ರಭಾವಿ ಆಚರ ಕಿರ್ಕ್ ಕೂಡ ಕಾಣಿಸಿಕೊಂಡಿದ್ದಾರೆ. ರಕ್ಷಿತ್ ಶೆಟ್ಟಿ ಚಿತ್ರದ ಮೋಷನ್ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ 'ಪಾರ್ಟಿ' ನಡೆಯಲಿದೆ ಎಂದು ಭರವಸೆ ನೀಡಿದ್ದಾರೆ. 2024 ರ ಜನವರಿ ಅಂತ್ಯದಲ್ಲಿ ಸಿನಿಮಾ ಬಿಡುಗಡೆಯಾಗಬಹುದು. ಸಿನಿಮಾ ಬಗ್ಗೆ ಅಪ್‌ಡೇಟ್ ನೀಡುವುದಾಗಿ ನಟ ರಕ್ಷಿತ್ ಶೆಟ್ಟಿ ನಿನ್ನೇಯೇ ಮಾಹಿತಿ ನೀಡಿ, "ಈ ಸಲ ಪಾರ್ಟಿ ಜೋರು!" ಎಂದು ಹೇಳಿದ್ದಾರೆ. ಹಾಗಾಗಿ ಸಿನಿಮಾ ಸಕತ್ ಕಾಮಿಡಿ, ಮೋಜು ಮಸ್ತಿಯೊಂದಿಗೆ ಇರಲಿದೆ ಎಂದು ಅಂದಾಜಿಸಬಹುದು.

More from Filmibeat

English summary
After Kirik Party, Rakshit Shetty team will host a Bachelor Party.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X