Komal-Koragajja: ಶೂಟಿಂಗ್ ವೇಳೆ ಶೈನ್ ಶೆಟ್ಟಿ ಎಕ್ಸ್‌ಟ್ರಾ ಡೈಲಾಗ್.. ಕೊರಗಜ್ಜ ಕ್ಷೇತ್ರಕ್ಕೆ ನಟ ಕೋಮಲ್ ಓಡೋಡಿ ಬಂದಿದ್ದೇಕೆ?
ಕನ್ನಡ ಚಿತ್ರರಂಗದ ಹಾಸ್ಯ ನಟ ಕೋಮಲ್ ಕುಮಾರ್ ಒಂದಿಷ್ಟು ದಿನ ಸಿನಿಮಾದಿಂದ ದೂರ ಉಳಿದಿದ್ದರು. ಈಗ ಮತ್ತೆ ಸಿನಿಮಾ ಸಿನಿಮಾರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ಅವರೇ ನಿರ್ಮಿಸುತ್ತಿರುವ 'ಕಾಲಾಯ ನಮ:' ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
'ಕಾಲಾಯ ನಮ:' ಈ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ನವರಸ ನಾಯಕ ಜಗ್ಗೇಶ್ ಕೂಡ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಹೀಗಾಗಿ ಬಹಳ ದಿನಗಳ ಬಳಿಕ ಅಣ್ಣ ಮತ್ತು ತಮ್ಮ ಇಬ್ಬರೂ ಒಂದೇ ಸಿನಿಮಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

ಇದೇ ಸಿನಿಮಾದ ಚಿತ್ರೀಕರಣದ ವೇಳೆ ಶೈನ್ ಶೆಟ್ಟಿಯ ಒಂದು ಡೈಲಾಗ್‌ನಿಂದ ಕೋಮಲ್ ಮಂಗಳೂರು ಭಾಗದ ಜನರ ದೈವ ಕೊರಗಜ್ಜನ ಬಳಿ ಓಡೋಡಿ ಬಂದಿದ್ದಾರೆ. ಕೊರಗಜ್ಜನಿಗೆ ವಿಶೇಷ ಪೂಜೆಯನ್ನು ಸಲ್ಲಿಸಿ ಅಲ್ಲಿಂದ ತೆರಳಿದ್ದಾರೆ. ಅಷ್ಟಕ್ಕೂ ಶೂಟಿಂಗ್ ವೇಳೆ ಅಂತಹದ್ದೇನಾಯ್ತು? ತಿಳಿಯಲು ಮುಂದೆ ಓದಿ.
ಮಂಗಳೂರಿನಲ್ಲಿ 'ಕಾಲಾಯ ನಮ:' ಶೂಟಿಂಗ್
ಕೋಮಲ್ ಕುಮಾರ್ ನಾಯಕನಾಗಿ ನಟಿಸುತ್ತಿರುವ 'ಕಾಲಾಯ ನಮ:' ಸಿನಿಮಾದ ಚಿತ್ರೀಕರಣ ಮಂಗಳೂರಿನಲ್ಲಿ ನಡೆಯುತ್ತಿದೆ. ಇಲ್ಲಿ ಕೋಮಲ್ ಜೊತೆಗೆ ಕನ್ನಡದ ಮತ್ತೊಬ್ಬ ನಟ ಶೈನ್ ಶೆಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ವೇಳೆ ಶೈನ್ ಶೆಟ್ಟಿ ಎಕ್ಸ್‌ಟ್ರಾ ಡೈಲಾಗ್ ಹೇಳಿದ್ದರು. ಆ ಡೈಲಾಗ್‌ನಲ್ಲಿ ಕೊರಗಜ್ಜನ ಹೆಸರು ಬಂದಿತ್ತು. ಈ ಅನಿರೀಕ್ಷಿತ ಘಟನೆ ಬಳಿಕ ಕೋಮಲ್ ಕೊರಗಜ್ಜನ ಸನ್ನಿಧಿಗೆ ಭೇಟಿ ನೀಡಿದ್ದಾರೆ.
ಕೊರಗಜ್ಜನ ಸನ್ನಿಧಿ ಓಡೋಡಿ ಬಂದಿದ್ದೇಕೆ?
'ಕಾಲಾಯ ನಮ:' ಸಿನಿಮಾದಲ್ಲಿ ಕೋಮಲ್ ಸ್ನೇಹಿತನಾಗಿ ಶೈನ್ ಶೆಟ್ಟಿ ನಟಿಸುತ್ತಿದ್ದಾರೆ. ಸಿನಿಮಾ ದೃಶ್ಯವೊಂದರಲ್ಲಿ ಶೈನ್ ಶೆಟ್ಟಿ ಬಾಯಿತಪ್ಪಿ ಕೊರಗಜ್ಜನ ಹೆಸರು ಬಂದಿದೆ. ಅಚಾನಕ್ ಆಗಿ ಕೊರಗಜ್ಜನ ಹೆಸರು ಶೈನ್ ಶೆಟ್ಟಿ ಬಾಯಲ್ಲಿ ಬಂದಿತ್ತು. ಬಳಿಕ ಕೋಮಲ್, ಶೈನ್ ಶೆಟ್ಟಿಯಿಂದ ಕೊರಗಜ್ಜನ ಬಗ್ಗೆ ತಿಳಿದುಕೊಂಡು ಸನ್ನಿಧಿಗೆ ಓಡೋಡಿ ಬಂದು ಪೂಜೆ ಸಲ್ಲಿಸಿದ್ದಾರೆ. " ಶೈನ್ ಶೆಟ್ಟಿ ನಿನಗೆ ಒಳ್ಳೆಯದಾಗುತ್ತೆ ಮಾರಾಯ.. ಕೊರಗಜ್ಜನಿಗೆ ವಿಳ್ಯದೆಲೆ ಅಡಿಕೆ, ಚಕ್ಕುಲಿ ಕೊಡು ಅಂದರು. ಈ ಡೈಲಾಗ್ ಸಿನಿಮಾದಲ್ಲಿ ಇರಲಿಲ್ಲ. ಅದಕ್ಕೆ ಕೊರಗಜ್ಜನ ಬಗ್ಗೆ ತಿಳಿಕೊಂಡು ಪೂಜೆ ಸಲ್ಲಿಸಿದ್ದೇನೆ" ಎಂದು ಕೋಮಲ್ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಕೊರಗಜ್ಜನ ಸನ್ನಿಧಿಯಲ್ಲಿ ಕೋಮಲ್ ಪೂಜೆ
ಮಂಗಳೂರಿನ ಕಲ್ಲಾಪಿನ ಕೊರಗತನಿಯ ಆದಿಸ್ಥಳಕ್ಕೆ ಬಂದು ಕೋಮಲ್ ಪ್ರಾರ್ಥನೆ ಸಲ್ಲಿಸಿದ್ದಾರೆ. ಇದೇ ವೇಳೆ 'ಕಾಲಾಯ ನಮ:' ಸಿನಿಮಾದ ಯಶಸ್ಸಿಗಾಗಿ ಕೊರಗಜ್ಜನಿಗೆ ವೀಳ್ಯದೆಲೆ, ಚಕ್ಕುಲಿ ನೀಡಿ ಕೊರಗಜ್ಜನಿಗೆ ಕೋಮಲ್ ಪ್ರಾರ್ಥನೆ ಸಲ್ಲಿಸಿದ್ದಾರೆ. ಮಂಗಳೂರಿನ ದೈವ ಕೊರಗಜ್ಜನಿಗೆ ಪೂಜೆ ಸಲ್ಲಿಸಲು ಬಂದ ಕೋಮಲ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಿನಿಮಾದಲ್ಲಿ ದಿಗ್ಗಜರ ಸಮಾಗಮ
ಕೋಮಲ್ ಕುಮಾರ್ ನಟಿಸುತ್ತಿರುವ 'ಕಾಲಾಯ ನಮ:' ಸಿನಿಮಾದಲ್ಲಿ ದಿಗ್ಗಜರ ಸಮಾಗವೇ ಆಗಿದೆ. ಕೋಮಲ್ ನಿರ್ಮಿಸಿ ನಟಿಸುತ್ತಿರುವ ಈ ಸಿನಿಮಾದ ಪ್ರಮುಖ ಆಕರ್ಷಣೆ ನವರಸ ನಾಯಕ ಜಗ್ಗೇಶ್. ಹಾಗೇ ಬಹುಭಾಷಾ ನಟ ಪ್ರಕಾಶ ರಾಜ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿದ್ದಾರೆ. ಕೋಮಲ್ ಸ್ನೇಹಿತನಾಗಿ ಶೈನ್ ಶೆಟ್ಟಿ ಕೂಡ ನಟಿಸುತ್ತಿದ್ದಾರೆ. ದೇವರು, ದೈವದ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿರುವ ಕೋಮಲ್ ಕೊರಗಜ್ಜನ ಸನ್ನಿಧಿಗೆ ಭೇಟಿ ಕೊಟ್ಟು ಬಂದಿದ್ದಾರೆ.


Click it and Unblock the Notifications











