Just In
Don't Miss!
- News
ನಮ್ಮನ್ನು ಬಿಟ್ಟು ಓಡುತ್ತಿವೆ 500 ನಕ್ಷತ್ರಗಳು, ವಿಜ್ಞಾನಿಗಳಿಂದ ರಹಸ್ಯ ರಿವೀಲ್..!
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸರ್ಜರಿಯ ನಂತರ ಮೂರು ತಿಂಗಳು ರೆಸ್ಟ್ ನಲ್ಲಿ ಶಿವರಾಜ್ ಕುಮಾರ್
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಇರುವ ಶಿವಣ್ಣ ಸದ್ಯ ಲಂಡನ್ ಗೆ ಪಯಣ ಬೆಳೆಸಿದ್ದಾರೆ. 56ನೇ ವಯಸ್ಸಿನಲ್ಲು ಚಿರಯುವಕನಂತೆ ಕಾಣಿಸುವ ಹ್ಯಾಟ್ರಿಕ್ ಹೀರೋ ಎನರ್ಜಿಗೆ ಫಿದಾ ಆಗದರೆ ಇಲ್ಲ. ಸದಾ ಆಕ್ಟೀವ್ ಆಗಿರುವ ಶಿವಣ್ಣ ಸದ್ಯ ಸರ್ಜರಿಗಾಗಿ ಲಂಡನ್ ಗೆ ತೆರಳಿದ್ದಾರೆ.
ಬಲ ಭುಜದ ನೋವಿನಿಂದ ಬಳಲುತ್ತಿದ್ದ ಕರುನಾಡ ಚಕ್ರವರ್ತಿ ಈಗ ಸರ್ಜರಿ ಒಳಗಾಗಲಿದ್ದಾರೆ. ಈಗಾಗಲೆ ಶಿವಣ್ಣ ಲಂಡನ್ ತಲುಪಿದ್ದಾರೆ. ಶಿವಣ್ಣ ಜೊತೆ ಪತ್ನಿ ಗೀತಾ ಮತ್ತು ಮಗಳು ನಿವೇದಿತಾ ಕೂಡ ಲಂಡನ್ ನಲ್ಲಿದ್ದಾರೆ. ಶಿವಣ್ಣ ದಿಢೀರನೆ ಸರ್ಜರಿಗೊಳಗಾಗುತ್ತಿರವುದು ಅಭಿಮಾನಿಗಳಲ್ಲಿ ಕೊಂಚ ಭಯ ಕೂಡ ಕಾಡುತ್ತಿದೆ.
ಲಂಡನ್ ನಲ್ಲಿ ಶಿವಣ್ಣನನ್ನು ಭೇಟಿ ಮಾಡಿದ ಸಲ್ಮಾನ್ ಸಹೋದರ
ಸಿನಿಮಾಗಳಲ್ಲಿ ಬ್ಯುಸಿ ಇದ್ದ ಶಿವಣ್ಣ ಯಾಕೆ ಲಂಡನ್ ನಲ್ಲಿ ಸರ್ಜರಿ ಮಾಡಿಕೊಳ್ಳುತ್ತಾರೆ ಎನ್ನುವ ಭಯ ಅಭಿಮಾನಿಗಳನ್ನು ಕಾಡುತ್ತಿದೆ. ಸಖತ್ ಆಕ್ಷನ್ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಶಿವಣ್ಣ ಅವರಿಗೆ ಬಲ ಭುಜಕ್ಕೆ ಏನಾಗಿದೆ? ಸರ್ಜರಿ ನಂತರ ಮತ್ತೆ ಯಾವಾಗ ಚಿತ್ರೀಕರಣದಲ್ಲಿ ಭಾಗಿಯಾಗಬಹುದು ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿದೆ. ಮುಂದೆ ಓದಿ..

ಜುಲೈ 10 ಕ್ಕೆ ಸರ್ಜರಿ
ಕೆಲವು ದಿನಗಳಿಂದ ಬಲ ಭುಜದ ನೋವಿನಿಂದ ಬಳಲುತ್ತಿದ್ದ ಶಿವಣ್ಣ ಅವರಿಗೆ ಇದೆ ತಿಂಗಳು ಜುಲೈ 10ಕ್ಕೆ ಅಂದ್ರೆ ನಾಳೆ ಸರ್ಜರಿ ಮಾಡಲಾಗುತ್ತಿದೆ. ಈಗಾಗಲೆ ಶಿವಣ್ಣ ಕುಟುಂಬ ಲಂಡನ್ ನಲ್ಲಿದ್ದಾರೆ. ಶಿವಣ್ಣ ಜೊತೆ ಪತ್ನಿ ಗೀತಾ ಮತ್ತು ಮಗಳು ಕೂಡ ಜೊತೆಯಲ್ಲಿದ್ದಾರೆ. ಈಗಾಗಲೆ ಶಿವಣ್ಣ ಲಂಡನ್ ನಲ್ಲಿರುವ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಸಖತ್ ಆಕ್ಟೀವ್ ಆಗಿ ಓಡಾಡುತ್ತಿರುವ ಶಿವಣ್ಣನನ್ನು ನೋಡಿ ಕಣ್ತುಂಬಿಕೊಳ್ಳುತ್ತಿದ್ದಾರೆ ಅಭಿಮಾನಿಗಳು.
ಪುನೀತ್, ಯಶ್, ದರ್ಶನ್, ಶಿವಣ್ಣನಿಗೆ ಸುದೀಪ್ ನೀಡಿದ ಸಲಹೆ ಏನು ಗೊತ್ತಾ?

ಜನವರಿಯಲ್ಲಿ ಬಲ ಭುಜಕ್ಕೆ ಏಟು
ಶಿವಣ್ಣ ದಿಢೀರನೆ ಸರ್ಜರಿ ಅಂತ ಲಂಡನ್ ಆಸ್ಪತ್ರೆಗೆ ತೆರಳಿರುವುದು ಅಭಿಮಾನಿಗಳಲ್ಲಿ ಆತಂಕ ಎದುರಾಗಿತ್ತು. ಯಾಕೆ ಏನಾಗಿದೆ ಎನ್ನುವ ಗೊಂದಲ ಅಭಿಮಾನಿಗಳಲಿತ್ತು. ಜನವರಿಯಲ್ಲಿ ಶಿವಣ್ಣ ಅವರ ಬಲ ಭುಜಕ್ಕೆ ಏಟಾಗಿತ್ತು. ಯು ಎಸ್ ಎ ಪ್ರವಾಸ ತೆರಳಿದ್ದ ಸಂದರ್ಭದಲ್ಲಿ ಶಿವಣ್ಣ ಅವರ ಬಲ ಭುಜಕ್ಕೆ ಪೆಟ್ಟಾಗಿತ್ತು. ಅವತ್ತಿನಿಂದ ಸುಮಾರು ಆರೇಳು ತಿಂಗಳುಗಳ ಕಾಲ ಶಿವಣ್ಣ ನೋವಿನಿಂದ ಬಳಲುತ್ತಿದ್ದರು. ಅದೆ ನೋವಿನಲ್ಲಿ ಚಿತ್ರೀಕರಣದಲ್ಲು ಭಾಗಿಯಾಗಿದ್ದರು.

ಮೂರು ತಿಂಗಳು ರೆಸ್ಟ್ ನಲ್ಲಿ ಶಿವಣ್ಣ
ಸದ್ಯ ಸರ್ಜರಿ ಒಳಗಾಗುತ್ತಿರುವ ಶಿವಣ್ಣ ಇನ್ನು ಮೂರು ತಿಂಗಳು ರೆಸ್ಟ್ ನಲ್ಲಿ ಇರಬೇಕಂತೆ. ನಾಳೆ(ಜುಲೈ 10) ಬಲ ಭುಜಕ್ಕೆ ಸರ್ಜರಿ ಮಾಡಲಾಗುತ್ತೆ. ಆ ನಂತರ ಮೂರು ತಿಂಗಳು ಯಾವುದೆ ಚಿತ್ರೀಕರಣದಲ್ಲಿ ಭಾಗಿಯಾಗುವ ಹಾಗಿಲ್ಲವಂತೆ. ಸೆಪ್ಟಂಬರ್ ವರೆಗು ಶಿವಣ್ಣ ಚಿತ್ರೀಕರಣದದಿಂದ ದೂರ ಇರಲಿದ್ದಾರೆ. ಅದರಲ್ಲು ಆಕ್ಷನ್ ದೃಶ್ಯಗಳನ್ನು ಸಧ್ಯಕ್ಕೆ ಮಾಡಲು ಸಾಧ್ಯವಾಗುವುದಿಲ್ಲ. ಮೂರು ತಿಂಗಳುಗಳ ಬಳಿಕ ಮತ್ತೆ ಚಿತ್ರೀಕರಣದಲ್ಲಿ ಭಾಗಿಯಾಗಲಿದ್ದಾರೆ ಹ್ಯಾಟ್ರಿಕ್ ಹೀರೋ.
ನನ್ನ ಜತೆಗಿರುವವರು ಆತಂಕಗೊಂಡಾಗಲೇ ನನಗೆ ನೋವಾಗೋದು! - ಶಿವರಾಜ್ ಕುಮಾರ್

ಭಜರಂಗಿ-2 ನಲ್ಲಿ ಹ್ಯಾಟ್ರಿಕ್ ಹೀರೋ ಬ್ಯುಸಿ
ಭಜರಂಗಿ-2 ಚಿತ್ರದ ಚಿತ್ರೀಕರಣದಲ್ಲಿ ಶಿವಣ್ಣ ಸದ್ಯ ಬ್ಯುಸಿ ಇದ್ದರು. ಈಗಾಗಲೆ ಕೆಲವು ದೃಶ್ಯಗಳ ಚಿತ್ರೀಕರಣ ಕೂಡ ಮಾಡಲಾಗಿದೆ. ಎ ಹರ್ಷ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಲ್ಲದೆ ಪಿ ವಾಸು ನಿರ್ದೇಶನದ ಇನ್ನು ಹೆಸರಿಡದ ಚಿತ್ರದ ಚಿತ್ರೀಕರಣ ಈಗಾಗಲೆ ಮುಕ್ತಾಯವಾಗಿದೆ. 'ದ್ರೋಣ', 'ಎಸ್ ಆರ್ ಕೆ' ಸಿನಿಮಾ ಸೇರಿದಂತೆ ಸಾಕಷ್ಟು ಸಿನಿಮಾಗಳು ಶಿವಣ್ಣ ಬಳಿ ಇವೆ. ಮೊನ್ನೆ ಮೊನ್ನೆಯಷ್ಟೆ 'ರುಸ್ತುಂ' ಸಿನಿಮಾ ರಿಲೀಸ್ ಆಗಿದೆ.