ಸರ್ಜರಿ ನಂತರ ಚಿತ್ರೀಕರಣಕ್ಕೆ ಸಜ್ಜಾದ ಶಿವರಾಜ್ ಕುಮಾರ್
Recommended Video
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬಲ ಭುಜದ ಸರ್ಜರಿ ಮಾಡಿಸಿಕೊಂಡು ತಿಂಗಳು ಕಳೆದಿದೆ. ಕಳೆದ ತಿಂಗಳು ಲಂಡನ್ ನಲ್ಲಿ ಸರ್ಜರಿಗೆ ಒಳಗಾಗಿದ್ದ ಶಿವಣ್ಣ ಸುಮಾರು ತಿಂಗಳಿಂದ ರೆಸ್ಟ್ ನಲ್ಲಿ ಇದ್ದರು.
ಸದ್ಯ ಸಂಪೂರ್ಣ ಗುಣಮುಖರಾಗಿರುವ ಶಿವರಾಜ್ ಕುಮಾರ್ ಮತ್ತೆ ಚಿತ್ರೀಕರಣಕ್ಕೆ ಹೋಗಲು ಸಿದ್ಧರಾಗಿದ್ದಾರೆ. ಹ್ಯಾಟ್ರಿಕ್ ಹೀರೊ ಸರ್ಜರಿಗೂ ಮೊದಲು ಭಜರಂಗಿ-2 ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಒಂದು ವಾರಗಳ ಚಿತ್ರೀಕರಣ ಮಾಡಿದ್ದ ಚಿತ್ರತಂಡ ಈಗ ಮತ್ತೆ ಚಿತ್ರೀಕರಣಕ್ಕೆ ರೆಡಿಯಾಗಿದೆ.
ಅಂದ್ಹಾಗೆ ಭಜರಂಗಿ-2 ಚಿತ್ರದ ಚಿತ್ರೀಕರಣ ಮುಂದಿನ ತಿಂಗಳು ಸೆಪ್ಟಂಬರ್ 9ರಿಂದ ಪ್ರಾರಂಭವಾಗಲಿದೆಯಂತೆ. ಸೆಂಚುರಿ ಸ್ಟಾರ್ ಸರ್ಜರಿಗಾಗಿ ಲಂಡನ್ ತೆರಳಿದ ಕಾರಣ ಚಿತ್ರೀಕರಣ ಅರ್ಧದಲ್ಲೆ ನಿಂತಿತ್ತು. ಆದ್ರೀಗ ಮತ್ತೆ ಪ್ರಾರಂಭಿಸಲಾಗುತ್ತಿದೆ.

ಭಜರಂಗಿ-2 ಐದು ಭಾಷೆಯಲ್ಲಿ ತೆರೆಗೆ ಬರುತ್ತಿದೆಯಂತೆ. ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಪ್ಲಾನ್ ಮಾಡಿಕೊಂಡಿದೆ ಚಿತ್ರತಂಡ. ಇತ್ತೀಚಿನ ದಿನಗಳಲ್ಲಿ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗುತ್ತಿವೆ. ಭಜರಂಗಿ-2 ಐದು ಭಾಷೆಯಲ್ಲಿ ತೆರೆಗೆ ಬಂದರೆ, ಮೊದಲ ಬಾರಿಗೆ ಶಿವರಾಜ್ ಕುಮಾರ್ ಬೇರೆ ಬೇರೆ ಭಾಷೆಯಲ್ಲೂ ಮಿಂಚಲಿದ್ದಾರೆ.
ಭಜರಂಗಿ-2 ಎ ಹರ್ಷ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರದಲ್ಲಿ ಶಿವರಾಜ್ ಕುಮಾರ್ ಗೆ ನಾಯಕಿಯಾಗಿ ಭಾವನ ಕಾಣಿಸಿಕೊಳ್ಳುತ್ತಿದ್ದಾರೆ. ಶಿವಣ್ಣ ಬಳಿ ಸಾಕಷ್ಟು ಸಿನಿಮಾಗಳಿವೆ. ಈಗಾಗಲೆ ದ್ರೋಣ ಮತ್ತು ಅಯುಷ್ಮಾನ್ ಭವ ಸಿನಿಮಾ ರಿಲೀಸ್ ಗೆ ರೆಡಿಯಾಗಿವೆ.


Click it and Unblock the Notifications











