'ಬ್ರೇಕ್ ಅಪ್' ಸುದ್ದಿಗಳ ಬಳಿಕ ವಿದೇಶಕ್ಕೆ ಹಾರಿದ ರಕ್ಷಿತ್ ಶೆಟ್ಟಿ

Recommended Video

ಬ್ರೇಕಪ್ ನಂತ್ರ ಪ್ರವಾಸದಲ್ಲಿ ರಕ್ಷಿತ್ ಶೆಟ್ಟಿ..! | Oneindia Kannada

ಈ ವಾರ ಸ್ಯಾಂಡಲ್ ವುಡ್ ನಲ್ಲಿ ಒಂದೇ ಸುದ್ದಿ. ಅದು ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಅವರ ಬ್ರೇಕ್ ಅಪ್ ಬಗ್ಗೆ. ನಿಜವಾಗಿಯೂ ಇವರಿಬ್ಬರ ನಡುವೆ ಬ್ರೇಕ್ ಅಪ್ ಆಗಿದ್ಯಾ..? ಇಲ್ವಾ..? ಗೊತ್ತಿಲ್ಲ. ಅಂದರೆ, ರಕ್ಷಿತ್ ಈಗ ಈ ಎಲ್ಲ ಸುದ್ದಿಗಳಿಂದ ದೂರ ಇರಲು ಪ್ರಯತ್ನ ಮಾಡಿದ್ದಾರೆ.

ಕೆಲವು ದಿನಗಳಿಂದ ಎಲ್ಲಿ ನೋಡಿದರು ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಬಗ್ಗೆಯೇ ಸುದ್ದಿ ಹೇಳಿ ಬರುತ್ತಿತ್ತು. ಈ ಬಗ್ಗೆ ಸ್ವತಃ ರಕ್ಷಿತ್ ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದರು. ಬ್ರೇಕ್ ಅಪ್ ಬಗ್ಗೆ ಮಾತನಾಡಿದ್ದ ರಕ್ಷಿತ್ ಅಡ್ಡ ಗೊಡೆಯ ಮೇಲೆ ದೀಪ ಇಟ್ಟಿದ್ದರು.

''ಅದಷ್ಟೂ ಬೇಗ ಎಲ್ಲವೂ ಬಗೆಹರಿಯುತ್ತೆ ಎಂಬ ನಂಬಿಕೆ ಇದೆ. ನಿಮಗೂ ಕೂಡ ಸತ್ಯ ತಿಳಿಯಲಿದೆ.'' ಎಂದು ಫೇಸ್ ಬುಕ್ ನಲ್ಲಿ ತಿಳಿಸಿದ್ದ ರಕ್ಷಿತ್ ಈಗ ಫಾರಿನ್ ಹೋಗಿದ್ದಾರೆ. ಮುಂದೆ ಓದಿ..

ಥೈಲ್ಯಾಂಡ್ ನಲ್ಲಿ ರಕ್ಷಿತ್ ಶೆಟ್ಟಿ

ಥೈಲ್ಯಾಂಡ್ ನಲ್ಲಿ ರಕ್ಷಿತ್ ಶೆಟ್ಟಿ

ಕೆಲವು ದಿನಗಳ ಬರುತ್ತಿದ್ದ ಬ್ರೇಕ್ ಅಪ್ ಸುದ್ದಿಗಳಿಂದ ಬೇಸತ್ತು ಹೋಗಿದ್ದು ನಟ ರಕ್ಷಿತ್ ಶೆಟ್ಟಿ ಸದ್ಯ ಥೈಲ್ಯಾಂಡ್ ಪ್ರವಾಸದಲ್ಲಿ ಇದ್ದಾರೆ. ಥೈಲ್ಯಾಂಡ್ ನಲ್ಲಿರುವ ಪ್ರವಾಸಿ ಸ್ಥಳವಾದ ಪಟ್ಟಾಯಗೆ ರಕ್ಷಿತ್ ಶೆಟ್ಟಿ ಹೋಗಿದ್ದಾರೆ.

ರಕ್ಷಿತ್ ಜೊತೆಗೆ ಪುಷ್ಕರ್

ರಕ್ಷಿತ್ ಜೊತೆಗೆ ಪುಷ್ಕರ್

ನಟ ರಕ್ಷಿತ್ ಶೆಟ್ಟಿ ಜೊತೆಗೆ ಅವರ ಆಪ್ತ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹಾಗೂ ನೃತ್ಯ ನಿರ್ದೇಶಕ ಇಮ್ರಾನ್ ಸರ್ಧಾರಿಯಾ ಸಹ ಬ್ಯಾಂಕಾಕ್ ಗೆ ತೆರಳಿದ್ದಾರೆ. ಈ ಹಿಂದೆ ಬ್ರೇಕ್ ಅಪ್ ಘಟನೆಯ ಬಗ್ಗೆ ಪುಷ್ಕರ್ ಕೂಡ ಮಾತನಾಡಿದ್ದರು.

ಸಿನಿಮಾ ಶೂಟಿಂಗ್ ಗಾಗಿ ಅಲ್ಲ

ಸಿನಿಮಾ ಶೂಟಿಂಗ್ ಗಾಗಿ ಅಲ್ಲ

ಸಾಮಾನ್ಯವಾಗಿ ಸಿನಿಮಾ ನಟರು ವಿದೇಶಕ್ಕೆ ಹೋಗಿದ್ದಾರೆ ಅಂದರೆ ಯಾವುದೋ ಸಿನಿಮಾದ ಚಿತ್ರೀಕರಣ ಇರಬೇಕು ಅನಿಸುತ್ತದೆ. ಆದರೆ, ರಕ್ಷಿತ್ ಸದ್ಯ ಯಾವುದೇ ಚಿತ್ರದ ಶೂಟಿಂಗ್ ಗಾಗಿ ವಿದೇಶಕ್ಕೆ ತೆರಳಿಲ್ಲ. ಯಾಕೆಂದರೆ, ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ 'Holiday' ಎಂದು ಬರೆದುಕೊಂಡಿದ್ದಾರೆ.

'ತೆನಾಲಿ' ಸಿನಿಮಾ ಲುಕ್ ರಿಲೀಸ್

'ತೆನಾಲಿ' ಸಿನಿಮಾ ಲುಕ್ ರಿಲೀಸ್

ಅತ್ತ ರಕ್ಷಿತ್ ವಿದೇಶಿ ಪ್ರವಾಸದಲ್ಲಿ ಇದ್ದರೆ, ಇತ್ತ ಅವರ 'ತೆನಾಲಿ' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರದ ಲುಕ್ ಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. 'ಗೋಧಿ ಬಣ್ಣ ಸಾಧಾರಣ ಮೈ ಕಟ್ಟು' ಸಿನಿಮಾದ ನಂತರ ಮತ್ತೆ ಹೇಮಂತ್ ರಾವ್ ಹಾಗೂ ರಕ್ಷಿತ್ ಕಾಂಬಿನೇಶನ್ ನಲ್ಲಿ ಬರುತ್ತಿರುವ ಸಿನಿಮಾ ಇದಾಗಿದೆ.

ಬ್ರೇಕ್ ಅಪ್ ಬಗ್ಗೆ ರಕ್ಷಿತ್ ನೀಡಿದ್ದ ಸ್ಪಷ್ಟನೆ

ಬ್ರೇಕ್ ಅಪ್ ಬಗ್ಗೆ ರಕ್ಷಿತ್ ನೀಡಿದ್ದ ಸ್ಪಷ್ಟನೆ

ವಿದೇಶಕ್ಕೆ ಹೋಗುವ ಮುನ್ನ ರಕ್ಷಿತ್ ತಮ್ಮ ಹಾಗೂ ರಶ್ಮಿಕಾ ನಡುವಿನ ಬ್ರೇಕ್ ಅಪ್ ಸುದ್ದಿಗೆ ಸ್ಪಷ್ಟನೆ ನೀಡಿದ್ದರು. ''ನಾವೆಲ್ಲರೂ ಏನನ್ನು ನೋಡುತ್ತೇವೆ ಮತ್ತು ಏನು ಹೇಳುತ್ತೇವೆ ಎಂಬುದನ್ನ ಮಾತ್ರ ನಂಬುತ್ತೇವೆ. ಆದ್ರೆ, ಅದು ನಿಜವಾಗಬೇಕು ಅಂತ ಏನಿಲ್ಲ. ಅವಳ ಬಗ್ಗೆ ನಿಮೆಲ್ಲರಿಗಿಂತ ನನಗೆ ಜಾಸ್ತಿ ಗೊತ್ತಿದೆ. ಅವಳನ್ನ ತಾಳ್ಮೆಯಿಂದ ಇರಲು ಬಿಡಿ.'' ಎಂದು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದರು.

More from Filmibeat

English summary
After the break up news Actor Rakshit Shetty flys to thailand.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X