ಬ್ರೇಕಪ್ ವದಂತಿಗೆ ಬ್ರೇಕ್: ಲಂಚ್, ಡಿನ್ನರ್ ಎಂದು ಮುಂಬೈ ಸುತ್ತಿದ ಮಲೈಕಾ ಅರೋರಾ, ಅರ್ಜುನ್ ಕಪೂರ್
ನಟ ಅರ್ಜುನ್ ಕಪೂರ್ ಮತ್ತು ನಟಿ, ನೃತ್ಯಗಾರ್ತಿ ಮಲೈಕಾ ಅರೋರಾ ಬ್ರೇಕಪ್ ಸುದ್ದಿ ಕಳೆದೆರಡು ದಿನಗಳಿಂದ ಭಾರೀ ಚರ್ಚೆಯಲ್ಲಿತ್ತು. ಮೊದಲಿನಿಂದಲೂ ಇವರಿಬ್ಬರೂ ಜೊತೆಲಿ ಇರೋಕೆ ಸಾಧ್ಯನೇ ಇಲ್ಲ ಎನ್ನುತ್ತಿದ್ದ ಹಲವರಿಗೆ ಇದು ಸಕತ್ ಮಜಾ ಕೊಟ್ಟಿತ್ತು. ಆದರೆ, ಅರ್ಜುನ್ ಕಪೂರ್ ಈ ವಿಷಯಕ್ಕೆ ಫುಲ್‌ಸ್ಟಾಪ್ ಇಟ್ಟಿದ್ದರು.
ಅರ್ಜುನ್ ಕಪೂರ್ ಮತ್ತು ಮಲೈಕಾ ಅವರ ಲವ್ ಸ್ಟೋರಿ ಬಾಲಿವುಡ್‌ನಲ್ಲಿ ಒಂಥರಾ ಬಿಸಿ ಜಿಲೇಬಿ ಇದ್ದಂತೆ. ಒಂದಲ್ಲ ಒಂದು ವಿಷಯಕ್ಕೆ ಚರ್ಚೆಗೆ ಬರುತ್ತಲೆ ಇರುತ್ತದೆ. ಹಲವು ಬಾರಿ ಇವರಿಬ್ಬರೂ ದೂರವಾಗಿದ್ದಾರೆ ಎಂಬ ಸುದ್ದಿ ಸುತ್ತುತ್ತಲೇ ಇರುತ್ತದೆ. ಆದರೆ, ಈ ಜೋಡಿ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಭಾನುವಾರ ಬ್ರೇಕ್ ಅಪ್ ವದಂತಿಗಳಿಗೆ ಬ್ರೇಕ್ ಹಾಕಿರುವ ಈ ಜೋಡಿ ಮುಂಬೈನಲ್ಲಿ ಎರಡೇರಡು ಬಾರಿ ಕಾಣಿಸಿಕೊಂಡಿದೆ.

ಒಂದೇ ದಿನದಲ್ಲಿ ಎರಡು ಬಾರಿ ಒಟ್ಟಿಗೆ ಕಾಣಿಸಿಕೊಂಡ ಅರ್ಜುನ್ ಮತ್ತು ಮಲೈಕಾ
ಅರ್ಜುನ್ ಮತ್ತು ಮಲೈಕಾ ಒಂದೇ ದಿನ ಎರಡೇರಡು ಬಾರಿ ಒಟ್ಟಿಗೆ ಕಾಣಿಸಿಕೊಂಡು ಬ್ರೇಕಪ್.. ಬ್ರೇಕಪ್ ಎನ್ನುತ್ತಿದ್ದವರ ಬಾಯಿಯ ಮೇಲೆ ಬೆರಳಿಟ್ಟಿದ್ದಾರೆ. ಇಬ್ಬರು, ಲಂಚ್ ಮತ್ತು ಡಿನ್ನರ್‌ಗೆ ಮುಂಬೈನ ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
Instagramನಲ್ಲಿ ಇಬ್ಬರ ಡಿನ್ನರ್, ಲಂಚ್ ಡೇಟ್ ವಿಡಿಯೋಗಳು ಹರಿದಾಡುತ್ತಿವೆ. ರೆಸ್ಟೋರೆಂಟ್‌ಗೆ ಬಂದು ವಾಪಸ್ ತೆರಳುತ್ತಿರುವ ಮಲೈಕಾ ಮತ್ತು ಅರ್ಜುನ್ ಕಪೂರ್ ಮಾಧ್ಯಮದವರಿಗೆ ಸಣ್ಣ ಕಿರುನಗೆ ನೀಡಿ, ಪೋಟೋಗೆ ಪೋಸ್ ನೀಡಿದ್ದಾರೆ. ಬಳಿಕ ಇಬ್ಬರು ಕಾರಿನಲ್ಲಿ ತೆರಳಿದ್ದಾರೆ.
ಈ ವೇಳೆ ಮಲೈಕಾ ಅವರನ್ನು ಅರ್ಜುನ್ ಕಪೂರ್ ಕಡೆದುಕೊಂಡು ಹೋಗುವ ರೀತಿಗೆ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಅವರನ್ನು ಮೊದಲು ಕಾರಿಗೆ ಹತ್ತಿಸಿ ಬಳಿಕ ತಾನು ಹೋಗಿ ಕಾರು ಹತ್ತಿದ್ದನ್ನು ನೋಡಿ ಎಷ್ಟು ಕೇರಿಂಗ್ ನೋಡಿ ಎಂದು ಜನ ಹುಬ್ಬೇರಿಸುತ್ತಿದ್ದಾರೆ.

ಡಿನ್ನರ್ ಡೇಟ್‌ನಲ್ಲಿ ಮಲೈಕಾ ಬಿಳಿ ಬಣ್ಣದ ಜಾಕೆಟ್ ಮತ್ತು ಪ್ಯಾಂಟ್ ಧರಿಸಿದ್ದರು. ಬಟ್ಟೆಗೆ ತಕ್ಕಂತೆ ಹೀಲ್ಸ್ ಮ್ಯಾಚಿಂಗ್ ಮಾಡಿ, ಚಿಕ್ಕ ಪರ್ಸ್ ಹಿಡಿದಿದ್ದರು. ಅರ್ಜುನ್ ಕಪೂರ್ ಆಲಿವ್ ಹಸಿರು ಸ್ವೆಟ್‌ಶರ್ಟ್, ಬೂದು ಬಣ್ಣದ ಪ್ಯಾಂಟ್ ಮತ್ತು ಸ್ನೀಕರ್ಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಸನ್ಗ್ಲಾಸ್ ಮತ್ತು ಕ್ಯಾಪ್ ಧರಿಸಿದ್ದರು.
ಅರ್ಜುನ್ ಮತ್ತು ಮಲೈಕಾ ಲಂಚ್ ಡೇಟ್!
ಡಿನ್ನರ್ ಡೇಟ್‌ಗೂ ಮುನ್ನ, ಅರ್ಜುನ್ ಕಪೂರ್ ಮತ್ತು ಮಲೈಕಾ ಲಂಚ್ ಡೇಟ್‌ಗೆ ತೆರಳಿದ್ದರು. ಆ ಚಿತ್ರಗಳಲ್ಲಿಯೂ, ಮಲೈಕಾ ಸ್ಕಿಫ್ಲಿ ಬಿಳಿ ಶರ್ಟ್, ವೈಟ್ ಶಾರ್ಟ್ಸ್ ಧರಿಸಿದ್ದರು. ಅರ್ಜುನ್ ಕಪ್ಪು ಟಿ-ಶರ್ಟ್ , ಕಪ್ಪು ಕಾರ್ಗೋ ಪ್ಯಾಂಟ್ ಧರಿಸಿದ್ದರು.
ಅಭಿಮಾನಿಗಳ ಪ್ರತಿಕ್ರಿಯೆ
ವಿಡಿಯೋ ನೋಡಿದ ಅಭಿಮಾನಿಯೊಬ್ಬರು, "ನಿಮ್ಮಿಬ್ಬರು ಬೇಗ ಮದುವೆಯಾಗಿ" ಎಂದು ಬರೆದಿದ್ದಾರೆ. ಮತ್ತೊಬ್ಬರು, "ಅವರು ಬ್ರೇಕಪ್ ಮಾಡಿಕೊಂಡಿಲ್ಲ ಎಂದು ತಿಳಿದು ಸಂತೋಷವಾಗಿದೆ." ಎಂದಿದ್ದಾರೆ. 'ಅವರು ಇನ್ನೂ ಒಟ್ಟಿಗೆ ಇರುವುದನ್ನು ನೋಡಲು ಸಂತೋಷವಾಗಿದೆ' ಎಂದು ಅಭಿಮಾನಿಗಳು ಖುಷಿಯಾಗಿದ್ದಾರೆ.
ಕೆಲವರು, ಇದೆಲ್ಲಾ ಡ್ಯಾಮೆಜ್ ಕಂಟ್ರೋಲ್ ಮಾಡಲು ನಡೆಸುತ್ತಿರುವ ನಾಟಕ ಎಂದಿದ್ದಾರೆ. ಮತ್ತೊಬ್ಬರು, ಬ್ರೇಕಪ್ ಎಂಬುದು ಎಲ್ಲಾ ವದಂತಿ, ಅವರು ಇನ್ನೂ ಒಟ್ಟಿಗೆ ಇದ್ದಾರೆ ಎಂಬುದೇ ಸಂತೋಷ ಎಂದು ಹೇಳಿದ್ದಾರೆ.
ಮಲೈಕಾ ಮತ್ತು ಅರ್ಜುನ್ ಬ್ರೇಕಪ್ ವದಂತಿಗಳೇನು??
ಇತ್ತೀಚೆಗೆ ಅರ್ಜುನ್ ಮತ್ತು ಮಲೈಕಾ ಬೇರೆಯಾಗಿದ್ದಾರೆ ಎಂದು ವದಂತಿ ಹಬ್ಬಿತ್ತು. ಅರ್ಜುನ್ ಕಪೂರ್ ಕುಶಾ ಕಪಿಲಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವರದಿಗಳು ಬಂದಿದ್ದವು. ಹೀಗಾಗಿ ಇಬ್ಬರ ಬ್ರೇಕಪ್ ಸ್ಟೋರಿ ಬಾಲಿವುಡ್ ಅಂಗಳದಲ್ಲಿ ಬಿಸಿ ಸುದ್ದಿಯಾಗಿತ್ತು.
ಮಲೈಕಾ ಮತ್ತು ಅರ್ಜುನ್ ನಾಲ್ಕು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಮಲೈಕಾ ಈ ಹಿಂದೆ ನಟ ಅರ್ಬಾಜ್ ಖಾನ್ ಅವರನ್ನು ಮದುವೆಯಾಗಿದ್ದರು. ಅವರಿಗೆ 20 ವರ್ಷದ ಮಗ ಅರ್ಹಾನ್ ಖಾನ್ ಇದ್ದಾರೆ. 19 ವರ್ಷಗಳ ಮದುವೆ ಸಂಬಂಧದ ನಂತರ ಇಬ್ಬರು 2017 ರಲ್ಲಿ ವಿಚ್ಛೇದನ ಪಡೆದಿದ್ದಾರೆ. ಸದ್ಯ ಅರ್ಜುನ್ ಕಪೂರ್ ಜೊತೆಗೆ ಸಹಜೀವನ ನಡೆಸುತ್ತಿದ್ದಾರೆ.


Click it and Unblock the Notifications











