For Quick Alerts
  ALLOW NOTIFICATIONS  
  For Daily Alerts

  ಥಿಯೇಟರ್ ಆಯ್ತು.. ಓಟಿಟಿ ಆಯ್ತು.. ಟಿವಿ ದಾಖಲೆ ಮೇಲೆ ಕಣ್ಣು: ಇದೇ ವಾರ ರಿಸಲ್ಟ್!

  |

  ಸ್ಯಾಂಡಲ್‌ವುಡ್‌ಗೆ ಹೊಸ ಇಮೇಜ್ ಕೊಟ್ಟ ಸಿನಿಮಾ 'ಕೆಜಿಎಫ್ ಚಾಪ್ಟರ್ 2' ಅನ್ನೋದರಲ್ಲಿ ಡೌಟೇ ಇಲ್ಲ. ಕನ್ನಡದ ಸಿನಿಮಾವೊಂದು ಈ ಮಟ್ಟಿಗೆ ಕ್ರೇಜ್ ಸೃಷ್ಟಿಸಿದ್ದು ಸಿನಿಮಾ ಮಂದಿಯಲ್ಲಿ ಅಚ್ಚರಿ ಮೂಡಿಸಿತ್ತು. ಬಾಕ್ಸಾಫೀಸ್‌ ಲೂಟಿ ಮಾಡಿದ್ದನ್ನು ನೋಡಿ ಇಡೀ ವಿಶ್ವವೇ ಬೆರಗು ಕಣ್ಣುಗಳಿಂದಲೇ ನೋಡಿತ್ತು.

  ಸುಮಾರು 5.5 ಕೋಟಿಗೂ ಅಧಿಕ ಮಂದಿ ಭಾರತದಲ್ಲಿ 'ಕೆಜಿಎಫ್ ಚಾಪ್ಟರ್ 2' ಸಿನಿಮಾ ನೋಡಿದ್ದರು. ಇಷ್ಟು ಮಂದಿ ಸಿನಿಮಾ ನೋಡಿದ್ದಕ್ಕೆ ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಯಾಗಿತ್ತು. ಥಿಯೇಟರ್‌ನಲ್ಲಿ ಸದ್ದು ಮಾಡಿದ ಬಳಿಕ ಅಮೆಜಾನ್‌ ಪ್ರೈಂನಲ್ಲೂ ರಿಲೀಸ್ ಆಗಿದೆ. ಓಟಿಟಿಯಲ್ಲೂ ಜನರು ಸಿನಿಮಾವನ್ನು ಮುಗಿಬಿದ್ದು ನೋಡಿದ್ದಾರೆ. ಥಿಯೇಟರ್ ಹಾಗೂ ಓಟಿಟಿ ಬಳಿಕ ಟಿವಿಯಲ್ಲೂ ಸಿನಿಮಾ ಪ್ರಸಾರ ಆಗಿದೆ.

  ರಾಕಿ ಭಾಯ್ 19ನೇ ಸಿನಿಮಾದ ಪೋಸ್ಟರ್ ಲೀಕ್: ಮಾಡಿದ್ಯಾರು ಅನ್ನೋದೇ ಟ್ವಿಸ್ಟ್!ರಾಕಿ ಭಾಯ್ 19ನೇ ಸಿನಿಮಾದ ಪೋಸ್ಟರ್ ಲೀಕ್: ಮಾಡಿದ್ಯಾರು ಅನ್ನೋದೇ ಟ್ವಿಸ್ಟ್!

  ರಿಲೀಸ್ ಆದಲ್ಲೆಲ್ಲಾ 'ಕೆಜಿಎಫ್ 2' ದಾಖಲೆ ಬರೆದಿದೆ. ಈ ಬೆನ್ನಲೇ ಟಿವಿಯಲ್ಲಿ 'ಕೆಜಿಎಫ್ ಚಾಪ್ಟರ್ 2' ಅದ್ಯಾವ ದಾಖಲೆ ಬರೆಯ ಬಹುದು? ಯಾವ್ಯಾವ ಭಾಷೆಯಲ್ಲಿ ಎಷ್ಟೆಷ್ಟು ಟಿಆರ್‌ಪಿ ಬರಬಹುದು? ಎಂಬ ನಿರೀಕ್ಷೆಯಲ್ಲಿ ಯಶ್ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

  ಕಳೆದ ವಾರ ಕಿರುತೆರೆಯಲ್ಲಿ 'ಕೆಜಿಎಫ್ 2'

  ಕಳೆದ ವಾರ ಕಿರುತೆರೆಯಲ್ಲಿ 'ಕೆಜಿಎಫ್ 2'

  'ಕೆಜಿಎಫ್ ಚಾಪ್ಟರ್ 2' ಸಿನಿಮಾ ಕಳೆದ ವಾರವಷ್ಟೇ ಟಿವಿಯಲ್ಲಿ ಪ್ರಸಾರ ಆಗಿದೆ. ದಕ್ಷಿಣ ಭಾರತದಲ್ಲಿ ಜೀ ಮನರಂಜನಾ ವಾಹಿನಿಯಲ್ಲಿ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಪ್ರಸಾರ ಆಗಿದೆ. ಎಲ್ಲಾ ಭಾಷೆಯಲ್ಲೂ ಭರ್ಜರಿಯ ಪ್ರಚಾರ ಮಾಡಿ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ. ಭಾರತ ಚಿತ್ರರಂಗ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತಹ ಸಿನಿಮಾ ಮಾಡಿದ್ದ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಟಿವಿಯಲ್ಲಿ ಬಿಡುಗಡೆಗೂ ಮುನ್ನ ಬೇಜಾನ್ ಸದ್ದು ಮಾಡಿತ್ತು.

  ಟಿವಿಯಲ್ಲಿ 'ಕೆಜಿಎಫ್ 2' ಪ್ರಸಾರ: 80 ಅಡಿ ಬ್ಯಾನರ್ ಬಿಟ್ಟು ಭರ್ಜರಿ ಪ್ರಚಾರ!ಟಿವಿಯಲ್ಲಿ 'ಕೆಜಿಎಫ್ 2' ಪ್ರಸಾರ: 80 ಅಡಿ ಬ್ಯಾನರ್ ಬಿಟ್ಟು ಭರ್ಜರಿ ಪ್ರಚಾರ!

  ಟಿವಿಯಲ್ಲಿ ಸಿನಿಮಾ ರಿಲೀಸ್ ಹೇಗಿತ್ತು?

  ಟಿವಿಯಲ್ಲಿ ಸಿನಿಮಾ ರಿಲೀಸ್ ಹೇಗಿತ್ತು?

  ಥಿಯೇಟರ್, ಓಟಿಟಿ ಅಷ್ಟೇ ಅಲ್ಲ. ಕಿರುತೆರೆಯಲ್ಲಿ ಸಿನಿಮಾವನ್ನು ರಿಲೀಸ್ ಮಾಡುವಾಗಲೂ ಭರ್ಜರಿ ಪ್ರಚಾರ ಕೊಟ್ಟೇ ಸಿನಿಮಾವನ್ನು ಬಿಡುಗಡೆ ಮಾಡಲಾಗಿತ್ತು. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಬೇರೆ ಬೇರೆ ಭಾಷೆಯಲ್ಲಿ ಬಿಡುಗಡೆಯಾಗಿತ್ತು. ಆಗಸ್ಟ್ 20ರಂದು ಕನ್ನಡದಲ್ಲಿ ಪ್ರಸಾರ ಕಂಡಿದೆ. ತೆಲುಗಿನಲ್ಲಿ ಆಗಸ್ಟ್ 21ರಂದು ಪ್ರಸಾರ ಕಂಡಿದೆ. ಅದೇ ರೀತಿ ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಇನ್ನೂ ಪ್ರಸಾರ ಆಗಬೇಕಿದೆ. ಹಿಂದಿಯಲ್ಲಿ ಸೆಪ್ಟೆಂಬರ್ 18ಕ್ಕೆ, ತಮಿಳಿನಲ್ಲಿ ಆಗಸ್ಟ್ 31 ಹಾಗೂ ಮಲಯಾಳಂನಲ್ಲಿ ಸೆಪ್ಟೆಂಬರ್ 4 ರಂದು ಟಿವಿಯಲ್ಲಿ ಪ್ರಸಾರ ಆಗಲಿದೆ.

  ಟಿಆರ್‌ಪಿಗಾಗಿ ಫ್ಯಾನ್ಸ್ ವೇಟಿಂಗ್

  ಟಿಆರ್‌ಪಿಗಾಗಿ ಫ್ಯಾನ್ಸ್ ವೇಟಿಂಗ್

  ಕೆಜಿಎಫ್ 2 ಥಿಯೇಟರ್‌ನಲ್ಲಿ ಬಾಕ್ಸಾಫೀಸ್ ಬೇಟಿಯಾಡಿತ್ತು. ಬಳಿಕ ಓಟಿಟಿಯಲ್ಲಿ ಬೇಟಿಯಾಡಿತ್ತು. ಈಗ ಟಿವಿಯಲ್ಲಿ ಟಿಆರ್‌ಪಿ ಬೇಟಿಯಲ್ಲಿ ಹೇಗೆ ಸದ್ದು ಮಾಡುತ್ತೆ ಅನ್ನೋ ಕುತೂಹಲವಿದೆ. ಈಗಾಗಲೇ 'ಕೆಜಿಎಫ್ 2' ಜೀ ಕನ್ನಡದಲ್ಲಿ ಹಾಗೂ ಜೀ ತೆಲುಗಿನಲ್ಲಿ ಪ್ರಸಾರ ಕಂಡಿದೆ. ಇದೇ ವಾರ ಟಿಆರ್‌ಪಿ ಟಿಸ್ಟ್ ಹೊರಬೀಳಿದೆ. ಆಗ ಯಾವ್ಯಾವ ದಾಖಲೆಗಳನ್ನು ಅಳಿಸಿ ಹಾಕಿದೆ ಅನ್ನೋದನ್ನು ಎದುರು ನೋಡುತ್ತಿವೆ. ಇನ್ನು ಉಳಿದಂತೆ ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ಎಷ್ಟೆಷ್ಟು ಟಿಆರ್‌ಪಿ ಸಿಗಲಿದೆ ಎಂಬುದು ಕೂಡ ಕುತೂಹಲ ಕೆರಳಿಸಿದೆ.

  'ಕೆಜಿಎಫ್ 3'ಗೆ ವೇಟಿಂಗ್!

  'ಕೆಜಿಎಫ್ 3'ಗೆ ವೇಟಿಂಗ್!

  'ಕೆಜಿಎಫ್ ಚಾಪ್ಟರ್ 2' ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೋಚಿದ ಬಳಿಕ 'ಕೆಜಿಎಫ್ 3' ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಅಭಿಮಾನಿಗಳ ಆಸೆಯಂತೆ ಯಶ್ ಕೂಡ 'ಕೆಜಿಎಫ್ 3'ಗಾಗಿ ಕಾದು ಕೂತಿದ್ದಾರೆ ಅನ್ನೋ ಮಾತು ಕೇಳಿ ಬರುತ್ತಿವೆ. ಇತ್ತ ಫ್ಯಾನ್ಸ್‌ಗೂ ಸಿನಿಮಾ ಯಾವಾಗ ಸೆಟ್ಟೇರುತ್ತೋ ಅನ್ನೋದನ್ನು ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಆದರೆ, ಯಶ್ 'ಕೆಜಿಎಫ್ 3'ಯಲ್ಲೇ ನಟಿಸುತ್ತಾರಾ? ಅಥವಾ ಹೊಸ ಸಿನಿಮಾಗೆ ಕೈ ಹಾಕುತ್ತಾರೋ ಅನ್ನೋ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ.

  English summary
  After Theater And Ott Release Yash Fans Eying On KGF 2 TV TRPs, Know More.
  Monday, August 29, 2022, 16:12
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X