ವಿಚ್ಛೇದನ ಪಡೆದ ನಂತರ ಮತ್ತೆ ಒಂದಾದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ...!

ಒಮ್ಮೊಮ್ಮೆ ಎಲ್ಲರ ಕಣ್ಣಿಗೆ ಕಾಮಿಡಿ ಪೀಸುಗಳಂತೆ ಕಾಣುತ್ತಿದ್ದವರು. ನೋಡ ನೋಡುತ್ತಿದ್ದಂತೇ ಹೇಳಿಮಾಡಿಸಿದಂತಾ ಬದುಕನ್ನು ರೂಪಿಸಿಕೊಂಡು, ಲೇವಡಿ ಮಾಡೋರ ಮುಂದೆ ಗೆದ್ದು ಬೀಗುತ್ತಾರೆ. ಇನ್ನೂ ಕೆಲವೊಮ್ಮೆ ತುಂಬಾನೇ ಇಷ್ಟ ಪಟ್ಟು ಮದುವೆಯಾದವರು, ಒಬ್ಬರನ್ನು ಬಿಟ್ಟು ಒಬ್ಬರು ಉಸಿರಾಡಲೂ ಸಾಧ್ಯವಿಲ್ಲ ಅಂದುಕೊಂಡವರು, ವಿರೋಧಗಳನ್ನು ಧಿಕ್ಕರಿಸಿ ಮದುವೆಯಾದವರು, ಜೊತೆಗೂಡಿದ ಕೆಲವೇ ದಿನಗಳಲ್ಲಿ ದೂರವಾಗುತ್ತಾರೆ. ಇದಕ್ಕೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅತ್ಯುತ್ತಮ ಉದಾಹರಣೆ.

ಆದರೆ, ಮನ:ಪೂರ್ವಕವಾಗಿ ಮದುವೆಯಾಗಿ ಮನ:ಪೂರ್ವಕವಾಗಿಯೇ ದೂರವಾದ ಇವರು ಇಬ್ಬರು ಈಗ ಮತ್ತೊಮ್ಮೆ ಒಂದಾಗಿದ್ದಾರೆ. ಹಾಗಂಥ, ಚಂದನ್ ಮತ್ತು ನಿವೇದಿತಾ ಮನಸ್ತಾಪಗಳನ್ನು ಮರೆತು ಮತ್ತೆ ಜೊತೆಯಾಗಿ ಬಾಳುವ ನಿರ್ಧಾರಕ್ಕೆ ಇಬ್ಬರು ಬಂದಿದ್ದಾರೆ ಅಂತಲ್ಲ. ಯಾಕೆಂದರೆ, ಇಬ್ಬರು ಒಂದಾಗುತ್ತಿರುವುದು ರಿಯಲ್‌ ಲೈಫ್‌ನಲ್ಲಿ ಅಲ್ಲ ಬದಲಿಗೆ ರೀಲ್ ಲೈಫಿನಲ್ಲಿ.

After their divorce Chandan Shetty and Niveditha Gowda have reunited for the film Muddu Rakshasi

ಹೌದು, ನಿಮಗೆ ನೆನಪಿದ್ದರೆ.. ಚಂದನ್ ಮತ್ತು ನಿವೇದಿತಾ ವಿಚ್ಚೇದನ ಪಡೆಯುವ ಮೊದಲು 'ಕ್ಯಾಂಡಿಕ್ರಶ್‌' ಎಂಬ ಚಿತ್ರವನ್ನು ಒಪ್ಪಿಕೊಂಡಿದ್ದರು. ಚಿತ್ರದಲ್ಲಿ ಚಂದನ್ ನಾಯಕನಾದರೆ ನಿವೇದಿತಾ ನಾಯಕಿಯ ಪಾತ್ರಕ್ಕೆ ಬಣ್ಣ ಹಚ್ಚಿದ್ದರು.

ಆದರೆ, ಆ ನಂತರ 'ಕ್ಯಾಂಡಿ ಕ್ರಶ್' ಸಿನಿಮಾದ ಟೈಟಲ್ ಬಳಸದೆ ಇರುವಂತೆ ಗೇಮಿಂಗ್ ಆಪ್ 'ಕ್ಯಾಂಡಿ ಕ್ರಶ್' ನೋಟೀಸ್ ಜಾರಿ ಮಾಡಿತ್ತು. ಹೀಗಾಗಿ ಶೀರ್ಷಿಕೆ ಬದಲಾವಣೆ ಮಾಡಲು ಮುಂದಾದ ಚಿತ್ರತಂಡ ಈಗ ತಮ್ಮ ಚಿತ್ರಕ್ಕೆ ಕ್ಯಾಂಡಿ ಕ್ರಶ್ ಬದಲು ಮುದ್ದು ರಾಕ್ಷಸಿ ಎಂದು ಹೆಸರನ್ನಿಟ್ಟಿದೆ. ಚಿತ್ರದ ಫಸ್ಟ್ ಲುಕ್‌ನ್ನು ಕೂಡ ಬಿಡುಗಡೆ ಮಾಡಿದೆ.

ಅಂದ್ಹಾಗೇ ಪುನೀತ್ ಶ್ರೀನಿವಾಸ್ ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಬಹುತೇಕ ಚಿತ್ರೀಕರಣವನ್ನು ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ, ಪತಿ-ಪತ್ನಿಯಾಗಿದ್ದ ಸಂದರ್ಭದಲ್ಲಿಯೇ ಮುಗಿಸಿದ್ದರು. ಇಬ್ಬರು ದೂರವಾದ ಸಮಯದಲ್ಲಿ ಕೇವಲ 08 ದಿನದ ಚಿತ್ರೀಕರಣ ಮಾತ್ರ ಬಾಕಿ ಇತ್ತು. ಆಗ ತಮ್ಮ ವ್ಯೆಯಕ್ತಿಕ ಸಮಸ್ಯೆಯನ್ನು ಪಕ್ಕಕ್ಕಿಟ್ಟಿದ್ದ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವೃತ್ತಿ ಪರತೆ ಮೆರೆದಿದ್ದರು. ಉಳಿದಿರುವ ಚಿತ್ರದ ಚಿತ್ರೀಕರಣವನ್ನು ಇಬ್ಬರು ಮುಗಿಸಿಕೊಡುವುದಾಗಿ ನಿರ್ದೇಶಕ ಪುನೀತ್ ಶ್ರೀನಿವಾಸ್ ಅವರಿಗೆ ಭರವಸೆಯನ್ನು ನೀಡಿದ್ದರು. ಅದರಂತೆ ಚಿತ್ರದ ಚಿತ್ರೀಕರಣವನ್ನು ಮುಗಿಸಿದ್ದಾರೆ. ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಚಿತ್ರದ ಪ್ರಚಾರಕ್ಕೂ ಕೈ ಜೋಡಿಸಿದ್ದಾರೆ.

ಇನ್ನೂ.. ಚಂದನ್ ಮತ್ತು ನಿವೇದಿತಾ ಗೌಡ ಅವರ ಈ ಮುದ್ದು ರಾಕ್ಷಸಿ ವಿಚಾರ ತಿಳಿದ ಅನೇಕರು ಎಂದಿನಂತೆ ನಿವೇದಿತಾ ಗೌಡ ಅವರನ್ನು ಟ್ರೋಲ್ ಮಾಡಲು ಶುರುಮಾಡಿದ್ದಾರೆ. ಆದರೆ ಈ ಬಾರಿ ಚಂದನ್ ಶೆಟ್ಟಿ ವಿರುದ್ಧ ಕೂಡ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇದೆಲ್ಲ ಮಾಡುವ ಬದಲು ಶೆಡ್‌ಗೆ ಹೋಗಿ ಜಗಳ ಬಗೆಹರಿಸಿಕೊಂಡು ಒಂದಾಗಿ ಬಾಳ್ವೆ ಮಾಡಿ ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ನಿಮ್ಮಿಬ್ಬರದ್ದೂ ಡಿವೋರ್ಸ್ ಆಗಿದೆ ಎಂದು ಅನ್ಸುತ್ತಿಲ್ಲ, ಚಿತ್ರದ ಪ್ರಚಾರಕ್ಕೆ ಹೀಗೆಲ್ಲ ಮಾಡ್ತಿದ್ದೀರಾ ಅನಸುತ್ತೆ ಎಂದಿದ್ದಾರೆ. ಇನ್ನೊಬ್ಬರು ಚಂದನ್ ನಾಚಿಕೆ ಇಲ್ವಾ ಗುರು ನಿನಗೆ ಬೇಡ ಅಂತ ಬಿಟ್ಟ ಹೋದೊಳಗೆ ಮತ್ತೆ ಯಾಕ್ ಚಾನ್ಸ್ ಕೊಡ್ತೀಯಾ ಬೇರೆ ಯಾರು ಸಿಗಲ್ವ ಎಂಬ ಪ್ರಶ್ನೆ ಕೇಳಿದ್ದಾರೆ.

After their divorce Chandan Shetty and Niveditha Gowda have reunited for the film Muddu Rakshasi

ಉಳಿದಂತೆ ಮೋಹನ್ ಕುಮಾರ್ ಈ ಮುದ್ದು ರಾಕ್ಷಸಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇನ್ನೂ ಸೈಕೋ ಥ್ರಿಲ್ಲರ್ ಕಥಾಹಂದರ ಈ ಚಿತ್ರದ ಚಿತ್ರೀಕರಣ ಬಹುತೇಕ ಬೆಂಗಳೂರಿನಲ್ಲಿಯೇ ನಡೆದಿದೆ. ಇನ್ನೂ ಎಂ ಎಸ್ ತ್ಯಾಗರಾಜ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಎ ಕರುಣಾಕರ್ ಚಿತ್ರದ ಛಾಯಾಗ್ರಹಣ ಮಾಡಿದ್ದಾರೆ. ಸದ್ಯ ಹೆಸರು ಬದಲಾವಣೆಯೊಂದಿಗೆ ಸುದ್ದಿಯಲ್ಲಿರುವ ಮುದ್ದು ರಾಕ್ಷಸಿ ಈ ವರ್ಷಾಂತ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X