Exclusive: 'ಬಿಲ್ಲಾ ರಂಗ ಬಾಷಾ'ನಾ ಇಲ್ಲಾ 'ಅಶ್ವತ್ಥಾಮ'ನಾ? ಅನೂಪ್ ಭಂಡಾರಿ ಬಿಚ್ಚಿಟ್ಟ ಸೀಕ್ರೆಟ್ ಏನು?

ಬಾಕ್ಸಾಫೀಸ್‌ನಲ್ಲಿ 'ವಿಕ್ರಾಂತ್ ರೋಣ' ಆರ್ಭಟ ಮುಂದುವರೆದಿದೆ. ಕೋಟಿ ಕೋಟಿ ಕಲೆಕ್ಷನ್ ಮಾಡಿ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸೂಪರ್ ಹಿಟ್ ಆಗಿದೆ. 'ವಿಕ್ರಾಂತ್ ರೋಣ' ನಂತರ ಕಿಚ್ಚ ಸುದೀಪ್ ಯಾವ ಚಿತ್ರದಲ್ಲಿ ನಟಿಸುತ್ತಾರೆ ಅನ್ನುವ ಕುತೂಹಲ ಅಭಿಮಾನಿಗಳನ್ನು ಕಾಡ್ತಿದೆ. ಈಗಾಗಲೇ ಅನೂಪ್ ಭಂಡಾರಿ ನಿರ್ದೇಶನದಲ್ಲಿ 'ಬಿಲ್ಲಾ ರಂಗ ಬಾಷಾ' ಹಾಗೂ 'ಅಶ್ವತ್ಥಾಮ' ಸಿನಿಮಾಗಳು ಘೋಷಣೆಯಾಗಿದೆ. ಕಿಚ್ಚ ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ 'ಅಶ್ವತ್ಥಾಮ' ಸಿನಿಮಾ ಬರಲಿದ್ದು, ಸುದೀಪ್ ನಟಿಸ್ತಾರೋ ಇಲ್ಲವೋ ಕಾದು ನೋಡಬೇಕು.

ಸೆಪ್ಟೆಂಬರ್‌ 2ಕ್ಕೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬ. ಹಾಗಾಗಿ ಹುಟ್ಟುಹಬ್ಬದ ಸಂಭ್ರಮದಲ್ಲಿ ಹೊಸ ಸಿನಿಮಾ ಘೋಷಣೆಯಾಗುವ ನಿರೀಕ್ಷೆ ಅಭಿಮಾನಿಗಳಲ್ಲಿದೆ. ಸದ್ಯ ಆರ್‌. ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದಲ್ಲಿ ಸುದೀಪ್ ಅತಿಥಿ ಪಾತ್ರದಲ್ಲಿ ನಟಿಸುತ್ತಿದ್ದು, ಇತ್ತೀಚೆಗೆ ಶೂಟಿಂಗ್ ಮುಗಿಸಿದ್ದಾರೆ. ಮತ್ತೊಂದ್ಕಡೆ ಬಿಗ್‌ ಬಾಸ್ ಓಟಿಟಿ ಶೋ ನಡೆಸಿಕೊಡುತ್ತಿದ್ದಾರೆ. ತಮಿಳು ನಿರ್ದೇಶಕ ವೆಂಕಟ್ ಪ್ರಭು ಜೊತೆ ಒಂದು ಸಿನಿಮಾ ಮಾತುಕತೆಯಲ್ಲಿದೆ. ಇದೆಲ್ಲದರ ನಡುವೆ ಸುದೀಪ್ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಚರ್ಚೆ ಶುರುವಾಗಿದೆ.

ತೆಲುಗಿನ 'ರಾಕ್ಷಸುಡು'-2 ಚಿತ್ರದ ಲೀಡ್‌ ರೋಲ್‌ನಲ್ಲಿ ಸುದೀಪ್ ನಟಿಸುತ್ತಾರೆ ಎನ್ನುವ ಸುದ್ದಿ ಕಳೆದೆರಡು ದಿನಗಳಿಂದ ಸದ್ದು ಮಾಡುತ್ತಿದೆ. ಈ ಚಿತ್ರದಲ್ಲಿ ವಿಜಯ್ ಸೇತುಪತಿ ವಿಲನ್ ಆಗಿ ನಟಿಸುತ್ತಾರೆ ಎನ್ನಲಾಗುತ್ತಿದೆ. ಸುದೀಪ್ ನಟನೆಯ ಯಾವ ಸಿನಿಮಾ ಮೊದಲು ? ಯಾವುದು ನಂತರ ಸೆಟ್ಟೇರುತ್ತೆ? ಅನ್ನುವ ಕುತೂಹಲ ಈಗ ಗರಿಗೆದರಿದೆ. ಮತ್ತೊಂದ್ಕಡೆ 'ವಿಕ್ರಾಂತ್ ರೋಣ' ನಂತರ ಅನೂಪ್ ಭಂಡಾರಿ ಕೂಡ ಕಿಚ್ಚನಿಗಾಗಿ ಕಥೆ ಸಿದ್ಧಪಡಿಸುತ್ತಿದ್ದಾರೆ. ಸುದೀಪ್ ಜೊತೆಗಿನ ಹೊಸ ಸಿನಿಮಾ ಬಗ್ಗೆ ಅನೂಪ್‌ ಭಂಡಾರಿ ಫಿಲ್ಮಿಬೀಟ್ ಜೊತೆ ಮಾತನಾಡಿದ್ದಾರೆ.

ಆರ್ಯವರ್ಧನ್ ಪಾತ್ರ ಒಲ್ಲೆ ಎಂದ ಅನೂಪ್!

ಆರ್ಯವರ್ಧನ್ ಪಾತ್ರ ಒಲ್ಲೆ ಎಂದ ಅನೂಪ್!

ಕಳೆದ ನಾಲ್ಕೈದು ದಿನಗಳಿಂದ 'ಜೊತೆ ಜೊತೆಯಲಿ' ಧಾರಾವಾಹಿಯ ವಿವಾದ ಗೊತ್ತೇಯಿದೆ. ನಿರ್ಮಾಪಕರ ಜೊತೆ ಕಿರಿಕ್ ಮಾಡಿಕೊಂಡು ಆರ್ಯವರ್ಧನ್‌ ಪಾತ್ರಧಾರಿ ಅನಿರುದ್ಧ್‌ ಧಾರಾವಾಹಿಯಿಂದ ಹೊರಬಂದಿದ್ದಾರೆ. ಆ ಪಾತ್ರಕ್ಕೆ ಹೊಸ ಕಲಾವಿದನ ಅನ್ವೇಷಣೆಯಲ್ಲಿದೆ ತಂಡ. ಅನೂಪ್ ಭಂಡಾರಿಯವರನ್ನು ಪಾತ್ರಕ್ಕಾಗಿ ಸಂಪರ್ಕಿಸಲಾಗಿತ್ತು. ಆದರೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ ಕಾರಣ ನಟಿಸೋಕೆ ಸಾಧ್ಯವಿಲ್ಲ ಎಂದು ಅನೂಪ್ ಭಂಡಾರಿ ಹೇಳಿದ್ದಾರೆ.

ಕಿಚ್ಚನಿಗಾಗಿ ಅನೂಪ್ ಹೊಸ ಕಥೆ!

ಕಿಚ್ಚನಿಗಾಗಿ ಅನೂಪ್ ಹೊಸ ಕಥೆ!

ಆಕ್ಷನ್ ಅಡ್ವೆಂಚರಸ್ ಥ್ರಿಲ್ಲರ್ 'ವಿಕ್ರಾಂತ್ ರೋಣ' ಸಿನಿಮಾ ಹೇಗೆ ಸದ್ದು ಮಾಡ್ತು ಅನ್ನುವುದು ಗೊತ್ತೇಯಿದೆ. 2D ಹಾಗೂ 3D ವರ್ಷನ್‌ಗಳಲ್ಲಿ ರಿಲೀಸ್ ಆಗಿದ್ದ ಸಿನಿಮಾ ಬಾಕ್ಸಾಫೀಸ್‌ ಶೇಕ್ ಮಾಡಿತ್ತು. ಫ್ಯಾಂಟಮ್ ಪ್ರಪಂಚ ನೋಡಿದ ಪ್ರೇಕ್ಷಕರು ಬೆರಗಾಗಿದ್ದರು. ಅದರಲ್ಲೂ ಸುದೀಪ್ ರೋಲ್‌ ಅನ್ನು ಅನೂಪ್ ಭಂಡಾರಿ ಡಿಸೈನ್ ಮಾಡಿದ ಪರಿಗೆ ಅಭಿಮಾನಿಗಳು ಫಿದಾ ಆಗಿದ್ದರು. 'ವಿಕ್ರಾಂತ್ ರೋಣ' ನಂತರ ಸುದೀಪ್ ಜೊತೆ ಅನೂಪ್ ಭಂಡಾರಿ ಮತ್ತೊಂದು ಸಿನಿಮಾ ಮಾಡುವುದು ಕನ್ಫರ್ಮ್‌ ಆಗಿದೆ. ಆ ಚಿತ್ರದ ಪ್ರೀಪ್ರೊಡಕ್ಷನ್ ವರ್ಕ್‌ ನಡೀತಿದೆ ಎಂದು ನಿರ್ದೇಶಕರು ಮಾಹಿತಿ ನೀಡಿದ್ದಾರೆ.

ಕಿಚ್ಚನ ಬರ್ತ್‌ಡೇಗೆ ಅನೂಪ್ ಪ್ರಾಜೆಕ್ಟ್ ಅನೌನ್ಸ್?

ಕಿಚ್ಚನ ಬರ್ತ್‌ಡೇಗೆ ಅನೂಪ್ ಪ್ರಾಜೆಕ್ಟ್ ಅನೌನ್ಸ್?

ಸುದೀಪ್ ಜೊತೆ ಹೊಸ ಸಿನಿಮಾ ಯಾವಾಗ ಅನ್ನುವ ಬಗ್ಗೆ ಮಾತನಾಡಿರುವ ಅನೂಪ್ ಭಂಡಾರಿ, "ಸದ್ಯಕ್ಕೆ ಗೊತ್ತಿಲ್ಲ, ಸುದೀಪ್ ಸರ್‌ ಹುಟ್ಟುಹಬ್ಬಕ್ಕೆ ಅಫೀಷಿಯಲ್ ಆಗಿ ಘೋಷಣೆಯಾಗುವುದು ಕಷ್ಟ ಅನ್ನಿಸ್ತಿದೆ. ಆದರೆ ಈ ವರ್ಷವೇ ನಮ್ಮಿಬ್ಬರ ಕಾಂಬಿನೇಷನ್‌ ಸಿನಿಮಾ ಸೆಟ್ಟೇರಲಿದೆ" ಎಂದಿದ್ದಾರೆ. ಆದರೆ ಕಥೆ ಏನು? ಮೊದಲು 'ಬಿಲ್ಲಾ ರಂಗ ಬಾಷಾ'ನಾ ? 'ಅಶ್ವತ್ಥಾಮ'ನಾ? ಅಥವಾ ಬೇರೆ ಸಿನಿಮಾನಾ ? ಅನ್ನುವ ಸೀಕ್ರೆಟ್ ಬಿಟ್ಟುಕೊಟ್ಟಿಲ್ಲ.

Recommended Video

Aditi Prabhudeva | ಮದ್ವೆ ಆದ್ರೆ ಅವಕಾಶ ಸಿಗಲ್ಲಾಂತ ಯಾರು ಹೇಳಿದ್ದು? | Yashas Patla *Interview | Filmibeat
ಎರಡು ಸಿನಿಮಾಗಳಲ್ಲಿ ಒಟ್ಟಿಗೆ ನಟನೆ?

ಎರಡು ಸಿನಿಮಾಗಳಲ್ಲಿ ಒಟ್ಟಿಗೆ ನಟನೆ?

ಸುದೀಪ್ ಮುಂದೆ ಯಾವ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗುತ್ತಾರೆ ಅನ್ನುವುದರ ಬಗ್ಗೆ ಖಚಿತ ಮಾಹಿತಿ ಸಿಕ್ಕಿಲ್ಲ. ಶೀಘ್ರದಲ್ಲೇ ಹೊಸ ಸಿನಿಮಾ ಶುರುವಾಗಲಿದೆ. ಆ ನಂತರ ಅನೂಪ್‌ ಭಂಡಾರಿ ನಿರ್ದೇಶನದ ಸಿನಿಮಾ ಸೆಟ್ಟೇರುವ ಸಾಧ್ಯತೆ ಇದೆ. ಎಲ್ಲಾ ಅಂದುಕೊಂಡಂತೆ ಆದರೆ ಎರಡು ಸಿನಿಮಾಗಳಿಗೆ ಒಟ್ಟೊಟ್ಟಿಗೆ ಸುದೀಪ್ ಕಾಲ್‌ಶೀಟ್ ಕೊಡಲಿದ್ದಾರೆ. ಮುಂದಿನ ವರ್ಷ ಸಮ್ಮರ್‌ ವೇಳೆಗೆ ಎರಡೂ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಲಿದೆ.

More from Filmibeat

English summary
After Vikrant Rona Anup Bhandari to Collaborate With Sudeep For Billa Ranga Baasha. Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X