'ವಿಕ್ರಾಂತ್ ರೋಣ' ಆಯ್ತು, 'ಕ್ರಾಂತಿ'- 'ಕಬ್ಜ'ಗೆ ಪ್ಯಾನ್‌ ಇಂಡಿಯಾ ಸವಾಲು!

ಈಗ ಎಲ್ಲೆಲ್ಲೂ ಪ್ಯಾನ್ ಇಂಡಿಯಾ ಚಿತ್ರಗಳದ್ದೇ ಸದ್ದು. ದೊಡ್ಡ ಬಜೆಟ್‌ನಲ್ಲಿ ತಯಾರಾಗುವ ಸ್ಟಾರ್ ಸಿನಿಮಾಗಳು, ಪ್ಯಾನ್ ಇಂಡಿಯಾ ಲೇವೆಲ್‌ನಲ್ಲಿಯೇ ರಿಲೀಸ್ ಆಗುತ್ತಿವೆ. ಅದರಲ್ಲೂ ಕನ್ನಡದ ಸಾಲು, ಸಾಲು ಸಿನಿಮಾಗಳು ಪ್ಯಾನ್ ಇಂಡಿಯಾ ಹೆಸರಲ್ಲಿ ಗೆಲ್ಲುತ್ತಿವೆ.

ಹಾಗಾಗಿ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳ ಮೇಲೆ ನಿರೀಕ್ಷೆ ಹೆಚ್ಚಿದೆ. 'ಕೆಜಿಎಫ್ 2' ಸಿನಿಮಾದ ಬಳಿಕ, ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳ ಹಾವಳಿ ನಿಂತಿಲ್ಲ. ಇನ್ನು 'ಕೆಜಿಎಫ್ 2' ಬಳಿಕ ಬಂದ ಪ್ಯಾನ್ ಇಂಡಿಯಾ ಸಿನಿಮಾಗಳಾದ '777 ಚಾರ್ಲಿ' ಮತ್ತು 'ವಿಕ್ರಾಂತ್ ರೋಣ' ಗೆಲುವಿನ ನಗೆ ಬೀರಿದೆ.

'ವಿಕ್ರಾಂತ್ ರೋಣ'ನ ಬಳಿಕ ಪ್ಯಾನ್ ಬರುತ್ತಿರುವ ಪ್ಯಾನ್ ಇಂಡಿಯಾ ಸಿನಿಮಾಗಳ ಪಟ್ಟಿ ಹೆಚ್ಚುತ್ತಿದೆ. ಆದರೆ ಈ ಗೆಲುವಿನ ಹಾದಿಯನ್ನು ಹಾಗೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ಕೂಡ ಚಿತ್ರತಂಡದ ಮೇಲೆ ಹಾಗೆ ಇದೆ. ಮುಂದಿನ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾಗಳೆಂದರೆ 'ಕ್ರಾಂತಿ' ಮತ್ತು 'ಕಬ್ಜ'.

'ಕೆಜಿಎಫ್ 2' ಬಳಿಕ ಗೆದ್ದ 'ಚಾರ್ಲಿ'!

'ಕೆಜಿಎಫ್ 2' ಬಳಿಕ ಗೆದ್ದ 'ಚಾರ್ಲಿ'!

ಕನ್ನಡ ಸಿನಿಮಾರಂಗದತ್ತ ಇಡೀ ವಿಶ್ವ ತಿರುಗಿ ನೋಡಿದ್ದು 'ಕೆಜಿಎಫ್ 2' ಸಿನಿಮಾದಿಂದ ಅಂದರೆ ತಪ್ಪಾಗಲಾರದು. ಪ್ಯಾನ್ ಇಂಡಿಯಾ ಪ್ರಯತ್ನಕ್ಕೆ ಕೈ ಹಾಕಿ 'ಕೆಜಿಎಫ್ 2' ಸಿನಿಮಾ ಬಾಕ್ಸಾಫೀಸಿನಲ್ಲಿ ಅಬ್ಬರಿಸಿ ಬೊಬ್ಬಿರಿದಿದೆ. 'ಕೆಜಿಎಫ್ 2' ಸಾವಿರ ಕೋಟಿ ಗಳಿಕೆ ಕಂಡ ಬಳಿಕ ಕನ್ನಡದ ತಾಕತ್ತು ಏನು ಎಂಬುದು ವಿಶ್ವಕ್ಕೆ ಗೊತ್ತಾಗಿದೆ. 'ಕೆಜಿಎಫ್ 2' ಜೊತೆಗೆ ಕನ್ನಡದ ಪ್ಯಾನ್ ಇಂಡಿಯಾ ಹವಾ ನಿಲ್ಲುತ್ತದೆ ಎನ್ನುವ ಅಪಸ್ವರಗಳೂ ಕೂಡ ಬಂದಿದ್ದವು. ಆದರೆ ಈ ಚಿತ್ರದ ಬಳಿಕ ಬಂದ ಸಿನಿಮಾಗಳು ಪ್ಯಾನ್ ಇಂಡಿಯಾ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡುತ್ತಲೇ ಇವೆ. 'ಕೆಜಿಎಫ್ 2' ಬಳಿಕ ಬಂದ ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಸಿನಿಮಾ ಕೂಡ ಬಾಕ್ಸಾಫೀಸಿನಲ್ಲಿ ನೂರು ಕೋಟಿಗೂ ಅಧಿಕ ಮೊತ್ತ ಕಲೆ ಹಾಕಿ ದಾಖಲೆ ಬರೆದಿದೆ.

ಪ್ಯಾನ್ ಇಂಡಿಯಾ ವಿಕ್ರಾಂತ್ ರೋಣ ಸದ್ದು!

ಪ್ಯಾನ್ ಇಂಡಿಯಾ ವಿಕ್ರಾಂತ್ ರೋಣ ಸದ್ದು!

ಇನ್ನು ಚಾರ್ಲಿ ಸಿನಿಮಾವನ್ನು ಬಿಟ್ಟರೆ ದೊಡ್ಡ ಮಟ್ಟದ ನಿರೀಕ್ಷೆ ಇದ್ದಿದ್ದು, ನಟ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾದ ಮೇಲೆ. 'ವಿಕ್ರಾಂತ್ ರೋಣ' ಸಿನಿಮಾ ತನ್ನದೇ ಆದ ವಿಭಿನ್ನ ಕಥಾಹಂದರದೊಂದಿಗೆ ಬಂದ ಚಿತ್ರ. ಈ ಸಿನಿಮಾ ಪ್ಯಾನ್ ಇಂಡಿಯಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತಿದೆ. ಪರಭಾಷಾ ಚಿತ್ರಗಳನ್ನು ಬಗ್ಗುಬಡಿದು ರಿಲೀಸಾದ ಮೂರನೇ ದಿನಕ್ಕೆ ಉತ್ತಮ ಗಳಿಕೆಯನ್ನು ಕಂಡಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮತ್ತೊಂದು ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ ಎನ್ನುವ ಕೀರ್ತಿ 'ವಿಕ್ರಾಂತ್ ರೋಣ'ನಿಗೆ ಸಲ್ಲುತ್ತದೆ.

ಪ್ಯಾನ್ ಇಂಡಿಯಾ ಸ್ಟಾರ್ ಆಗ್ತಾರ ದರ್ಶನ್!

ಪ್ಯಾನ್ ಇಂಡಿಯಾ ಸ್ಟಾರ್ ಆಗ್ತಾರ ದರ್ಶನ್!

'ಕೆಜಿಎಫ್' ಬಳಿಕ ರಿಲೀಸ್ ಆಗುತ್ತಿರುವ ಕನ್ನಡದ ದೊಡ್ಡ ದೊಡ್ಡ ಸಿನಿಮಾಗಳ ಮೇಲೆ ನಿರೀಕ್ಷೆ ದೊಡ್ಡ ಮಟ್ಟದಲ್ಲೇ ಇದೆ. ಅದರಲ್ಲೂ ಪ್ಯಾನ್ ಇಂಡಿಯಾ ಸಿನಿಮಾ ಅಂದಾಗ ಚಿತ್ರದ ಮೇಲೆ ನಿರೀಕ್ಷೆ ದುಪ್ಪಟ್ಟು ಆಗುತ್ತೆ. ಈಗ ಮುಂದಿನ ಸರದಿ ನಟ ದರ್ಶನ್ ಅಭಿನಯದ 'ಕ್ರಾಂತಿ' ಚಿತ್ರದ್ದು. ಮುಂದೆ ಕನ್ನಡದಲ್ಲಿ ರಿಲೀಸ್ ಆಗುತ್ತಿರುವ ಪ್ಯಾನ್ ಇಂಡಿಯಾ ಮಟ್ಟದ ದೊಡ್ಡ ಸಿನಿಮಾ ಎಂದರೆ ಅದು ದರ್ಶನ್ ನಟನೆಯ 'ಕ್ರಾಂತಿ'. ಈ ಸಿನಿಮಾ ಕೂಡ ಬಹುಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಹಾಗಾಗಿ ಈ ಸಿನಿಮಾ ಪ್ರಸ್ತುತ ಕನ್ನಡ ಚಿತ್ರರಂಗ ಕಂಡ ಪ್ಯಾನ್ ಇಂಡಿಯಾ ಗೆಲುವನ್ನು ಮುಂದುವರಿಸಿಕೊಂಡು ಹೋಗಬೇಕಿದೆ. ಆದರೆ ಅದು ಎಷ್ಟರ ಮಟ್ಟಿಗೆ ಸಾಕಾರವಾಗುತ್ತದೆ ಅನ್ನೋದು ಚಿತ್ರ ರಿಲೀಸ್ ಬಳಿಕ ತಿಳಿಯಲಿದೆ.

'ಕಬ್ಜ' ಪ್ಯಾನ್ ಇಂಡಿಯಾ ಗೆಲ್ಲುತ್ತಾ?

'ಕಬ್ಜ' ಪ್ಯಾನ್ ಇಂಡಿಯಾ ಗೆಲ್ಲುತ್ತಾ?

'ಕ್ರಾಂತಿ' ಸಿನಿಮಾವನ್ನು ಬಿಟ್ಟರೆ ಕನ್ನಡದಲ್ಲಿ ದೊಡ್ಡ ಮಟ್ಟದಲ್ಲಿ ದೊಡ್ಡ ಬಜೆಟ್ ನಲ್ಲಿ ತಯಾರಾಗುತ್ತಿರುವ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ಎಂದರೆ ಅದು 'ಕಬ್ಜ'. ಹೌದು ಉಪೇಂದ್ರ ನಟನೆಯ, ಆರ್ ಚಂದ್ರು ನಿರ್ದೇಶನದ 'ಕಬ್ಜ' ಸಿನಿಮಾ ಭಾರತದಾದ್ಯಂತ ಹಲವು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಈ ಸಿನಿಮಾ ದೊಡ್ಡ ಬಜೆಟ್ ನಲ್ಲಿ ಅದ್ದೂರಿಯಾಗಿ ನಿರ್ಮಾಣಗೊಂಡಿದೆ. ಇನ್ನು ಭಾರತದಾದ್ಯಂತ ಎಂಟು ಭಾಷೆಗಳಲ್ಲಿ ಸಿನಿಮಾ ತೆರೆಕಾಣಲಿದೆ ಎನ್ನಲಾಗುತ್ತಿದೆ. ಆದರೆ ಈ ಚಿತ್ರದ ಮುಂದೆ ಕೂಡ ಪ್ಯಾನ್ ಇಂಡಿಯಾ ಸವಾಲು ಇದೆ. ಎಷ್ಟರ ಮಟ್ಟಿಗೆ ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಲಿದೆ ಎಂದು ನೋಡಬೇಕಿದೆ.

More from Filmibeat

English summary
After Vikrant Rona Darshan Kranti And Upendra Kabza Got Pan India Challenge, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X