For Quick Alerts
  ALLOW NOTIFICATIONS  
  For Daily Alerts

  'ಹುಡುಗಾಟ'ದಿಂದ ವಿಡಿಯೋ ಮಾಡಿದ್ದು: 'ಪ್ಲೀಸ್ ಕಾಪಾಡಿ' ಎಂದ ನಟಿ ಸಂಜನಾ.!

  |
  Sanjana Galrani makes a video and cries for help! , why ?

  ಕೆಲವೇ ಕೆಲವು ದಿನಗಳ ಹಿಂದೆಯಷ್ಟೇ ಬಾರ್ ನಲ್ಲಿ ನಿರ್ಮಾಪಕಿ ವಂದನಾ ಜೈನ್ ಜೊತೆಗೆ ಕಿರಿಕ್ ಮಾಡಿಕೊಂಡು ಸುದ್ದಿ ಆಗಿದ್ದ ಸಂಜನಾ ನಿನ್ನೆ ಮತ್ತೆ ಸೌಂಡ್ ಮಾಡಿದ್ದು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರಿಂದ.!

  ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿ, ಓಪನ್ ಕಾರು ಚಾಲನೆ ವೇಳೆ ನಡುರಸ್ತೆಯಲ್ಲಿ ಮೊಬೈಲ್ ಬಳಸಿ ಸೆಲ್ಫಿ ವಿಡಿಯೋ ಮಾಡಿದ್ದ ನಟಿ ಸಂಜನಾ ಗಲ್ರಾನಿ ವಿರುದ್ಧ ನಿನ್ನೆ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ದೂರು ದಾಖಲಿಸಿಕೊಂಡರು.

  ಇದೇ ವಿಚಾರದ ಬಗ್ಗೆ ಇದೀಗ ನಟಿ ಸಂಜನಾ ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ''ದೂರು ದಾಖಲಾಗಿರುವ ಬಗ್ಗೆ ನನಗೆ ಯಾವುದೇ ನೋಟೀಸ್ ಬಂದಿಲ್ಲ. ಹುಡುಗಾಟದಲ್ಲಿ ಆ ವಿಡಿಯೋ ಮಾಡಿದ್ದೆ. ಕಾನೂನು ಉಲ್ಲಂಘನೆ ಮಾಡುವ ಉದ್ದೇಶ ನನಗೆ ಇರಲಿಲ್ಲ'' ಎಂದು ವಿಡಿಯೋದಲ್ಲಿ ಸಂಜನಾ ತಿಳಿಸಿದ್ದಾರೆ.

  12 ವರ್ಷಗಳಿಂದ ವಾಹನ ಚಾಲನೆ ಮಾಡುತ್ತಿರುವೆ ಎಂದಿರುವ ಸಂಜನಾ, ಬೆಂಗಳೂರಿನಲ್ಲಿಯೇ ನೆಲೆಸಿದ್ದರೂ 'ಉಪ್ಪಾರಪೇಟೆ' ಎಲ್ಲಿದೆ ಅನ್ನೋದು ಆಕೆಗೆ ಗೊತ್ತಿಲ್ಲ.! ಅದಕ್ಕೆ ''ಉಪ್ಪಾನಗರ್'' ಅಂತ ವಿಡಿಯೋದಲ್ಲಿ ಹೇಳಿದ್ದಾರೆ.!

  ಜೊತೆಗೆ ''ನನ್ನ ಬಗ್ಗೆ ಚಾನೆಲ್ ಗಳಲ್ಲಿ ರೂಮರ್ಸ್ ಸ್ಪ್ರೆಡ್ ಮಾಡಬೇಡಿ. ವಿವಾದಗಳಿಂದ ನನ್ನನ್ನು ದೂರ ಇಡಿ. ಪ್ಲೀಸ್ ನನ್ನನ್ನ ಕಾಪಾಡಿ'' ಎಂದು ನಟಿ ಸಂಜನಾ ವಿಡಿಯೋದಲ್ಲಿ ಬೇಡಿಕೊಂಡಿದ್ದಾರೆ. ಮುಂದೆ ಓದಿರಿ...

  ಉಪ್ಪಾನಗರ್ ಎಲ್ಲಿದೆ.?

  ಉಪ್ಪಾನಗರ್ ಎಲ್ಲಿದೆ.?

  ''ಉಪ್ಪಾನಗರ್ ಪೊಲೀಸ್ ಸ್ಟೇಷನ್ ನಿಂದ ನನಗೆ ನೋಟೀಸ್ ಬಂದಿದೆ ಅಂತ ನ್ಯೂಸ್ ಬಂದಿದೆ. ಈ ಸುದ್ದಿ ಎಲ್ಲಿಂದ ಬಂತು ಅನ್ನೋದು ನನಗೆ ಗೊತ್ತಿಲ್ಲ. ಉಪ್ಪಾನಗರ್ ಎಲ್ಲಿದೆ ಅನ್ನೋದು ಕೂಡ ಗೊತ್ತಿಲ್ಲ. ಉಪ್ಪಾನಗರ್ ಎಲ್ಲಿದೆ ಅಂತ ಕೇಳಿದ್ರೆ ನಾಲ್ಕು ಜನ ಮೆಜೆಸ್ಟಿಕ್ ನಲ್ಲಿದೆ ಅಂತಾರೆ'' ಎಂದು ವಿಡಿಯೋದಲ್ಲಿ ಹೇಳಿದ್ದಾರೆ ನಟಿ ಸಂಜನಾ.

  ಮತ್ತೊಂದು ಎಡವಟ್ಟು ಮಾಡಿದ ಸಂಜನಾ: ಪೊಲೀಸ್ ಠಾಣೆಯಲ್ಲಿ ದೂರು ದಾಖಲು.!ಮತ್ತೊಂದು ಎಡವಟ್ಟು ಮಾಡಿದ ಸಂಜನಾ: ಪೊಲೀಸ್ ಠಾಣೆಯಲ್ಲಿ ದೂರು ದಾಖಲು.!

  ಹೊಸ ಗಾಡಿ ತೆಗೆದುಕೊಂಡಿದ್ದೇನೆ

  ಹೊಸ ಗಾಡಿ ತೆಗೆದುಕೊಂಡಿದ್ದೇನೆ

  ''ಹೊಸ ಗಾಡಿ ತೆಗೆದುಕೊಂಡಿದ್ದೇನೆ. ಮನಸ್ಸು ತುಂಬಾ ಖುಷಿ ಖುಷಿ ಆಗಿತ್ತು. ಡೆಲಿವರಿ ಬಂತು. ನನ್ನ ಮನೆ ಹತ್ತಿರ ಇರುವ ಸರ್ವಿಸ್ ರೋಡ್ ನಲ್ಲಿ ಸಿಗ್ನಲ್ ಬಿದ್ದಿತ್ತು. ಎರಡು ನಿಮಿಷ ಸಿಗ್ನಲ್ ಇತ್ತು. 30-40 ಸೆಕೆಂಡ್ಸ್ ನಲ್ಲಿ ಒಂದು ಸಣ್ಣ ವಿಡಿಯೋ ಮಾಡಿದೆ. 12 ವರ್ಷದಿಂದ ಗಾಡಿ ಓಡಿಸುತ್ತಿದ್ದೇನೆ. ಒಂದು ಇರುವೆ ಮೇಲೂ ದೇವರ ದಯೆದಿಂದ ಗಾಡಿ ಹತ್ತಿಸಿಲ್ಲ. ಗಾಡಿ ಎದುರುಗಡೆ 10 ಅಡಿ ಜಾಗ ಇದೆ. ಹಿಂದೆ 5-8 ಅಡಿ ಜಾಗ ಇದೆ. ಆ ವಿಡಿಯೋದಲ್ಲಿ ಕಾಣಿಸುತ್ತೆ'' - ಸಂಜನಾ ಗಲ್ರಾನಿ, ನಟಿ

  ಬಾರ್ ನಲ್ಲಿ ಕಿರಿಕ್: ಸುದೀರ್ಘ ಪತ್ರ ಬರೆದು ಸ್ಪಷ್ಟನೆ ನೀಡಿದ ಸಂಜನಾ ಗಲ್ರಾನಿಬಾರ್ ನಲ್ಲಿ ಕಿರಿಕ್: ಸುದೀರ್ಘ ಪತ್ರ ಬರೆದು ಸ್ಪಷ್ಟನೆ ನೀಡಿದ ಸಂಜನಾ ಗಲ್ರಾನಿ

  ಹುಡುಗಾಟದಲ್ಲಿ ವಿಡಿಯೋ ಮಾಡಿದ್ದು.!

  ಹುಡುಗಾಟದಲ್ಲಿ ವಿಡಿಯೋ ಮಾಡಿದ್ದು.!

  ''ಹುಡುಗಾಟದಲ್ಲಿ ನಾನು ಆ ವಿಡಿಯೋ ಮಾಡಿದೆ. ಆದ್ರೆ, ಯಾರಿಗೂ ಹಾನಿ ಮಾಡಿಲ್ಲ. ಹಾನಿ ಮಾಡುವ ಉದ್ದೇಶ ನನಗಿಲ್ಲ. ದಯವಿಟ್ಟು ನನ್ನನ್ನ ವಿವಾದಗಳಿಂದ ದೂರ ಇಡಿ. ನನ್ನ ಕುರಿತಾದ ರೂಮರ್ಸ್ ನ ಯಾವುದೇ ಚಾನೆಲ್ ಗೆ ಸ್ಪ್ರೆಡ್ ಮಾಡಬೇಡಿ ಅಂತ ಬೇಡಿಕೊಳ್ಳುತ್ತಿದ್ದೇನೆ'' - ಸಂಜನಾ ಗಲ್ರಾನಿ, ನಟಿ

  ಬಾರ್ ನಲ್ಲಿ ಗಲಾಟೆ: ಸಂಜನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ ವಂದನಾ ಜೈನ್ಬಾರ್ ನಲ್ಲಿ ಗಲಾಟೆ: ಸಂಜನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಿದ ವಂದನಾ ಜೈನ್

  ನೋಟೀಸ್ ಬಂದಿಲ್ಲ.!

  ನೋಟೀಸ್ ಬಂದಿಲ್ಲ.!

  ''15 ದಿನಗಳ ಹಿಂದೆ ನಡೆದ ಘಟನೆ ಬಗ್ಗೆಯೂ ನನಗೆ ಯಾವುದೇ ಲೀಗಲ್ ನೋಟೀಸ್ ಬಂದಿಲ್ಲ. ಆ ತರಹವೇ ಈ ಘಟನೆ ಬಗ್ಗೆಯೂ ನನಗೆ ಲೀಗಲ್ ನೋಟೀಸ್ ಬಂದಿಲ್ಲ. ಚೆನ್ನಾಗಿದ್ದೀರಾ ಅಂತ ಕೇಳಿದರೂ, ಅದೂ ವಿವಾದ ಆಗುತ್ತಿದೆ. ನನಗೆ ಯಾಕೆ ಈ ತರಹ ಟಾರ್ಗೆಟ್ ಮಾಡುತ್ತಿದ್ದೀರಾ.? ನಾನು ಏನು ತಪ್ಪು ಮಾಡಿದ್ದೇನೆ.? ಏನು ಹಾನಿ ಮಾಡಿದ್ದೇನೆ.?'' - ಸಂಜನಾ ಗಲ್ರಾನಿ, ನಟಿ

  ಪ್ಲೀಸ್ ನನ್ನ ಕಾಪಾಡಿ.!

  ಪ್ಲೀಸ್ ನನ್ನ ಕಾಪಾಡಿ.!

  ''ಬರೀ ಕಷ್ಟ ಪಟ್ಟು ಜಿಮ್ ಮಾಡೋದು, ಸಿನಿಮಾ ಮಾಡೋದು, ಆರಾಮಾಗಿ ನನ್ನ ಪಾಡಿಗೆ ನಾನು ಇರೋದು. ಪ್ಲೀಸ್ ನನ್ನನ್ನ ಇದರಿಂದ ಕಾಪಾಡಿ. ಆ ಚಿಕ್ಕ ವಿಡಿಯೋ ಮಾಡಿದ್ದು ಹುಡುಗಾಟದಲ್ಲಿ. ಶೋ ಆಫ್ ಅಥವಾ ತೋರಿಸಿಕೊಳ್ಳಲು, ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳಲು ಅಲ್ಲ. ಪೊಲೀಸರ ಮೇಲೆ ನನಗೆ ಗೌರವ ಇದೆ. ಪ್ರತಿಯೊಬ್ಬರಿಗೂ ಕಾನೂನು ಒಂದೇ. ಕಾನೂನು ವಿರುದ್ಧವಾಗಿ ಹೋಗುವುದು ನನ್ನ ಉದ್ದೇಶ ಆಗಿರಲಿಲ್ಲ'' ಎಂದು ವಿಡಿಯೋ ಮೂಲಕ ನಟಿ ಸಂಜನಾ ತಿಳಿಸಿದ್ದಾರೆ.

  English summary
  After violating Traffic rules: Please help me says Sanjana Galrani in a video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X