For Quick Alerts
  ALLOW NOTIFICATIONS  
  For Daily Alerts

  'ಕಾಂತಾರ' ನೋಡಿ ರಿಪೋರ್ಟರ್ ರೀತಿ ಪ್ರೇಕ್ಷಕರ ರಿವ್ಯೂ ಕೇಳಿದ ನಟಿ: ಇದು ತುಳುನಾಡಿದ ಹೆಮ್ಮೆ ಎಂದ ಬೆಡಗಿ!

  |

  ಅಬಾಲವೃದ್ಧರಾಗಿ ಎಲ್ಲಾ ವರ್ಗದ ಪ್ರೇಕ್ಷಕರ ಮನಗೆಲ್ಲುವಲ್ಲಿ 'ಕಾಂತಾರ' ಸಿನಿಮಾ ಸಕ್ಸಸ್ ಕಂಡಿದೆ. ಕರಾವಳಿಯ ಭಾಷೆ, ಸಂಸ್ಕೃತಿ, ಆಚಾರ-ವಿಚಾರವನ್ನು ಚಿತ್ರದಲ್ಲಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇನ್ನು ಶ್ರೀಮಂತರು ಹಾಗೂ ಬಡವರ ನಡುವಿನ ಸಂಘರ್ಷ, ಸರ್ಕಾರಿ ಅಧಿಕಾರಿಗಳು ಹಾಗೂ ಮುಗ್ಧ ಜನರ ನಡುವಿನ ಸಂಘರ್ಷದಂತಹ ವಿಷಯಗಳು ಪ್ರೇಕ್ಷಕರಿಗೆ ಹೆಚ್ಚು ಹೆಚ್ಚು ಆಪ್ತ ಎನಿಸಿದೆ.

  ಪರಭಾಷಿಕರು ಕೂಡ ಕರಾವಳಿಯ ಆಚಾರ, ವಿಚಾರಗಳನ್ನು ತೆರೆಮೇಲೆ ಕಂಡು ಬೆರಗಾಗಿದ್ದಾರೆ. ಕೆಲವರು ಭಕ್ತಿ ಪರವಶರಾಗಿದ್ದಾರೆ. ಇನ್ನು ಕರಾವಳಿ ಭಾಗದ ಜನತೆಗೆ 'ಕಾಂತಾರ' ಸಿನಿಮಾ ಕೊಂಚ ಹೆಚ್ಚೇ ಆಪ್ತವಾಗಿದೆ. ಕರಾವಳಿ ಭಾಗದ ಥಿಯೇಟರ್‌ಗಳಲ್ಲಿ ಸಿನಿಮಾ ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿದೆ. ಎಲ್ಲಾ ಶೋಗಳು ಹೌಸ್‌ಫುಲ್ ಆಗ್ತಿದೆ. ಪದೇ ಪದೇ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚುತ್ತಿದೆ. ಶಿಲ್ಪಾ ಶೆಟ್ಟಿ, ಅನುಷ್ಕಾ ಶೆಟ್ಟಿರಂತಹ ಕರಾವಳಿ ಮೂಲದ ನಟಿಯರು ಸಿನಿಮಾ ನೋಡಿ ಬೆರಗಾಗಿದ್ದಾರೆ. ರಿಷಬ್ ಶೆಟ್ಟಿ ಮತ್ತವರ ತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

  'ಕಾಂತಾರ' ನೋಡಲು ತುದಿಗಾಲಿನಲ್ಲಿ ನಿಂತ ಕಂಗನಾ ರನೌತ್; ಚಿತ್ರ ನೋಡುವ ಮುನ್ನವೇ ಹೊಗಳಿಕೆಯ ಮಳೆ'ಕಾಂತಾರ' ನೋಡಲು ತುದಿಗಾಲಿನಲ್ಲಿ ನಿಂತ ಕಂಗನಾ ರನೌತ್; ಚಿತ್ರ ನೋಡುವ ಮುನ್ನವೇ ಹೊಗಳಿಕೆಯ ಮಳೆ

  ಪ್ರಭಾಸ್, ರಾಣಾ ದಗ್ಗುಬಾಟಿ, ಕಾರ್ತಿ, ಧನುಷ್, ಸಿಂಬು ಸೇರಿದಂತೆ ಪರಭಾಷಾ ಸೂಪರ್ ಸ್ಟಾರ್‌ಗಳು ಕೂಡ 'ಕಾಂತಾರ' ಬಹುಪರಾಕ್ ಹೇಳಿದ್ದಾರೆ. ನಟಿ ಅವಂತಿಕಾ ಶೆಟ್ಟಿ ಸಿನಿಮಾ ನೋಡಿದ ಮೇಲೆ ರಿಪೋರ್ಟರ್ ಆಗಿ ಕ್ಯಾಮರಾ ಹಿಡಿದು ತಾವೇ ಜನರ ರಿವ್ಯೂ ಕೇಳಿ ತಿಳಿದು ಖುಷಿಯಾಗಿದ್ದಾರೆ.

  ಕ್ಯಾಮರಾ ಹಿಡಿದು ರಿವ್ಯೂ ಕೇಳಿದ ನಟಿ

  ಕ್ಯಾಮರಾ ಹಿಡಿದು ರಿವ್ಯೂ ಕೇಳಿದ ನಟಿ

  'ರಂಗಿತರಂಗ', 'ರಾಜು ಕನ್ನಡ ಮೀಡಿಯಂ', 'ರಾಜರಥ' ಚಿತ್ರಗಳಲ್ಲಿ ನಟಿಸಿದ ಅವಂತಿಕಾ ಶೆಟ್ಟಿ ಕೂಡ 'ಕಾಂತಾರ' ಸಿನಿಮಾ ನೋಡಿದ್ದಾರೆ. ಥಿಯೇಟರ್‌ನಿಂದ ಹೊರ ಬರುತ್ತಿದ್ದಂತೆ ಸಿನಿಮಾ ನೋಡಿದ ಪ್ರೇಕ್ಷಕರ ಉತ್ಸಾಹ ಕಂಡು ತಮ್ಮ ಮೊಬೈಲ್‌ ಕ್ಯಾಮರಾ ಹಿಡಿದು ಪ್ರೇಕ್ಷಕರು ರೆಸ್ಪಾನ್ಸ್ ಹೇಗಿದೆ ಎಂದು ಕೇಳಿದ್ದಾರೆ. ಸಾಮಾನ್ಯವಾಗಿ ಸಿನಿಮಾ ರಿಲೀಸ್ ದಿನ ಥಿಯೇಟರ್‌ಗಳ ಮುಂದೆ ಮೈಕ್ ಹಿಡಿದು ಸಿನಿಮಾ ಹೇಗಿದೆ ಎಂದು ರಿಪೋರ್ಟರ್‌ಗಳು ಕೇಳುತ್ತಾರೆ. ಅದೇ ರೀತಿ ಅವಂತಿಕಾ ಶೆಟ್ಟಿ ಕೂಡ ಕೇಳಿದ್ದಾರೆ. ಪ್ರೇಕ್ಷಕರು ನೀಡಿದ ಪ್ರತಿಕ್ರಿಯೆಯನ್ನು ಎಲ್ಲರೊಟ್ಟಿಗೂ ಹಂಚಿಕೊಂಡಿದ್ದಾರೆ.

  ಶುಕ್ರವಾರಕ್ಕಿಂತ ಸೋಮವಾರ 'ಕಾಂತಾರ' ಹಿಂದಿ ಕಲೆಕ್ಷನ್ ಹೆಚ್ಚು? ಹಿಂದಿ ಸಿನಿಮಾಗಳಿಗೆ ಅವರ ನೆಲದಲ್ಲೇ ಟಕ್ಕರ್!ಶುಕ್ರವಾರಕ್ಕಿಂತ ಸೋಮವಾರ 'ಕಾಂತಾರ' ಹಿಂದಿ ಕಲೆಕ್ಷನ್ ಹೆಚ್ಚು? ಹಿಂದಿ ಸಿನಿಮಾಗಳಿಗೆ ಅವರ ನೆಲದಲ್ಲೇ ಟಕ್ಕರ್!

  'ಕಾಂತಾರ' ತುಳುನಾಡಿನ ಹೆಮ್ಮೆ

  'ಕಾಂತಾರ' ತುಳುನಾಡಿನ ಹೆಮ್ಮೆ

  ಅವಂತಿಕಾ ಶೆಟ್ಟಿ ತಾವು ಪ್ರೇಕ್ಷಕರಿಂದ ಪಡೆದ ರಿವ್ಯೂ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿ "ಕಾಂತಾರ ಚಿತ್ರಕ್ಕಾಗಿ ನಾನು ರಿಪೋರ್ಟರ್ ಆಗಿ ಬದಲಾದೆ. ಸಿನಿಮಾ ಬಗ್ಗೆ ಹೇಳಲು ಕೆಲವು ಮೆಚ್ಚುಗೆಯ ಮಾತುಗಳು ಸಾಕಾಗುವುದಿಲ್ಲ. ರಿಷಬ್ ಶೆಟ್ಟಿ ಈ ಸಿನಿಮಾ ನೀಡಿದ ಅನುಭವ ಎಂಥದ್ದು ಎಂದು ಹೇಳಲು ಪದಗಳು ಸಾಲುತ್ತಿಲ್ಲ. ನಿಜಕ್ಕೂ ಅತ್ಯದ್ಭುತ. ಇದು ತುಳುನಾಡಿನ ಜನರ ಹೆಮ್ಮೆಯ ವಿಷಯ" ಎಂದು ಬರೆದುಕೊಂಡಿದ್ದಾರೆ.

   ₹100 ಕೋಟಿಗೂ ಅಧಿಕ ಕಲೆಕ್ಷನ್

  ₹100 ಕೋಟಿಗೂ ಅಧಿಕ ಕಲೆಕ್ಷನ್

  ಈಗಾಗಲೇ 'ಕಾಂತಾರ' ಸಿನಿಮಾ ರಿಲೀಸ್ ಆಗಿ 18 ದಿನ ಕಳೆದಿದೆ. 100 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. 3 ದಿನಗಳ ಹಿಂದೆ ತೆಲುಗು, ಹಿಂದಿ, ತಮಿಳು ಭಾಷೆಗಳಿಗೂ ಡಬ್ ಆಗಿ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಹಿಂದಿ ವರ್ಷನ್ 4 ದಿನಕ್ಕೆ 8 ಕೋಟಿ ರೂ. ಬಾಚಿದ್ದರೆ, ತೆಲುಗು 10 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಸಿನಿಮಾ ನೋಡಲು ಬರುತ್ತಿರುವ ಪ್ರೇಕ್ಷಕರ ಸಂಖ್ಯೆ ಹೆಚ್ಚುತ್ತಿರುವುದು ತಂಡಕ್ಕೆ ಸಂತಸ ತಂದಿದೆ.

  ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಕಾಂತಾರ'

  ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 'ಕಾಂತಾರ'

  ಮೊದಲಿಗೆ 'ಕಾಂತಾರ' ಬರೀ ಕನ್ನಡ ಸಿನಿಮಾ ಮಾತ್ರ ಆಗಿತ್ತು. ನಮ್ಮ ಮಣ್ಣಿನ ಸಿನಿಮಾವನ್ನು ನಮ್ಮ ಭಾಷೆಯಲ್ಲೇ ಎಲ್ಲರೂ ನೋಡಲಿ ಎನ್ನುವುದು ಚಿತ್ರತಂಡದ ಆಸೆ ಆಗಿತ್ತು. ಅದೇ ರೀತಿ 15 ದಿನಗಳ ಕಾಲ ಕನ್ನಡ ವರ್ಷನ್‌ ದೇಶವಿದೇಶಗಳಲ್ಲಿ ಪ್ರದರ್ಶನ ಕಂಡಿತ್ತು. ಇಂಗ್ಲೀಷ್‌ ಸಬ್‌ಟೈಟಲ್‌ ಜೊತೆಗೆ ಸಿನಿಮಾ ನೋಡಿದ ಪ್ರೇಕ್ಷಕರು ಬೆರಗಾಗಿದ್ದರು. ನಮ್ಮ ಭಾಷೆಗಳಿಗೆ ಡಬ್ ಮಾಡಿ ಬಿಟ್ಟರೆ ಮತ್ತಷ್ಟು ಜನರಿಗೆ ತಲುಪುತ್ತದೆ ಎಂದರು. ವಿತರಕರು ಕೂಡ ಬೇಡಿಕೆ ಇಟ್ಟರು. ಪರಿಣಾಮವಾಗಿ ಡಬ್ ಮಾಡಿ ಸಿನಿಮಾ ರಿಲೀಸ್ ಮಾಡಲಾಗಿದೆ.

  English summary
  After Watching Kantara Movie Actress Avantika Shetty Become Reporter and took Audience reaction. Know More.
  Tuesday, October 18, 2022, 12:42
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X