ಕೆಜಿಎಫ್ ಟ್ರೈಲರ್ ನೋಡಿ ಅತ್ತರಂತೆ ಶ್ರೀನಿಧಿ ಶೆಟ್ಟಿ.!
Recommended Video

ಕೆಜಿಎಫ್ ಕನ್ನಡ ಚಿತ್ರರಂಗದ ಡ್ರೀಮ್ ಪ್ರಾಜೆಕ್ಟ್. ಕನ್ನಡ ಇಂಡಸ್ಟ್ರಿಯಲ್ಲಿ ಇನ್ನೊಂದು ಹಂತಕ್ಕೆ ಕರೆದುಕೊಂಡು ಹೋಗುವ ಮೆಗಾ ಸಿನಿಮಾ ಎಂದು ಎಲ್ಲರು ಹೇಳುತ್ತಿದ್ದಾರೆ. ಕೆಲವರಿಗೆ ಇದು ಬರಿ ಸಿನಿಮಾ, ಇನ್ನು ಕೆಲವರಿಗೆ ಇದು ಜೀವನ.
ಯಾಕಂದ್ರೆ, ಈ ಸಿನಿಮಾದ ನಂತರ ತಮ್ಮ ವೃತ್ತಿ ಜೀವನವೇ ಬದಲಾಗುತ್ತೆ. ಇಲ್ಲಿಂದು ಹೊಸ ಹೆಜ್ಜೆ ಇಡಬಹುದು ಎಂಬ ನಿರೀಕ್ಷೆ, ಭರವಸೆ, ಕನಸುಗಳು ಇದೆ. ಇದರಲ್ಲಿ ಕೆಜಿಎಫ್ ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ ಕೂಡ ಒಬ್ಬರು.
ಹೌದು, ಶ್ರೀನಿಧಿ ಶೆಟ್ಟಿಗೆ ಇದು ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲಿಯೇ ರಾಕಿಂಗ್ ಸ್ಟಾರ್ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಪಡೆದುಕೊಂಡು ಶ್ರೀನಿಧಿ ಶೆಟ್ಟಿ, ಐದು ಭಾಷೆಗಳಲ್ಲಿ ಪರಿಚಯವಾಗ್ತಿದ್ದಾರೆ. ಇಂತಹ ಖುಷಿಯ ಸಮಯದಲ್ಲಿದ್ದ ಶ್ರೀನಿಧಿ ಶೆಟ್ಟಿ ಕೆಜಿಎಫ್ ಟ್ರೈಲರ್ ನೋಡಿ ಅತ್ತರಂತೆ. ಯಾಕೆ.? ಮುಂದೆ ಓದಿ.....

ಟ್ರೈಲರ್ ನೋಡಿ ಅತ್ತಿದ್ದೆ
'ಕೆಜಿಎಫ್ ಟ್ರೈಲರ್ ನೋಡಿ ನಾನು ಅತ್ತಿದ್ದೀನಿ. ನನಗೆ ಆ ಕ್ಷಣ ತುಂಬಾ ಭಾವನಾತ್ಮಕವಾಗಿತ್ತು. ಟ್ರೈಲರ್ ಬಗ್ಗೆ ಒಂದು ಸಾಲಿನಲ್ಲಿ ಹೇಳುವುದಾರೇ ಮ್ಯಾಜಿಕ್. ನಾನು ತುಂಬಾ ಲಕ್ಕಿ. ನನ್ನ ಮೊದಲ ಸಿನಿಮಾ ಇಂತಹ ದೊಡ್ಡ ಮಟ್ಟದಲ್ಲಿ ಬರ್ತಿದೆ. ಎಲ್ಲರೂ ಇಂತಹ ಸಿನಿಮಾದಲ್ಲಿ ಭಾಗಿಯಾಗ್ಬೇಕು ಎಂಬ ಕಸನು ಕಾಣ್ತಾರೆ. ಅದರಲ್ಲೂ ನನಗೆ ಈ ಸಿನಿಮಾ ಸಿಕ್ಕಿದ್ದು ನನಗೆ ಅದೃಷ್ಟ. ಆ ದೇವರ ಮತ್ತು ನಮ್ಮ ತಂದೆ ತಾಯಿಯ ಆಶೀರ್ವಾದ' ಎಂದು ಸಂತಸ ವ್ಯಕ್ತಪಡಿಸಿದರು ನಟಿ ಶ್ರೀನಿಧಿ ಶೆಟ್ಟಿ.

ಕೆಜಿಎಫ್ ಆಫರ್ ಸಿಕ್ಕಿದ್ದು ಹೇಗೆ.?
''2016ರಲ್ಲಿ ಮಿಸ್ ಇಂಡಿಯಾದಲ್ಲಿ ಭಾಗವಹಿಸಿದ್ದೆ. ಮಿಸ್ ಇಂಡಿಯಾ ಗೆದ್ದೆ. ಆಗ ನನ್ನ ಬಗ್ಗೆ ನನ್ನ ಫೋಟೋಗಳು ಎಲ್ಲ ಪತ್ರಿಕೆಗಳಲ್ಲೂ ಪ್ರಕಟವಾಯಿತು. ಬಹುಶಃ ಅಲ್ಲಿ ನನ್ನನ್ನು ನೋಡಿ, ಕಾರ್ತಿಕ್ ಅವರಿಂದ ಫೋನ್ ಬಂತು. ಆಮೇಲೆ ಮೀಟಿಂಗ್ ಆಯಿತು. ಯಶ್ ನಾಯಕ, ಪ್ರಶಾಂತ್ ನೀಲ್ ನಿರ್ದೇಶನ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ. ಇದಕ್ಕಿಂತ ಲಕ್ಕಿ ಸಿನಿಮಾ ಸಿಗಲ್ಲ' ಎಂದು ತಾವು ಆಯ್ಕೆ ಆದ ಬಗೆ ವಿವರಿಸಿದರು.

ನನಗೆ ಆಗ ಗೊತ್ತಿರಲಿಲ್ಲ
''ನನಗೆ ಆಗ ಗೊತ್ತಿರಲಿಲ್ಲ ಇಷ್ಟು ದೊಡ್ಡ ಸಿನಿಮಾ ಆಗುತ್ತೆ ಅಂತ. ಒಂದು ಸಿನಿಮಾ ಅಂದುಕೊಂಡಿದ್ದೀವಿ, ಕಥೆ ತುಂಬಾ ದೊಡ್ಡದಾಗಿದ್ದರಿಂದ ಎರಡು ಭಾಗ ಆಯಿತು. ಆರಂಭದಲ್ಲಿ ಎರಡು ಭಾಷೆ ಅಂದುಕೊಂಡಿದ್ದರು, ಆಮೇಲೆ ಅದು ಮೂರು ಆಯಿತು, ಈಗ ಐದು ಭಾಷೆ ಆಗಿದೆ'' ಎಂದು ಶ್ರೀನಿಧಿ ಹೇಳಿಕೊಂಡರು.

ಯಶ್ ಬಗ್ಗೆ ಏನಂದ್ರು.?
''ಅವರಿಗೆ ತುಂಬಾ ತಾಳ್ಮೆ ಇದೆ. ಶೂಟಿಂಗ್ ಶುರುವಾಗುವುದಕ್ಕೂ ಮುಂಚೆ ನಾನು ತುಂಬಾ ನರ್ವಸ್ ಆಗಿದ್ದೆ. ಅವರು ಒಂದು ಟೇಕ್ ಮಾಡ್ತಾರೆ, ನಾನು ನಾಲ್ಕೈದು ಟೇಕ್ ಆದ್ರೆ ಎಲ್ಲರೂ ಕಾಯಬೇಕು ಅಲ್ವಾ ಅಂತ ಭಯ ಆಗಿತ್ತು. ಬಟ್, ಅವರು ತುಂಬಾ ಸಪೋರ್ಟ್ ಮಾಡಿದ್ದಾರೆ. ನನಗೆ ಕಷ್ಟದ ದೃಶ್ಯಗಳಲ್ಲಿ ಸಲಹೆ ನೀಡಿದ್ದಾರೆ'' ಎಂದು ಯಶ್ ಬಗ್ಗೆ ಮೆಚ್ಚುಗೆ ಮಾತನಾಡಿದ್ದಾರೆ.


Click it and Unblock the Notifications











