ಅಮೇರಿಕಾದ ಯಶ್ ಅಭಿಮಾನಿ, ರಾಕಿಂಗ್ ಸ್ಟಾರ್ ಬಗ್ಗೆ ಬಿಚ್ಚಿಟ್ಟ ಇಂಟ್ರೆಸ್ಟಿಂಗ್ ವಿಚಾರ

By Pavithra

ರಾಕಿಂಗ್ ಸ್ಟಾರ್ ಯಶ್.... ರಾಜ್ಯಾದ್ಯಂತ ಅಪಾರ ಅಭಿಮಾನಿಗಳನ್ನ ಹೊಂದಿರುವ ನಾಯಕ ನಟ. ರಾಕಿಂಗ್ ಸ್ಟಾರ್ ಕೇವಲ ಸಿನಿಮಾದಲ್ಲಿ ಮಾತ್ರವಲ್ಲದೆ ಸಮಾಜಮುಖಿ ಕಾರ್ಯದಲ್ಲಿಯೂ ಗುರುತಿಸಿಕೊಂಡಿದ್ದು, ಯುವಕರಿಂದ ಹಿರಿಯರ ತನಕವೂ ರಾಕಿಂಗ್ ಸ್ಟಾರ್ ರನ್ನ ಇಷ್ಟ ಪಡದೇ ಇರುವ ಜನರಿಲ್ಲ.

ಇಷ್ಟು ದಿನ ರಾಜ್ಯದಲ್ಲಿ, ಹೊರ ರಾಜ್ಯದಲ್ಲಿ ಮಾತ್ರ ಯಶ್ ಅಭಿಮಾನಿಗಳಿದ್ದಾರೆ ಎನ್ನುವ ಊಹೆ ಇತ್ತು. ಆದ್ರೆ ಈಗ ರಾಕಿಂಗ್ ಸ್ಟಾರ್ ಗೆ ಬೇರೆ ದೇಶಗಳಲ್ಲೂ ಅಭಿಮಾನಿಗಳಿದ್ದಾರೆ. ಅಮೇರಿಕಾದ ಅಭಿಮಾನಿಯೊಬ್ಬರು ರಾಕಿಂಗ್ ಸ್ಟಾರ್ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನ ಬಿಚ್ಚಿಟ್ಟಿದ್ದಾರೆ. ಯಾರು ಆ ಅಭಿಮಾನಿ.? ಯಶ್ ಫ್ಯಾನ್ ಆಗಲು ಕಾರಣವೇನು.? ಯಶ್ ಯಾಕೆ ಎಲ್ಲರಿಗಿಂತ ವಿಭಿನ್ನ.? ಇವೆಲ್ಲದರ ಬಗ್ಗೆ ಮಾತನಾಡಿದ್ದಾರೆ. ಮುಂದೆ ಓದಿರಿ....

ರಾಕಿಂಗ್ ಸ್ಟಾರ್ ಆಕ್ಟಿಂಗ್ ಗೆ ಫುಲ್ ಫಿದಾ

ರಾಕಿಂಗ್ ಸ್ಟಾರ್ ಆಕ್ಟಿಂಗ್ ಗೆ ಫುಲ್ ಫಿದಾ

ಲೀ ಎಂ ಸೆಂಟ್ರಾಚಿಯೊ... ಮೂಲತ ಅಮೇರಿಕಾದ ನಿವಾಸಿ. ಬಿಡುವಿನ ಸಮಯದಲ್ಲಿ ಯಶ್ ಅಭಿನಯದ 'ಗೂಗ್ಲಿ' ಸಿನಿಮಾವನ್ನ ನೋಡಿ ಸಖತ್ ಇಂಪ್ರೆಸ್ ಆಗಿದ್ದಾರೆ. ಹಿಂದಿಯಲ್ಲಿ ಡಬ್ ಆಗಿದ್ದ ಚಿತ್ರವನ್ನ ಮೆಚ್ಚಿಕೊಂಡು ಈಗ ರಾಕಿಂಗ್ ಸ್ಟಾರ್ ಯಶ್ ರ ಅಪ್ಪಟ ಅಭಿಮಾನಿಯಾಗಿದ್ದಾರೆ.

ಯಶ್ ಅಂದ್ರೆ 'ಅಪಾರ ಅಭಿಮಾನ'

ಯಶ್ ಅಂದ್ರೆ 'ಅಪಾರ ಅಭಿಮಾನ'

ಸಾಮಾನ್ಯವಾಗಿ ಸೆಲೆಬ್ರಿಟಿಗಳು ಅಂದ್ರೆ ಎಲ್ಲೆಡೆ ಫ್ಯಾನ್ಸ್ ಇದ್ದೇ ಇರ್ತಾರೆ. ಬಿಡುಗಡೆಯಾದಾಗ ಸಿನಿಮಾಗಳನ್ನ ನೋಡ್ತಾರೆ. ಆದ್ರೆ 'ಲೀ ಎಂ ಸೆಂಟ್ರಾಚಿಯೊ' ಎಲ್ಲರಂತೆ ಅಲ್ಲ. ಯಶ್ ಸಿನಿಮಾ ನೋಡಿದ ನಂತ್ರ, ಯಶ್ ಬಗ್ಗೆ ರಿಸರ್ಚ್ ಮಾಡಿದ್ದಾರೆ. ಯಶ್ ಸಿನಿಮಾಗಳು ಯಾವುದು, ಯಾವಾಗ ರಿಲೀಸ್ ಆಯ್ತು ಅನ್ನೋದನ್ನ ತಿಳಿದುಕೊಂಡಿದ್ದಾರೆ.

ಪಕ್ಕಾ ಯಶ್ ಫಾಲೋವರ್

ಪಕ್ಕಾ ಯಶ್ ಫಾಲೋವರ್

'ಲೀ ಎಂ ಸೆಂಟ್ರಾಚಿಯೊ' ಪಕ್ಕಾ ಯಶ್ ಅಭಿಮಾನಿ, 'ರಾಕಿ' ಸಿನಿಮಾದಿಂದ 'ಸಂತು ಸ್ಟ್ರೈಟ್ ಫಾರ್ವರ್ಡ್' ವರೆಗೂ ಎಲ್ಲಾ ಚಿತ್ರಗಳನ್ನ ನೋಡಿದ್ದಾರೆ. ಸದ್ಯ 'ಕೆ ಜಿ ಎಫ್' ಚಿತ್ರಕ್ಕಾಗಿ ಕಾಯುತ್ತಿದ್ದು, ಸಿನಿಮಾ ಪ್ರಮೋಷನ್ ಗಾಗಿಯೂ ಪ್ಲಾನ್ ಮಾಡಿಕೊಂಡಿದ್ದಾರೆ.

ಇಂಡಿಯಾದಿಂದ 'ಡಿ ವಿ ಡಿ' ರವಾನೆ

ಇಂಡಿಯಾದಿಂದ 'ಡಿ ವಿ ಡಿ' ರವಾನೆ

ಯಶ್ ಸಿನಿಮಾಗಳ ಡಿ.ವಿ.ಡಿ ಬಿಡುಗಡೆಯಾಗುತ್ತಿದ್ದಂತೆ ಭಾರತದಲ್ಲಿರುವ ಯಶ್ ಅಭಿಮಾನಿಗಳನ್ನ ಸಂಪರ್ಕಿಸಿ 'ಡಿ ವಿ ಡಿ' ಗಳನ್ನ ತರಿಸಿಕೊಳ್ತಾರಂತೆ. ಈಗಾಗಲೇ 'ಲೀ ಎಂ ಸೆಂಟ್ರಾಚಿಯೊ' ಬಳಿ ಯಶ್ ಅಭಿನಯದ ಸಾಕಷ್ಟು ಸಿನಿಮಾಗಳ 'ಡಿ ವಿ ಡಿ' ಗಳಿವೆ.

'ರಾಕಿಂಗ್ ಸ್ಟಾರ್' ಗಾಗಿ ಕನ್ನಡ ಕಲಿಕೆ

'ರಾಕಿಂಗ್ ಸ್ಟಾರ್' ಗಾಗಿ ಕನ್ನಡ ಕಲಿಕೆ

ಸಿನಿಮಾ ಪ್ರಬಲ ಮಾಧ್ಯಮ ಸಿನಿಮಾಗಳು ಜನರ ಮೇಲೆ ತುಂಬಾ ಪರಿಣಾಮ ಬೀರುತ್ತೆ ಅನ್ನೋದಕ್ಕೆ ಈ ಅಭಿಮಾನಿ ಉತ್ತಮ ಉದಾಹರಣೆ. ಯಶ್ ಅಭಿಮಾನಿಯಾಗಿದ್ದ 'ಲೀ ಎಂ ಸೆಂಟ್ರಾಚಿಯೊ' ಈಗ ಕನ್ನಡದ ಅಭಿಮಾನಿ. ಯಶ್ ಸಿನಿಮಾ ಡಬ್ ಆಗಿರುವ ಹಿಂದಿ ಭಾಷೆಯಲ್ಲಿ ನೋಡುವ ಬದಲು ಕನ್ನಡದಲ್ಲೇ ನೋಡೋದು ಉತ್ತಮ ಎಂದು ಈಗ ಕನ್ನಡವನ್ನ ಕಲಿಯೋದಕ್ಕೆ ಶುರು ಮಾಡಿದ್ದಾರೆ .

ಯಶ್ ಅಂದ್ರೆ ಪ್ರೀತಿ

ಯಶ್ ಅಂದ್ರೆ ಪ್ರೀತಿ

ಯಶ್ ಬಗ್ಗೆ ಇಷ್ಟೆಲ್ಲ ತಿಳಿದುಕೊಂಡಿರುವ 'ಲೀ ಎಂ ಸೆಂಟ್ರಾಚಿಯೊ' ಯಶ್ ಅವ್ರ ಟ್ವಿಟ್ಟರ್ ಹಾಗೂ ಫೇಸ್ ಬುಕ್ ಅನ್ನ ಫಾಲೋ ಮಾಡ್ತಿದ್ದಾರೆ. ಯಶ್ ಮುಂದಿನ ಸಿನಿಮಾಗಳು ಹಾಗೂ ಮುಂದಿನ ಕಾರ್ಯಗಳ ಬಗ್ಗೆ ತಿಳಿದುಕೊಳ್ಳುತ್ತಿರುತ್ತಾರಂತೆ.

ಅಮೇರಿಕಾದಲ್ಲಿ ಸಿನಿಮಾ ರಿಲೀಸ್ ಮಾಡಿ

ಅಮೇರಿಕಾದಲ್ಲಿ ಸಿನಿಮಾ ರಿಲೀಸ್ ಮಾಡಿ

ಸದ್ಯ ಯಶ್ ರ ಎಲ್ಲಾ ಸಿನಿಮಾಗಳನ್ನ ನೋಡಿರೋ ಈ ಅಭಿಮಾನಿಗೆ 'ಕೆ ಜಿ ಎಫ್' ಸಿನಿಮಾವನ್ನ ಅಮೇರಿಕಾದ ಥಿಯೇಟರ್ ನಲ್ಲಿ ನೋಡೊ ಹಂಬಲ. ಇದಕ್ಕಾಗಿ ವಿಡಿಯೋ ಮಾಡಿ ಯಶ್ ಹಾಗೂ ಸಿನಿಮಾತಂಡಕ್ಕೆ ಮನವಿ ಕೂಡ ಮಾಡಿದ್ದಾರೆ. 2008ರಲ್ಲಿ 'ರಾಕಿ' ಆಗಿದ್ದ ಯಶ್ ಮತ್ತೆ ರಾಕಿ ಯಾಗಿ ಅಭಿಮಾನಿಗಳ ಮುಂದೆ ಬರ್ತಿರೋದು ಖುಷಿ ತಂದಿದ್ಯಂತೆ.

More from Filmibeat

English summary
Rocking Star Yash's American Fan speaks about Yash and his love for Kannada. ಯಶ್ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರಗಳನ್ನ ಬಿಚ್ಚಿಟ್ಟ ಅಮೇರಿಕಾದ ರಾಕಿಂಗ್ ಸ್ಟಾರ್ ಅಭಿಮಾನಿ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X