»   » ಯಶ್ ಹಾಗೂ ಧ್ರುವ ಸರ್ಜಾ ಹಾದಿಯಲ್ಲಿ 'ಆಕ್ಷನ್ ಹೀರೋ' ಅನೂಪ್

ಯಶ್ ಹಾಗೂ ಧ್ರುವ ಸರ್ಜಾ ಹಾದಿಯಲ್ಲಿ 'ಆಕ್ಷನ್ ಹೀರೋ' ಅನೂಪ್

Posted By:
Subscribe to Filmibeat Kannada

ರೋಸ್ ಹಿಡಿದು ಪ್ರಪೋಸ್ ಮಾಡಿ, ಗಿಟಾರ್ ಹಿಡಿದು ಹಾಡ್ತಿದ್ರೆ 'ಮೊಗ್ಗಿನ ಮನಸ್ಸಿನ' ಯಶ್ ಯಾರಿಗ್ತಾನೆ ತಾನೆ ಇಷ್ಟ ಆಗಲ್ಲ ಹೇಳಿ? ಅತ್ತ ಲವ್ವರ್ ಬಾಯ್ ರೂಪದಲ್ಲಿ ಸ್ಯಾಂಡಲ್ ವುಡ್ ಗೆ 'ಲಕ್ಕಿ' ಆದ ಯಶ್, 'ರಾಮಾಚಾರಿ' ಆಗಿ 'ಆಂಗ್ರಿ ಯಂಗ್ ಮ್ಯಾನ್' ಲುಕ್ ನಲ್ಲಿ ಬುಸುಗುಟ್ಟು 'ಮಾಸ್ಟರ್ ಪೀಸ್' ಆದ್ಮೇಲೆ ಮಾಸ್ ಅಭಿಮಾನಿಗಳ ಆರಾಧ್ಯದೈವ ಆದರು.

ಇನ್ನೂ ಧ್ರುವ ಸರ್ಜಾ ಕೂಡ 'ಶಕ್ತಿಮಾನ್' ಅಂತಲೇ ಹೆಸರುವಾಸಿ. ಯಾಕಂದ್ರೆ, 'ಅದ್ಧೂರಿ' ಹಾಗೂ 'ಬಹದ್ದೂರ್' ಚಿತ್ರಗಳು ಲವ್ ಸ್ಟೋರಿ ಸಿನಿಮಾಗಳೇ ಆಗಿದ್ದರೂ, ಅದರಲ್ಲಿ ಹೈಲೈಟ್ ಆಗಿದ್ದು ಮಾತ್ರ ಧ್ರುವ ಸರ್ಜಾ ರವರ ಆಕ್ಷನ್.


ಇತ್ತೀಚೆಗೆ ಬಂದಿರುವ ಹೀರೋಗಳ ಪೈಕಿ ಅತ್ತ ಮಾಸ್ ಫೀಲ್, ಇತ್ತ ಲವ್ವರ್ ಬಾಯ್ ಇಮೇಜ್...ಎರಡಕ್ಕೂ ಹೇಳಿ ಮಾಡಿಸಿದಂತಿರುವ ಯಶ್ ಹಾಗೂ ಧ್ರುವ ಸರ್ಜಾ ಲಿಸ್ಟ್ ಗೆ ಸದ್ಯ ಕನ್ನಡ ಸಿನಿ ಪ್ರಿಯರು ನೂತನ 'ಆಕ್ಷನ್ ಹೀರೋ' ಅನೂಪ್ ರೇವಣ್ಣರನ್ನ ಸೇರಿಸುತ್ತಿದ್ದಾರೆ. ['ಲಕ್ಷ್ಮಣ' ವಿಮರ್ಶೆ: ಕನ್ನಡ ಚಿತ್ರರಂಗಕ್ಕೆ ಸಿಕ್ಕ ಭರವಸೆಯ 'ಆಕ್ಷನ್ ಹೀರೋ']


after-yash-and-dhruva-sarja-anup-revanna-is-action-hero-of-sandalwood

ಅನೂಪ್ ರೇವಣ್ಣ ಅಭಿನಯದ ಚೊಚ್ಚಲ ಸಿನಿಮಾ 'ಲಕ್ಷ್ಮಣ' ಬಿಡುಗಡೆ ಆದ್ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಯಶ್, ಧ್ರುವ ಸರ್ಜಾ ಹಾಗೂ ಅನೂಪ್ ಫೋಟೋಗಳನ್ನ ಕೊಲಾಜ್ ಮಾಡಿ, ಅದಕ್ಕೆ 'ಆಕ್ಷನ್ ಹೀರೋಸ್ ಆಫ್ ಸ್ಯಾಂಡಲ್ ವುಡ್' ಎಂಬ ಟೈಟಲ್ ಕೊಟ್ಟಿರುವ ಫೋಟೋ ವೈರಲ್ ಆಗಿದೆ.


ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟ ಯಶ್, ಸ್ಯಾಂಡಲ್ ವುಡ್ ನಲ್ಲಿ ಬಹಳಷ್ಟು ಕಷ್ಟ ಪಟ್ಟು ಮುಂದೆ ಬಂದಿದ್ದಾರೆ. ಇನ್ನೂ ಧ್ರುವ ಸರ್ಜಾಗೆ ಫ್ಯಾಮಿಲಿ ಪಿಲ್ಲರ್ ಇದೆ. ಇವೆರಡೂ ಇಲ್ಲದೆ, ರಾಜಕಾರಣದ ಬ್ಯಾಕ್ ಗ್ರೌಂಡ್ ಇಟ್ಕೊಂಡು, ಆರ್.ಚಂದ್ರು ಮಾರ್ಗದರ್ಶನದಲ್ಲಿ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿರುವ ಅನೂಪ್ ರೇವಣ್ಣ ಮೊದಲ ಚಿತ್ರದಲ್ಲೇ 'ಆಕ್ಷನ್ ಹೀರೋ' ಎಂಬ ಬಿರುದು ಪಡೆದಿದ್ದಾರೆ. [ಆರ್.ಚಂದ್ರು 'ಲಕ್ಷ್ಮಣ'ನಿಗೆ ವಿಮರ್ಶಕರು ಕೊಟ್ಟ ಮಾರ್ಕ್ಸ್ ಎಷ್ಟು?]


after-yash-and-dhruva-sarja-anup-revanna-is-action-hero-of-sandalwood

ಹಾಗಂದ ಮಾತ್ರಕ್ಕೆ 'ಲಕ್ಷ್ಮಣ' ಚಿತ್ರ ಸಂಪೂರ್ಣ ಆಕ್ಷನ್ ಭರಿತವಾಗಿಲ್ಲ. ಹೆಂಗಳೆಯರ ಮನಮುಟ್ಟುವ ಸೆಂಟಿಮೆಂಟ್ ಚಿತ್ರದಲ್ಲಿದೆ. ಫ್ಯಾಮಿಲಿ ಆಡಿಯನ್ಸ್ ಗೆ ಹೇಳಿ ಮಾಡಿಸಿರುವ ಸಿನಿಮಾ 'ಲಕ್ಷ್ಮಣ'. ಮಾಸ್ ಅಭಿಮಾನಿಗಳಿಗಿಂತ ಇಡೀ ಕುಟುಂಬ ಒಟ್ಟಾಗಿ ಕೂತು ನೋಡಬಹುದಾದ 'ಲಕ್ಷ್ಮಣ' ಚಿತ್ರಕ್ಕೆ ರಾಜ್ಯಾದ್ಯಂತ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದೆ.

English summary
After Rocking Star Yash and Dhruva Sarja, Congress Politician H.M.Revanna's son Anup Revanna has become popular as 'Action Hero' of Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada