'ವಿಕ್ರಾಂತ್ ರೋಣ' ಬಳಿಕ ಸುದೀಪ್ ಮುಂದಿನ ಸಿನಿಮಾ ಯಾವುದು?

ನಟ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್ ಆಗಿದ್ದು ಆಗಿದೆ. ಸಿನಿಮಾ ರಿಲೀಸ್ ಬಳಿಕ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದೆ. ಪ್ಯಾನ್ ಇಂಡಿಯಾ ಟ್ಯಾಗ್‌ನಲ್ಲಿ ತೆರೆಗೆ ಬಂದ ಈ ಸಿನಿಮಾ ಪ್ರೇಕ್ಷಕರ ಮನ ಗೆಲ್ಲುವುದರ ಜೊತೆಗೆ ಬಾಕ್ಸಾಫೀಸ್‌ನಲ್ಲೂ ಸದ್ದು ಮಾಡಿದೆ.

'ವಿಕ್ರಾಂತ್ ರೋಣ' ಸಿನಿಮಾ ಇನ್ನೂ ಕೂಡ ಕೆಲವು ಕಡೆಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದ ಹವಾ ಕಡಿಮೆ ಆಗುತ್ತಲೆ ನಟ ಸುದೀಪ್ ಮುಂದಿನ ಹೆಜ್ಜೆಯ ಬಗ್ಗೆ ಸಾಕಷ್ಟು ಕುತೂಹಲ ಹುಟ್ಟಿಕೊಂಡಿದೆ. ಈಗಾಗಲೇ ಸುದೀಪ್ ಮುಂದಿನ ಸಿನಿಮಾದ ಬಗ್ಗೆ ಸುಳಿವು ಕೊಟ್ಟಿದ್ದಾರೆ.

Recommended Video

Yash Next Movie | ಹೊಸ ಪೋಸ್ಟರ್ ನಲ್ಲಿ ಗಡ್ಡ ಬಿಟ್ಟ ಲುಕ್ ನಲ್ಲಿ ಯಶ್ ಮಿಂಚಿಂಗ್ *Sandalwood | Filmibeat Kannada

ಆದರೆ ಅಧಿಕೃತವಾಗಿ ಇನ್ನು ಯಾವುದೇ ಘೋಷಣೆ ಕೂಡ ಹೊರ ಬಂದಿಲ್ಲ. ಮತ್ತೇ ವಿಕ್ರಾಂತ್ ರೋಣ ಟೀಂ ಜೊತೆಗೆ ಸೇರಿ ಸಿನಿಮಾ ಮಾಡುವ ಪ್ಲ್ಯಾನ್‌ನಲ್ಲಿ ಇದ್ದಾರಾ? ಅಥವಾ ಯೋಜನೆ ಬದಲಿಸಿ ಬೇರೆ ಸಿನಿಮಾ ಮಾಡುತ್ತಾರ, ಕಿಚ್ಚನ ಕೋಟೆಯಲ್ಲಿ ನಡೆಯುತ್ತಿರುವುದು ಏನು ಎನ್ನುವ ಬಗ್ಗೆ ಮುಂದೆ ಓದಿ...

ಮತ್ತೆ ಸುದೀಪ್ ಪ್ಯಾನ್ ಇಂಡಿಯಾ ಸಿನಿಮಾ?

ಮತ್ತೆ ಸುದೀಪ್ ಪ್ಯಾನ್ ಇಂಡಿಯಾ ಸಿನಿಮಾ?

ನಟ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಸದ್ಯ ನಟ ಸುದೀಪ್ ಮುಂದಿನ ಸಿನಿಮಾ ಯಾವುದು ಎನ್ನುವ ಬಗ್ಗೆ ಕುತೂಹಲ ಹುಟ್ಟಿಕೊಂಡಿದೆ. 'ವಿಕ್ರಾಂತ್ ರೋಣ' ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸಿನಿಮಾ ಮಾಡಿ ಗೆದ್ದಿರುವ ಸುದೀಪ್ ಮುಂದೆಯೂ ಪ್ಯಾನ್ ಇಂಡಿಯಾ ಸಿನಿಮಾಗಳನ್ನೇ ಮಾಡುತ್ತಾರ ಎನ್ನುವ ಪ್ರಶ್ನೆಯೂ ಸೃಷ್ಟಿಯಾಗಿದೆ. 'ವಿಕ್ರಾಂತ್ ರೋಣ' ಮೂಲಕ ಪ್ಯಾನ್ ಇಂಡಿಯಾ ಗೆದ್ದಿರುವ ನಟ ಸುದೀಪ್, ತಮ್ಮ ಮುಂಬರುವ ಎಲ್ಲಾ ಚಿತ್ರಗಳನ್ನು ಪ್ಯಾನ್ ಇಂಡಿಯ ಲೆವೆಲ್‌ನಲ್ಲಿಯೆ ಮಾಡಲಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ. ಹಾಗಾಗಿಯೇ ಅವರ ಮುಂದಿನ ಸಿನಿಮಾ ಯಾವುದು ಮತ್ತು ಅದು ಕೂಡ ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿ ಎನ್ನುವ ಕುತೂಹಲ ಕುತೂಹಲಗಳು ಹುಟ್ಟಿಕೊಂಡಿವೆ.

ಬಿಲ್ಲ ರಂಗಾ ಭಾಷಾ ಮಾಡ್ತಾರ!

ಬಿಲ್ಲ ರಂಗಾ ಭಾಷಾ ಮಾಡ್ತಾರ!

ಸದ್ಯಕ್ಕೆ ನಟ ಸುದೀಪ್ ಕೈಯಲ್ಲಿರುವ ಸಿನಿಮಾ ಎಂದರೆ 'ಬಿಲ್ಲ ರಂಗ ಭಾಷಾ'. ಹಲವು ದಿನಗಳಿಂದ ಈ ಸಿನಿಮಾದ ಬಗ್ಗೆ ಸಾಕಷ್ಟು ವಿಚಾರಗಳು ಹರಿದಾಡುತ್ತಿವೆ. ಸುದೀಪ್ ಮತ್ತು ನಿರ್ದೇಶಕ ಅನುಪ್ ಬಂಡಾರಿ ಕೂಡ ಈ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗಾಗಿ ಬಹುತೇಕ 'ಬಿಲ್ಲಾ ರಂಗ ಬಾಷಾ' ಸಿನಿಮಾವೇ ಸುದೀಪ್ ಮುಂದಿನ ಸಿನಿಮಾ ಎನ್ನಲಾಗುತ್ತಿದೆ. ಈ ಟೈಟಲ್ ಕೊಂಚ ವಿಭಿನ್ನ ಎನಿಸುವ ಕಾರಣ, ಸುದೀಪ್ ಈ ಚಿತ್ರದಲ್ಲಿ ವಿಭಿನ್ನವಾಗಿ ಬರಲಿದ್ದಾರೆ ಎನ್ನುವುದರ ಜೊತೆಗೆ ಕಥೆಯು ಬೇರೆ ರೀತಿ ಇರಲಿದೆ ಎನ್ನುವ ನಿರೀಕ್ಷೆಗಳು ಹುಟ್ಟಿಕೊಂಡಿವೆ

ಮತ್ತೊಮ್ಮೆ ಅನೂಪ್ ಜೊತೆ ಕೆಲಸ!

ಮತ್ತೊಮ್ಮೆ ಅನೂಪ್ ಜೊತೆ ಕೆಲಸ!

ಸುದೀಪ್ ಮುಂದಿನ ಸಿನಿಮಾ 'ಬಿಲ್ಲಾ ರಂಗ ಬಾಷಾ' ಮಾಡುವುದು ಖಚಿತವಾದರೆ, ಸುದೀಪ್ ಮತ್ತು ಅನುಪ್ ಭಂಡಾರಿಯವರ ಕಾಂಬಿನೇಷನ್ ಮತ್ತೊಮ್ಮೆ ಬರಲಿದೆ. ಜೊತೆಗೆ 'ಬಿಲ್ಲಾ ರಂಗ ಭಾಷಾ' ಸಿನಿಮಾ ಎರಡು ಭಾಗಗಳಲ್ಲಿ ಬರುತ್ತದೆ ಎನ್ನಲಾಗುತ್ತಿದೆ. ಹಾಗಾಗಿ ಸತತ ಮೂರು ಸಿನಿಮಾಗಳನ್ನು ಸುದೀಪ್, ಅನುಪ್ ಬಂಡಾರಿ ಜೊತೆಗೆ ಮಾಡಿದಂತಾಗುತ್ತದೆ. ಈಗಾಗಲೇ ಈ ಜೋಡಿ 'ವಿಕ್ರಾಂತ್ ರೋಣ' ಸಿನಿಮಾದ ಮೂಲಕ ಗೆಲುವನ್ನು ಸಾಧಿಸಿದೆ ಹಾಗಾಗಿ ಮುಂದಿನ ಚಿತ್ರಗಳ ಮೇಲೂ ಕೂಡ ಸಹಜವಾಗಿಯೇ ನಿರೀಕ್ಷೆ ಹುಟ್ಟಿಕೊಂಡಿದೆ. ಇನ್ನು ನಿರ್ದೇಶಕ ಅನೂಪ್ ಭಂಡಾರಿ ವಿಚಾರಕ್ಕೆ ಬರುವುದಾದರೆ ಮುಂದಿನ ಸಿನಿಮಾಗಳಲ್ಲಿ ಬೇರೆ ರೀತಿಯ ಪ್ರಯೋಗ ಮಾಡುತ್ತಾರಾ ಅಥವಾ ಸಸ್ಪೆನ್ಸ್ ಎಳೆಯನ್ನಿಟ್ಟುಕೊಂಡು ಸಾಗುತ್ತಾರೆ ಎನ್ನುವುದನ್ನು ನೋಡಬೇಕಿದೆ

ಸದ್ಯ ಬಿಗ್ ಬಾಸ್‌ನಲ್ಲಿ ಬ್ಯುಸಿ!

ಸದ್ಯ ಬಿಗ್ ಬಾಸ್‌ನಲ್ಲಿ ಬ್ಯುಸಿ!

ಆದರೆ ಸದ್ಯಕ್ಕಂತೂ ನಟ ಸುದೀಪ್ ತಮ್ಮ ಮುಂದಿನ ಸಿನಿಮಾದ ಬಗ್ಗೆ ಯಾವುದೇ ರೀತಿಯ ಅಪ್ಡೇಟ್ ನೀಡಿಲ್ಲ. ಯಾಕೆಂದರೆ ಸುದೀಪ್ ಬಿಗ್ ಬಾಸ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಒಟಿಟಿಯಲ್ಲಿ ಬಿಗ್ ಬಾಸ್ ಮೊದಲ ಸೀಸನ್ ಆರಂಭವಾಗಿದ್ದು, ಈ ಕಾರ್ಯಕ್ರಮದಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರ್ಯಕ್ರಮದ ಬಳಿಕ ಟಿವಿಯಲ್ಲಿ ಪ್ರಸಾರವಾಗುವ ಬಿಗ್ ಬಾಸ್ 9ನೇ ಸೀಸನ್ ನಲ್ಲಿಯೂ ಕೂಡ ನಟ ಸುದೀಪ್ ಭಾಗಿಯಾಗಲಿದ್ದಾರೆ. ಹಾಗಾಗಿ ಸದ್ಯಕ್ಕಂತೂ ಬಿಗ್ ಬಾಸ್ ಸೀಸನ್ ಮುಗಿಯುವ ತನಕ, ಸುದೀಪ್ ಮುಂದಿನ ಸಿನಿಮಾದ ಅಪ್ಡೇಟ್ ಸಿಗುವುದು ಅನುಮಾನವೇ.

More from Filmibeat

English summary
After Yash next Film Huge Expectation On Sudeeps Next Movie, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X