For Quick Alerts
  ALLOW NOTIFICATIONS  
  For Daily Alerts

  ಪ್ಯಾನ್ ಇಂಡಿಯಾ ರೇಸ್‌ನಲ್ಲಿ ಕನ್ನಡ ಸ್ಟಾರ್ ನಟರು: ಓಡೋರು ಯಾರು? ಬೀಳೋರು ಯಾರು?

  |

  ಸಿನಿಮಾ ರಂಗದಲ್ಲಿ ಸಾಕಷ್ಟು ಬದಲಾವಣೆಗಳು ದಿನದಿಂದ ದಿನಕ್ಕೆ ನಡೆಯುತ್ತಲೇ ಇದೆ. ಸದ್ಯದ ಬದಲಾವಣೆಯೆಂದರೆ ಅದು ಪ್ಯಾನ್ ಇಂಡಿಯಾ ಸಿನಿಮಾಗಳು. ಪ್ಯಾನ್ ಇಂಡಿಯಾ ಸಿನಿಮಾ ಹೊಸದೇನಲ್ಲ ಅನಿಸಿದರೂ ಕೂಡ 'ಕೆಜಿಎಫ್ 2' ನ ಭರ್ಜರಿ ಯಶಸ್ವಿ ಬಳಿಕ ಎಲ್ಲರೂ ಪ್ಯಾನ್ ಇಂಡಿಯಾದತ್ತಲೇ ಮುಖ ಮಾಡುತ್ತಿದ್ದಾರೆ.

  ಇದು ಯಾವುದೋ ಒಂದು ಭಾಷೆಗೆ ಅಥವಾ ಯಾವುದೋ ಒಂದು ಪ್ರಾಂತ್ಯಕ್ಕೆ ಸೀಮಿತವಾಗಿರುವ ಪ್ರೇಕ್ಷಕರನ್ನು ಹೊರತುಪಡಿಸಿ, ದೇಶದಾದ್ಯಂತ ಅಥವಾ ವಿಶ್ವದಾದ್ಯಂತ ಪ್ರೇಕ್ಷಕರನ್ನು ಸೆಳೆಯುವಂತಹ ಒಂದು ವೇದಿಕೆ ಎನ್ನಬಹುದು. ಹಾಗಾಗಿ ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಬೇಡಿಕೆ ಹೆಚ್ಚಿದೆ.

  ನಟಿ ಜಾಕ್ವೆಲಿನ್‌ಗೆ ಕನ್ನಡ ಕಲಿಸಿದ ಕಿಚ್ಚ ಸುದೀಪ್!ನಟಿ ಜಾಕ್ವೆಲಿನ್‌ಗೆ ಕನ್ನಡ ಕಲಿಸಿದ ಕಿಚ್ಚ ಸುದೀಪ್!

  ಪಾನ್ ಇಂಡಿಯಾ ಎಂದರೆ ಹಲವು ಭಾರತೀಯ ಭಾಷೆಗಳಲ್ಲಿ ಸಿನಿಮಾ ಮಾಡುವುದು ಮಾತ್ರವಲ್ಲ. ಇಂತಹ ಸಿನಿಮಾಗಳು ವರ್ಲ್ಡ್ ಕ್ಲಾಸ್ ಸಿನಿಮಾ ಎನ್ನಿಸಿಕೊಳ್ಳುತ್ತವೆ. ಹಾಗಾಗಿಯೇ 'ಕೆಜಿಎಫ್', 'RRR', 'ಬಾಹುಬಲಿ' ಅಂತಹ ಸಿನಿಮಾಗಳು ವಿಶ್ವದಾದ್ಯಂತ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

  ಪ್ಯಾನ್ ಇಂಡಿಯಾ ರೇಸ್‌ನಲ್ಲಿ ಕನ್ನಡದ ಸ್ಟಾರ್ಸ್!

  ಪ್ಯಾನ್ ಇಂಡಿಯಾ ರೇಸ್‌ನಲ್ಲಿ ಕನ್ನಡದ ಸ್ಟಾರ್ಸ್!

  ಸದ್ಯ ಪ್ಯಾನ್ ಇಂಡಿಯಾ ಸಿನಿಮಾಗಳ ಬಗ್ಗೆ ಮಾತನಾಡಲು ಕಾರಣ, ಪ್ಯಾನ್ ಇಂಡಿಯಾ ಸಿನಿಮಾಗಳು ಗಳಿಸುತ್ತಿರುವ ಯಶಸ್ಸು. ಬಹುತೇಕರು ತಮ್ಮ ಸಿನಿಮಾಗಳು ಕೂಡ ಪ್ಯಾನ್ ಇಂಡಿಯಾ ಮಾದರಿಯಲ್ಲಿ ಬರಬೇಕು ಎಂದು ಇಚ್ಛಿಸುತ್ತಿದ್ದಾರೆ. ಅದೇ ನಿಟ್ಟಿನಲ್ಲಿ ಕನ್ನಡದ ಬಹುತೇಕ ಸ್ಟಾರ್ ನಟರ ಸಿನಿಮಾಗಳು ಕೂಡ ಪ್ಯಾನ್ ಇಂಡಿಯಾ ಮಟ್ಟದಲ್ಲೇ ನಿರ್ಮಾಣ ಆಗುತ್ತಿವೆ. ಹಾಗಿದ್ದರೆ ಈಗ ಪ್ಯಾನ್ ಇಂಡಿಯಾ ರೇಸ್ ನಲ್ಲಿ ಯಾವೆಲ್ಲ ಕನ್ನಡದ ಸ್ಟಾರ್ ನಟರು ಇದ್ದಾರೆ ಅವರ ಸಿನಿಮಾಗಳು ಯಾವುವು ಎನ್ನುವುದನ್ನು ಮುಂದೆ ಓದಿ...

  ಯಾವತ್ತೋ 'ಮುತ್ತಪ್ಪ ರೈ' ಆಗ್ಬೇಕಿತ್ತು ನಟ 'ದರ್ಶನ್'!ಯಾವತ್ತೋ 'ಮುತ್ತಪ್ಪ ರೈ' ಆಗ್ಬೇಕಿತ್ತು ನಟ 'ದರ್ಶನ್'!

  ಪ್ಯಾನ್ ಇಂಡಿಯಾ ಚಿತ್ರಗಳಿಗೆ 'ಕೆಜಿಎಫ್' ಸ್ಪೂರ್ತಿ!

  ಪ್ಯಾನ್ ಇಂಡಿಯಾ ಚಿತ್ರಗಳಿಗೆ 'ಕೆಜಿಎಫ್' ಸ್ಪೂರ್ತಿ!

  ಕನ್ನಡದಲ್ಲಿ ದೊಡ್ಡ ಮಟ್ಟಿಗೆ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ನಿರ್ಮಾಣ ಮಾಡಲು, 'ಕೆಜಿಎಫ್' ಸಿನಿಮಾ ಸ್ಪೂರ್ತಿ ಎಂದರೆ ತಪ್ಪಾಗಲಾರದು. ಹೊಂಬಾಳೆ ಸಂಸ್ಥೆ ನಿರ್ಮಾಣದ ಅಡಿಯಲ್ಲಿ ದೊಡ್ಡ ಮಟ್ಟದಲ್ಲಿ ವಿಶ್ವದಾದ್ಯಂತ ಸದ್ದು ಮಾಡಿದೆ 'ಕೆಜಿಎಫ್'. ಸಾವಿರ ಕೋಟಿಗೂ ಅಧಿಕ ಗಳಿಕೆ ಕಂಡು ಅಚ್ಚರಿಯ ದಾಖಲೆ ಮಾಡಿದೆ. ಕನ್ನಡದ ಒಂದು ಸಿನಿಮಾಗೆ ಈ ರೀತಿಯ ಸಾಮರ್ಥ್ಯ ಇದೆ ಎಂದಾದರೆ ಮಿಕ್ಕ ಸಿನಿಮಾಗಳು ಕೂಡ ಉತ್ತಮ ಕಂಟೆಂಟ್ ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಗೆಲುವು ಸಾಧಿಸಬಹುದು.

  'ವಿಕ್ರಾಂತ್ ರೋಣ' ನಟ ಸುದೀಪ್ ಪ್ಯಾನ್ ಇಂಡಿಯಾ ಚಿತ್ರ!

  'ವಿಕ್ರಾಂತ್ ರೋಣ' ನಟ ಸುದೀಪ್ ಪ್ಯಾನ್ ಇಂಡಿಯಾ ಚಿತ್ರ!

  ನಟ ಕಿಚ್ಚ ಸುದೀಪ್ ವಿಚಾರಕ್ಕೆ ಬಂದರೆ ಅವರು ಪ್ಯಾನ್ ಇಂಡಿಯಾ ಸ್ಟಾರ್ ಹೌದ? ಅಲ್ಲವಾ ಎನ್ನುವ ಚರ್ಚೆ ಅಗತ್ಯ ಇಲ್ಲ. ಯಾಕೆಂದರೆ ಸುದೀಪ್ ಈಗಾಗಲೇ ತೆಲುಗು, ಹಿಂದಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸುದೀಪ್ ಸಿನಿಮಾ ಹಲವು ಭಾಷೆಗಳಲ್ಲಿ ಏಕಕಾಲಕ್ಕೆ ರಿಲೀಸ್ ಆಗಿಲ್ಲ ಎನ್ನುವುದನ್ನು ಬಿಟ್ಟರೆ, ಸುದೀಪ್ ಬಹು ಭಾಷೆಗಳಲ್ಲಿ ಈಗಾಗಲೇ ಚಿರಪರಿಚಿತರಾಗಿದ್ದಾರೆ. ಹಾಗಾಗಿ 'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಅಬ್ಬರಿಸುವುದು ಖಚಿತ. ಜುಲೈ 28ಕ್ಕೆ ವಿಶ್ವಾದಾದ್ಯಂತ ಸಿನಿಮಾ ತೆರೆಗೆ ಬರುತ್ತಿದೆ.

  ನಟ ಸುದೀಪ್ ಮೊಟ್ಟ ಮೊದಲ ರೀಲ್ಸ್, ಹುಚ್ಚೆದ್ದು ಕುಣಿದ ಫ್ಯಾನ್ಸ್!ನಟ ಸುದೀಪ್ ಮೊಟ್ಟ ಮೊದಲ ರೀಲ್ಸ್, ಹುಚ್ಚೆದ್ದು ಕುಣಿದ ಫ್ಯಾನ್ಸ್!

  'ಕ್ರಾಂತಿ' ದರ್ಶನ್ ರ ಮೊದಲ ಪ್ಯಾನ್ ಇಂಡಿಯಾ ಚಿತ್ರ!

  'ಕ್ರಾಂತಿ' ದರ್ಶನ್ ರ ಮೊದಲ ಪ್ಯಾನ್ ಇಂಡಿಯಾ ಚಿತ್ರ!

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡದ ಸೂಪರ್ ಸ್ಟಾರ್. ಇಲ್ಲಿ ದರ್ಶನ್‌ಗೆ ಇರುವ ಮಾಸ್ ಕ್ರೇಜ್ ಬೇರೆ ಯಾವ ನಟರಿಗೂ ಇಲ್ಲ. ಈಗ ಇದೇ ಮೊದಲ ಬಾರಿಗೆ 'ಕ್ರಾಂತಿ' ಸಿನಿಮಾದ ಮೂಲಕ ನಟ ದರ್ಶನ್ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿದ್ದಾರೆ. ಈ ಹಿಂದೆ ದರ್ಶನ್ ನಟನೆಯ 'ಕುರುಕ್ಷೇತ್ರ' ಮತ್ತು 'ರಾಬರ್ಟ್' ಸಿನಿಮಾಗಳು ಕನ್ನಡ ಮತ್ತು ತೆಲುಗಿನಲ್ಲಿ ರಿಲೀಸ್ ಆಗಿದ್ದವು. ಈಗ 'ಕ್ರಾಂತಿ' ಪ್ಯಾನ್ ಇಂಡಿಯಾ ಸಿನಿಮಾ ಪಟ್ಟಕ್ಕೇರಿದೆ.

  ಉಪೇಂದ್ರ 'ಕಬ್ಜ' ಕಮಾಲ್ ಮಾಡುತ್ತಾ?

  ಉಪೇಂದ್ರ 'ಕಬ್ಜ' ಕಮಾಲ್ ಮಾಡುತ್ತಾ?

  ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ನಟ. ಇನ್ನು ಪ್ಯಾನ್ ಇಂಡಿಯ ವಿಚಾರಕ್ಕೆ ಬರುವುದಾದರೆ, ಉಪೇಂದ್ರ ಅವರ ಕಬ್ಜ ಸಿನಿಮಾ ತಯಾರಾಗುತ್ತಿದೆ. 'ಕಬ್ಜ' ಸಿನಿಮಾ ಎಂಟು ಭಾಷೆಗಳಲ್ಲಿ ತೆರೆಕಾಣಲಿದೆ ಎಂದು ನಿರ್ದೇಶಕ ಆರ್ ಚಂದ್ರು ಹೇಳಿಕೊಂಡಿದ್ದಾರೆ. ಚಿತ್ರದ ಮೇಕಿಂಗ್ ಕೂಡ ಭರವಸೆ ಮೂಡಿಸಿದ್ದು, ಸದ್ಯದಲ್ಲೇ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡಲಿದೆ ಚಿತ್ರತಂಡ.

  '777 ಚಾರ್ಲಿ' ರಕ್ಷಿತ್ ಪ್ಯಾನ್ ಇಂಡಿಯಾ ಚಿತ್ರ!

  '777 ಚಾರ್ಲಿ' ರಕ್ಷಿತ್ ಪ್ಯಾನ್ ಇಂಡಿಯಾ ಚಿತ್ರ!

  ಕನ್ನಡದ ಸ್ಟಾರ್ ನಟರ ಪಟ್ಟಿಯಲ್ಲಿರುವ ನಟ ರಕ್ಷಿತ್ ಶೆಟ್ಟಿ ಇದೀಗ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಅದೃಷ್ಟ ಪರೀಕ್ಷೆಗೆ ಇಳಿಯದಿದ್ದಾರೆ. ಅವರ ಮುಂದಿನ ಸಿನಿಮಾ '777 ಚಾರ್ಲಿ' ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ. ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲೂ ಕೂಡ ಚಾರ್ಲಿ ರಿಲೀಸ್ ಆಗುತ್ತಿದೆ. ಈ ಸಿನಿಮಾ ಅಂದುಕೊಂಡಹಾಗೆ ಯಶಸ್ಸು ಸಾಧಿಸಿದರೆ, ಬಾಕ್ಸಾಫೀಸ್ ದಾಖಲೆ ಮಾಡಿದರೆ, ರಕ್ಷಿತ್ ಶೆಟ್ಟಿ ಕೂಡ ಪ್ಯಾನ್ ಇಂಡಿಯಾ ಸ್ಟಾರ್ ಎನಿಸಿಕೊಳ್ಳುವುದರಲ್ಲಿ ನೋ ಡೌಟ್.

  ನಟ ಶಿವರಾಜ್ ಕುಮಾರ್ ಪ್ಯಾನ್ ಇಂಡಿಯಾ ಚಿತ್ರ!

  ನಟ ಶಿವರಾಜ್ ಕುಮಾರ್ ಪ್ಯಾನ್ ಇಂಡಿಯಾ ಚಿತ್ರ!

  ನಟ ಶಿವರಾಜ್ ಕುಮಾರ್ ಕನ್ನಡದ ಸೂಪರ್ ಸ್ಟಾರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಈಗ ಪ್ಯಾನ್ ಇಂಡಿಯಾ ಸಿನಿಮಾವನ್ನು ಮಾಡೋಕೆ ಶಿವರಾಜ್ ಕುಮಾರ್ ಕೂಡ ಮುಂದಾಗಿದ್ದಾರೆ. ಅವರ 'ಬೈರಾಗಿ' ಸಿನಿಮಾ ರಿಲೀಸ್‌ಗೆ ರೆಡಿ ಇದೆ. ಶಿವಣ್ಣ ಅವ್ರ 'ವೇದ' ಮತ್ತು ಯೋಗರಾಜ್ ಭಟ್ ನಿರ್ದೇಶನದಲ್ಲಿ ಮಾಡುತ್ತಾ ಇರುವ ಹೊಸ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ. 'ಕೆಜಿಎಫ್' ಬಳಿಕ ಕನ್ನಡದ ಬಹುತೇಕ ಎಲ್ಲಾ ನಾಯಕ ನಟರು ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕ್ಕೆ ಹಾತೊರೆಯುತ್ತಾ ಇದ್ದಾರೆ.

  English summary
  After Yash, Sudeep Now Darshan, Upendra, Rakshit Shetty, Shiva Rajkumar Is In Pan India Race, Here Is Details On Kannada Pan India Movies,
  Friday, May 27, 2022, 18:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X