Toxic Teaser: ರಾಯನ ಜೊತೆ ಕಾರಿನಲ್ಲಿದ್ದ ಚೆಲುವೆ ಇನ್‌ಸ್ಟಾಗ್ರಾಮ್ ಅಕೌಂಟ್ ಡಿಲೀಟ್ ಮಾಡಿದ್ದೇಕೆ?
ಸೋಶಿಯಲ್ ಮೀಡಿಯಾದಲ್ಲಿ 'ಟಾಕ್ಸಿಕ್' ಟೀಸರ್ ಭಾರೀ ಚರ್ಚೆ ಹುಟ್ಟಾಕ್ಕಿದೆ. ಅದರಲ್ಲಿರುವ ಹಸಿಬಿಸಿ ದೃಶ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿವಾದಕ್ಕೂ ಕಾರಣವಾಗಿದೆ. ಈ ಸಂಬಂಧ ಈಗಾಗಲೇ ದೂರು ದಾಖಲಾಗಿದೆ. ಟೀಸರ್ ರದ್ದು ಮಾಡುವಂತೆ ಮಹಿಳಾ ಆಯೋಗಕ್ಕೂ ದೂರು ನೀಡಲಾಗಿದೆ.
ಯಶ್ ಹುಟ್ಟುಹಬ್ಬದ ಸಂಭ್ರಮದಲ್ಲಿ 'ಟಾಕ್ಸಿಕ್' ಟೀಸರ್ ಬಿಡುಗಡೆ ಆಗಿತ್ತು. ಹಾಲಿವುಡ್ ರೇಂಜ್ ಝಲಕ್ ಸಿನಿರಸಿಕರ ಮನಗೆದ್ದಿದೆ. ರಾಯ ಆಗಿ ಯಶ್ ದರ್ಬಾರ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಆದರೆ ಕಾರಿನ ಒಳಗಿನ ಬಿಂದಾಸ್ ದೃಶ್ಯ ಟೀಕೆಗೆ ಗುರಿಯಾಗಿದೆ. ಇದನ್ನು ಪ್ರಚಾರಕ್ಕೆ ಬಳಸಿಕೊಂಡಿದ್ದು ಸರಿಯಲ್ಲ ಎನ್ನುವ ವಾದ ಶುರುವಾಗಿದೆ. ಅಂದಹಾಗೆ ಯಶ್ ಜೊತೆ ಹೀಗೆ ಮೈಚಳಿ ಬಿಟ್ಟು ಕಾಣಿಸಿಕೊಂಡಿರುವುದು ನಟಿ ಬೀಟ್ರಿಜ್ ಟೌಫೆನ್‌ಬಾಚ್. ಇದೀಗ ದಿಢೀರನೆ ಆಕೆಯ ಇನ್‌ಸ್ಟಾಗ್ರಾಮ್ ಅಕೌಂಟ್ ಮಾಯವಾಗಿದೆ.

ಟೀಸರ್ ರಿಲೀಸ್ ಬೆನ್ನಲ್ಲೇ ಇಷ್ಟು ಮಾದಕವಾಗಿ ಕಾಣಿಸಿಕೊಂಡಿರುವ ಚೆಲುವೆ ಯಾರು ಎಂದು ನೆಟ್ಟಿಗರು ಹುಡುಕಾಟ ನಡೆಸಿದ್ದರು. ಮೊದಲಿಗೆ ಅದು ನಟಾಲಿಯಾ ಬರ್ನ್ ಎಂದು ಬಹುತೇಕರು ತಪ್ಪು ತಿಳಿದಿದ್ದರು. ನಟಾಲಿಯಾ ಬರ್ನ್ ಕೂಡ 'ಟಾಕ್ಸಿಕ್' ಚಿತ್ರದಲ್ಲಿ ನಟಿಸಿದ್ದಾರೆ. ಆದರೆ ಟೀಸರ್‌ನಲ್ಲಿ ಕಾಣಿಸಿಕೊಂಡಿರುವುದು ಆಕೆ ಅಲ್ಲ. ಈ ಬಗ್ಗೆ ಸ್ವತಃ ನಿರ್ದೇಶಕಿ ಗೀತು ಮೋಹನ್ ದಾಸ್ ಮಾಹಿತಿ ನೀಡಿದ್ದರು. ಫೋಟೊ ಸಮೇತ ಆಕೆಯ ಹೆಸರನ್ನು ಬಹಿರಂಗಪಡಿಸಿದ್ದರು.
ಬೀಟ್ರಿಜ್ ಟೌಫೆನ್‌ಬಾಚ್ ಎಂದು ತಿಳಿದುಕೊಳ್ಳುವ ಕುತೂಹಲ ಕೆಲವರಿಗೆ ಇತ್ತು. ಆದರೆ ಆಕೆ ತನ್ನ ಇನ್‌ಸ್ಟಾಗ್ರಾಮ್ ಅಕೌಂಟ್ ಪ್ರೈವೇಟ್ ಮಾಡಿ ಇಟ್ಟಿದ್ದರು. ಆಕೆ ಬ್ರೆಜಿಲಿಯನ್ ನಟಿ ಹಾಗೂ ಮಾಡೆಲ್ ಎನ್ನುವುದು ಮಾತ್ರ ಗೊತ್ತಾಗಿತ್ತು. ಇದೀಗ ತಮ್ಮ ಇನ್‌ಸ್ಟಾಗ್ರಾಮ್ ಅಕೌಂಟ್ ಅನ್ನು ಡಿಆಕ್ಟಿವೇಟ್ ಮಾಡಿದ್ದಾರೆ. ಟೀಸರ್ ವಿವಾದಕ್ಕೆ ಗುರಿಯಾಗಿದೆ. ಸಾಕಷ್ಟು ಜನ ಆಕೆಗೆ ಮೆಸೇಜ್ ಮಾಡಿ ಕ್ವಾಟ್ಲೆ ಕೊಟ್ಟಿದ್ದಾರೆ. ಅದೇ ಕಾರಣಕ್ಕೆ ಅಕೌಂಟ್ ಡಿಆಕ್ಟಿವೇಟ್ ಮಾಡಿರಬಹುದು ಎಂದು ಚರ್ಚೆ ಶುರುವಾಗಿದೆ. ಒಟ್ಟಾರೆ 'ಟಾಕ್ಸಿಕ್' ಟೀಸರ್ ನಾನಾ ಕಾರಣಗಳಿಂದ ಸುದ್ದಿ ಆಗುತ್ತಿದೆ.

'KGF- 2' ಬಳಿಕ ಮುಂದೇನು ಎಂದು ಕೇಳುತ್ತಿದ್ದವರಿಗೆ ರಾಯ ಆಗಿ ಉತ್ತರ ಕೊಡಲು ಯಶ್ ಮುಂದಾಗಿದ್ದಾರೆ. ಅದೇ ಕಾರಣಕ್ಕೆ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಟೀಸರ್ ಪ್ರತಿ ಫ್ರೇಮ್ ಅದ್ಧೂರಿತನದಿಂದ ಕೂಡಿದೆ. ಎಲ್ಲಾ ಸರಿ ಆದರೆ ಪ್ರಚಾರಕ್ಕಾಗಿ ಹಸಿಬಿಸಿ ದೃಶ್ಯ ತೋರಿಸಿದ್ದು ಯಾಕೆ ಎನ್ನುವುದು ಬಹುತೇಕರ ಪ್ರಶ್ನೆ. ಇದೇ ಕಾರಣಕ್ಕೆ ವಕೀಲ ಲೋಹಿತ್ ಕುಮಾರ್ ಎಂಬುವವರು ಸೆನ್ಸಾರ್ ಮಂಡಳಿಗೆ ದೂರು ನೀಡಿ ಬೇಸರ ವ್ಯಕ್ತಪಡಿಸಿದ್ದಾರೆ. AAP ಪಕ್ಷದಿಂದ ಮಹಿಳಾ ಆಯೋಗಕ್ಕೆ ದೂರು ನೀಡಿ ಟೀಸರ್ ತೆಗೆಸುವಂತೆ ಮನವಿ ಮಾಡಲಾಗಿದೆ.
ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಸೆನ್ಸಾರ್ ಮಂಡಳಿಗೆ ಈಗ ದೂರು ನೀಡಿದ್ದಾರೆ. ಅಪ್ರಾಪ್ತರ ಮೇಲೆ ಈ ಟೀಸರ್ ತುಂಬಾನೇ ಕೆಟ್ಟ ಪರಿಣಾಮ ಬೀರುತ್ತೆ, ಟೀಸರ್‌ನಲ್ಲಿ ಲೈಂ*ಗಿಕವಾಗಿ ಪ್ರಚೋದಿಸುವ ಅಶ್ಲೀಲ ದೃಶ್ಯಗಳಿವೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ದಿನದಿಂದ ದಿನಕ್ಕೆ 'ಟಾಕ್ಸಿಕ್' ಟೀಸರ್ ಭಾರೀ ಸದ್ದು ಮಾಡ್ತಿದೆ.
'ಟಾಕ್ಸಿಕ್' ಟೀಸರ್ ಬಗ್ಗೆ ಎದುರಾದ ಟೀಕೆಗಳಿಗೆ ನಿರ್ದೇಶಕಿ ಗೀತು ಮೋಹನ್‌ದಾಸ್ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ. ಆ ಬಳಿಕ ಪ್ರತಿಕ್ರಿಯಿಸುವ ಗೋಜಿಗೆ ಹೋಗಲಿಲ್ಲ. ಇನ್ನುಳಿದಂತೆ ಚಿತ್ರತಂಡ ಕೂಡ ಸೈಲೆಂಟ್ ಆಗಿದೆ. ಇಷ್ಟೆಲ್ಲಾ ಪರ ವಿರೋಧ ಚರ್ಚೆಯ ನಡುವೆ ಟೀಸರ್ ಸೂಪರ್ ಹಿಟ್ ಆಗಿದೆ. ಕೆವಿಎನ್ ಪ್ರೊಡಕ್ಷನ್ ಯೂಟ್ಯೂಬ್ ಚಾನಲ್‌ನಲ್ಲಿ ಮಾತ್ರ 87 ಮಿಲಿಯನ್‌ಗೂ ಹೆಚ್ಚು ವೀವ್ಸ್ ಗಿಟ್ಟಿಸಿದೆ.


Click it and Unblock the Notifications











