ತರುಣ್‌ ಸುಧೀರ್‌ಗಿಂತ ಸೋನಾಲ್ ಮಾಂತೆರೋ ಎಷ್ಟು ವರ್ಷ ಚಿಕ್ಕವರು? ಇಬ್ಬರ ವಯಸ್ಸಿನ ಅಂತರವೆಷ್ಟು?

By ಫಿಲ್ಮಿಬೀಟ್ ಡೆಸ್ಕ್

'ರಾಬರ್ಟ್', 'ಕಾಟೇರ'ದಂತಹ ಸಿನಿಮಾಗಳನ್ನು ನಿರ್ದೇಶಿಸಿರುವ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮಾಂತೇರೋ ಇನ್ನೇನು ಕೆಲವೇ ದಿನಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಕಳೆದ ಕೆಲವು ದಿನಗಳಿಂದ ಈ ಜೋಡಿಯ ಮದುವೆ ಬಗ್ಗೆನೇ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು. ಕೊನೆಗೂ ತರುಣ್ ಸುಧೀರ್ ಹಾಗೂ ಸೋನಾಲ್ ಮಾಂತೇರೋ ಇಬ್ಬರೂ ಅಧಿಕೃತವಾಗಿ ಮದುವೆ ಆಗುತ್ತಿರುವ ವಿಷಯವನ್ನು ಅನೌನ್ಸ್ ಮಾಡಿದ್ದಾರೆ.

ಇಂದು (ಜುಲೈ 22) ತರುಣ್ ಸುಧೀರ್ ಹಾಗೂ ಸೋನಾಲ್ ಮಾಂತೆರೋ ಇಬ್ಬರೂ ಮದುವೆ ಬಗ್ಗೆ ವಿಡಿಯೋ ರಿಲೀಸ್ ಮಾಡಿ, ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. "ನನ್ನ ನಾಯಕಿ ಸೋನಾಲ್ ಜೊತೆಗಿನ ನನ್ನ ಶ್ರೇಷ್ಠ ಪ್ರೇಮಕಥೆಯನ್ನು ನಿರ್ದೇಶಿಸುತ್ತಿದ್ದೇನೆ" ಎಂದು ಬರೆದು ತರುಣ್ ಸುಧೀರ್ ಬರೆದುಕೊಂಡಿದ್ದರೆ, " ಶ್ರೇಷ್ಠ ಪ್ರೇಮಕಥೆಯಲ್ಲಿ ನಾನು ನನ್ನ ಜೆಂಟಲ್‌ಮನ್‌ ತರುಣ್ ಜೊತೆ ನಟಿಸುತ್ತಿದ್ದೇನೆ" ಎಂದು ವೀಡಿಯೋ ಪೋಸ್ಟ್ ಮಾಡಿ ಸೋನಾಲ್ ಬರೆದುಕೊಂಡಿದ್ದಾರೆ.

Age gap between Kaatera director Tharun Sudhir and actress Sonal Monteiro

ಈ ವಿಡಿಯೋ ಆಮಂತ್ರಣ ಪತ್ರಿಕೆ ರಿಲೀಸ್ ಆಗುತ್ತಿದ್ದಂತೆ ಇಬ್ಬರ ಅಭಿಮಾನಿಗಳೂ ಈ ಜೋಡಿಯ ಲವ್ ಸ್ಟೋರಿ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ತೋರುತ್ತಿದ್ದಾರೆ. ಅದೇ ರೀತಿ ಮತ್ತೆ ಕೆಲವರು ಇಬ್ಬರ ನಡುವಿನ ವಯಸ್ಸಿನ ಅಂತರದ ಬಗ್ಗೆನೂ ಚರ್ಚೆ ಮಾಡುತ್ತಿದ್ದಾರೆ. ಹಾಗಿದ್ದರೆ, ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮಾಂತೆರೋ ಇಬ್ಬರ ವಯಸ್ಸು ಎಷ್ಟು? ವಯಸ್ಸಿನ ಅಂತರ ಎಷ್ಟು? ತಿಳಿಯಲು ಮುಂದೆ ಓದಿ.

ಕನ್ನಡ ಚಿತ್ರರಂಗದ ದಿಗ್ಗಜ ಸುಧೀರ್ ಅವರ ಕಿರಿಯ ಪುತ್ರ ತರುಣ್ ಸುಧೀರ್. ಮೊದಲು ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಆ ಬಳಿಕ ನಟನೆಗೆ ಬ್ರೇಕ್ ಕೊಟ್ಟು ನಿರ್ದೇಶನದ ಕಡೆ ಮುಖ ಮಾಡಿದ್ದರು. ನಟನೆಯಲ್ಲಿ ಸಿಗದ ಯಶಸ್ಸು ನಿರ್ದೇಶನದಲ್ಲಿ ಸಿಕ್ಕಿತ್ತು. ಸುಧೀರ್ ಅಂತಹ ದಿಗ್ಗಜನ ಮಗನಾಗಿದ್ದರೂ, ಕನ್ನಡ ಚಿತ್ರರಂಗದಲ್ಲಿ ನೆಲೆಯೂರುವುದಕ್ಕೆ ಸಾಕಷ್ಟು ಪರದಾಡಬೇಕಾಗಿತ್ತು. ಕೊನೆಗೂ ಸ್ಯಾಂಡಲ್‌ವುಡ್ ಸ್ಟಾರ್ ಡೈರೆಕ್ಟರ್ ಪಟ್ಟಿಯಲ್ಲಿ ತರುಣ್ ಸುಧೀರ್ ಸೇರಿದ್ದಾರೆ.

Age gap between Kaatera director Tharun Sudhir and actress Sonal Monteiro

'ಚೌಕ', 'ರಾಬರ್ಟ್' ಮತ್ತು 'ಕಾಟೇರ'ದಂತಹ ಹಿಟ್ ಸಿನಿಮಾಗಳನ್ನು ಕೊಟ್ಟಿರುವ ತರುಣ್ ಸುಧೀರ್ ಈಗ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ತರುಣ್ ಸುಧೀರ್ 1985ರಲ್ಲಿ ಹೊಸಪೇಟೆಯಲ್ಲಿ ಜನಿಸಿದ್ದಾಗಿ ವಿಕಿಪೀಡಿಯಾ ಹೇಳುತ್ತಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ನೋಡುವುದಾದರೆ, ತರುಣ್ ಸುಧೀರ್ ವಯಸ್ಸಿ ಈಗ 39 ವರ್ಷ. ಆದರೆ, ಅಧಿಕೃತವಾಗಿ ತಮ್ಮ ವಯಸ್ಸಿನ ಬಗ್ಗೆ ತರುಣ್ ಸುಧೀರ್ ಎಲ್ಲೂ ಹೇಳಿಕೊಂಡಿಲ್ಲ.

ಹಾಗೇ ಸೋನಾಲ್ ಮಾಂತೆರೋ ಮೂಲಕ ಮಂಗಳೂರು. ತುಳು ಭಾಷೆಯ 'ಎಕ್ಕ ಸಕ್ಕ' ಸಿನಿಮಾದ ಮೂಲಕ ನಟನೆಗೆ ಕಾಲಿಟ್ಟಿದ್ದರು. ತುಳು ಭಾಷೆಯ ಸಿನಿಮಾಗಳಲ್ಲಿ ನಟಿಸಿದ ಬಳಿಕ 2018ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಅಲ್ಲಿಂದ ಇಲ್ಲಿವರೆಗೂ ಸುಮಾರು 12 ಸಿನಿಮಾಗಳಲ್ಲಿ ಸೋನಾಲ್ ಮಾಂತೆರೋ ನಟಿಸಿದ್ದಾರೆ. ಇನ್ನೂ ನಾಲ್ಕೈದು ಸಿನಿಮಾಗಳು ಇವರ ಕೈಯಲ್ಲಿದೆ ಎನ್ನಲಾಗಿದೆ. ಇದೇ ವಿಕ್ಕಿಪೀಡಿಯಾದ ಪ್ರಕಾರ ಸೋನಾಲ್ ಮಾಂತೆರೋ ವಯಸ್ಸು ಈಗ 29 ವರ್ಷ.

ನಿರ್ದೇಶಕ ತರುಣ್ ಸುಧೀರ್ ಹಾಗೂ ನಟಿ ಸೋನಾಲ್ ಮಾಂತೆರೋ ನಡುವಿನ ವಯಸ್ಸಿನ ಅಂತ 10 ವರ್ಷ. ಆದರೆ, ಇಬ್ಬರು ವಯಸ್ಸು ಅಧಿಕೃತವಾಗಿ ಹೇಳಿಕೊಳ್ಳದೇ ಇರುವುದರಿಂದ ಇಬ್ಬರ ವಯಸ್ಸಿನ ಅಂತರವನ್ನು ವಿಕ್ಕಿಪೀಡಿಯವನ್ನು ಆಧರಿಸಿ ಲೆಕ್ಕ ಹಾಕಲಾಗಿದೆ. ಸುಮಾರು ಎರಡು-ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದ ಈ ಜೋಡಿ ಮನೆಯವರನ್ನು ಒಪ್ಪಿಸಿ, ವೈವಾಹಿಕ ಜೀವನಕ್ಕೆ ಕಾಲಿಡುವುದಕ್ಕೆ ಸಜ್ಜಾಗಿದೆ.

More from Filmibeat

English summary
Age gap between director Tharun Sudhir and actress Sonal Monteiro:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X