For Quick Alerts
  ALLOW NOTIFICATIONS  
  For Daily Alerts

  'ಸ್ವಾಮೀಜಿ' ಸುದರ್ಶನ್ ಸಾವಿಗೆ ಕಂಬನಿ ಮಿಡಿದ 'ಅಗ್ನಿಸಾಕ್ಷಿ' ನಿರ್ದೇಶಕ

  By Harshitha
  |
  Agnisakshi, Kannada serial director express his condolences for Sudarshan Demise | Filmibeat Kannada

  ಕೆಲವು ದಿನಗಳ ಹಿಂದೆಯಷ್ಟೇ ಮನೆಯಲ್ಲಿ ಕಾಲು ಜಾರಿ ಬಿದ್ದು ಆಸ್ಪತ್ರೆ ಸೇರಿದ್ದ ನಟ ಸುದರ್ಶನ್ ಸುಧಾರಿಸಿಕೊಂಡು ವಾಪಸ್ ಮನೆ ಕಡೆ ಹೆಜ್ಜೆ ಹಾಕಲೇ ಇಲ್ಲ. ತೀವ್ರ ಅನಾರೋಗ್ಯಕ್ಕೆ ತುತ್ತಾದ ನಟ ಸುದರ್ಶನ್ ಇಂದು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.

  250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟ ಸುದರ್ಶನ್, 'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ 'ಸ್ವಾಮೀಜಿ' ಆಗಿ ನಟಿಸುತ್ತಿದ್ದರು.

  ಡಾ. ರಾಜ್ ಜತೆ ಆಪ್ತ ನಂಟು ಹೊಂದಿದ್ದ ಸುದರ್ಶನ್: ಭಗವಾನ್

  ನಟ ಸುದರ್ಶನ್ ರವರ ಸಾವಿಗೆ 'ಅಗ್ನಿಸಾಕ್ಷಿ' ಧಾರಾವಾಹಿ ನಿರ್ದೇಶಕ ಮೈಸೂರು ಮಂಜು ಕಂಬನಿ ಮಿಡಿದಿದ್ದಾರೆ. ''ತುಂಬ ನೋವಾಗ್ತಿದೆ. ಅವರಲ್ಲಿ 'ಅಹಂ' ಇರಲಿಲ್ಲ. ಅವರನ್ನ ನೋಡಿ ಕಲಿಯಬೇಕಾಗಿದ್ದು ತುಂಬಾ ಇದೆ. ಕನ್ನಡ ಇಂಡಸ್ಟ್ರಿಗೆ ಪ್ರೊಡಕ್ಷನ್ ಮಾಡಿದ್ದು ಅವರ ತಂದೆ. ತಮಿಳಿನಲ್ಲಿ ಹೆಚ್ಚು ಖ್ಯಾತಿ ಗಳಿಸಿಕೊಂಡಿದ್ದರು''

  'ವಿಜಯನಗರದ ವೀರಪುತ್ರ' ಖ್ಯಾತಿಯ ನಟ ಆರ್.ಎನ್.ಸುದರ್ಶನ್ ಇನ್ನಿಲ್ಲ

  ''ಧಾರಾವಾಹಿಯಲ್ಲಿ ಅವರ ಪಾತ್ರಕ್ಕೆ ಹೆಚ್ಚು ಪ್ರಾಮುಖ್ಯತೆ ಸಿಕ್ಕಿತ್ತು. ಜನರು ಕೂಡ ಅವರನ್ನ ಅದೇ ಪಾತ್ರದಲ್ಲಿ ಗುರುತಿಸುತ್ತಿದ್ದರು. ನಿರ್ದೇಶಕರಿಗೆ ಹೆಚ್ಚು ಸರ್ಪೋಟ್ ಮಾಡುತ್ತಿದ್ದರು. 'ಕೃಷ್ಣ ಜನ್ಮಾಷ್ಠಮಿ' ದಿನ ಕೊನೆಯದಾಗಿ ನಮ್ಮ ಜೊತೆ ಕೆಲಸ ಮಾಡಿದ್ದರು'' ಎಂದರು 'ಅಗ್ನಿಸಾಕ್ಷಿ' ನಿರ್ದೇಶಕ ಮೈಸೂರು ಮಂಜು.

  English summary
  'Agni Sakshi' Director Mysore Manju has expressed condolences towards death of Kannada Actor Sudharshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X