ಪತ್ನಿ ಆಡಿಯೋ ಸಾಕ್ಷಿ ಕೊಟ್ಟಿದ್ದಕ್ಕೆ ಹಳೇ ವಿಡಿಯೋ ತೋರಿಸಿದ ಪತಿ ರಾಜೇಶ್.!
'ಅಗ್ನಿಸಾಕ್ಷಿ' ಧಾರಾವಾಹಿ ನಟ ರಾಜೇಶ್ ಧ್ರುವ ಸಂಸಾರದ ಜಗಳ ಬೀದಿಗೆ ಬಂದಿದೆ. ಶ್ರುತಿ ಎಂಬುವರನ್ನು ಪ್ರೀತಿಸಿ, ಲಿವಿಂಗ್ ಟು ಗೆದರ್ ರಿಲೇಶನ್ ಶಿಪ್ ನಲ್ಲಿದ್ದು, ಮದುವೆ ಆಗಿದ್ದ ರಾಜೇಶ್ ಧ್ರುವ ಇದೀಗ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ.
ಅತ್ತ ರಾಜೇಶ್ ಧ್ರುವ ಮಾನಸಿಕ ಹಿಂಸೆ ನೀಡುತ್ತಿದ್ದಾರೆ, ವರದಕ್ಷಿಣೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಶ್ರುತಿ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಾರೆ.
ಸದ್ಯ ಬಂಧನ ಭೀತಿಯಿಂದ ರಾಜೇಶ್ ಧ್ರುವ ಬಚಾವ್ ಆಗಿದ್ದಾರೆ. ಅವರಿಗೆ ಜಾಮೀನು ಲಭಿಸಿದೆ. ಹೀಗಿರುವಾಗಲೇ, ಪತ್ನಿ ವಿರುದ್ಧ ರಾಜೇಶ್ ಧ್ರುವ ಆರೋಪ ಮಾಡಿದ್ದಾರೆ. ಇದರಿಂದ ಬೇಸೆತ್ತ ಶ್ರುತಿ, ಐದು ತಿಂಗಳಿನಿಂದ ರಾಜೇಶ್ ಧ್ರುವ ಚಾಟಿಂಗ್ ಮಾಡುತ್ತಿದ್ದ ಯುವತಿಯ ಜೊತೆಗಿನ ಆಡಿಯೋ ಕ್ಲಿಪ್ ನ ಮಾಧ್ಯಮಗಳಿಗೆ ನೀಡಿದ್ದಾರೆ. ಸಾಲದಕ್ಕೆ, ರಾಜೇಶ್ ಧ್ರುವ ತಾಯಿ ಧಮ್ಕಿ ಹಾಕಿರುವ ಆಡಿಯೋವನ್ನೂ ಮೀಡಿಯಾಗೆ ಶ್ರುತಿ ತಲುಪಿಸಿದ್ದಾರೆ.
ಈ ಎರಡು ಆಡಿಯೋಗಳನ್ನು ಪತ್ನಿ ಶ್ರುತಿ ಬಿಡುಗಡೆ ಮಾಡಿದ್ಮೇಲೆ, ಹಳೇ ವಿಡಿಯೋವೊಂದನ್ನು ರಾಜೇಶ್ ಧ್ರುವ ರಿಲೀಸ್ ಮಾಡಿದ್ದಾರೆ. ಕೆಲ ವರ್ಷಗಳ ಹಿಂದೆ ಶ್ರುತಿ ಮದ್ಯ ಸೇವಿಸುತ್ತಿದ್ದ ವಿಡಿಯೋವನ್ನು ಪತಿ ರಾಜೇಶ್ ನ್ಯೂಸ್ ಚಾನೆಲ್ ಗಳಿಗೆ ಕೊಟ್ಟಿದ್ದಾರೆ. ಮುಂದೆ ಓದಿರಿ...

ಕುಡಿಯಲು ತಂದುಕೊಟ್ಟಿದ್ದು ರಾಜೇಶ್.!
''ಹೊಸ ವರ್ಷಕ್ಕೆ ಮಾಡಿರುವ ವಿಡಿಯೋ ಇದು. ನನಗೆ ಗೊತ್ತಿಲ್ಲದೇ, ರಾಜೇಶ್ ಫ್ರೆಂಡ್ ಈ ವಿಡಿಯೋ ಮಾಡಿದ್ದಾರೆ. ವಿಡಿಯೋ ಮಾಡುವಾಗ ನನ್ನ ಪಕ್ಕದಲ್ಲೇ ರಾಜೇಶ್ ಇದ್ದರು. ಅವರೇ ಕುಡಿಯಲು ತಂದು ಕೊಟ್ಟಿದ್ದು. ನನ್ನ ಬಗ್ಗೆ ಕೆಟ್ಟ ಅಭಿಪ್ರಾಯ ಬರಲಿ ಅಂತ ಈ ವಿಡಿಯೋ ಬಿಟ್ಟಿದ್ದಾರೆ'' ಎನ್ನುತ್ತಾರೆ ಪತ್ನಿ ಶ್ರುತಿ.

ತಮಾಷೆಗೆ ರೆಕಾರ್ಡ್ ಮಾಡಿದ್ದ ವಿಡಿಯೋ
''ಒಂದುವರೆ-ಎರಡು ವರ್ಷದ ಹಿಂದೆ ರೆಕಾರ್ಡ್ ಮಾಡಿದ ವಿಡಿಯೋ ಇದು. ಹೊಸ ವರ್ಷದ ದಿನ ಅಲ್ಲ. ತಮಾಷೆಗೆ ಅಂತಲೇ ಈ ವಿಡಿಯೋ ಮಾಡಿದ್ದು. ಶ್ರುತಿ ಕೂಡ ಕುಡಿದು ಗಲಾಟೆ ಮಾಡುತ್ತಿದ್ದಳು ಅನ್ನೋದಕ್ಕೆ ಈ ಸಾಕ್ಷಿ ಕೊಟ್ಟಿದ್ದೇನೆ'' - ರಾಜೇಶ್ ಧ್ರುವ, ನಟ

ಅಕ್ರಮ ಸಂಬಂಧ ಹೊಂದಿದ್ದಾರಾ ರಾಜೇಶ್ ಧ್ರುವ.?
''ಒಂದು ಮಗು ಇರುವ ತಾಯಿಗೆ ಪಾರ್ಕ್ ಗೆ ಹೋಗೋಣ ಬಾ, ಅಲ್ಲಿ ಮೀಟ್ ಮಾಡೋಣ.. ಇಲ್ಲಿ ಮೀಟ್ ಮಾಡೋಣ ಅಂತೆಲ್ಲಾ ನನ್ನ ಗಂಡ ಚಾಟ್ ಮಾಡಿದ್ದಾರೆ'' ಎಂದು ಆರೋಪಿಸುತ್ತಾರೆ ಪತ್ನಿ ಶ್ರುತಿ.

ಎಲ್ಲವೂ ಸುಳ್ಳು
''ನನ್ನ ಫ್ಯಾನ್ಸ್ ಜೊತೆಗೆ ಸೀರಿಯಲ್ ಗೆ ಸಂಬಂಧ ಪಟ್ಟ ಹಾಗೆ ಚಾಟ್ ಮಾಡಿದ್ದೇನೆ. ಅದು ಬಿಟ್ಟರೆ ಬೇರೆ ಏನೂ ಮಾಡಿಲ್ಲ. ಶ್ರುತಿ ಮಾಡಿರುವ ಆರೋಪಗಳೆಲ್ಲ ಸುಳ್ಳು. ಫೇಸ್ ಬುಕ್ ನಲ್ಲಿ ನನ್ನ ಹೆಸರಿನಲ್ಲಿ ಕೆಲವು ಫೇಕ್ ಅಕೌಂಟ್ ಗಳಿವೆ'' ಎಂದು ಸಮಜಾಯಿಷಿ ಕೊಡುತ್ತಾರೆ ರಾಜೇಶ್ ಧ್ರುವ.


Click it and Unblock the Notifications











