For Quick Alerts
  ALLOW NOTIFICATIONS  
  For Daily Alerts

  ಅಕ್ರಮ ಸಂಬಂಧ, ಬಲವಂತದ ಗರ್ಭಪಾತ, 2ನೇ ಮದುವೆ ಯೋಗ: ನಟ ರಾಜೇಶ್ ವಿರುದ್ಧ ಆರೋಪಗಳ ಸುರಿಮಳೆ.!

  |

  ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅಂತಾರೆ. ಆದ್ರೆ, 'ಅಗ್ನಿಸಾಕ್ಷಿ' ಧಾರಾವಾಹಿಯ ನಟ ರಾಜೇಶ್ ಧ್ರುವ ಸಂಸಾರದ ಕಿತ್ತಾಟ ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.

  ಲವ್ ಮಾಡಿ, ಲಿವಿಂಗ್ ಟು ಗೆದರ್ ರಿಲೇಶನ್ ಶಿಪ್ ನಲ್ಲಿದ್ದು, ಮದುವೆ ಆದ ನಟ ರಾಜೇಶ್ ಧ್ರುವ-ಶ್ರುತಿ ದಾಂಪತ್ಯದಲ್ಲಿ ಸುಂಟರಗಾಳಿಯೇ ಬೀಸಲು ಆರಂಭಿಸಿದೆ. ಗಂಡನ ವಿರುದ್ಧ ಹೆಂಡತಿ, ಹೆಂಡತಿ ವಿರುದ್ಧ ಗಂಡ ಆರೋಪ-ಪ್ರತ್ಯಾರೋಪಗಳ ಸುರಿಮಳೆ ಆಗುತ್ತಿದೆ.

  2013 ರಲ್ಲಿ ರಿಜಿಸ್ಟರ್ ಮದುವೆ ಮಾಡಿಕೊಂಡ ರಾಜೇಶ್ ಧ್ರುವ-ಶ್ರುತಿ, ಕುಟುಂಬದವರ ಒಪ್ಪಿಗೆ ಪಡೆದು ಎಲ್ಲರ ಸಮ್ಮುಖದಲ್ಲಿ 2017 ರಲ್ಲಿ ಸಾಂಪ್ರದಾಯಿಕವಾಗಿ ವಿವಾಹವಾದರು. ಬಳಿಕ ಅದೇನಾಯ್ತೋ, ಏನೋ ವಿಚ್ಛೇದನಕ್ಕೆ ರಾಜೇಶ್ ಧ್ರುವ ಅರ್ಜಿ ಸಲ್ಲಿಸಿದರು.

  ವಿಚ್ಛೇದನ ನೀಡಲು ಇಷ್ಟವಿಲ್ಲದ ಶ್ರುತಿ, ಪತಿ ರಾಜೇಶ್ ಧ್ರುವ ಜೊತೆಗಿನ ಮನಸ್ತಾಪಕ್ಕೆ ಕಾರಣವೇನು ಎಂಬುದನ್ನ ಮಾಧ್ಯಮಗಳ ಮುಂದೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮುಂದೆ ಓದಿರಿ...

  ಎಲ್ಲದಕ್ಕೂ ಸಾಕ್ಷಿ ಕೊಡಿ ಅಂದ್ರೆ.?

  ಎಲ್ಲದಕ್ಕೂ ಸಾಕ್ಷಿ ಕೊಡಿ ಅಂದ್ರೆ.?

  ''ತಂದೆ ತೀರಿಕೊಂಡ ಮೇಲೆ ಅವರ ತಾಯಿ ನಮ್ಮ ಜೊತೆ ವಾಸಿಸಲು ಆರಂಭಿಸಿದರು. ಅದಕ್ಕಾಗಿ ದೊಡ್ಡ ಮನೆ ಮಾಡಲು ದುಡ್ಡು ಹೊಂದಿಸಲು ನನಗೆ ಹೇಳಿದರು. ನಾನು ಆಗ ಹೇಗೋ ದುಡ್ಡು ಅಡ್ಜಸ್ಟ್ ಮಾಡಿ ಕೊಟ್ಟಿದ್ದೇನೆ. ಈಗ ಅದಕ್ಕೂ ಪ್ರೂಫ್ ಕೊಡಿ ಅಂತಾರೆ. ಗಂಡನಿಗೆ ದುಡ್ಡು ಕೊಡುವಾಗಲೂ ಸಾಕ್ಷಿ ಇಟ್ಟುಕೊಳ್ಳಬೇಕಾ.?'' ಎಂದು ಪ್ರಶ್ನಿಸುತ್ತಾರೆ ರಾಜೇಶ್ ಧ್ರುವ ಪತ್ನಿ ಶ್ರುತಿ

  'ಅಗ್ನಿಸಾಕ್ಷಿ' ನಟ ಅಖಿಲ್ ವಿರುದ್ಧ ದೂರು ಕೊಟ್ಟ ಪತ್ನಿ ಶ್ರುತಿ.!

  ಮಾಂಸಾಹಾರ ತಿನ್ನೋದೇ ತಪ್ಪಾ.?

  ಮಾಂಸಾಹಾರ ತಿನ್ನೋದೇ ತಪ್ಪಾ.?

  ''ನಾನು ನಾನ್ ವೆಜ್ ತಿಂತೀನಿ. ನನ್ನ ಗಂಡ ಕೂಡ ಮಾಂಸಾಹಾರ ತಿಂತಾರೆ. ಆದ್ರೆ, ಮನೆಯಲ್ಲಿ ತಿನ್ನಲ್ಲ ಅಷ್ಟೇ. ಬ್ರಾಹ್ಮಣರಾಗಿ ಅವರು ನಾನ್ ವೆಜ್ ತಿನ್ನಬಹುದು. ನಾನು ತಿನ್ನಬಾರದು ಅಂದರೆ ಹೇಗೆ.? ನಾನು ಯಾವತ್ತೂ ಮನೆಗೆ ಮಾಂಸಾಹಾರ ತಂದು ತಿಂದಿಲ್ಲ. ಇದನ್ನೇ ವಿಚ್ಚೇದನಕ್ಕೆ ಕಾರಣ ಕೊಟ್ಟಿದ್ದಾರೆ'' - ಶ್ರುತಿ, ರಾಜೇಶ್ ಧ್ರುವ ಪತ್ನಿ.

  ಪತ್ನಿ ಮಾಡಿದ ಆರೋಪ ನಿಜವೇ.? 'ಅಗ್ನಿಸಾಕ್ಷಿ' ನಟ ರಾಜೇಶ್ ಧ್ರುವ ಹೇಳುವುದೇನು.?

  ಅಕ್ರಮ ಸಂಬಂಧ

  ಅಕ್ರಮ ಸಂಬಂಧ

  ''ನಿನ್ನ ಗಂಡನನ್ನು ಬೇರೆ ಹುಡುಗಿಯರ ಜೊತೆ ನೋಡಿದ್ದೇನೆ'' ಎಂದು ನನ್ನ ಫ್ರೆಂಡ್ಸ್ ಹೇಳಿದ್ದಾರೆ. ಒಂದು ವರ್ಷದಿಂದ ಹುಡುಗಿಯೊಬ್ಬಳ ಜೊತೆ ಅಫೇರ್ ಇಟ್ಟುಕೊಂಡಿದ್ದಾರೆ. ಆಗಾಗ ಅವಳ ಮನೆಗೆ ಹೋಗಿ ಬರುತ್ತಾರೆ. ''ಮಗನಿಗೆ ಎರಡನೇ ಮದುವೆ ಯೋಗ ಇದೆ. ನೀನು ಅವನನ್ನು ಬಿಟ್ಟುಬಿಡು. ನೀನು ಹೋಗು'' ಅಂತ ರಾಜೇಶ್ ತಾಯಿ ನನಗೆ ಹೇಳಿದ್ದಾರೆ'' ಎಂದು ಕಣ್ಣೀರು ಹಾಕುತ್ತಾರೆ ಶ್ರುತಿ.

  ಬಲವಂತವಾಗಿ ಗರ್ಭಪಾತ ಮಾಡಿಸಿದ್ದರು.!

  ಬಲವಂತವಾಗಿ ಗರ್ಭಪಾತ ಮಾಡಿಸಿದ್ದರು.!

  ''ಮನೆಯಲ್ಲಿ ನಾನು ಡೈನಿಂಗ್ ಟೇಬಲ್ ಮೇಲೆ ಕೂರುವ ಹಾಗಿಲ್ಲ. ಅಡುಗೆ ಮನೆಗೆ ಹೋಗುವಂತಿಲ್ಲ. ಅವರ ಪಾತ್ರೆಗಳನ್ನು ನಾನು ಮುಟ್ಟಬಾರದು. ಹೊರಗೆ ಹೋಗುವಾಗ ಫ್ರಿಡ್ಜ್ ಗೆ ಲಾಕ್ ಮಾಡಿಕೊಂಡು ಹೋಗುತ್ತಾರೆ. ನಾನು ಮೂರುವರೆ ತಿಂಗಳು ಗರ್ಭಿಣಿ ಆಗಿದ್ದಾಗ, ಬಲವಂತವಾಗಿ ಗರ್ಭಪಾತ ಮಾಡಿಸಿದ್ದರು'' - ಶ್ರುತಿ, ರಾಜೇಶ್ ಧ್ರುವ ಪತ್ನಿ

  ವಿಚ್ಛೇದನ ಬೇಡ

  ವಿಚ್ಛೇದನ ಬೇಡ

  ''ನನಗೆ ವಿಚ್ಛೇದನ ಬೇಕಾಗಿಲ್ಲ. ಇದು ನನ್ನ ಬದುಕಿನ ಪ್ರಶ್ನೆ. ಸಿಲ್ಲಿ ಕಾರಣ ಕೊಟ್ಟು ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಇದಕ್ಕೆ ನಾನು ರೆಡಿ ಇಲ್ಲ'' - ಶ್ರುತಿ, ರಾಜೇಶ್ ಧ್ರುವ ಪತ್ನಿ

  English summary
  'Agnisakshi' serial Actor Rajesh Dhruva's wife Shruthi speaks to media regarding her family dispute.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X