»   » ಅಗ್ನಿಸಾಕ್ಷಿ ಕಲಾವಿದ ಈಗ ರಾಜಕೀಯ ಅಭ್ಯರ್ಥಿ

ಅಗ್ನಿಸಾಕ್ಷಿ ಕಲಾವಿದ ಈಗ ರಾಜಕೀಯ ಅಭ್ಯರ್ಥಿ

Posted By:
Subscribe to Filmibeat Kannada
ಅಗ್ನಿಸಾಕ್ಷಿ ಧಾರಾವಾಹಿಯ ಕಲಾವಿದ ಈಗ ರಾಜಕಾರಿಣಿ | Filmibeat Kannada

ಕಿರುತೆರೆಯಲ್ಲಿ ಸಾಕಷ್ಟು ದಿನಗಳಿಂದ ನಂಬರ್ ಒನ್ ಸ್ಥಾನ ಉಳಿಸಿಕೊಂಡು ಬಂದಿರುವ ಧಾರಾವಾಹಿ ಅಗ್ನಿಸಾಕ್ಷಿ ಯಾವುದೇ ಕಾರ್ಯಕ್ರಮ ಮಾಡಿದರು ಈ ಸೀರಿಯಲ್ ನ ಮಾತ್ರ ಹಿಂದಿಕ್ಕಲು ಸಾಧ್ಯವಾಗುತ್ತಿಲ್ಲ. ತೆರೆ ಮೇಲೆ ಬಂದು ಪ್ರೇಕ್ಷಕರನ್ನ ರಂಜಿಸುತ್ತಿದ್ದ ಈ ಧಾರಾವಾಹಿಯ ಕಲಾವಿದ ಸದ್ಯ ನಿಮ್ಮ ಮನೆ ಬಾಗಿಲಿಗೆ ಬಂದು ಮತಯಾಚನೆ ಮಾಡಲು ಸಿದ್ದವಾಗಿದ್ದಾರೆ.

ಅಗ್ನಿ ಸಾಕ್ಷಿ ಧಾರಾವಾಹಿಯಲ್ಲಿ ಖಳನಾಯಕನಾಗಿ ಅಭಿನಯಿಸಿರುವ ಮುನಿಕೃಷ್ಣ (ಮುರುಗ) ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ಸಿದ್ದವಾಗಿದ್ದಾರೆ. ಸೀರಿಯಲ್ ನಲ್ಲಿ ಮುರುಗ ಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಂದ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದ ಮುನಿಕೃಷ್ಣ ಆನೇಕಲ್ ನಿಂದ ಚುನಾವಣೆಗೆ ಸ್ಪರ್ಧಿಸಲಿದ್ದಾರೆ.

ಅಧಿಕೃತವಾಗಿ 'ಕಮಲ' ಪಕ್ಷ ಸೇರಿದ ಬಿಗ್ ಬಾಸ್ ಕನ್ನಡ ಸ್ಪರ್ಧಿ

ಯಾವುದೇ ಪಕ್ಷಕ್ಕೆ ಸೇರಿಕೊಳ್ಳದ ಮುನಿಕೃಷ್ಣ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ನಿರ್ಧಾರ ಮಾಡಿದ್ದಾರಂತೆ. ಈ ವಿಚಾರವನ್ನ ಫೇಸ್ ಬುಕ್ ಮೂಲಕ ತಿಳಿಸಿರುವ ಮುನಿಕೃಷ್ಣ ನಿಮ್ಮೆಲ್ಲರ ಆಶೀರ್ವಾದ ಇರಲಿ ಎಂದು ಮನವಿ ಮಾಡಿದ್ದಾರೆ.

Agnisakshi starring Munikrishna will contest the election.

ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ಮಾತ್ರವಲ್ಲದೆ ಕೊಡೆ ಮುರುಗ ಎನ್ನುವ ಸಿನಿಮಾದಲ್ಲಿ ನಾಯಕನಾಗಿಯೂ ಅಭಿನಯಿಸುತ್ತಿದ್ದಾರೆ. ಒಟ್ಟಾರೆ ಒಬ್ಬರಾದ ನಂತರ ಮತ್ತೊಬ್ಬರಂತೆ ಕಿರುತೆರೆ ಹಾಗೂ ಬೆಳ್ಳಿತೆರೆ ಕಲಾವಿದರು ಚುನಾವಣೆ ಕಣಕ್ಕೆ ಇಳಿಯುತ್ತಿದ್ದಾರೆ.

ಹೊಸ ಮೈಲಿಗಲ್ಲು ಸೃಷ್ಟಿ ಮಾಡಿದ 'ನಾಗಿಣಿ' ಧಾರಾವಾಹಿ

English summary
Kannada serial Agnisakshi actor Munikrishna will be contesting in forthcoming Karnataka Assembly Elections 2018 as independent candidate from Anekal (Bengaluru Urban) constituency. Munikrishna plays the role of Murugan in Colors Kannada TV serial Agnisakshi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada