'ಚಿತ್ರಮಂದಿರಕ್ಕೆ 100 ಪರ್ಸೆಂಟ್ ಅವಕಾಶ ಕೊಡಲಿ'- ಕೃಷಿ ಸಚಿವ ಬಿಸಿ ಪಾಟೀಲ್

ಚಿತ್ರಮಂದಿರಗಳಲ್ಲಿ 100 ರಷ್ಟು ಅನುಮತಿ ನೀಡದಿರುವುದಕ್ಕೆ ಕನ್ನಡ ಇಂಡಸ್ಟ್ರಿಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೂಡಲೇ ರಾಜ್ಯ ಸರ್ಕಾರ ತಮ್ಮ ನಿರ್ಧಾರವನ್ನು ಬದಲಾಯಿಸಿ ಆದೇಶ ನೀಡಬೇಕು, ಇಲ್ಲವಾದಲ್ಲಿ ಚಿತ್ರಮಂದಿರಗಳನ್ನು ಸಂಪೂರ್ಣವಾಗಿ ಬಂದ್ ಮಾಡಬೇಕಾಗುತ್ತದೆ ಎಂದು ಪ್ರದರ್ಶಕ ಸಂಘ ಎಚ್ಚರಿಕೆ ನೀಡಿದೆ.

Recommended Video

ನನಗೆ ಮನರಂಜನೆಗಿಂತ ಜನರ ಆರೋಗ್ಯ ಮುಖ್ಯ | Sudhakar | Filmibeat Kannada

ಸ್ಯಾಂಡಲ್‌ವುಡ್ ಸ್ಟಾರ್ ನಟರಾದ ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ರಕ್ಷಿತ್ ಶೆಟ್ಟಿ, ಶ್ರೀಮುರಳಿ, ಧ್ರುವ ಸರ್ಜಾ, ದುನಿಯಾ ವಿಜಯ್ ಸೇರಿದಂತೆ 100 ಪರ್ಸೆಂಟ್‌ಗೆ ಅವಕಾಶ ಕೊಡಿ ಎಂದು ಅನೇಕರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವ ಬಿಸಿ ಪಾಟೀಲ್ ಪ್ರತಿಕ್ರಿಯಿಸಿದ್ದು, ''ಕೊರೊನಾ ಹೊಡೆತಕ್ಕೆ ಚಿತ್ರರಂಗ ಕೊಚ್ಚಿಹೋಗಿದೆ. ಚಿತ್ರರಂಗಕ್ಕೆ ನಷ್ಟ ಉಂಟಾಗಿ, ರಾಜ್ಯಕ್ಕೂ ನಷ್ಟವಾಗಿದೆ. ಮುಂಜಾಗ್ರತಾ ಕ್ರಮ ಜರುಗಿಸಿ ನೂರರಷ್ಟು ಬಿಡಲಿ'' ಎಂದಿದ್ದಾರೆ.

Agriculture Minister BC Patil Reaction to Karnataka Govt Stand on 50% Occupancy in Theatres

''ಈ ಹಿಂದೆ ತಲಂಗಾಣ ಮತ್ತು ಆಂಧ್ರ ಪ್ರದೇಶದಲ್ಲಿ ಶೇ.100ರಷ್ಟು ಬಿಟ್ಟಾಗ ರಾಜ್ಯದಲ್ಲೂ ನೂರರಷ್ಟು ಅವಕಾಶ ಮಾಡಿಕೊಡಲು ಸಿಎಂ ಬಳಿ ಮನವಿ ಮಾಡಿದೆ. ಈ ಹಿಂದೆನೂ ಸಿಎಂ ಜೊತೆ ಮಾತುಕತೆ ಮಾಡಿದ್ದೆ, ಮತ್ತೆ ಮಾತಾಡ್ತೀನಿ. ಮುಂಜಾಗ್ರತಾ ಕ್ರಮ ಜರುಗಿಸಿ ಚಿತ್ರಮಂದಿರಗಳಿಗೆ ಅವಕಾಶ ಮಾಡಿಕೊಡಲಿ'' ಎಂದು ಕೃಷಿ ಸಚಿವ ಭರವಸೆ ನೀಡಿದ್ದಾರೆ.

ಚಿತ್ರಮಂದಿರಗಳನ್ನು ಪೂರ್ಣ ಪ್ರಮಾಣದಲ್ಲಿ ತೆರೆಯುವ ಕುರಿತಂತೆ ಚರ್ಚಿಸಲು ಇಂದು ಸಂಜೆ 5 ಗಂಟೆಗೆ ಮಾನ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹಿರಿಯ ನಟರು, ನಿರ್ಮಾಪಕರು, ಫಿಲಂ ಚೇಂಬರ್ ನ ಅಧ್ಯಕ್ಷರು, ಪದಾಧಿಕಾರಿಗಳು, ಸೇರಿದಂತೆ ಚಿತ್ರೋದ್ಯಮದ ಎಲ್ಲ ಪ್ರತಿನಿಧಿಗಳೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಲಿದ್ದಾರೆ. ಈ ಸಭೆಯ ಬಳಿಕ ಅಂತಿಮ ತೀರ್ಮಾನ ಹೊರಬೀಳಲಿದೆ.

More from Filmibeat

English summary
Karnataka Agriculture Minister BC Patil Reaction to Karnataka Govt Stand on 50% Occupancy in Theatres.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X