'ರಾಬರ್ಟ್' ಪೋಸ್ಟರ್ ಅನಾವರಣಗೊಳಿಸಿದ ಕೃಷಿ ಸಚಿವ ಬಿಸಿ ಪಾಟೀಲ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ರಿಲೀಸ್‌ಗೆ ಸಿದ್ದವಾಗಿದ್ದು, ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್‌ನಲ್ಲಿ ಸದ್ದು ಮಾಡ್ತಿದೆ. ತರುಣ್ ಸುಧೀರ್ ನಿರ್ದೇಶನ ಹಾಗೂ ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣ ಮಾಡಿರುವ ಈ ಚಿತ್ರ ಮಾರ್ಚ್ 11 ರಂದು ತೆರೆಗೆ ಬರ್ತಿದೆ.

ರಾಬರ್ಟ್ ಚಿತ್ರ ಮಾರ್ಚ್ ತಿಂಗಳಲ್ಲಿ ರಿಲೀಸ್ ಆಗುತ್ತಿರುವ ಹಿನ್ನೆಲೆ ಪೋಸ್ಟರ್ ಬಿಡುಗಡೆ ಮಾಡಿದ ಬಿಸಿ ಪಾಟೀಲ್ ಚಿತ್ರವು 100 ದಿನ ಯಶಸ್ವಿಯಾಗಿ ಪೂರೈಸಲಿ ಎಂದು ಶುಭಕೋರಿದ್ದಾರೆ.

ಹಿರೇಕೆರೂರಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ(ರಿ) ವತಿಯಿಂದ ಕೃಷಿ ಸಚಿವರಾದ ಬಿಸಿ ಪಾಟೀಲ್ ಅವರು ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾದ ಯುಬಿ ಬಣಕಾರ್ ಅವರನ್ನು ಭೇಟಿ ಮಾಡಲಾಗಿದೆ.

Agriculture minister BC Patil released Roberrt Movie Posters

ಈ ವೇಳೆ ರಾಬರ್ಟ್ ಚಿತ್ರದ ಪೋಸ್ಟರ್ಸ ಗಳನ್ನೂ ಬಿಡುಗಡೆ ಮಾಡಿ ಚಿತ್ರವು ಯಶಸ್ವಿಯಾಗಲಿ 100 ದಿನ ಪೂರೈಸಲಿ ಎಂದು ಬಿಸಿ ಪಾಟೀಲ್ ಶುಭಾಶಯ ಕೋರಿದ್ದಾರೆ.

ನಟ ದರ್ಶನ್ ಅವರ ಜೊತೆ ಬಿಸಿ ಪಾಟೀಲ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಕೃಷಿ ಇಲಾಖೆಗೆ ದರ್ಶನ್ ಅವರನ್ನು ರಾಯಭಾರಿಯನ್ನಾಗಿ ನೇಮಕಗೊಳಿಸಿದ್ದಾರೆ. ಈ ಹಿನ್ನೆಲೆ ಮೈಸೂರಿನಲ್ಲಿರುವ ದರ್ಶನ್ ಅವರ ಫಾರ್ಮ್‌ಹೌಸ್‌ಗೆ ಬಿಸಿ ಪಾಟೀಲ್ ಭೇಟಿ ನೀಡಿದ್ದರು.

More from Filmibeat

English summary
Agriculture minister BC Patil released Roberrt Movie posters and he wishes to D Boss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X