ಸುದೀಪ್ ಜೊತೆ ಸಿಸಿಎಲ್‌ನಲ್ಲಿ ಪ್ರಮುಖ ಆಕರ್ಷಣೆ ಆಗಿದ್ದ ದಾಸ ದರ್ಶನ್

ನಟ ದರ್ಶನ್ ಹಾಗೂ ನಟ ಸುದೀಪ್ ಸ್ನೇಹ ಮುರಿದು ಬಿದ್ದು ಬಹಳ ವರ್ಷಗಳಾಯಿತು. ನಾನು, ಸುದೀಪ್ ಇನ್ನು ಮುಂದೆ ಸ್ನೇಹಿತರಲ್ಲ ಎಂದು ಖುದ್ದು ದರ್ಶನ್ ಸೋಶಿಯಲ್ ಮೀಡಿಯಾದಲ್ಲಿ ಘೋಷಿಸಿದ ಬಳಿಕ ಮತ್ತೆ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳಲಿಲ್ಲ. ಆದರೆ ಅವರಿಬ್ಬರು ಒಂದಾಗಬೇಕು ಎಂದು ಕೆಲವರು ಇಂದಿಗೂ ಬಯಸುತ್ತಲೇ ಇದ್ದಾರೆ.

ಒಂದ್ಕಾಲದಲ್ಲಿ ದರ್ಶನ್-ಸುದೀಪ್ ಕುಚಿಕು ಗೆಳೆಯರಾಗಿದ್ದರು. ಒಟ್ಟೊಟ್ಟಿಗೆ ವೇದಿಕೆಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಪರಸ್ಪರ ತಮ್ಮಿಬ್ಬರ ಸಿನಿಮಾ ಸಮಾರಂಭಗಳಲ್ಲಿ ಭಾಗಿ ಆಗುತ್ತಿದ್ದರು. ಸಿಸಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಕೂಡ ಒಟ್ಟಿಗೆ ಆಡಿದ್ದರು. ನಟ ದರ್ಶನ್ ಸಿಸಿಎಲ್ ಕ್ರಿಕೆಟ್‌ನಲ್ಲಿ ಪ್ರಮುಖ ಆಕರ್ಷಣೆ ಆಗಿ ನಿಲ್ಲುತ್ತಿದ್ದರು.

Ahead of As CCL Season 11 fans fondly recall Darshan and Sudeep s moments on the field

ಒಂದೆರಡು ಸಿಸಿಎಲ್ ಟೂರ್ನಿಯಲ್ಲಿ ದರ್ಶನ್ ಕೂಡ ಸಿಸಿಎಲ್‌ನಲ್ಲಿ ಆಡಿದ್ದರು. ಬ್ಯಾಟಿಂಗ್, ಬೌಲಿಂಗ್ ಕೂಡ ಮಾಡಿ ರಂಜಿಸಿದ್ದರು. ಇನ್ನು ಸುದೀಪ್ ಹಾಗೂ ದರ್ಶನ್ ಕ್ರಿಕೆಟ್ ಮೈದಾನದಲ್ಲಿದ್ದ ಕೆಲ ಆತ್ಮೀಯ ಕ್ಷಣಗಳು ಅಭಿಮಾನಿಗಳ ಮನಸ್ಸಿನಲ್ಲಿ ಉಳಿದುಬಿಟ್ಟಿದೆ. ಇವತ್ತಿಗೂ ಸಿಸಿಎಲ್ ಎಂದಾಕ್ಷಣ ಆ ದಿನಗಳನ್ನು ಅಭಿಮಾನಿಗಳು ನೆನೆಯುತ್ತಾರೆ. ಮತ್ತೊಂದು ಸೀಸನ್ ಹತ್ತಿರವಾಗುತ್ತಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಮತ್ತೆ ಅಖಾಡಕ್ಕೆ ಇಳಿಯುತ್ತಿದೆ.

ಕರ್ನಾಟಕ ಬುಲ್ಡೋಜರ್ಸ್ ಎರಡು ಬಾರಿ ಟ್ರೋಫಿ ಎತ್ತಿ ಹಿಡಿದಿತ್ತು. 10 ಸೀಸನ್‌ಗಳಲ್ಲಿ 5 ಬಾರಿ ರನ್ನರ್ ಅಪ್ ಆಗಿದೆ. ಒಟ್ಟು 10 ಸೀಸನ್‌ಗಳಲ್ಲಿ 48 ಪಂದ್ಯಗಳನ್ನು ಆಡಿ 31 ಪಂದ್ಯಗಳಲ್ಲಿ ತಂಡ ಗೆದ್ದಿದೆ. ಇನ್ನು ತಂಡವನ್ನು ಕಿಚ್ಚ ಸುದೀಪ್ ಮುನ್ನಡೆಸುತ್ತಾ ಬರುತ್ತಿದ್ದಾರೆ. ಈ ಬಾರಿ ಫೆಬ್ರವರಿ 8ರಂದು ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ.

ಮೊದಲ ದಿನ ನಡೆಯುವ ಮೊದಲ ಪಂದ್ಯದಲ್ಲಿ ಚೆನ್ನೈ ರಿನ್ಹೋಸ್ ತಂಡವನ್ನು ಬೆಂಗಾಲ್ ಟೈಗರ್ಸ್ ತಂಡ ಎದುರಿಸಲಿದೆ. ಅದೇ ದಿನ ಮತ್ತೊಂದು ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಮತ್ತು ತೆಲುಗು ವಾರಿಯರ್ಸ್ ತಂಡಗಳು ಮುಖಾಮುಖಿ ಆಗಲಿದವೆ. ಕರ್ನಾಟಕ ಬುಲ್ಡೋಜರ್ಸ್, ಚೆನ್ನೈ ರೈನೋಸ್, ಪಂಜಾಬ್ ಡಿ ಶೇರ್, ಬೆಂಗಾಲ್ ಟೈಗರ್ಸ್, ಭೋಜ್‌ಪುರಿ ದಬಾಂಗ್ಸ್, ತೆಲುಗು ವಾರಿಯರ್ಸ್, ಮುಂಬೈ ಹೀರೋಸ್ ಮತ್ತು ಕೇರಳ ಸ್ಟ್ರೈಕರ್ಸ್ ತಂಡಗಳು ಈ ಬಾರಿ ಟೂರ್ನಿಯಲ್ಲಿ ಆಡುತ್ತಿವೆ.

ಬಣ್ಣ ಹಚ್ಚಿ ಕ್ಯಾಮರಾ ಮುಂದೆ ನಟಿಸುವ ಕಲಾವಿದರು ಗ್ಲೌಸ್, ಪ್ಯಾಡ್ ಕಟ್ಟಿಕೊಂಡು ಬ್ಯಾಡು, ಬಾಲ್ ಹಿಡಿದು ಕ್ರೀಡಾಂಗಣಕ್ಕೆ ಇಳಿಯಲಿದ್ದಾರೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಮೈದಾನದಲ್ಲಿ ಇರುವಾಗ ನಟ ದರ್ಶನ್ ಅವರನ್ನು ಅಭಿಮಾನಿಗಳು ಮಿಸ್ ಮಾಡಿಕೊಳ್ಳುತ್ತಾರೆ. ಸಿಸಿಎಲ್ ಹತ್ತಿರವಾಗುತ್ತಿದ್ದಂತೆ ದರ್ಶನ್ ಈ ಹಿಂದೆ ಆಡಿದ್ದ ಪಂದ್ಯಗಳ ವೀಡಿಯೋಗಳು ವೈರಲ್ ಆಗುತ್ತಿದೆ. ಮತ್ತೆ ನಿಮ್ಮನ್ನು ಮೈದಾನದಲ್ಲಿ ನೋಡಬೇಕು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ.

ದರ್ಶನ್ ಹಾಗೂ ಸುದೀಪ್ ಒಟ್ಟಿಗೆ ಮೈದಾನದಲ್ಲಿ ಕಾಣಿಸಿಕೊಂಡಿದ್ದ ವೀಡಿಯೋಗಳನ್ನು ತೇಲಿ ಬಿಡಲಾಗುತ್ತಿದೆ. ಸದ್ಯ ಹೈದರಾಬಾದ್‌ನಲ್ಲಿ ಸುದೀಪ್ ಅಂಡ್ ಟೀಂ ತಾಲೀಮು ನಡೆಸುತ್ತಿದೆ. ಬೆಂಗಾಲ್ ಟೈಗರ್ಸ್ ತಂಡದ ವಿರುದ್ಧ ದರ್ಶನ್ ಬೌಲಿಂಗ್ ಮಾಡಿದ್ದನ್ನು, ತರುಣ್ ಸುಧೀರ್ ಜೊತೆ ಸೇರಿ ಒಂದು ರನ್ ಔಟ್ ಮಾಡಿದ್ದು, ಔಟ್ ಮಾಡಿ ಸುದೀಪ್ ಜೊತೆ ಕುಣಿದಿದ್ದು, ಕೈ ಕೈ ಹಿಡಿದು ಓಡಾಡಿದ್ದ ಸುಂದರ ಕ್ಷಣಗಳನ್ನು ಅಭಿಮಾನಿಗಳು ನೆನಪಿಸಿಕೊಳ್ಳುತ್ತಿದ್ದಾರೆ.

More from Filmibeat

English summary
CCL Season 11, fans are reminiscing about Darshan and Sudeep's memorable moments on the field;
Read more about: ccl 2025 darshan sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X