ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಸ್ನೇಹಿತೆಗೆ ಕಿಸ್ ಮಾಡಲು ಹೋದ ನಿವೇದಿತಾ ಗೌಡ, ಪಾರ್ಟಿ ಜೋರಾ ಎಂದ ಫ್ಯಾನ್ಸ್..!
ನಿವೇದಿತಾ ಗೌಡ ಒಂದಲ್ಲ ಒಂದು ಸುದ್ದಿ ಮೂಲಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಲೆ ಇರುತ್ತಾರೆ. ನಿವೇದಿತಾ ರೀಲ್ಸ್ ಮಾಡುವ ಮೂಲಕ ಎಲ್ಲರ ಮನಸನ್ನು ಕದ್ದಿದ್ದರು. ಅದಾದ ಬಳಿಕ ಬಿಗ್ ಬಾಸ್ ಗೆ ಕಾಲಿಡುತ್ತಾರೆ. ಕಾರ್ಯಕ್ರಮದಲ್ಲಿ ಉತ್ತಮವಾಗಿ ಭಾಗವಹಿಸಿ ಎಲ್ಲರ ಮನಸ್ಸನ್ನೂ ಗೆದ್ದಿದ್ದಾರೆ. ಅದಾದ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಅದಾದ ಬಳಿಕ ವಿಚ್ಛೇದನ ಪಡೆದುಕೊಂಡು ಸಾಕಷ್ಟು ಸುದ್ದಿಯಲ್ಲಿದ್ದ ನಟಿ ಸಿನಿಮಾಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದರು. ಇದೀಗ ನಿವೇದಿತಾ ಗೌಡ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಹೌದು ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಎಲ್ಲರೂ ತನ್ನನ್ನು ತಾನು ತೊಡಗಿಸಿಕೊಂಡಿರುವ ಸಂದರ್ಭ. ಇದೇ ವೇಳೆ ನಿವೇದಿತಾ ಗೌಡ ಅವರು ಕ್ರಿಸ್ಮಸ್ ಹಬ್ಬದ ಸಂಭ್ರಮದಲ್ಲಿ ಇದ್ದಾರೆ.ಮಾಲ್ ಗೆ ಹೋಗಿ ಹಬ್ಬದ ತಯಾರಿ ಮಾಡುತ್ತಿದ್ದಾರೆ. ಹಾಗೆಯೇ ಕಪ್ಪು ಬಣ್ಣದ ಬಟ್ಟೆ ತೊಟ್ಟು ನಿವೇದಿತಾ ಗೌಡ ಮಿಂಚಿದ್ದಾರೆ. ನಿವೇದಿತಾ ಗೌಡಗೆ ಆಕೆಯ ಗೆಳತಿ ಸಾಥ್ ನೀಡಿದ್ದಾರೆ. ಇಬ್ಬರು ಕೂಡ ಕಪ್ಪು ಬಣ್ಣದ ಡ್ರೆಸ್ ತೊಟ್ಟು ಬಹಳ ಸುಂದರವಾಗಿ ಕಾಣಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಅಪ್ಲೋಡ್ ಆಗಿದ್ದು ಸಾಕಷ್ಟು ಲೈಕ್ ಹಾಗೆಯೇ ಕಾಮೆಂಟ್ ಗಳು ಬರುತ್ತಿದೆ.ಕೆಲವರು ಬ್ಲ್ಯಾಕ್ ಬ್ಯೂಟಿ ಎಂದು ಕಾಮೆಂಟ್ ಮಾಡಿದ್ದಾರೆ ಹಾಗೆಯೇ ಸೂಪರ್, ಬ್ಯೂಟಿಫುಲ್ ಎಂದು ಬರೆದುಕೊಂಡಿದ್ದಾರೆ. ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್ಲೋಡ್ ಮಾಡಿ ಅರ್ಲಿ ಕ್ರಿಸ್ಮಸ್ ಸೆಲೆಬ್ರೇಶನ್ ಎಂದು ಬರೆದುಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಿವೇದಿತಾ ಗೌಡ ಸಖತ್ ಸ್ಟೈಲಿಷ್ ಆಗಿದ್ದು ಸಿನಿಮಾದಲ್ಲಿ ಸಖತ್ ಆಫರ್ಸ್ ಬರುತ್ತಿದೆ.
ಸಖತ್ ಹಾಟ್ ಕಾಣಿಸಿಕೊಳ್ಳುವ ನಟಿ
ಅಭಿಮಾನಿಗಳು ಅದೆಷ್ಟೇ ಬಾರಿ ಕೆಟ್ಟ ಕಾಮೆಂಟ್ ಗಳು ಮಾಡಿದರು ಕೂಡ ನಿವೇದಿತಾ ಗೌಡ ಮಾತ್ರ ಅದ್ಯಾವುದಕ್ಕೂ ಕ್ಯಾರೆ ಎಂದು ಹೇಳುತ್ತಿಲ್ಲ.ನಿವೇದಿತಾ ಗೌಡ ಅವರು ಏನೇ ಮಾಡಿದರೂ ಕೂಡ ಅದು ಸಿಕ್ಕ ಪಟ್ಟೆ ವೈರಲ್ ಆಗುತ್ತದೆ. ಹಲವಾರು ಡ್ಯಾನ್ಸ್ ವಿಡಿಯೋ ಮಾಡಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಾರೆ. ಹಾಗೆಯೇ ಹಾಟ್ ಅವತಾರದಲ್ಲಿ ಕೂಡ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ. ನಿವೇದಿತಾ ಇದೀಗ ಹೆಚ್ಚಾಗಿ ತನ್ನ ಗೆಳತಿಯ ಜೊತೆಗೆ ಎಂಜಾಯ್ ಮಾಡುತ್ತಿರುತ್ತಾರೆ.
ಹಲವು ಸಿನಿಮಾದಲ್ಲಿ ನಟಿಸುತ್ತಿರುವ ನಟಿ
ಚಂದನ್ ಶೆಟ್ಟಿಗೆ ವಿಚ್ಛೇದನ ನೀಡಿದ ಬಳಿಕ ನಿವೇದಿತಾ ಗೌಡ ಸಖತ್ ಹಾಟ್ ಆಗಿ ಹಾಗೆಯೇ ಕ್ಲಾಸಿ ಕಾಣುತ್ತಿದ್ದಾರೆ.ಬಹಳಷ್ಟು ಖುಷಿಯ ಕ್ಷಣಗಳನ್ನು ಎಂಜಾಯ್ ಮಾಡುತ್ತಾರೆ. ಯಾರ ಮಾತನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ನಿವಿ ಮಾತ್ರ ಸಖತ್ ಬೋಲ್ಡ್. ಬಾತ್ ರೂಮ್ ನಲ್ಲಿ ಇರುವ ವೇಳೆ ಅಲ್ಲಿ ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದರು ಈ ಬಗ್ಗೆ ಟ್ರೋಲಿಗರು ಬಹಳಷ್ಟು ಟ್ರೋಲ್ ಮಾಡುವ ಮೂಲಕ ನಿವೇದಿತಾ ಕೆಂಗಣ್ಣಿಗೆ ಗುರಿ ಆಗಿದ್ದರು. ಆದರೆ ನಿವೇದಿತಾ ಗೌಡ ಮಾತ್ರ ಜಾಲಿ ಮೂಡ್ ನಲ್ಲಿ ಇರುವುದು ಮಾತ್ರ ಸತ್ಯ. ಮುದ್ದು ಮುದ್ದು ಮಾತುಗಳನ್ನು ಆಡುತ್ತಾ ಇರುವ ಇವರು ಇದೀಗ ಸಖತ್ ಬೋಲ್ಡ್ ಆಗಿದ್ದಾರೆ.


Click it and Unblock the Notifications











