ಬಿಗ್ ಬಾಸ್‌ ವಿಚಾರದಲ್ಲಿ ಬದಲಾಗದ ನಿರ್ಧಾರ, ಸುದೀಪ್ ಭಾವುಕ ಮೆಸೇಜ್..!

ಕರುನಾಡಿನಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಈ ಪರಿ ಯಶಸ್ವಿಯಾಗಲು ಕಾರಣ ಸುದೀಪ್. ಹನ್ನೊಂದು ವರ್ಷದಿಂದ ನಿರಂತರವಾಗಿ ಈ ಕಾರ್ಯಕ್ರಮವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಬಂದ ಸುದೀಪ್ ಈ ಕಾರ್ಯಕ್ರಮಕ್ಕೆ ದುಡ್ಡನ್ನು ಮೀರಿದ ಶ್ರಮವನ್ನು ಧಾರೆಯೆರೆದಿದ್ದಾರೆ. ಇದು ಆ ವಾಹಿನಿ ಈ ವಾಹಿನಿಯ ಕಾರ್ಯಕ್ರಮ ಎನ್ನದೇ ಯಾವುದೇ ಮೂಲೆಯಲ್ಲಿ ಇದ್ದರೂ ಬಿಗ್ ಬಾಸ್ ಕಾರ್ಯಕ್ರಮಕ್ಕೆ ತೊಡಗಿಸಿಕೊಂಡಿದ್ದಾರೆ. ನಿದ್ರೆಯನ್ನು ಕೂಡ ಮರೆತು ಬಿಗ್ ಬಾಸ್‌ಗೋಸ್ಕರ ಬೆವರು ಸುರಿಸಿದ್ಧಾರೆ.

ಇನ್ನು, ಸುದೀಪ್ ಅವರಿಗೆ ಬಿಗ್ ಬಾಸ್ ಸುದೀಪ್ ಅವರ ಪಾಲಿಗೆ ಸೈಡ್ ಪ್ರಾಜೆಕ್ಟ್ ಆಗಿರಲಿಲ್ಲ. ಬದುಕಿನ ಬಹುಮುಖ್ಯವಾದ ಭಾಗವಾಗಿತ್ತು. ಖುದ್ದು ಸುದೀಪ್ ಈ ಮಾತನ್ನು ಈ ಹಿಂದೆ ಹೇಳಿದ್ದರು ಕೂಡ. ಆದರೆ ಅದೇನಾಯ್ತೋ ಕಾರ್ಯಕ್ರಮದ ನಡುವೆಯೇ ಇದೇ ನನ್ನ ಕೊನೆಯ ಬಿಗ್ ಬಾಸ್ ಎಂದು ಹೇಳಿ ಎಲ್ಲರನ್ನು ಅಚ್ಚರಿಗೆ ದೂಡಿದ್ದ ಸುದೀಪ್ ಭಾವುಕರಾಗಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ ಕುರಿತು ಸಾಲುಗಳನ್ನು ಬರೆದುಕೊಂಡಿದ್ದಾರೆ.

Ahead of the Bigg Boss 11 finale Kichcha Sudeep shares a tweet reconfirming his exit from the show

ಹೌದು, ಇನ್ನೇನು.. ಒಂದು ವಾರ, ಕನ್ನಡದಲ್ಲಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ. ಮುಂದಿನ ಭಾನುವಾರ ಗ್ರ್ಯಾಂಡ್ ಫಿನಾಲೆ ಪ್ರಸಾರವಾಗಲಿದೆ. ಈ ಹಿನ್ನೆಲೆ ಭಾವುಕರಾಗಿರುವ ಸುದೀಪ್ ಕಳೆದ ಹನ್ನೊಂದು ಸೀಸನ್‌ಗಳನ್ನು ನಾನು ತುಂಬಾ ಇಷ್ಟದಿಂದ ಮಾಡಿದ್ದೇನೆ, ನೀವೆಲ್ಲ ತೋರಿಸಿದ ಪ್ರೀತಿಗೆ ಧನ್ಯವಾದಗಳು ಎಂದಿದ್ದಾರೆ. ನಿರೂಪಕನಾಗಿ ಮುಂಬರುವ ಫಿನಾಲೆ ನನ್ನ ಕೊನೆಯ ಸೀಸನ್. ನಿಮ್ಮೆಲ್ಲರನ್ನು ನನ್ನ ಕೈಲಾದಷ್ಟು ಅತ್ಯುತ್ತಮವಾಗಿ ಮನರಂಜಿಸುವ ಪ್ರಯತ್ನ ಮಾಡುತ್ತೇನೆ, ಬಿಗ್ ಬಾಸ್‌ನ ಈ ಪ್ರಯಾಣ ನನ್ನ ಜೀವನದ ಮರೆಯಲಾಗದ ನೆನಪು, ಇದನ್ನು ಉತ್ತಮವಾಗಿ ನಿರ್ವಹಿಸಿದ ಖುಷಿ ನನಗೆ ಇದೆ. ಈ ಅವಕಾಶ ನೀಡಿದ ಕಲರ್ಸ್‌ ಕನ್ನಡ ವಾಹಿನಿಗೆ ಧನ್ಯವಾದಗಳು ಎಂದು ಸುದೀಪ್ ಬರೆದುಕೊಂಡಿದ್ದಾರೆ. ಈ ಮೂಲಕ ಬಿಗ್ ಬಾಸ್‌ ಬಿಡುವು ತಮ್ಮ ಹಿಂದಿನ ನಿರ್ಧಾರಕ್ಕೆ ತಾವು ಬದ್ದರಾಗಿರುವುದಾಗಿ ಮತ್ತೊಮ್ಮೆ ಸುದೀಪ್ ಹೇಳಿದ್ದಾರೆ. ಬಿಗ್ ಬಾಸ್‌ಗೆ ಗುಡ್ ಬೈ ಹೇಳುತ್ತಿರುವುದನ್ನು ಖಚಿತ ಪಡಿಸಿದ್ದಾರೆ.

ಸಹಜವಾಗಿ ಸುದೀಪ್ ಅವರ ಈ ಬರಹ ಅನೇಕರ ಬೇಸರಕ್ಕೆ ಕಾರಣವಾಗಿದೆ. ಬೆಳ್ಳಂ ಬೆಳ್ಳಗ್ಗೆ ಅಭಿಮಾನಿಗಳಿಗೆ ಶಾಕ್ ನೀಡಿದೆ. ಯಾಕೆಂದರೆ ಈ ಹಿಂದೆ ಇದೇ ನನ್ನ ಕೊನೆಯ ಬಿಗ್ ಬಾಸ್ ಎಂದು ಸುದೀಪ್ ಹೇಳಿದಾಗ ಮುಂದೆ ಸುದೀಪ್ ಮನಸು ಬದಲಿಸಬಹುದು ಎಂದು ಅನೇಕರು ಅಂದುಕೊಂಡಿದ್ದರು. ಪ್ರಶಾಂತ್ ಸಂಬರಗಿ ಅವರಾದಿ ಸೇರಿ ಅನೇಕರು ಬಿಗ್ ಬಾಸ್ ಗೆ ಗುಡ್ ಬೈ ಹೇಳಬೇಡಿ ಎಂಬ ಮನವಿಯನ್ನು ಕೂಡ ಸುದೀಪ್ ಅವರಲ್ಲಿ ಮಾಡಿಕೊಂಡಿದ್ದರು.

ಇನ್ನು, ರೂಪೇಶ್ ರಾಜಣ್ಣಬಿಗ್ ಬಾಸ್ ಆಯೋಜಕರು ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳುವುದಾಗಿ ಹೇಳಿದ್ಧಾರೆ ಎಂದು ಹೇಳಿದ್ದರು. ಈ ಹಿನ್ನೆಲೆ ಬಿಗ್ ಬಾಸ್‌ನಿಂದ ದೂರವಾಗುವುದಾಗಿ ಹೇಳಿದ್ದ ಸುದೀಪ್, ತಮ್ಮ ಮನಸು ಬದಲಿಸಬಹುದು, ಬಿಗ್ ಬಾಸ್‌ಗೆ ಮರಳಬಹುದು ಎಂಬ ಆಸೆ ಅನೇಕರಲ್ಲಿತ್ತು. ಆದರೆ ಈಗ ಸುದೀಪ್ ತಮ್ಮ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎನ್ನುವುದನ್ನು ಇನ್ನೊಮ್ಮೆ ಖಚಿತ ಪಡಿಸಿದ್ದಾರೆ. ಬಿಗ್ ಬಾಸ್ ಫಿನಾಲೆ ಹೊಸ್ತಿಲಿನಲ್ಲಿ ಕಾರ್ಯಕ್ರಮಕ್ಕೆ ಗುಡ್ ಬೈ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಮರಳಿ ಬಿಗ್ ಬಾಸ್ ಮನೆಗೆ ಬರಬಾರದು ಎಂದು ತೀರ್ಮಾನವನ್ನು ಸುದೀಪ್ ಮಾಡಿದ್ದಾರೆ. ಸುದೀಪ್ ಅವರ ಜಾಗವನ್ನು ಬಿಗ್ ಬಾಸ್ ಮನೆಯಲ್ಲಿ ಮುಂದಿನ ಸೀಸನ್‌ನಲ್ಲಿ ಯಾರು ತುಂಬ್ತಾರೆ ಅನ್ನುವುದನ್ನು ಈಗ ಕಾದು ನೋಡಬೇಕಿದೆ.

More from Filmibeat

Read more about: kichcha sudeep biggboss bigg boss
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X