ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆ ಮುನ್ನ ವಕೀಲ್ ಸಾಬ್ ಜಗದೀಶ್ ಅರೆಸ್ಟ್..!

ಪ್ರಕರಣ ಯಾವುದೇ ಇರಲಿ, ಸಾಮಾಜಿಕ ಜಾಲತಾಣದ ಮೂಲಕ ಆ ಪ್ರಕರಣದ ಕುರಿತು ವಕಾಲತ್ತು ಮಾಡುತ್ತಿದ್ದವರು ಕೆ.ಎನ್. ಜಗದೀಶ್. ವಕೀಲ್ ಸಾಬ್ ಎಂದೇ ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿಯನ್ನೂ ಗಳಿಸಿರುವ ಜಗದೀಶ್ ನ್ಯಾಯಾಲಯದ ಆವರಣದಕ್ಕಿಂತ ಬೀದಿಯಲ್ಲಿ ಕಾಣಿಸಿದ್ದೇ ಹೆಚ್ಚು.

ಇಂಥಾ ವಕೀಲ್ ಸಾಬ್ ಅವರನ್ನು ಪೊಲೀಸರು ಈಗ ಬಂಧಿಸಿದ್ದಾರೆ. ಹೌದು, ನಿನ್ನೆ ಕೊಡಿಗೇಹಳ್ಳಿಯ ಸ್ಥಳಿಯರು ಮತ್ತು ಲಾಯರ್ ಜಗದೀಶ್ ನಡುವೆ ಗಲಾಟೆ ನಡೆದಿತ್ತು. ಜಗದೀಶ್ ಅವರ ಮೇಲೆ ಮಾರಣಾಂತಿಕ ಹಲ್ಲೆ ಕೂಡ ನಡೆದಿತ್ತು. ಈ ಗಲಾಟೆಯಲ್ಲಿ ಲಾಯರ್ ಜಗದೀಶ್ ಅವರ ಗನ್​ಮ್ಯಾನ್​ ಕಾನೂನು ಬಾಹಿರವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದರು. ಈ ಹಿನ್ನೆಲೆ ತೇಜಸ್ ಎಂಬುವರು ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತೇಜಸ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಲಾಯರ್ ಜಗದೀಶ್ ಅವರನ್ನು ಬಂಧಿಸಿದ್ದಾರೆ

Ahead of the Bigg Boss Grand Finale ex-contestant Jagadish was arrested in Bengaluru

ಹೌದು, ಅಸಲಿಗೆ ನಿನ್ನೆ ಕೊಡಿಗೇಹಳ್ಳಿಯಲ್ಲಯ ಮೋರ್ ಜಂಕ್ಷನ್ ಬಳಿ ಅಣ್ಣಮ್ಮ ದೇವಿಯನ್ನು ಕೂರಿಸುವುದನ್ನು ಜಗದೀಶ್ ಪ್ರಶ್ನೆ ಮಾಡಿದ್ದರು. ಇದರಿಂದ ಕೆರಳಿದ್ದ ಕೆಲವರು ಜಗದೀಶ್ ಅವರ ಮೇಲೆ ಹಲ್ಲೆ ನಡೆಸಿದ್ದರು. ಆ ನಂತರ ಸುಮ್ಮನಾಗದ ಜಗದೀಶ್ ವಿಡಿಯೋ ಮಾಡುವ ಮೂಲಕ ದರ್ಶನ್ ಅಭಿಮಾನಿಗಳಿಗೆ ನೇರಾನೇರವಾಗಿ ಸವಾಲನ್ನು ಹಾಕಿದ್ದರು. ದರ್ಶನ್ ಅಭಿಮಾನಿಗಳು ಕೆರಳುವಂತೆ ಮಾತನಾಡಿದ್ದರು.

ಒಬ್ಬನನ್ನು ಹೊಡೆಯಲು ನಲವತ್ತು ಜನನ ಕಳುಹಿಸಿದೀಯಾ ಅಲ್ಲ ದರ್ಶನ್ ಎಂದಿದ್ದ ಜಗದೀಶ್ ನಿನ್ನ ಹುಡುಗರು ಟ್ರೋಲ್ ಪೇಜ್‌ನಲ್ಲಿ ಬರೆದುಕೊಳ್ಳುತ್ತಿದ್ದಾರಂತೆ, ನೀನೇ ಅಂತ ಅಟ್ಯಾಕ್ ಮಾಡಿಸಿದ್ದು. ಅಪ್ಪಿ ತಪ್ಪಿ ಗನ್‌ ಮ್ಯಾನ್ ಇರಲಿಲ್ಲ. ಒಬ್ಬನ ಮುಂದೆ 40 ಜನ ಚಿನ್ನಾ ಅಟ್ಯಾಕ್ ಮಾಡಿದ್ದು. ಎಲ್ಲಿ ವರ್ಕ್‌ಔಟ್ ಆಗುತ್ತೆ. ನಿನ್ನೆ ಗನ್ ಮ್ಯಾನ್ ಇದ್ದಿದ್ದರೆ, ಗುಂಡಿನ ಸದ್ದು ಆಗುತ್ತಿತ್ತು. ನಮ್ಮ ಆಸ್ತಿ, ನಮ್ಮ ಪ್ರಾಣ ಕುತ್ತು ಬಂದರೆ, ನಾವೇನು ಸುಮ್ಮನೆ ಇರಬೇಕಾ ಎಂದು ಜಗದೀಶ್ ಕಿಡಿ ಕಾರಿದ್ದರು. ನನ್ನ ಬಳಿ ಬರುವಾಗ ವಿಮೆ ಮಾಡಿಸಿಕೊಂಡು ಬನ್ನಿ ಎಂದು ಎಚ್ಚರಿಕೆ ನೀಡಿದ್ದರು.

ಜಗದೀಶ್ ಹೀಗೆ ಹೇಳಿಕೆಗಳನ್ನು ನೀಡಿದ ನಂತರ ಜನವರಿ 24ರ ರಾತ್ರಿ ಜಗದೀಶ್ ಅವರ ಕಾರಿನ ಮೇಲೆ ಅಟ್ಯಾಕ್ ಆಗಿತ್ತು. ಕೆಲವರು ಕೋಲು ದೊಡ್ಡ ಹಿಡಿದುಕೊಂಡು ಬಂದು ಜಗದೀಶ್ ಅವರ ಕಾರನ್ನು ಧ್ವಂಸ ಮಾಡಿದರು. ರಕ್ತ ಬರುವಂತೆ ಹಲ್ಲೆಯನ್ನು ನಡೆಸಿದರು. ಇದೇ ಸಮಯದಲ್ಲಿ ಉತ್ತರ ಪ್ರದೇಶದಲ್ಲಿ ಮಾತ್ರ ಬಳಸಲು ಲೈಸೆನ್ಸ್ ಪಡೆಯಲಾಗಿದ್ದ ಪಿಸ್ತೂಲಿನಿಂದ ಜಗದೀಶ್ ಅವರ ಗನ್ ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದರು.

ಈ ಹಿನ್ನೆಲೆ ಫೈರಿಂಗ್ ಮಾಡಿದ ಹಿನ್ನಲೆಯಲ್ಲಿ ಪೊಲೀಸರು ಗನ್ ಮ್ಯಾನ್ ಮತ್ತು ಲಾಯರ್ ಜಗದೀಶ್ ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಮತ್ತೊಂದೆಡೆ ದೂರುದಾರನ ಮೇಲೂ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.ಇನ್ನು ಲಾಯರ್ ಜಗದೀಶ್ ಅವರ ಮಗನನ್ನು ಕೂಡ ಪೊಲೀಸರು ಬಂಧಿಸಿದ್ದಾರೆ ಎಂದು ನ್ಯೂಸ್ ಫಸ್ಟ್ ವರದಿ ಮಾಡಿದ್ದು ಮೂವರನ್ನು ಇಂದು ಪೊಲೀಸರು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ ಎಂದು ವರದಿಯಾಗಿದೆ.

More from Filmibeat

Read more about: jail arrest filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X