"ದರ್ಶನ್ ಮಗ ತಂದೆಯ ಮುಖ ನೋಡಬಾರದು ಅಂತ ಹೇಳುವ ಯೋಗ್ಯತೆ ಇದೆಯಾ?"; ನಟಿಯರಿಗೆ ಅಹೋರಾತ್ರ ತರಾಟೆ!
ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್ ಆರೋಪಿಯಾಗಿ ಜೈಲು ಸೇರಿದ್ದಾರೆ. ಈ ಸಂಬಂಧ ಕನ್ನಡದ ಚಿತ್ರರಂಗದ ನಿರ್ಮಾಪಕರು, ನಟ-ನಟಿಯರು ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ದರ್ಶನ್ ಹತ್ಯೆ ಮಾಡಿದ್ದಾರೆ ಅನ್ನೋದಕ್ಕೆ ಯಾವುದೇ ಸಾಕ್ಷಿಯಿಲ್ಲ ಅಂತ ಕೆಲವರು ವಾದ ಮಾಡುತ್ತಿದ್ದಾರೆ. ಇನ್ನು ಕೆಲವರು ಅವರು ಕೊಲೆ ಮಾಡಿದರೂ ಅವರನ್ನೇ ಬೆಂಬಲಿಸುತ್ತೇನೆ ಎನ್ನುತ್ತಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ನೇರವಾಗಿ ಭಾಗಿಯಾಗಿದ್ದಾರಾ? ಇಲ್ಲ ಪರೋಕ್ಷವಾಗಿ ಭಾಗಿಯಾಗಿದ್ರಾ? ಇಂತಹ ಪ್ರಶ್ನೆಗಳಿಗೆ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ ಬಳಿಕ ಗೊತ್ತಾಗಲಿದೆ. ಆದರೆ, ಪೊಲೀಸರು ಯಾರನ್ನಾದರೂ ಸುಖಾಸುಮ್ಮನೆ, ಅದರಲ್ಲೂ ದರ್ಶನ್ ಅಂತ ಸೆಲೆಬ್ರೆಟಿಯನ್ನು ಬಂಧಿಸುವುದಕ್ಕೆ ಸಾಧ್ಯವಿಲ್ಲ ಅನ್ನೋದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಹೀಗಿದ್ದರೂ, ಕನ್ನಡದ ಕೆಲವು ನಟಿಯರು ದರ್ಶನ್ ಬೆಂಬಲಕ್ಕೆ ನಿಂತಿದ್ದಾರೆ. ರಚಿತಾ ರಾಮ್, ಹಿರಿಯ ನಟಿ ಭಾವನಾ ರಾಮಣ್ಣ, ಸಂಜನಾ ಗಲ್ರಾನಿ ಸೇರಿದಂತೆ ಹಲವು ನಟಿಯರು ಬೆಂಬಲಕ್ಕೆ ಬಂದಿದ್ದಾರೆ. ಇದನ್ನು ಕೇಳಿದ ಅಹೋರಾತ್ರಿ ಕೆಂಡಾಮಂಡಲ ಆಗಿದ್ದಾರೆ. ನಟಿಯರೊಬ್ಬರು ರೇಣುಕಾಸ್ವಾಮಿಯ ಪತ್ನಿಯ ಹೊಟ್ಟೆಯಲ್ಲಿರುವ ಮಗುಗೆ ತಂದೆಯ ಮುಖ ನೋಡದೇ ಇರುವುದೇ ಒಳ್ಳೆಯದು ಅಂತಾರೆ. ಅದೇ ದರ್ಶನ್ ಮಗ ತಂದೆಯ ಮುಖ ನೋಡಬಾರದು ಅಂತ ಹೇಳುವ ಯೋಗ್ಯತೆ ಇದೆಯಾ? ಇಲ್ಲ. ಯಾಕಂದ್ರೆ ನಾನೂ ಆ ಮಾತನ್ನು ಹೇಳುವುದಿಲ್ಲ ಎಂದು ಹೇಳಿದ್ದಾರೆ. ಆ ವಿಡಿಯೋ ವೈರಲ್ ಆಗುತ್ತಿದ್ದು, ಅದರ ಝಲಕ್ ಇಲ್ಲಿದೆ.
"ಎಂತಹ ಕೆಟ್ಟ ಹೇಳಿಕೆ"
"ಕೆಲವು ಹೀರೋಯಿನ್‌ಗಳು ಹೇಳುತ್ತಾರೆ. ರೇಣುಕಾಸ್ವಾಮಿಯ ಪತ್ನಿಯ ಹೊಟ್ಟೆಯಲ್ಲಿರುವ ಮಗುಗೆ ತಂದೆಯ ಮುಖ ನೋಡದೇ ಇರುವುದೇ ಒಳ್ಳೆಯದು. ಎಂತಹ ಕೆಟ್ಟ ಹೇಳಿಕೆ. ನಿಮ್ಮಂಥಹವರು ಹೀಗೆ ನಾಲಿಗೆ ಎಡವಿ ಮಾತಾಡಿದರೆ, ನಿಮಗೆ ಅದೇ ಗತಿ ಬರುತ್ತೆ. ತುಂಬಾ ಯೋಚನೆ ಮಾಡಿ ಮಾತಾಡಿ. ಅವನಿಗೆ ಮರಣದಂಡನೆ ಕೊಟ್ಟಿದ್ದಾನೆ. ಇವನ್ಯಾರು? ಇವನ್ಯಾವ ಸಾಚಾ ಅಂತ" ಎಂದು ದರ್ಶನ್ ಬೆಂಬಲಿಸಿದ ನಟಿಯರ ವಿರುದ್ಧ ಅಹೋರಾತ್ರ ಕಿಡಿಕಾರಿದ್ದಾರೆ.

"ತಂದೆ ತಂದೆನೇ.. ಮಗ ಮಗಾನೇ"
"ಇವತ್ತು ಅವಳು, ನಾಳೆ ಇವಳು, ಆ ಅಜ್ಜಿ ಬಜ್ಜಿ ಅಂತ ಮಾತಾಡಿದ ಇವನು ಹೆಣ್ಣು ನಿಂದಕ. ಇವನ ಮಕ್ಕಳು ಇವನ ಮುಖ ನೋಡಬಾರದು ಅಂತ ಹೇಳುವ ಯೋಗ್ಯತೆ ಇದೆಯಾ? ಇಲ್ಲ. ನಾನೂ ಆ ಮಾತನ್ನು ಹೇಳುವುದಿಲ್ಲ. ತಂದೆ ತಂದೆನೇ, ಗಂಡ ಗಂಡನೇ, ಮಗ ಮಗಾನೇ. ಅವನ ತಾಯಿಯ ರಕ್ಷಣೆಗೂ ನಿಂತುಕೊಳ್ಳುತ್ತೇವೆ. ಅವನ ಪತ್ನಿಯ ರಕ್ಷಣೆಗೂ ನಿಂತುಕೊಳ್ಳುತ್ತೇವೆ. ಅವನ ಮಕ್ಕಳ ರಕ್ಷಣೆಗೂ ನಿಂತುಕೊಳ್ಳುತ್ತೇವೆ. ಅವನ ಸ್ನೇಹಿತೆಯ ರಕ್ಷಣೆಗೂ ನಿಂತುಕೊಳ್ಳುತ್ತೇವೆ. ಅಂದರೆ, ಅವರೆಲ್ಲ ಹೆಣ್ಣುಗಳು." ಎಂದು ಅಹೋರಾತ್ರ ಹೇಳಿದ್ದಾರೆ.
"ರೇಣುಕಾಸ್ವಾಮಿಯ ಅಪರಾಧಕ್ಕೆ ಸಂವಿಧಾನವಿತ್ತು"
"ಇವನು ಸಂವಿಧಾನಕ್ಕೆ ಮಾಡಿದ ಅವಮಾನ. ಶೆಡ್ಡಿಗೆ ಕಡೆದು ಅವನ ಹತ್ಯೆ ಮಾಡಿದ್ದು ಅಪರಾಧ. ಇಂತಹವನ ಸಹಾಯಕ್ಕೆ ನಿಂತುಕೊಳ್ಳುತ್ತೀರಲ್ಲ. ನೀವೆಲ್ಲ ಕೊಡುತ್ತಿರುವ ಹೇಳಿಕೆಗಳು ಕಲಾವಿದರಾಗಿ ಮಾಡುತ್ತಿರುವ ಅವಮಾನ. ರೇಣುಕಾಸ್ವಾಮಿ ಮಾಡಿದ್ದಕ್ಕೆ ಸಂವಿಧಾನವಿತ್ತು. ಆದರೆ ಕೊಲೆ ಮಾಡಿದ್ದು ತಪ್ಪು. ಇವತ್ತು ನೀವು ಆ ಸಂವಿಧಾನ ಏನೂ ಮಾಡದೇ ಇರುವ ಹಾಗೆ ಕೊಲೆ ಮಾಡಿದ್ದೀರಿ. ಸಂವಿಧಾನದ ಬಗ್ಗೆ ಮಾತಾಡುವ ಅರ್ಹತೆ ಇಲ್ಲ. ಹಿಟ್ಲರ್ ವಾರ್ ರೂಮ್‌ನಲ್ಲೂ ಹೀಗೆ ಕೊಂದಿಲ್ಲ. ಆ ರೀತಿ ಇಂತಹ 21ನೇ ಶತಮಾನದಲ್ಲಿ ಕೊಂದಿದ್ದೀರ" ಎಂದು ಆಹೋರಾತ್ರ ಕಿಡಿಕಾರಿದ್ದಾರೆ.
ಜೀವಾವಧಿ ಶಿಕ್ಷೆ ಕೊಡಿ ಅಂತ ಕೇಳಿಕೊಳ್ಳಿ
"ನೀವು ಹೇಳಿದ ಹಾಗೆ ಇವನನ್ನು ಬಿಟ್ಟರೆ, ಜೈಲಿನಲ್ಲಿ ಇರುವವರು ನಾವ್ಯಾಕೆ ಇರಬೇಕು ಅಂತಾರೆ. ಈ ರೀತಿಯ ಹತ್ಯೆ ಕೇಸ್‌ನಲ್ಲಿ ಸುಮ್ಮನೆ ಬಿಡುವುದಕ್ಕಲ್ಲ. ನೀವು ಅವನಿಗೆ ಮರಣದಂಡನೆ ಬೇಡ. ಮಾನವೀಯತೆಯಿಂದ ಜೀವಾವಧಿ ಶಿಕ್ಷೆ ಕೊಡಿ ಅಂತ ಕೇಳಿಕೊಳ್ಳಬಹುದು." ಎಂದು ಅಹೋರಾತ್ರ ಹೇಳಿದ್ದಾರೆ.


Click it and Unblock the Notifications











