Don't Miss!
- Finance
PM kisan: ಬಜೆಟ್ನಲ್ಲಿ ಪಿಎಂ ಕಿಸಾನ್ ಯೋಜನೆ ಮೊತ್ತ ಏರಿಸಲಾಗುತ್ತಾ?
- News
ರಾಜ್ಯ ಸರ್ಕಾರ ಹಠಕ್ಕೆ ಅಂಗನವಾಡಿ ಕಾರ್ಯಕರ್ತರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ: ಸಿದ್ದರಾಮಯ್ಯ ಆಕ್ರೋಶ
- Sports
Ind vs NZ t20 series: ಭಾರತದ ಈ ಪ್ರತಿಭಾವಂತನಿಗೆ ಹೆಚ್ಚಿನ ಅವಕಾಶ ಸಿಗಲಿ ಎಂದ ಸಬಾ ಕರೀಂ
- Automobiles
ಜನಪ್ರಿಯ 'ಮಹೀಂದ್ರಾ XUV700' ಬೆಲೆ ಭಾರೀ ಏರಿಕೆ
- Technology
ಭಾರತದಲ್ಲಿ ಮೊಬೈಲ್ ಡೌನ್ಲೋಡ್ ವೇಗದಲ್ಲಿ ಭಾರಿ ಬದಲಾವಣೆ!..ಓಕ್ಲಾ ವರದಿ!
- Lifestyle
ತೂಕ ಇಳಿಕೆಗೆ ಟ್ರೈ ಮಾಡುತ್ತಿದ್ದೀರಾ? ಈ ಪಾನೀಯಗಳನ್ನು ನಿಮ್ಮ ತೂಕ ಇಳಿಕೆಯ ಡಯಟ್ನಲ್ಲಿ ಸೇರಿಸಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
"ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆಗೆ ಡಿ ಬಾಸ್ ಅಭಿಮಾನಿಗಳೇ ಹೊಣೆ" ಅಹೋರಾತ್ರ!
ಹೆಚ್ಚು ಕಡಿಮೆ ಕಳೆದೊಂದು ವಾರದಿಂದ ಅಹೋರಾತ್ರ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ವಾಗ್ಯುದ್ಧ ನಡೆಯುತ್ತಲೇ ಇದೆ. ದರ್ಶನ್ ಅದೃಷ್ಟ ದೇವತೆ ಬಗ್ಗೆ ಮಾತಾಡುತ್ತಿದ್ದಂತೆ ಅಹೋರಾತ್ರ ದರ್ಶನ್ ವಿರುದ್ಧ ಕಿಡಿಕಾರಿದ್ದರು.
ಅಹೋರಾತ್ರ ವಿಡಿಯೋ ಮಾಡಿ ದರ್ಶನ್‌ಗೆ ಹಿಗ್ಗಾಮುಗ್ಗಾ ಬೈಯ್ಯುತ್ತಿದ್ದಂತೆ ಅಭಿಮಾನಿಗಳು ಅಖಾಡಕ್ಕೆ ಇಳಿದಿದ್ದರು. ಇಲ್ಲಿಂದ ಅಹೋರಾತ್ರ ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಮಾತಿನ ಕಿತ್ತಾಟ ನಡೆಯುತ್ತಲೇ ಇದೆ.
ಅಪ್ಪು
ಫ್ಯಾನ್ಸ್..
ದರ್ಶನ್
ಫ್ಯಾನ್ಸ್
ಮಧ್ಯೆ
ಚಪ್ಪಲಿ
ಎಸೆದವರು
ಯಾರು?
ಬ್ಯಾಕ್ ಟು ಬ್ಯಾಕ್ ವಿಡಿಯೋ ಮಾಡಿ ದರ್ಶನ್ ವಿರುದ್ಧ ತಿರುಗಿಬೀಳುತ್ತಲೇ ಇದ್ದರು. ಹೊಸಪೇಟೆಯಲ್ಲಿ ದರ್ಶನ್ ಮೇಲೆ ಕಿಡಿಗೇಡಿಗಳು ಚಪ್ಪಲಿ ಎಸೆದ ವಿಡಿಯೋ ಹರಿದಾಡುತ್ತಿದ್ದಂತೆ ಮತ್ತೊಂದು ವಿಡಿಯೋ ಮಾಡಿದ್ದಾರೆ. ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆ ಅಭಿಮಾನಿಗಳೇ ನೇರ ಹೊಣೆ ಎಂದು ಹೇಳಿದ್ದಾರೆ. ಆ ವಿಡಿಯೋದ ಸಾರಾಂಶ ಇಲ್ಲಿದೆ.

ಈ ಘಟನೆಗೆ ದರ್ಶನ್ ಫ್ಯಾನ್ಸ್ ಹೊಣೆ
"ಹೊಸಪೇಟೆಯಲ್ಲಿ ನಡೆದ ದರ್ಶನ್ ಮೇಲೆ ಚಪ್ಪಲಿ ಎಸೆದ ಘಟನೆಯಲ್ಲಿ ಅದರ ಸಂಪೂರ್ಣ ಹೊಣೆ ದರ್ಶನ್ ಅಭಿಮಾನಿಗಳಿಗೆ ಸಲ್ಲುತ್ತೆ. ಯಾಕಂದ್ರೆ, ನನ್ನ ಬಳಿ ಸಂಪೂರ್ಣ ದಾಖಲೆಗಳಿವೆ. ಯಾವ ರೀತಿ ಹೆಣ್ಣು ನಿಂದನೆ ಮಾಡುತ್ತಿದ್ದಾರೆ ಅಂದ್ರೆ, ವಿಕೃತ. ಹೆಣ್ಣು ಎಲ್ಲಾ ರೀತಿಯಲ್ಲಿ ಭದ್ರವಾಗಿ ಸಿಕ್ಕಿಬಿಟ್ಟರೆ, ವಿಕೃತ ಅತ್ಯಾಚಾರ ಮಾಡುತ್ತಾರೆ. ಸೀದಾ ಮನೆಯ ಹೆಣ್ಣು ಮಕ್ಕಳಿಗೆ ಫೋನ್ ಮಾಡಿ ಬೈಯ್ಯುತ್ತಾರೆ. " ಎಂದು ಅಹೋರಾತ್ರ ಹೇಳಿದ್ದಾರೆ.

'ಇಷ್ಟಾದ್ರೂ ನನಗೆ ಚಪ್ಪಲಿಯಲ್ಲಿ ಹೊಡೀತಿನಿ ಅಂತಾರೆ'
"ಇವಾಗಲೂ ನನಗೆ ಫೋನ್ ಮಾಡಿ ಚಪ್ಪಲಿಯಲ್ಲಿ ಹೊಡೀತಿನಿ ಅಂತಿದ್ದಾರೆ. ಈ ಘಟನೆಯಿಂದಾದ್ರೂ ಬುದ್ಧಿ ಬರಲಿಲ್ಲ ಅವರಿಗೆ. ಅಂದ್ರೆ, ಇವರ ಅಟ್ಟಹಾಸ ಎಲ್ಲಿ ಮೆರೆದಿದೆ ಅಂದ್ರೆ, ಕಡೆಗೆ ತಾನು ಅಭಿಮಾನಿಸುವವನಿಗೆ ಈ ಘಟನೆ ಆಗೋವವರೆಗೂ ಬಿಟ್ಟಿಲ್ಲ. ಮಾತು ಎತ್ತಿದರೆ ಬೆಂಗಳೂರಿನಲ್ಲಿ ಬಂದು ನಿಂತ್ಕೊ. ರೋಡ್‌ನಲ್ಲಿ ಬಂದು ನಿಂತ್ಕೊ. ಬೀದಿಲಿ ಬಂದು ನಿಂತ್ಕೊ. ಧೈರ್ಯ ಇದ್ರೆ, ನಮ್ಮ ಮನೆ ಮುಂದೆ ಬಾ. ನಮ್ಮ ಮಂಡ್ಯಗೆ ಬಾ. ಹಾಸನಕ್ಕೆ ಬಾ. ಅಂತ ಕರೆಯೋ ಇವರು. ಕೊನೆಗೆ ಅವರೇ ಆರಾಧಿಸುವ ವ್ಯಕ್ತಿ ಮರ್ಯಾದೆಯಿಂದ ಓಡಾಡದ ಹಾಗೆ ಮಾಡಿದ್ದಾರೆ." ಎಂದು ದರ್ಶನ್ ಹೇಳಿದ್ದಾರೆ.

'ಫ್ಯಾನ್ಸ್ ಅನ್ನು ಕಂಟ್ರೋಲ್‌ನಲ್ಲಿ ಇಟ್ಕೊಂಡಿದ್ದಾರೆ'
"ಪ್ರತಿಯೊಬ್ಬ ಅಭಿಮಾನಿಯನ್ನೂ ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿದ್ದೀರ. ಇದು ಸುಳ್ಳಲ್ಲ. ಪ್ರತಿಯೊಬ್ಬ ಅಭಿಮಾನಿಯೂ ಇವರ ವಾಟ್ಸಾಪ್ ಸರ್ಕಲ್ ನೆಟ್‌ವರ್ಕ್‌ನಲ್ಲಿ ಇದ್ದಾರೆ. ಇವನು ಒಂದು ಆರ್ಡರ್ ಪಾಸ್ ಮಾಡಿದ್ರೆ ಸಾಕು. ಅದು ಬಿಟ್ಟು ಅಹೋರಾತ್ರನನ್ನು ಬಾಯಿಗೆ ಬಂದಂಗೆ ಬೈದು ಬಿಡೋಣ. ಅದೇನಾಗುತ್ತೆ ಬೈತಿನಿ ಅಂತ ಹೋಗಿ, ಏನಾಯ್ತು? ನಮ್ಮನ್ನು ಮೀರಿರುವ ದೈವ ಶಕ್ತಿ ನಮ್ಮ ಮೇಲಿರುತ್ತೆ ಅನ್ನೋದನ್ನು ತಿಳಿದುಕೊಳ್ಳಬೇಕು."

'ಗೌರವ ಇಲ್ಲದೆ ಅದೃಷ್ಟ ದೇವತೆ ಬಗ್ಗೆ ಮಾತು'
"ಭಯ.. ಚಾಮುಂಡಿ ಬೆಟ್ಟಕ್ಕೆ ಅಷ್ಟೆಲ್ಲಾ ಹೋಗುತ್ತೀಯ. ಚಾಮುಂಡಿ ದೇವಿಯ ಬಗ್ಗೆ ಗೌರವ ಇಲ್ಲದೆ ನೀನು ಅದೃಷ್ಟ ದೇವತೆ ಬಗ್ಗೆ ಮಾತಾಡುತ್ತೀಯಲ್ಲ. ಅದು ಅಜ್ಞಾನದಿಂದ ಅಂತ ಇಟ್ಟುಕೊಳ್ಳೋಣ. ಅಜ್ಞಾನದಿಂದ ಏನೋ ಅಂದ್ಬಿಟ್ಟೆ ಅದನ್ನು ಬಿಟ್ಟುಬಿಡಿ ಅನ್ನೋದಿಲ್ಲ. ಅದನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ."

'ಇವೆಲ್ಲ ಏನಕ್ಕೆ ಬೇಕಾಗಿತ್ತು?'
" ಏನಿಕ್ಕೆ ಬೇಕಾಗಿತ್ತು. ಧೈರ್ಯ ಇದ್ರೆ ಹೊಸಪೇಟೆಗೆ ಬಂದು ನಾವು ಆಡಿಯೋ ಲಾಂಚ್ ಮಾಡ್ತೀವಿ. ನಿಮಗೆ ಯೋಗ್ಯತೆ ಇದ್ದರೆ ತಡೆದು ನೋಡಿ. ಇಂತಹ ದುರಂಹಕಾರದ ಮಾತು ಎಲ್ಲಿವರೆಗೂ ತೆಗೆದುಕೊಂಡು ಹೋಯ್ತು. ಇದು ಒಳ್ಳೆಯದಲ್ಲ ದಯವಿಟ್ಟು ಇದನ್ನೆಲ್ಲಾ ನಿಲ್ಲಿಸಿ." ದರ್ಶನ್ ಹಾಗೂ ಅವರ ಅಭಿಮಾನಿಗಳಿಗೆ ಅಹೋರಾತ್ರ ಸಲಹೆ ಕೂಡ ನೀಡಿದ್ದಾರೆ.