"ಸಿಗರೇಟ್ ಸೇದಿ 'ಕೆಜಿಎಫ್' ಮಾಡಿದ.. ಈಗ ಕಪ್ಸಿ, ಕುಪ್ಸಿ, ಪಿಪ್ಸಿ ಕುಡೀರಿ ಅಂತೆ" ಯಶ್ ವಿರುದ್ಧ ಅಹೋರಾತ್ರ ಆಕ್ರೋಶ!

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ ಸೂಪರ್‌ಸ್ಟಾರ್‌ಗಳಿಗೆ ಅಹೋರಾತ್ರ ಬೆಂಬಿಡದ ಬೇತಾಳನಂತೆ ಕಾಡುತ್ತಲೇ ಇದ್ದಾರೆ. ಮೊದಲು ಕಿಚ್ಚ ಸುದೀಪ್ ರಮ್ಮಿ ಜಾಹೀರಾತಿನಲ್ಲಿ ನಟಿಸಿದ್ದರ ವಿರುದ್ಧ ತಿರುಗಿಬಿದ್ದಿದ್ದರು. ಈ ಸಂಬಂಧ ಸುದೀಪ್ ಅಭಿಮಾನಿಗಳು ಹಾಗೂ ಅಹೋರಾತ್ರ ನಡುವೆ ಗಲಾಟೆ ನಡೆದಿತ್ತು.

ಇನ್ನೇನು ಕಿಚ್ಚ ಸುದೀಪ್ ಗಲಾಟೆ ಮುಗೀತು ಅನ್ನುವಾಗಲೇ ದರ್ಶನ್ ವಿರುದ್ಧ ಕಿಡಿಕಾರಿದ್ದರು. ದರ್ಶನ್ ಅದೃಷ್ಟ ದೇವತೆ ಬಗ್ಗೆ ನೀಡಿದ ಹೇಳಿಕೆಯಿಂದ ಆಕ್ರೋಶಗೊಂಡಿದ್ದ ಅಹೋರಾತ್ರ ಒಂದರ ಹಿಂದೊಂದು ವಿಡಿಯೋ ಮಾಡಿ ಕಿಡಿಕಾರಿದ್ದರು. ಆಗಲೂ ಡಿ ಬಾಸ್ ಅಭಿಮಾನಿಗಳು ತರಾಟೆಗೆ ತೆಗೆದುಕೊಂಡಿದ್ದರು.

ಈಗ ರಾಕಿಂಗ್ ಸ್ಟಾರ್ ಯಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಯಶ್ ಇತ್ತೀಚೆಗೆ ಪೆಪ್ಸಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅದರ ವಿರುದ್ಧ ಅಹೋರಾತ್ರ ಧ್ವನಿ ಎತ್ತಿದ್ದಾರೆ. ಪೆಪ್ಸಿ ಆರೋಗ್ಯ ಹಾನಿಕಾರಕ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಇಂತಹ ಜಾಹೀರಾತಿನಲ್ಲಿ ನಟಿಸಬಾರದಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ವಿಡಿಯೋ ಮಾಡಿ, ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಆ ವಿಡಿಯೋದ ಝಲಕ್ ಇಲ್ಲಿದೆ.

ಯಶ್ ಪೆಪ್ಸಿ ಜಾಹೀರಾತಿನ ವಿರುದ್ಧ ಅಹೋರಾತ್ರ ಆಕ್ರೋಶ

ಯಶ್ ಪೆಪ್ಸಿ ಜಾಹೀರಾತಿನ ವಿರುದ್ಧ ಅಹೋರಾತ್ರ ಆಕ್ರೋಶ

"ನಿಮ್ಮ ಸಿನಿಮಾ ನೋಡಲು ಅವರ ಹತ್ರ ಹಣ ಬೆಳೆಯಲಿ ದೇವ್ರೇ ಅಂತ ಪ್ರಾರ್ಥನೆ ಮಾಡೋದು ಬಿಟ್ಟು, ಅವ್ರಲ್ಲಿರೋ ಎಲ್ಲಾ ಹಣ ಲೂಟಿ ಮಾಡುವುದಕ್ಕೆ ಜೂಜು ಅಡಿಸೋದು. ಅವರ ಬಳಿಕ ಇರುವ ಹಣ ಆಸ್ಪತ್ರೆ ಪಾಲಾಗೋತರ ಕೋಲ್ಡ್‌ ಡ್ರಿಂಕ್ಸ್ ಪೆಪ್ಸಿ, ಕೋಕಾ ಕೋಲಾ, ಇಂತಹವುಗಳಿಗೆ ಜಾಹೀರಾತು ಕೊಡುವುದು. ಇವತ್ತು ಆ ಡ್ರಿಂಕ್ಸ್‌ನಲ್ಲಿ ಎಷ್ಟು ಶುಗರ್ ಇರುತ್ತೆ ಗೊತ್ತಾ? ಇವತ್ತು 35 ವರ್ಷಕ್ಕೆಲ್ಲಾ ಯುವಕರಿಗೆ ಶುಗರ್ ಬರುವುದಕ್ಕೆ ಕಾರಣ ಅದು. ಅಂತಹದ್ದೆನಲ್ಲಾ ಕುಡಿದು ಹಾಳಾಗ್ಬೇಡಿ ಅಂತ ಹೇಳುವುದನ್ನು ಬಿಟ್ಟು, ಇಂತಹದ್ದನ್ನು ಕುಡಿದು ಸಾಯಿರಿ ಅಂತ ಜಾಹೀರಾತು ನೀಡುತ್ತಿದ್ದೀರಿ. ನಿಮ್ಮ ಮನೆಯಲ್ಲಿರೋ ಪುಟ್ಟ ಪುಟ್ಟ ಮಕ್ಕಳಿಗೆ ಕುಡಿಸಿದರೆ ಗೊತ್ತಾಗುತ್ತೆ ಅದೆಷ್ಟು ತಪ್ಪು ಅಂತ. ಮಕ್ಕಳ ಜೀರ್ಣಾಂಗಗಳನ್ನು ಡ್ಯಾಮೇಜ್ ಮಾಡುತ್ತೆ ಅದು ಅಂತ ಹೇಳಿದ್ರೆ, ಪುಷ್ ಪುಷ್ ಅಂತ ಯಶ್ ಎದ್ದು ಕೂತುಬಿಟ್ಟಿದ್ದಾನೆ." ಎಂದು ಅಹೋರಾತ್ರ ಆಕ್ರೋಶ ಹೊರ ಹಾಕಿದ್ದಾರೆ.

ಕಪ್ಸಿ, ಕುಪ್ಸಿ, ಪಿಪ್ಸಿ ಕುಡೀರಿ ಅಂತ ಯಾಕೀ ಜಾಹೀರಾತು?

ಕಪ್ಸಿ, ಕುಪ್ಸಿ, ಪಿಪ್ಸಿ ಕುಡೀರಿ ಅಂತ ಯಾಕೀ ಜಾಹೀರಾತು?

"ಬೈಯ್ಯೋಣ ಅಂದ್ರೆ ನಾಚಿಕೆ, ಮಾನ ಮರ್ಯಾದೆನಾ ದುಡ್ಡು ಮುಂದೆ ಬಿಟ್ಟು ಕೂತಿದ್ದಾರೆ ಇವರು. ಸಿಗರೇಟ್ ಸೇದಿ ಕೆಜಿಎಫ್ ಮಾಡಿ ದುಡ್ಡು ಮಾಡಿದ. ಬಂದಿರೋ ದುಡ್ಡಲ್ಲಿ ಅವನಿಗೆ ಊಟ ತಿಂಡಿ ಸಾಲುತ್ತಿಲ್ಲ ಅಂತ ಅನಿಸುತ್ತೆ. ಅಂತಹ ದುರ್ಗತಿ ಬಂದಿದ್ದರೆ ಏನೋ ಮಾಡಬಹುದು. ಕೈ ತುಂಬಾ ಹಣ, ಮೈ ತುಂಬಾ ಹಣ. ರೈತನಲ್ಲದಿದ್ದರೂ, ರೈತನಾಗಿ ಅಲ್ಲೆಲ್ಲೋ ಜಮೀನು ತೆಗೆದುಕೊಂಡ. ಊಳದವನಿಗೆ ಭೂಮಿ ಏನಕ್ಕೆ? ಊಳುವವನಿಗೆ ಭೂಮಿ ಅದು. ಇವೆಲ್ಲಾ ಸರಿ ಹೋಗುತ್ತಿದೆ ಅಂದ್ರೆ, ಕಪ್ಸಿ, ಕುಪ್ಸಿ, ಪಿಪ್ಸಿ ಕುಡೀರಿ ಅಂತ ಜಾಹೀರಾತು ನೀಡುತ್ತಿದ್ದಾರೆ. ಎಂತಹ ಕಡುಪರಿಸ್ಥಿತಿ ಬಂತು." ಎಂದು ಅಹೋರಾತ್ರ ಕಿಡಿಕಾಡುತ್ತಿದ್ದಾರೆ.

ಯಶ್‌ಗೆ ಬುದ್ಧಿಗಿದ್ದಿ ಇದೆಯಾ?

ಯಶ್‌ಗೆ ಬುದ್ಧಿಗಿದ್ದಿ ಇದೆಯಾ?

"ಯಶ್‌ಗೆ ಬುದ್ಧಿಗಿದ್ದಿ ಇದೆಯಾ? ಮಾತಾಡಿದ್ರೆ, ಅಭಿಮಾನಿಗಳನ್ನು ಬಿಟ್ಟು ಅಮ್ಮ ಅಕ್ಕ ಅಂತ ಬೈಯಿಸುತ್ತಾನೆ. ಅಭಿಮಾನಿಗಳಿಗೆ ಏನು ಗೊತ್ತು? ಇವರು ಕೋಟಿ ಕೋಟಿ ಹೊಡೆದಿರುತ್ತಾರೆ. ಅವರಿಗೆ 10 ಪೈಸೆ ಕೂಡ ಸಿಗಲ್ಲ. ಅದೇನೋ ಅವರನ್ನು ಎಮೋಷನಲ್‌ ಆಗಿ ಬ್ರೈನ್ ವಾಶ್ ಮಾಡಿ ಇಟ್ಟಿದ್ದಾರೆ. ಅವರು ಅಮ್ಮ ಅಕ್ಕ ಅಂತ ಬೈದರೆ ಸುಮ್ಮನಾಗುತ್ತೀನಿ ಅಂತ ಇವನು ಅಂದ್ಕೊಂಡಿದ್ದಾನೆ. ಈಗ ಈ ವಿಡಿಯೋ ನೋಡಿಕೊಂಡು ಎಷ್ಟು ಜನ ಬೈತಾರೆ ಅಂತ." ಅಹೋರಾತ್ರ ಆಕ್ರೋಶ ಹೊರಹಾಕಿದ್ದಾರೆ.

'ಯೋಗ್ಯತೆಯಿದ್ದರೆ ಎಳನೀರು ಕುಡಿಯೋದಕ್ಕೆ ಹೇಳು'

'ಯೋಗ್ಯತೆಯಿದ್ದರೆ ಎಳನೀರು ಕುಡಿಯೋದಕ್ಕೆ ಹೇಳು'

"ಮಕ್ಕಳು ಬದುಕಿ ಬಾಳಬೇಕು ಅಂತ ಒಳ್ಳೆ ಕೆಲಸ ಮಾಡಬೇಕು. ಸ್ವಲ್ಪ ರಿಸರ್ಚ್ ಮಾಡು. ಆಮಿರ್ ಖಾನ್ ಹಿಂದೆ ಹೋದ್ರು, ತೆಂಡೂಲ್ಕರ್ ಹಿಂದೆ ಹೋಗ್ಬಿಟ್ರು, ರೊನಾಲ್ಡೋ ಆ ಬಾಟಲ್ ಅನ್ನು ಜಸ್ಟ್ ಸೈಡಿಗಿಟ್ಟು ನೀರು ಕುಡಿದಿದ್ದಕ್ಕೆ ವರ್ಲ್ಡ್‌ ವೈಡ್ ಅವನನ್ನು ಬೆನ್ನು ತಟ್ಟಿದ್ರು. ನೀನು ಅದ್ಯಾವುದೋ ಜಪಾಳದ ಮಾತ್ರೆ ತೆಗೆದುಕೊಂಡವಂತೆ ಆಡುತ್ತಿದ್ದೀಯಾ? ಮರ್ಯಾದೆ ಕೊಟ್ಟರೆ ಜಾಸ್ತಿ ಆಯ್ತು. ಕರ್ನಾಟಕದವರ ದಾರಿ ತಪ್ಪಿಸುತ್ತಿದ್ದೀಯಾ? ವಿದೇಶಿ ಕಂಪನಿಗಳು ಕರ್ನಾಟಕದ ದುಡ್ಡನ್ನು ಲೂಟಿ ಮಾಡುತ್ತಿದ್ದಾರೆ. ನಿನಗೆ ಯೋಗ್ಯತೆಯಿದ್ದರೆ ಎಳನೀರು ಕುಡಿಯೋದಕ್ಕೆ ಹೇಳು." ಅಹೋರಾತ್ರ ರಾಕಿ ಭಾಯ್‌ಗೆ ಸವಾಲೆಸೆದಿದ್ದಾರೆ.

More from Filmibeat

English summary
Ahoratra Is Angry At Yash For Appearing In A Pepsi Commercial, Claiming That Tender Coconut Is A Better,Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X