"ಅವನು ಜೈಲಿನೊಳಗೆ ಇದ್ದಾನೆ, ನೀನು ಹೊರಗೆ ಇದ್ದೀಯ ಅಷ್ಟೇ"; ಮತ್ತೆ ಕಿಚ್ಚನ ವಿರುದ್ಧ ತಿರುಗಿಬಿದ್ದ ಅಹೋರಾತ್ರ

By ಫಿಲ್ಮಿಬೀಟ್ ಡೆಸ್ಕ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ಸದ್ಯ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ. ದೇಶಾದ್ಯಂತ ಈ ಕೊಲೆ ಬಗ್ಗೆನೇ ಚರ್ಚೆಯಾಗುತ್ತಿರುವ ಬೆನ್ನಲ್ಲೇ ಕಿಚ್ಚ ಸುದೀಪ್ ಮೌನ ಮುರಿದಿದ್ದರು. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಬೇಕು ಎಂದು ಹೇಳಿದ್ದರು. ಈ ಹೇಳಿಕೆ ಕೂಡ ಈಗ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.

ಕಿಚ್ಚ ಸುದೀಪ್ ವಿಡಿಯೋ ವೈರಲ್ ಆಗುತ್ತಿದ್ದಂತೆ ಅಹೋರಾತ್ರ ಕಿಡಿಕಾರುವುದಕ್ಕೆ ಶುರು ಮಾಡಿದ್ದಾರೆ. ವಿಡಿಯೋ ಮಾಡಿ ಈ ಹಿಂದೆ ಸುದೀಪ್ ಅಭಿಮಾನಿಗಳು ಅವರ ಮೇಲೆ ಹಲ್ಲೆ ಮಾಡಿದ್ದನ್ನು ನೆನಪಿಸಿಕೊಂಡು ಕಿಡಿಕಾರಿದ್ದಾರೆ. ಮತ್ತೆ ಕಿಚ್ಚ ಸುದೀಪ್ ಅನ್ನು ಟಾರ್ಗೆಟ್ ಮಾಡಿ ವಿಡಿಯೋ ಮಾಡಿದ್ದಾರೆ.

Ahoratra once again criticised Kichcha Sudeep after Darshan s arrest

ಈ ಹಿಂದೆ ಕಿಚ್ಚ ಸುದೀಪ್ ರಮ್ಮಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಅದನ್ನು ಖಂಡಿಸಿ ಅಹೋರಾತ್ರ ವಿಡಿಯೋ ಮಾಡಿದ್ದರು. ಆ ವೇಳೆ ಕಿಚ್ಚ ಸುದೀಪ್ ಅಭಿಮಾನಿಗಳು ಕಿಡಿಕಾರಿದ್ದರು. ಅಷ್ಟೇ ಅಲ್ಲದೆ ಅಹೋರಾತ್ರ ಮನೆಗೆ ನುಗ್ಗಿ ಗಲಾಟೆ ಮಾಡಿದ್ದರು. ಅಂತಹ ಸಂದರ್ಭದಲ್ಲೂ ಅಹೋರಾತ್ರ ಫೇಸ್‌ಬುಕ್ ಲೈವ್ ಮಾಡಿದ್ದರು. ಈಗ ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲು ಎಂದಿರುವ ಕಿಚ್ಚನ ವಿರುದ್ಧ ಅಹೋರಾತ್ರ ಮತ್ತೆ ಕಿಡಿಕಾರಿದ್ದಾರೆ.

ಕಿಚ್ಚನ ಅಭಿಮಾನಿಗಳು ಅಹೋರಾತ್ರ ನುಗ್ಗಿ ಗಲಾಟೆ ಮಾಡಿದ್ದನ್ನು ಇನ್ನೂ ಮರೆತಿಲ್ಲ. ಸುದೀಪ್ ಮೇಲಿನ ಕೋಪ ಇನ್ನೂ ಕಡಿಮೆ ಆಗಿಲ್ಲ. ಹೀಗಾಗಿ ಮತ್ತೆ ಕಿಚ್ಚನ ವಿರುದ್ಧ ತಿರುಗಿಬಿದ್ದಿದ್ದಾರೆ. ನೈತಿಕತೆ ಇದ್ದರೆ ಪೊಲೀಸರ ಮುಂದೆ ಶರಣಾಗುವಂತೆ ಕೇಳಿಕೊಂಡಿದ್ದಾರೆ. "ನೀನು ನೈತಿಕತೆ ಇರುವವನಾದರೆ, ಮೊದಲು ಪೊಲೀಸರಿಗೆ ಹೋಗಿ ಸರೆಂಡರ್ ಆಗು. ನಿನ್ನ ಹಿಂದೆ ಓಡಾಡಿಸಿಕೊಳ್ಳುತ್ತಿರುವ ನವೀನ್ ಗೌಡ ತಂಡ, ಜಾಕ್ ಮಂಜ ಎಲ್ಲರೂ ಸೇರಿಕೊಂಡು ನಿನ್ನ ಆಜ್ಞೆ ಇಲ್ಲದೆ ಏನೂ ಮಾಡದೆ ಇರೋರು, ಇದೇ ರೀತಿ ಅಹೋರಾತ್ರನ ಮೇಲೆ ಹತ್ಯೆಗೆ ಸಂಚು ಮಾಡಿದ್ದರು." ಎಂದಿದ್ದಾರೆ.

Ahoratra once again criticised Kichcha Sudeep after Darshan s arrest

ಇದೇ ವಿಡಿಯೋದಲ್ಲಿ ದರ್ಶನ್ ಹಾಗೂ ಕಿಚ್ಚ ಸುದೀಪ್ ಹೆಚ್ಚುನ ವ್ಯತ್ಯಾಸವೇನೂ ಇಲ್ಲ ಎಂದೂ ಕಿಡಿಕಾರಿದ್ದಾರೆ. "ನ್ಯಾಯ ದೇವತೆ ಚೆನ್ನಾಗಿದ್ದರೆ ಅಂತ ಮಾತಾಡುತ್ತೀಯಲ್ಲ, ನ್ಯಾಯ ದೇವತೆಗೆ ಕಣ್ಣು ಕಟ್ಟು ತೆಗೆದವನು ನೀನು. ನ್ಯಾಯದೇವತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡುತ್ತಾರೆ. ಅದನ್ನು ತೆಗೆಸಿದವನು ನೀನು. ಅವನು ಜೈಲಿನೊಳಗೆ ಇದ್ದಾನೆ. ನೀನು ಹೊರಗೆ ಇದ್ದೀಯ. ಏನೂ ವ್ಯತ್ಯಾಸವಿಲ್ಲ. ನೀನು ಹೊರಗಿದ್ದೂ ಜೈಲಿನಲ್ಲಿ ಇದ್ದಂಗೆ." ಎಂದು ಆಹೋರಾತ್ರ ಆಕ್ರೋಶ ಹೊರ ಹಾಕಿದ್ದಾರೆ.

ಕಿಚ್ಚ ಸುದೀಪ್‌ಗೆ ಅಹೋರಾತ್ರ ಹೊಸ ಸವಾಲು ಎಸೆದಿದ್ದಾರೆ. ತಮ್ಮ ಮೇಲೆ ಅಭಿಮಾನಿಗಳು ಅಟ್ಯಾಕ್ ಮಾಡಲು ಮುಂದಾಗಿದ್ದಕ್ಕೆ ನೈತಿಕ ಹೊಣೆ ಹೊತ್ತು ಅಭಿಮಾನಿ ಸಂಘ ಬ್ಯಾನ್ ಮಾಡಲು ಹೇಳಿದ್ದಾರೆ. "ಅವತ್ತು ಅಹೋರಾತ್ರನ ಹತ್ಯೆ ಆಗಬೇಕಾಗಿತ್ತು. ಆ ಭಗವಂತ ಕಾಪಾಡಿದ್ದು, ಆ ವೃಕ್ಷ ರಕ್ಷಕರ ದೆಸೆಯಿಂದ. ಎದುರು ಮನೆಯ ಹೆಣ್ಣು ಮಕ್ಕಳ ಮೇಲೆ ಚಪ್ಪಲಿಯನ್ನಿಟ್ಟು ಮಾರಾಟಕ್ಕಿಟ್ಟವನು. ನಿನ್ನ ಹಾದಿಗೆ ಅಡ್ಡ ಬಂದವರ ಹೆಣ್ಣು ಮಕ್ಕಳನ್ನು ಅತ್ಯಾಚಾರದ ಭಯ ಬೀಳಿಸುವವನು. ಈಗಲೂ ಫೋನು ಬರುತ್ತಿದೆ. ಮೊದಲು ನೈತಿಕ ಹೊಣೆ ಹೊತ್ತು ನಿನ್ನ ಅಭಿಮಾನಿ ಸಂಘವನ್ನು ಬ್ಯಾನ್ ಮಾಡು" ಎಂದಿದ್ದಾರೆ.

ಇನ್ನು ದರ್ಶನ್ ಅಭಿಮಾನಿಗೆ ನೇರವಾಗಿ ಹೊಡೆದಿದ್ದರೆ, ನೀನು ಹೊಡೆಯುವುದಕ್ಕೆ ಕಳಿಸಿದ್ದೆ ಎಂದು ಕಿಡಿಕಾರಿದ್ದಾರೆ. "ಚಿತ್ರರಂಗ ಉಳಿಸಬೇಕಂತೆ. ಜೂಜಾಡಿಸಿ ಆ ಚಿತ್ರರಂಗಕ್ಕೆ ಮೊದಲು ಕಲ್ಲು ಹಾಕಿದವನೇ ನೀನು. ಅಸತ್ಯ ಭಾವ ಹರೀಶ್ ಅನ್ನು ಜೊತೆಗೆ ಹಾಕಿಕೊಂಡು, ನೀನು ಮಾಡಿದ್ದೆಲ್ಲ ಸರಿ ಅನ್ನಿಸಿಕೊಂಡು, ಹಣ ಹಾಕಿ ನಿನ್ನನ್ನು ಬೆಳೆಸಿದ ವೀಕ್ಷಕರಿಗೆ ಜೂಜು ಕಲಿಸಿದವನು ನೀನು. ರೇಣುಕಾಸ್ವಾಮಿ ಎದ್ದು ಬಂದು ತೂಪುಕ್ ಅಂತ ನಿನ್ನ ಮುಖಕ್ಕೆ ಉಗಿಯುತ್ತಾನೆ. ಅವನು ಅಭಿಮಾನಿಯನ್ನು ಡೈರೆಕ್ಟ್ ಆಗಿ ಹೊಡೆದ. ನೀನು ಹೊಡೆಯುವುದಕ್ಕೆ ಕಳಿಸಿದೆ ಅಷ್ಟೇ" ಎಂದಿದ್ದಾರೆ.

More from Filmibeat

English summary
Ahoratra angry on Kichcha Sudeep:
Read more about: ahoratra darshan kichcha sudeep
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X