"ರಾತ್ರಿ ಹೊಡೆಯೋದು ಬೆಳಗ್ಗೆ ಅವನೇ ಆಯಿಂಟ್‌ಮೆಂಟ್ ಹಚ್ಚುವುದು ಅವನ ನಿತ್ಯ ವಾಡಿಕೆ"; ಆಹೋರಾತ್ರ ಕಿಡಿ

By ಫಿಲ್ಮಿಬೀಟ್ ಡೆಸ್ಕ್

ಕನ್ನಡ ಚಿತ್ರರಂಗದ ಸೂಪರ್‌ಸ್ಟಾರ್‌ಗಳ ಮೇಲೆ ನಿರಂತರವಾಗಿ ಅಹೋರಾತ್ರ ಕಿಡಿ ಕಾರುತ್ತಾರೆ. ಕಿಚ್ಚ ಸುದೀಪ್, ದರ್ಶನ್, ಯಶ್ ಅಂತಹ ನಟರ ವಿರುದ್ಧ ಆಗಾಗ ಆಕ್ರೋಶ ಹೊರಹಾಕಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ರಮ್ಮಿ ಜಾಹೀರಾತಿನಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಕ್ಕೆ ಅಹೋರಾತ್ರ ಆಕ್ರೋಶ ಹೊರಹಾಕಿದ್ದರು. ಬಳಿಕ ಕಿಚ್ಚನ ಅಭಿಮಾನಿಗಳು ಮನೆಗೆ ಮುತ್ತಿಗೆ ಹಾಕಿದ್ದರು.

ಆ ಬಳಿಕ ದರ್ಶನ್ ವಿರುದ್ಧ, ಯಶ್ ವಿರುದ್ಧ ಕೂಡ ಅಹೋರಾತ್ರ ಗರಂ ಆಗಿದ್ದರು. ಹೀಗಾಗಿ ಕನ್ನಡದ ಸೂಪರ್‌ಸ್ಟಾರ್‌ಗಳ ಅಭಿಮಾನಿಗಳು ಆಹೋರಾತ್ರ ವಿರುದ್ಧ ತಿರುಗಿಬಿದ್ದಿದ್ದರು. ಅಲ್ಲಿಂದ ಯಾರ ಕೈಗೂ ಸಿಗದ ಅಹೋರಾತ್ರ ಸುಳಿವು ಸಿಗದ ಜಾಗದಿಂದ ಸೂಪರ್‌ಸ್ಟಾರ್‌ಗಳ ವಿರುದ್ಧ ವಿಡಿಯೋಗಳನ್ನು ಮಾಡುತ್ತಲೇ ಇರುತ್ತಾರೆ. ಈಗ ದರ್ಶನ್ ಬಂಧನದ ಬಳಿಕ ವಿಡಿಯೋ ರಿಲೀಸ್ ಮಾಡಿದ್ದು, ಗಂಭೀರ ಆರೋಪ ಮಾಡಿದ್ದಾರೆ. ವೈರಲ್ ಆಗುತ್ತಿರುವ ಈ ವಿಡಿಯೋದ ಹೈಲೈಟ್ ಇಲ್ಲಿದೆ.

Ahoratra released video on Darshan arrest says that he is an Ointment Raja

"ಕ್ರೂರಿಗಳು, ಅವರನ್ನು ಯಾಕೆ ಕ್ರೂರಿಗಳು ಅಂತ ಕರೆಯುತ್ತೇನೆ ಅಂದರೆ, ಧೈರ್ಯವಾಗಿ ಹೋರಾಡುವುದಕ್ಕೆ ಯೋಗ್ಯತೆಯಿಲ್ಲದೆ, ಮನೆಯ ಹೆಣ್ಣು ಮಕ್ಕಳ ಬಗ್ಗೆ ಮಾತಾಡಿದ್ರು. ಅಭಿಮಾನಿಗಳನ್ನು ಛೂ ಬಿಟ್ಟರು. ಯಾವ ರೀತಿ ಅಭಿಮಾನಿಗಳನ್ನು ಬಳಸಿ ರೇಣುಕಾಸ್ವಾಮಿ ಹತ್ಯೆ ಆಯ್ತೋ? ಹಾಗೇ ಅಭಿಮಾನಿಗಳನ್ನು ಛೂ ಬಿಟ್ಟರು. ಹೆಣ್ಣು ನಿಂದನೆ ಮಾಡಿಸಿದ್ರು. ಅವರ ಬಗ್ಗೆ ಮಾತಾಡುವ ಸಂಪೂರ್ಣ ಅಧಿಕಾರ ಅಹೋರಾತ್ರನಿಗೆ ಇದೆ. ಯಾಕಂದ್ರೆ, ನಾನು ಅವರ ಮನೆಯ ಹೆಣ್ಣು ಮಕ್ಕಳ ಬಗ್ಗೆ ಮಾತಾಡುತ್ತಿಲ್ಲ. ಇವತ್ತು ಅವರು ಜೈಲಿಗೆ ಹೋಗಿದ್ದಾರೆ. ಅವರ ಮನೆಯ ಹೆಣ್ಣು ಮಕ್ಕಳಿಗೆ ಏನಾದರೂ ತೊಂದರೆ ಆದರೆ, ಕರ್ನಾಟಕದ ಸ್ತ್ರೀ ರಕ್ಷಾವತಿಯಿಂದ ನಾನು ಕಾಪಾಡುತ್ತೇವೆ. " ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಅಹೋರಾತ್ರ ಇದೇ ವಿಡಿಯೋದಲ್ಲಿ ದರ್ಶನ್ ಅವರನ್ನು 'ಆಯಿಂಟ್‌ಮೆಂಟ್ ರಾಜ' ಎಂದು ಜರಿದಿದ್ದಾರೆ. "ಈ ದರ್ಶನ್ ಕಥೆ ಹೇಳುತ್ತೇನೆ. ಇವನ ಹೆಸರು ಆಯಿಂಟ್‌ಮೆಂಟ್ ರಾಜ ಅಂತ. ಯಾಕೆ ಆಯಿಂಟ್‌ಮೆಂಟ್ ರಾಜ ಅಂದರೆ, ಇವನು ಕುಡಿದ ಅಮಲಿನಲ್ಲಿ, ಮಾದಕ ದ್ರವ್ಯಗಳ ಅಮಲಿನಲ್ಲಿ ರಾತ್ರಿ ಹೊಡೆಯುವುದು, ಬೆಳಗ್ಗೆ ಅವನೇ ಆಯಿಂಟ್‌ಮೆಂಟ್ ಹಚ್ಚುವುದು ಅವನ ನಿತ್ಯ ವಾಡಿಕೆ. ಇವನಿಗೆ ಹೊಡೆಯುವ ರೋಗವಿದೆ. ಮಹಾಭಾರತದಲ್ಲಿ ದುರ್ಯೋಧನನಿಗೆ ಇತ್ತು. ಅದೇ ದುರ್ಯೋಧನನ ಪಾತ್ರದಾರಿಯಾದ ಇವನು ಅದೇ ರೋಗವಾಸಿ" ಎಂದು ಹೇಳಿದ್ದಾರೆ.

ಈ ಹಿಂದೆ ದರ್ಶನ್ ಪುಟ್ಟ ಬಾಲಕನಿಗೆ ಕೊಲು ಹಿಡಿದು ಕೀಟಲೆ ಕೊಡುವ ವಿಡಿಯೋ ವೈರಲ್ ಆಗಿತ್ತು. ಆಗಲೇ ಎಚ್ಚೆತ್ತುಕೊಂಡಿರಬೇಕಿತ್ತು ಎಂದಿದ್ದಾರೆ. "ಒಂದು ಚಿಕ್ಕ ವಿಡಿಯೋ ಇತ್ತು ಕೋಲು ಹಿಡ್ಕೊಂಡು ಟಾರ್ಚರ್ ಕೊಡುತ್ತಿದ್ದ. ಅದೊಂದೇ ವಿಡಿಯೋ ಸಾಕಾಗಿತ್ತು. ಕರ್ನಾಟಕದ ಲಾ ಅಂಡ್ ಅರ್ಡರ್‌ಗೆ. ಆ ವಿಡಿಯೋ ಇಟ್ಕೊಂಡು ಇವನನ್ನು ಒಳಗೆ ಹಾಕಿ, ಇವನ ಮಾನಸಿಕ ಸುಸ್ಥಿತಿಗೆ ಟೈನಿಂಗ್ ಕೊಟ್ಟು, ಇವನನ್ನು ಬಿಡಬೇಕಿತ್ತು." ಎಂದಿದ್ದಾರೆ.

Ahoratra released video on Darshan arrest says that he is an Ointment Raja

ಹಾಗೇ, "ಇನ್ನೊಂದು ಮನವಿ, ಆ ಟಾರ್ಚರ್ ಚೇಂಬರ್‌ನಲ್ಲಿ ಯಾರೆಲ್ಲ ಹಿಂಸೆ ಅನುಭವಿಸಿದ್ದಾರೋ ಅವರೆಲ್ಲ ಮುಂದೆ ಬನ್ನಿ. ಅಕಸ್ಮಾತ್ ಬದುಕುಳಿದಿದ್ರೆ, ಬೆಳಗ್ಗೆ ಆಯಿಂಟ್‌ಮೆಂಟ್ ಹಚ್ಚಿ ಕಳಿಸಿರುತ್ತಾನಲ್ಲ. ಊಟಕ್ಕೆ ದುಡ್ಡು ಕೊಟ್ಟು ಕಳಿಸಿರುತ್ತಾನಲ್ಲ ಅವರೆಲ್ಲ ಮುಂದೆ ಬಂದು ಇವನ ಮೇಲೆ ಸಂತ್ರಸ್ತರಾಗಿ ಕಂಪ್ಲೈಂಟ್ ಮಾಡಿ, ಇವರ ಕ್ರೌರ್ಯವನ್ನು ಇಲ್ಲಿಗೆ ಅಂತ್ಯಗೊಳಿಸೋಣ." ಎಂದಿದ್ದಾರೆ.

ಫಿಲ್ಮ್ ಚೇಂಬರ್ ಅನ್ನೂ ಬಿಟ್ಟಿಲ್ಲ. ದರ್ಶನ್ ಅನ್ನು ಬ್ಯಾನ್ ಮಾಡುವುದಕ್ಕೆ ಡಾ.ರಾಜ್‌ಕುಮಾರ್ ಅವರನ್ನು ರೆಫರೆನ್ಸ್ ಕೊಡುತ್ತೀರಾ? ಆಕ್ರೋಶ ಹೊರ ಹಾಕಿದ್ದಾರೆ. ಹಾಗೇ ರಾಕ್‌ ವೆಂಕಟೇಶ್ ಹೇಳಿಕೆಗೂ ಕಿಡಿಕಾರಿದ್ದಾರೆ. "ಡಾ.ರಾಜ್‌ಕುಮಾರ್ ಯಾವುದೇ ಕಲಾವಿದರನ್ನು ಬ್ಯಾನ್ ಮಾಡಬೇಡಿ ಅಂದಿದ್ದರು ಎಂದು ರಾಕ್‌ ಲೈನ್ ವೆಂಕಟೇಶಪ್ಪ ಹೇಳಿದ್ದಾರೆ. ಇವನು ಯಾವ ಕಲಾವಿದ. ಇವನು ಕೊಲಾವಿದ. ಅವನು ತಪ್ಪಿದಸ್ಥ ಅಲ್ಲ ಅಂತ ಹೊರ ಬಂದಾಗ ಮತ್ತೆ ಸೇರಿಕೊಂಡು ಅವನೊಂದಿಗೆ ಕುಡಿದು ಎಗರಾಡಿ." ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

More from Filmibeat

English summary
Ahoratra released video on Darshan arrest says that he is an Ointment Raja:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X