"ಇವತ್ತು ಇವಳು.. ನಾಳೆ ಅವಳು ಅಂದ್ರೆ, ನಿನ್ನ ಭಾವನೆಯಲ್ಲಿ ಹೆಣ್ಣಂದ್ರೆ ಏನು?" ದರ್ಶನ್ ವಿರುದ್ಧ ಮತ್ತೆ ತಿರುಗಿಬಿದ್ದ ಅಹೋರಾತ್ರ
ವಿವಾದಗಳಿಗೂ ದರ್ಶನ್‌ಗೂ ಬಿಡಲಾರದ ನಂಟು. ಒಂದಲ್ಲ ಒಂದು ವಿವಾದ ಅವರನ್ನು ಸುತ್ತಿಕೊಳ್ಳುತ್ತಲೇ ಇರುತ್ತೆ. ಅದರಲ್ಲೂ ದರ್ಶನ ಸಂಸಾರ ವಿಷಯ ಬೇಡ ಅಂದರೂ ಬೀದಿ ರಂಪಾಟವಾಗಿಬಿಡುತ್ತೆ. ಇತ್ತೀಚೆಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಪವಿತ್ರ ಗೌಡ ನಡುವಿನ ಕಿತ್ತಾಟ ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತ್ತು. ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಕಿತ್ತಾಡಿದ್ದು ಆಡಿಕೊಳ್ಳುವವರ ಬಾಯಿಗೆ ಆಹಾರವಾಗಿತ್ತು.
ಇಷ್ಟೆಲ್ಲ ಆದರೂ, ದರ್ಶನ್ ಈ ಬಗ್ಗೆ ಪ್ರತಿಕ್ರಿಯೆ ನೀಡುವುದಕ್ಕೆ ಹೋಗಿರಲಿಲ್ಲ. ಆದರೆ, ಇತ್ತೀಚೆಗೆ ದರ್ಶನ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳನ್ನು ಪೂರೈಸಿದ ಬೆನ್ನಲ್ಲೇ ಬೆಳ್ಳಿಪರ್ವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ವೇದಿಕೆ ಮೇಲೆ ದರ್ಶನ್ ತಮ್ಮ ವೃತ್ತಿ ಬದುಕಿನ ಬಗ್ಗೆ ಮಾತಾಡುವಾಗ ವೈಯಕ್ತಿಕ ವಿಚಾರದ ಬಗ್ಗೆನೂ ಮಾತಾಡಿದ್ದರು. ಅದಕ್ಕೂ ಸೋಶಿಯಲ್ ಮೀಡಿಯಾಗಳಲ್ಲಿ ವಿರೋಧ ವ್ಯಕ್ತವಾಗುತ್ತಿದೆ.

ಕನ್ನಡದ ತಾರೆಯರ ವಿರುದ್ಧ ಆಗಾಗ ತಿರುಗಿಬಿಳುವ ಅಹೋರಾತ್ರ ಮತ್ತೆ ದರ್ಶನ್ ವಿರುದ್ಧ ಕಿಡಿಕಾರಿದ್ದಾರೆ. ದರ್ಶನ್ ನೀಡಿದ ಇದೇ ಹೇಳಿಕೆ ವಿರುದ್ಧ ಅಹೋರಾತ್ರ ವಿಡಿಯೋ ರಿಲೀಸ್ ಮಾಡಿದ್ದಾರೆ. ಇದರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ತಮ್ಮ ಕಠೋರವಾದ ಮಾತುಗಳಿಂದ ವಿರೋಧಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಶೇರ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಅಹೋರಾತ್ರ ಏನು ಹೇಳಿದ್ದಾರೆ? ತಿಳಿಯಲು ಮುಂದೆ ಓದಿ..
ಏನು ದರ್ಶನ್ ಹೇಳಿದ್ದೇನು?
ದರ್ಶನ್ ಬೆಳ್ಳಿಪರ್ವ ವೇದಿಕೆ ಮೇಲೆ "ಕಷ್ಟಪಟ್ಟಾಗ ಮಾತುಗಳು ಕಹಿಯಾಗಿರುತ್ತೆ. ಅದು ಕೆಲವರಿಗೆ ಹಿಡಿಸಲ್ಲ. ಫ್ಯಾಮಿಲಿ ಸಮಸ್ಯೆಗಳು, ಎಲ್ಲ ಸಮಸ್ಯೆಗಳನ್ನು ಪಕ್ಕಕ್ಕೆ ಇಡುತ್ತೇನೆ. ನನ್ನ ಸೆಲೆಬ್ರಿಟಿಗಳು, ನನ್ನ ಕೆಲಸ ಮುಖ್ಯ, ಬೇರೆಯದಕ್ಕೆ ತಲೆಕೆಡಿಸಿಕೊಳ್ಳಲ್ಲ. ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಕೆಲಸ ಅಷ್ಟೆ ಮುಖ್ಯ" ಎಂದು ಹೇಳಿದ್ದರು. ಈ ಹೇಳಿಕೆ ವಿರುದ್ಧ ಅಹೋರಾತ್ರ ತಿರುಗಿಬಿದ್ದಿದ್ದಾರೆ.
"ನೀನು ಹೆಣ್ಣನ್ನು ಅಗೌರವಿಸುವಂತಹವನು"
ದರ್ಶನ್ "ಇವತ್ತು ಇವಳಿರ್ತಾಳೆ , ನಾಳೆ ಅವಳಿರ್ತಾಳೆ ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ" ಅಂದಿದ್ದಕ್ಕೆ ಹೆಣ್ಣಿ ನಿಂದಕ ಎಂದು ಅಹೋರಾತ್ರ ಜರಿದಿದ್ದಾರೆ. "ನೀನು ಹೆಣ್ಣನ್ನು ಅಗೌರವಿಸುವಂತಹವನು. ಹೆಣ್ಣು ಮಕ್ಕಳನ್ನು ನಿಂದನೆಗೆ ಬಳಸುವವನು. ಹೆಣ್ಣನ್ನು ಸೂ* ಎಂದು ಕರೆದವನು ನೀನು. ಹೆಣ್ಣನ್ನು ಗೈಡ್ ಮಾಡು ಅಂದರೆ, ತಲೆ ಹಿಡಿಬೇಡಿ. ತಲೆ ಹೊಡಿಬೇಡಿ ಎಂದವನು ನೀನು. ನೀನೇನು ಸಾಚಾನಾ? ಯಾರಿಗೆ ಬುದ್ದಿ ಹೇಳುವುದಕ್ಕೆ ನಿನಗೇನು ಅರ್ಹತೆ ಇದೆಯೋ? ನೀನು ಗಂಡಲ್ಲ ಅಂತ ಹೇಳುವುದಕ್ಕೆ ಒಂದು ಸಾಕ್ಷಿ ನೀನು ಹೆಣ್ಣನ್ನು ಅಗೌರವಿಸುತ್ತೀಯಾ ಅಂತ. ಇದು ಚಾಣುಕ್ಯ ಸಿದ್ಧಾಂತ. " ಎಂದು ಹೇಳಿದ್ದಾರೆ.
ಚಾಣಕ್ಯ ನೀತಿಯ ಹೇಳಿದ್ದೇಕೆ?
ದರ್ಶನ್‌ಗೆ ಷಂ* ಅಂತಲ್ಲ ಬೈಯ್ಯಲು ಏನು ಕಾರಣ ಅನ್ನೋದನ್ನು ಚಾಣಕ್ಯ ಕಥೆ ಮೂಲಕನೂ ವಿವರಿಸಿದ್ದಾರೆ. "ನಂದರ ಸಮಯದಲ್ಲಿ ಮೂರು ಸಾವಿರದ ಐನೂರು ವರ್ಷಗಳ ಹಿಂದೆ, ಹೆಣ್ಣಿಗೆ ಇರುವೆ ಕಷ್ಟವಾದಾಗ, ಪ್ರತಿ ರಾಜರೂ ಸಾವಿರಾರು ದಾಸಿರನ್ನು ಇಟ್ಟುಕೊಂಡಿ ಸೋಶಿಸುತ್ತಿದ್ದಾಗ, ಆ ಶೋಷಣೆಯಿಂದ ಹೆಣ್ಣು ಮಕ್ಕಳನ್ನು ಕಾಪಾಡಲು ಚಾಣಕ್ಯ ಬಳಸಿದ ಭಾಷೆ, ಷಂ* ಭಾಷೆ. ಎಲ್ಲಾ ಹೆಣ್ಣು ಮಕ್ಕಳಿಗೂ ಸಂದೇಶ ಕಳಿಸುತ್ತಾನೆ. ನೀನು ಸತ್ತರೂ ಪರ್ವಾಗಿಲ್ಲಮ್ಮ. ಮಧ್ಯ ರಸ್ತೆಗೆ ಬಂದು ಆ ರಾಜ ಷಂ*ನೆಂದು ಹೇಳು. ಅವನು ತಲೆ ಎತ್ತಲಾರದೆ ಸಾಯುತ್ತಾನೆ. ಮೊದಲ ಮೊದಲಿಗೆ ಜನರಿಗೆ ಅರಿವಾಗಲಿಲ್ಲ. " ಎಂದು ಅಹೋರಾತ್ರ ಹೇಳಿದ್ದಾರೆ.
"ನಿನ್ನ ಭಾವನೆಯಲ್ಲಿ ಹೆಣ್ಣು ಅಂದರೆ.."
ದರ್ಶನ್ ಧರ್ಮ ಪತ್ನಿಗೆ ಗೌರವ ಕೊಡುತ್ತಿಲ್ಲ ಅಂತ ಆರೋಪ ಅಹೋರಾತ್ರ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ. "ಸ್ಪೀಚ್‌ನಲ್ಲಿ ನೀನು ಏನೋ ಹೇಳಿದ್ದು ಇವತ್ತು ಅವಳು.. ನಾಳೆ ಇವಳು ಅಂದರೆ, ನಿನ್ನ ಭಾವನೆಯಲ್ಲಿ ಹೆಣ್ಣು ಅಂದರೆ ಏನಲೇ.. ನಿನ್ನ ಸ್ವಂತ ಧರ್ಮ ಪತ್ನಿಗೆ ಗೌರವ ಕೊಡದ ನೀನು ಯಾವ ಗಂಡಲೇ.." ಎಂದು ಆಹೋರಾತ್ರ ಆಕ್ರೋಶ ಹೊರ ಹಾಕಿದ್ದಾರೆ.


Click it and Unblock the Notifications











