ಬೆಟ್ಟಿಂಗ್ ಅಪ್ಲಿಕೇಶನ್ ಪ್ರಚಾರ ಮಾಡಿದ ಆಶಿಕಾ; ಈ ಕಾರಣಕ್ಕೆ ಅಹೋರಾತ್ರ ಈಗ ಮಾತನಾಡಲ್ಲ ಬಿಡಿ ಎಂದ ನೆಟ್ಟಿಗರು!

By ಫಿಲ್ಮಿಬೀಟ್ ಡೆಸ್ಕ್

ಅಹೋರಾತ್ರ.. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡದಿದ್ದರೂ ಸಿನಿ ರಸಿಕರಿಗೆ ಅತಿ ಪರಿಚಿತವಾಗಿರುವ ಹೆಸರು. ಕನ್ನಡದ ಯಾವುದೇ ಸ್ಟಾರ್ ನಟರ ಕಟ್ಟಾಭಿಮಾನಿಗಳ ಬಳಿ ಹೋಗಿ ಅಹೋರಾತ್ರ ಯಾರು ಅಂತ ಕೇಳಿದ್ರೆ ಗೊತ್ತು ಬಿಡಿ ಎಂಬ ಉತ್ತರವೇ ಬರಲಿದೆ. ಆದರೆ ಒಳ್ಳೆ ರೀತಿಯಲ್ಲಿ ಅಹೋರಾತ್ರ ಗೊತ್ತು ಎಂದು ಹೇಳಿಕೊಳ್ಳುವವರ ಸಂಖ್ಯೆ ತೀರಾ ಕಡಿಮೆಯೇ. ಆತನ ಬಗ್ಗೆ ಪ್ರತಿಕ್ರಿಯಿಸುವ ಬಹುತೇಕ ಸ್ಟಾರ್ ನಟರ ಅಭಿಮಾನಿಗಳು ಆತನ ಬಗ್ಗೆ ಕೆಟ್ಟದಾಗಿಯೇ ಮಾತನಾಡುತ್ತಾರೆ.

ಇದಕ್ಕೆ ಕಾರಣ ಅಹೋರಾತ್ರ ಹಲವು ಕಾರಣಗಳಿಗೆ ಕನ್ನಡದ ಸ್ಟಾರ್ ನಟರು ಎಂಬುದನ್ನೂ ಸಹ ನೋಡದೇ ಕನ್ನಡದ ಹಲವು ನಟರನ್ನು ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಮಾಡಿದ್ದು. ಹೌದು, ಅಹೋರಾತ್ರ ಎಂದ ಕೂಡಲೇ ಎಲ್ಲರ ತಲೆಗೂ ಬರುವುದೇ ಆತ ಸ್ಟಾರ್ ನಟರ ಬಗ್ಗೆ ನಿಂದನಾತ್ಮಕ ಪೋಸ್ಟ್ ಹಾಗೂ ವಿಡಿಯೊಗಳು. ಮೊದಲಿಗೆ ಕಿಚ್ಚ ಸುದೀಪ್ ರಮ್ಮಿ ಅಪ್ಲಿಕೇಶನ್ ಪ್ರಚಾರ ಮಾಡಿದ್ರು ಎಂಬ ಕಾರಣಕ್ಕೆ ಅಹೋರಾತ್ರ ಸುದೀಪ್ ಅವರನ್ನು ನಿಂದಿಸಿದ್ದರು.

Ahoratra will not talk against Ashika Ranganath as he wont get attention says Netizen

ಸಾಲು ಸಾಲು ವಿಡಿಯೊ ಮಾಡಿದ್ದ ಅಹೋರಾತ್ರ ಸುದೀಪ್ ಅವರನ್ನು ಏಕವಚನದಲ್ಲಿ, ಅಸಭ್ಯ ಪದಗಳನ್ನು ಬಳಸಿ ನಿಂದಿಸಿದ್ದರು. ಇದರಿಂದ ರೊಚ್ಚಿಗೆದ್ದಿದ್ದ ಸುದೀಪ್ ಅಭಿಮಾನಿಗಳು ಅಹೋರಾತ್ರ ಮನೆಗೆ ನುಗ್ಗಿ ದಾಂದಲೆ ನಡೆಸಿ ಆಕ್ರೋಶ ಹೊರಹಾಕಿದ್ದರು. ಹಾಗೆಂದ ಮಾತ್ರಕ್ಕೆ ಅಹೋರಾತ್ರ ಸೈಲೆಂಟ್ ಆಗಲಿಲ್ಲ. ಬೆಟ್ಟಿಂಗ್ ಅಪ್ಲಿಕೇಶನ್ ಪ್ರಚಾರ ಮಾಡುವುದು ತಪ್ಪು. ಸ್ಟಾರ್ ನಟರು ಬೆಟ್ಟಿಂಗ್ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡಿದ್ರೆ ಅವರಿಗೆ ಇರುವ ದೊಡ್ಡ ಅಭಿಮಾನಿ ಬಳಗ ಹಾಗೂ ಹಿಂಬಾಲಕರೂ ಸಹ ಅವುಗಳನ್ನು ಬಳಸಲು ಆರಂಭಿಸುತ್ತಾರೆ, ಒಬ್ಬ ಜವಾಬ್ದಾರಿಯುತ ಕಲಾವಿದ ಸಮಾಜಕ್ಕೆ ಇಂತಹ ಮೆಸೇಜ್ ನೀಡಬಾರದು ಎಂಬುದು ಅಹೋರಾತ್ರನ ವಾದ.

ಇನ್ನು ಸುದೀಪ್ ಮಾತ್ರವಲ್ಲದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನೂ ಸಹ ಅಹೋರಾತ್ರ ಬಿಟ್ಟಿಲ್ಲ. ದರ್ಶನ್ ಬಗ್ಗೆಯೂ ನಿಂದನಾತ್ಮಕ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ. ಇನ್ನು ಪೆಪ್ಸಿ ಅಪ್ಲಿಕೇಶನ್‌ನಲ್ಲಿ ಕಾಣಿಸಿಕೊಂಡ ಯಶ್ ಬಗ್ಗೆಯೂ ಕಿಡಿಕಾರಿದ್ದರು. ಕೆಟ್ಟ ಅಂಶಗಳಿಂದ ಕೂಡಿರುವ ಪಾನೀಯವನ್ನು ಪ್ರಚಾರ ಮಾಡಿ ಜನಕ್ಕೆ ಏನು ಹೇಳಲು ಹೊರಟಿದ್ದೀರ ಎಂದು ಪ್ರಶ್ನಿಸಿದ್ದರು. ಅಲ್ಲದೇ ಕಬ್ಜ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಶಿವ ರಾಜ್‌ಕುಮಾರ್ ಧೂಮಪಾನ ಮಾಡುವ ದೃಶ್ಯವನ್ನು ಸಹ ಅಹೋರಾತ್ರ ಖಂಡಿಸಿದ್ದರು.

ಹೀಗೆ ಬೆಟ್ಟಿಂಗ್ ಅಪ್ಲಿಕೇಶನ್, ಕೂಲ್ ಡ್ರಿಂಕ್ಸ್, ಮದ್ಯಪಾನ ಹಾಗೂ ಧೂಮಪಾನದ ಪ್ರಚಾರಗಳಲ್ಲಿ ಪಾಲ್ಗೊಳ್ಳುವ ಸೆಲೆಬ್ರಿಟಿಗಳನ್ನು ಸಾಮಾಜಿಕ ಜಾಲತಾಣದಲ್ಲಿ ತೆಗಳುವ ಅಹೋರಾತ್ರ ಇದೀಗ ಆಶಿಕಾ ರಂಗನಾಥ್ ಅವರ ಬಗ್ಗೆಯೂ ಸಹ ಪ್ರತಿಕ್ರಿಯಿಸುತ್ತಾರಾ ಎಂಬ ಪ್ರಶ್ನೆಯನ್ನು ನೆಟ್ಟಿಗರು ಹಾಕಿದ್ದಾರೆ. ಹೌದು, ಈ ಒಂದು ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆದಿದೆ. ಏಕೆಂದರೆ ಆಶಿಕಾ ರಂಗನಾಥ್ ಬೆಟ್ಟಿಂಗ್ ಅಪ್ಲಿಕೇಶನ್ ಒಂದರ ಪ್ರಚಾರವನ್ನು ಮಾಡಿದ್ದಾರೆ.

ಮಾರ್ಚ್ 18ರಂದು ಈ ಕುರಿತಾಗಿ ತನ್ನ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಆಶಿಕಾ ರಂಗನಾಥ್ ನೆಟ್ಟಿಗರಿಂದ ವಿರೋಧಯುತ ಕಾಮೆಂಟ್‌ಗಳು ವ್ಯಕ್ತವಾದ ಬಳಿಕ ಕಾಮೆಂಟ್ ಆಪ್ಷನ್ ಅನ್ನು ಆಫ್ ಮಾಡಿಕೊಂಡಿದ್ದಾರೆ. ಇನ್ನು ಟ್ವಿಟರ್‌ನಲ್ಲಿ ಇದರ ಬಗ್ಗೆ ಚರ್ಚೆ ನಡೆದಿದ್ದು ಆಶಿಕಾ ಬೆಟ್ಟಿಂಗ್ ಅಪ್ಲಿಕೇಶನ್ ಪ್ರಚಾರ ಮಾಡಿದ್ದು ಇನ್ನೂ ಸಹ ಅಹೋರಾತ್ರ ಕಣ್ಣಿಗೆ ಬಿದ್ದಿಲ್ಲ ಎಂದು ಕಾಣುತ್ತೆ ಅದಕ್ಕೆ ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಹಲವರು ಅಹೋರಾತ್ರ ಹೆಣ್ಣು ನಿಂದನೆ ಮಾಡಲ್ಲ, ಅಹೋರಾತ್ರ ಕೇವಲ ನಟರನ್ನು ಪ್ರಶ್ನಿಸುತ್ತಾರೆ ಹೊರತು ನಟಿಯರ ಬಗ್ಗೆ ಮಾತನಾಡಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಕೆಲವರು ಆಶಿಕಾ ಬಗ್ಗೆ ಮಾತನಾಡಿದರೆ ತನಗೆ ಯಾರೂ ಸಹ ಹೆಚ್ಚಿನ ಗಮನ ನೀಡಲ್ಲ ಎಂಬುದು ಆತನಿಗೆ ತಿಳಿದಿದೆ ಹೀಗಾಗಿಯೇ ಇದರ ಬಗ್ಗೆ ಮಾತನಾಡುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಹೀಗೆ ಅಹೋರಾತ್ರ ನಟಿಯರ ಬಗ್ಗೆ ಪ್ರತಿಕ್ರಿಯಿಸಲ್ಲ, ಹೆಚ್ಚಿನ ಗಮನ ಸಿಗಲ್ಲ ಎಂಬ ಕಾರಣಕ್ಕೆ ಸೈಲೆಂಟ್ ಆಗಿದ್ದಾರೆ ಎಂಬ ಕಾಮೆಂಟ್‌ಗಳು ಬಂದಿದ್ದು, ಇನ್ನೂ ಕೆಲ ನೆಟ್ಟಿಗರು ದೊಡ್ಡ ಹೆಸರು ಮಾಡಿದ ನಟಿಯರು ಆಫರ್ ಕಡಿಮೆಯಾದಾಗ ಇಂತಹ ಅಪ್ಲಿಕೇಶನ್‌ಗಳನ್ನು ಪ್ರಚಾರ ಮಾಡೋದ್ಯಾಕೆ, ಚಿತ್ರಗಳ ಐಟಂ ಹಾಡುಗಳಲ್ಲಿ ಹೆಜ್ಜೆ ಹಾಕವುದೇಕೆ ಎಂದೂ ಸಹ ಕಾಮೆಂಟ್ ಮಾಡಿದ್ದಾರೆ.

More from Filmibeat

English summary
Ahoratra will not talk against Ashika Ranganath as he wont get attention says Netizen.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X