For Quick Alerts
  ALLOW NOTIFICATIONS  
  For Daily Alerts

  ಕೊರೊನಾ ಆತಂಕದ ನಡುವೆಯೂ ದಿಗಂತ್-ಐಂದ್ರಿತಾ ದಂಪತಿಯ ಜಾಲಿ ಟ್ರಿಪ್

  |

  ಸ್ಯಾಂಡಲ್ ವುಡ್ ನಟ ದಿಗಂತ್ ಮತ್ತು ಐಂದ್ರಿತಾ ರೇ ದಂಪತಿ ಜಾಲಿ ಟ್ರಿಪ್ ಹೋಗಿದ್ದಾರೆ. ಲಾಕ್ ಡೌನ್ ನಿಂದ ಸುಮಾರು ಎರಡು ತಿಂಗಳು ಮನೆಯಲ್ಲಿಯೆ ಇದ್ದ ದಂಪತಿ ಈಗ ಔಟಿಂಗ್ ಹೊರಟಿದ್ದಾರೆ. ಅಂದ್ಹಾಗೆ ಇಬ್ಬರು ತುಂಬಾ ದೂರದ ಪ್ರಯಾಣ ಕೈಗೊಂಡಿದ್ದಾರೆ ಅಂತ ಅಂದ್ಕೋಬೇಡಿ.

  ಸೋನುನಿಗಮ್ ವಿರುದ್ಧ ಕಿಡಿಕಾರಿದ ದಿವ್ಯ ಖೊಸ್ಲೇ. | T Series | Sonu Nigam | Divya Khosla Kumar

  ಕರ್ನಾಟಕದ ಸುಂದರ ತಾಣಗಳಲ್ಲಿ ಒಂದಾಗಿರುವ ಕೂರ್ಗ್ ಗೆ ಪ್ರವಾಸ ಹೋಗಿದ್ದಾರೆ. ದಿಗಂತ್ ಮತ್ತು ಐಂದ್ರಿತಾ ಅವರ ಟ್ರಿಪ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಕುಟುಂಬದ ಜೊತೆ ಪ್ರವಾಸ ಹೋಗಿರುವ ಫೋಟೋಗಳನ್ನು ಐಂದ್ರಿತಾ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಫೋಸ್ಟ್ ಮಾಡಿದ್ದಾರೆ.

  ವಿಡಿಯೋ: ಕೊರೊನಾ ಸಮಯದಲ್ಲಿ ಐಂದ್ರಿತಾ ರೇ ಮೆರೆದ ನಿಜವಾದ ಮಾನವೀಯತೆವಿಡಿಯೋ: ಕೊರೊನಾ ಸಮಯದಲ್ಲಿ ಐಂದ್ರಿತಾ ರೇ ಮೆರೆದ ನಿಜವಾದ ಮಾನವೀಯತೆ

  ಕೊರೊನಾ ಆತಂಕದಿಂದ ಹೊರಬಂದು ದಿಗಂತ್ ದಂಪತಿ ಪ್ರಕೃತಿ ಸೌಂದರ್ಯದ ನಡುವೆ ಕಾಲಕಳೆಯುತ್ತಿದ್ದಾರೆ. ಶೂಟಿಂಗ್ ಇಲ್ಲದೆ ಮನೆಯಲ್ಲಿಯೆ ಎರಡು ತಿಂಗಳು ಇದ್ದ ದಂಪತಿ ಈಗ ಪ್ರವಾಸದ ಮೂಲಕ ರಿಲ್ಯಾಕ್ಸ್ ಮೂಡ್ ಗೆ ಬಂದಿದ್ದಾರೆ. ದಿಗಂತ್ ಮತ್ತು ಐಂದ್ರಿತಾ ಜಾಲಿ ಟ್ರಿಪ್ ನಲ್ಲಿ ಪೋಷಕರು ಕೂಡ ಭಾಗಿಯಾಗಿದ್ದಾರೆ. ವಿಶೇಷ ಅಂದರೆ ಐಂದ್ರಿತಾ ಜೊತೆ ಎರಡು ಮುದ್ದಾದ ನಾಯಿಗಳು ಕೂಡ ಕೂರ್ಗ್ ಪ್ರಯಾಣ ಬೆಳೆಸಿವೆ.

  ಅಂದ್ಹಾಗೆ ಐಂದ್ರಿತಾ ಮತ್ತು ದಿಗಂತ್ ಗೆ ಟ್ರಿಪ್, ಟ್ರಕ್ಕಿಂಗ್ ಎಂದರೆ ತುಂಬಾ ಇಷ್ಟ. ಆಗಾಗ ದಂಪತಿ ಜಾಲಿ ಟ್ರಿಪ್ ಹೋಗುತ್ತಿದ್ದರು. ಜೊತೆಗೆ ಸೈಕಲಿಂಗ್ ಅಂದ್ರೆ ತುಂಬಾ ಇಷ್ಟ. ಸದ್ಯ ಲಾಕ್ ಡೌನ್ ಸಡಿಲಿಕೆ ಆಗುತ್ತಿದ್ದಂತೆ ಪ್ರಕೃತಿ ಸೌಂದರ್ಯ ನೋಡಲು ಹೊರಟಿದ್ದಾರೆ. ಪ್ರಕೃತಿ ಮಡಿಲಿನಲ್ಲಿರುವ ಒಂದಿಷ್ಟು ಫೋಟೋಗಳು ಶೇರ್ ಮಾಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

  English summary
  Actor Diganth and Aindrita have gone on a trip to coorg. Both are shared a beautiful photos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X