ದಿಗಂತ್- ಐಂದ್ರಿತಾ ಪ್ರೇಮಕಥೆ ಶುರುವಾಗಿದ್ದು ಹೀಗೆ
ಸ್ಯಾಂಡಲ್ ವುಡ್ ನಲ್ಲಿ ಆನ್ ಸ್ಕ್ರೀನ್ ಮತ್ತು ಆಫ್ ಸ್ಕ್ರೀನ್ ನಲ್ಲಿಯೂ ಕ್ಯೂಟ್ ಜೋಡಿ ಎನ್ನಿಸಿಕೊಂಡಿರುವ ದಿಗಂತ್ ಮತ್ತು ಐಂದ್ರಿತಾ ರೇ ತಮ್ಮ ಕಥೆ ಶುರುವಾದ ಬಗೆಯನ್ನು ಮೊದಲ ಬಾರಿಗೆ ಪ್ರೇಕ್ಷಕರ ಮುಂದೆ ಹೇಳಿಕೊಂಡಿದ್ದಾರೆ.
'ಕಥೆಯೊಂದು ಶುರುವಾಗಿದೆ' ಸಿನಿಮಾ ಇದೇ ಶುಕ್ರವಾರ ಬಿಡುಗಡೆ ಆಗುತ್ತಿದೆ. ಚಿತ್ರದ ಪ್ರಮೋಷನ್ ಗಾಗಿ ಮಾಡಿರುವ ಹೊಸ ರೀತಿಯ ಪ್ರಚಾರ ಕಾರ್ಯದಲ್ಲಿ ಐಂದ್ರಿತಾ ಹಾಗೂ ದಿಗಂತ್ ಭಾಗಿ ಆಗಿದ್ದು ಇಬ್ಬರ ಲವ್ ಸ್ಟೋರಿ ಶುರು ಆಗಿದ್ದು ಹೇಗೆ ಎನ್ನುವುದನ್ನು ತಿಳಿಸಿದ್ದಾರೆ.
'ಮನಸಾರೆ' ಸಿನಿಮಾಗೂ ಮುನ್ನವೇ ಐಂದ್ರಿತಾ ಮೇಲೆ ದಿಗಂತ್ ಗೆ ಲವ್ ಆಗಿತ್ತಂತೆ. ಟಿವಿಯಲ್ಲಿ ಪ್ರಸಾರ ಆದ ಐಂದ್ರಿತಾ ಸಂದರ್ಶನವನ್ನು ನೋಡಿ ತುಂಬಾ ಮುದ್ದಾಗಿದ್ದಾಳೆ ಎಂದುಕೊಂಡಿದ್ದರಂತೆ. ಈ ಘಟನೆ ಆಗಿ ಕೆಲವೇ ದಿನಗಳಲ್ಲಿ ದಿಗಂತ್ ಅವರಿಗೆ 'ಮನಸಾರೆ' ಸಿನಿಮಾದಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿದೆ.

'ಮನಸಾರೆ' ಸಿನಿಮಾ ಚಿತ್ರೀಕರಣ ಸಮಯದಲ್ಲಿ ದಿಗಂತ್ ಅವರಿಗೆ ಹುಷಾರಿಲ್ಲದ ಸಮಯದಲ್ಲಿ ಐಂದ್ರಿತಾ ಒಂದು ಪತ್ರದ ಜೊತೆಯಲ್ಲಿ ಹಣ್ಣಿನ ಬುಟ್ಟಿಯನ್ನು ಕಳುಹಿಸಿಕೊಟ್ಟಿದ್ದರಂತೆ. ಅಲ್ಲಿಂದ ಇಬ್ಬರ ಮನಸ್ಸಿನಲ್ಲಿ ಪ್ರೀತಿ ಹುಟ್ಟಿತ್ತು ಎನ್ನುವುದನ್ನು ಅಭಿಮಾನಿಗಳಿಗೆ ತಿಳಿಸಿದ್ದಾರೆ.

ಅಂದಿನಿಂದಲೂ ಸ್ನೇಹಿತರಂತೆ ಇರುವ ಐಂದ್ರಿತಾ ರೈ ಹಾಗೂ ದಿಗಂತ್ ಈ ವರ್ಷದ ಕೊನೆಯಲ್ಲಿ ಮದುವೆ ಮಾಡಿಕೊಳ್ಳಬೇಕು ಎಂದುಕೊಂಡಿದ್ದಾರೆ. ಸದ್ಯ ಬಿಡುಗಡೆಗೆ ತಯಾರಾಗಿರುವ ಕಥೆಯೊಂದು ಶುರುವಾಗಿದೆ ಸಿನಿಮಾ ರಿಲೀಸ್ ಆದ ನಂತರ ನಿಶ್ಚಿತಾರ್ಥದ ಬಗ್ಗೆ ಮಾತು-ಕಥೆ ನಡೆಯಲಿದೆ. ಯಶ್ -ರಾಧಿಕಾ, ಮೇಘನಾ-ಚಿರಂಜೀವಿ ಸರ್ಜಾ ಜೋಡಿಯ ಸಾಲಿಗೆ ದಿಗಂತ್ ಮತ್ತು ಐಂದ್ರಿತಾ ರೇ ಕೂಡ ಇನ್ನು ಕೆಲವೇ ದಿನಗಳಲ್ಲಿ ಸೇರಿಕೊಳ್ಳಲಿದ್ದಾರೆ.


Click it and Unblock the Notifications











