ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಐಂದ್ರಿತಾ ರೇ

ಸ್ಯಾಂಡಲ್ ವುಡ್ ನಟಿ ಐಂದ್ರಿತಾ ರೇ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. 34ನೇ ವಸಂತಕ್ಕೆ ಕಾಲಿಟ್ಟ ಐಂದ್ರಿತಾ, ಪತಿ ದಿಗಂತ್ ಜೊತೆ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕಾಲೇಜು ಆವರಣದಲ್ಲಿ ಸಸಿಗಳನ್ನು ನೆಟ್ಟು ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಮೂಲಕ ಹುಟ್ಟುಹಬ್ಬವನ್ನು ಸಂಭ್ರಮಸಿದ್ದಾರೆ.

ಸಸಿಗಳನ್ನು ನೆಡಲು ಐಂದ್ರಿತಾ ಅವರಿಗೆ ಪತಿ ದಿಗಂತ್ ಸಾಥ್ ನೀಡಿದ್ದಾರೆ. ಐಂದ್ರಿತಾ ದಂಪತಿ ಸಸಿ ನೆಡುತ್ತಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಪ್ರಾಣಿ, ಪಕ್ಷಿ ಮತ್ತು ಪರಿಸರದ ಬಗ್ಗೆ ಐಂದ್ರಿತಾ ಅವರಿಗೆ ಹೆಚ್ಚು ಕಾಳಜಿ. ಬೇಸಿಗೆಯಲ್ಲಿ ಪ್ರಾಣಿ ಪಕ್ಷಿಗಳಿಗೆ ನೀರು ಇಡುವ ಮೂಲಕ ಪ್ರಾಣಿಗಳ ದಾಹ ತೀರಿಸುತ್ತಿದ್ದ ಆಂಡಿ ಈಗ ಸಸಿಗಳನ್ನು ನೆಡುವ ಮೂಲಕ ಪರಿಸರದ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.

ಅಂದ್ಹಾಗೆ ಬಹುಕಾಲದ ಗೆಳೆಯರಾಗಿದ್ದ ಐಂದ್ರಿತಾ ಮತ್ತು ದಿಗಂತ್ ಕಳೆದ ವರ್ಷ ಡಿಸೆಂಬರ್ 12ಕ್ಕೆ ಹಸೆಮಣೆ ಏರಿದ್ದರು. ಮದುವೆ ನಂತರ ಆಂಡಿ ಯಾವ ಸಿನಿಮಾಗೂ ಗ್ರೀನ್ ಸಿಗ್ನಲ್ ನೀಡಿಲ್ಲ. ಆದ್ರೆ ಐಂದ್ರಿತಾ ಅಭಿನಯದ ಕನ್ನಡದ 'ಗರುಡ' ಚಿತ್ರ ರಿಲೀಸ್ ಆಗಬೇಕಿದೆ. ಕನ್ನಡದಲ್ಲಿ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುವ ಐಂದ್ರಿತಾ ಹಿಂದಿ ಚಿತ್ರರಂಗದಲ್ಲೂ ಮಿಂಚುತ್ತಿದ್ದಾರೆ.

Aindrita Ray celebrated her birthday by planting saplings at a college campus

ಕನ್ನಡದ ಸಿನಿಮಾಗಳ ಜೊತೆಗೆ ತೆಲುಗು ಮತ್ತು ಬೆಂಗಾಲಿ ಚಿತ್ರರಂಗದಲ್ಲೂ ಐಂದ್ರಿತಾ ಅಭಿನಯಿಸಿದ್ದಾರೆ. ಸಿನಿಮಾಗಳಿಂತ ಹೆಚ್ಚಾಗಿ ಪರಿಸರ ಕಾಳಜಿ ಬಗ್ಗೆ ಹೆಚ್ಚು ಒಲವು ಹೊಂದಿರುವ ದಿಗಂತ್ ಪತ್ನಿಯ ಮುಂದಿನ ನಡೆಯ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಐಂದ್ರಿತಾ ಅವರಿಗೆ ನಮ್ಮ ಕಡೆಯಿಂದನು ಹುಟ್ಟುಹಬ್ಬದ ಶುಭಾಷಯಗಳು.

More from Filmibeat

English summary
kannada actress Aindrita Ray celebrated her birthday by planting saplings at a college campus today. Diganth support to Aindritha work for planting saplings at a college campus.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X