For Quick Alerts
  ALLOW NOTIFICATIONS  
  For Daily Alerts

  ವಿಡಿಯೋ: ಕೊರೊನಾ ಸಮಯದಲ್ಲಿ ಐಂದ್ರಿತಾ ರೇ ಮೆರೆದ ನಿಜವಾದ ಮಾನವೀಯತೆ

  |

  ಕೊರೊನಾ ದಿಂದಾಗಿ ಕೋಟ್ಯಂತರ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸರ್ಕಾರಗಳು, ಬ್ಯುಸಿನೆಸ್‌ ಮನ್‌ ಗಳು, ಸಿನಿಮಾ ನಟರುಗಳು ಹಣ ಸಹಾಯ ಇನ್ನಿತರೆ ಸಹಾಯ ಮಾಡುತ್ತಿದ್ದಾರೆ.

  ಈ ನಡುವೆ ನಟಿ ಐಂದ್ರಿತಾ ರೇ ಮೆರೆದಿರುವ ಮಾನವೀಯತೆ ಬಹುಜನರ ಗಮನ ಸೆಳೆದಿದೆ. ಎಲ್ಲರೂ ಮನುಷ್ಯರ ಸಂಕಷ್ಟಕ್ಕೆ ನೆರವಾಗುತ್ತಿದ್ದರೆ ಐಂದ್ರಿತಾ ರೇ ಅವರು ಮೂಕಪ್ರಾಣಿಗಳಿಗೆ ನೆರವಾಗಿದ್ದಾರೆ.

  ಹನಿನಮೂನ್‌ ಗೆ ಅಡ್ಡಿಪಡಿಸಿದ ಕೊರೊನಾ ಬಗ್ಗೆ ಚಂದನ್-ನಿವೇದಿತ ಗೌಡ ಹಾಡುಹನಿನಮೂನ್‌ ಗೆ ಅಡ್ಡಿಪಡಿಸಿದ ಕೊರೊನಾ ಬಗ್ಗೆ ಚಂದನ್-ನಿವೇದಿತ ಗೌಡ ಹಾಡು

  ಕೊರೊನಾ ವೈರಸ್ ನಿಂದಾಗಿ ಎಲ್ಲೆಡೆ ಲಾಕ್‌ಡೌನ್ ಆಗಿರುವ ಕಾರಣ, ಬೀದಿ ನಾಯಿಗಳಿಗೆ ಆಹಾರ ಇಲ್ಲದಂತಾಗಿದೆ. ಬೀದಿ ನಾಯಿಗಳಿಗೆ ಆಹಾರ ಸಿಗುತ್ತಿದ್ದ, ಮಾರುಕಟ್ಟೆಗಳು, ಮಾಂಸದಂಗಡಿಗಳು, ಹೋಟೆಲ್‌ಗಳು ಎಲ್ಲವೂ ಬಂದ್ ಆಗಿರುವ ಕಾರಣ ಬೀದಿ ನಾಯಿಗಳಿಗೆ ಆಹಾರವೇ ಇಲ್ಲದಂತಾಗಿದೆ.

  ಬೀದಿ ನಾಯಿಗಳ ಬಗ್ಗೆ ಐಂದ್ರಿತಾ ಕಾಳಜಿ

  ಬೀದಿ ನಾಯಿಗಳ ಬಗ್ಗೆ ಐಂದ್ರಿತಾ ಕಾಳಜಿ

  ಈ ಸಂದರ್ಭದಲ್ಲಿ ಯಾರೂ ಹೆಚ್ಚಾಗಿ ತಲೆಕೆಡಿಸಿಕೊಳ್ಳದೇ ಇರುವ ಬೀದಿ ನಾಯಿಗಳ ಬಗ್ಗೆ ಐಂದ್ರಿತಾ ರೇ ಅವರು ಮಾನವೀಯತೆ ದೃಷ್ಟಿ ಬೀರಿದ್ದಾರೆ. ಐಂದ್ರಿತಾ ರೇ ಅವರು ಬೀದಿ ನಾಯಿಗಳಿಗೆ ಆಹಾರ ನೀಡುವ ಕಾರ್ಯ ಮಾಡುತ್ತಿದ್ದಾರೆ.

  ಬೀದಿ ನಾಯಿಗಳಿಗೆ ಆಹಾರ ನೀಡಿದ ಐಂದ್ರಿತಾ

  ಕೊರೊನಾ ದಿಂದ ಹೊರಗೆ ಬರಲು ಭಯ ಪಡುತ್ತಿರುವ ಸಂದರ್ಭದಲ್ಲಿ ಐಂದ್ರಿತಾ ರೇ ಅವರು ಪೂರ್ಣ ಸುರಕ್ಷತೆಯೊಂದಿಗೆ ಹೊರಗೆ ಬಂದು, ಬೀದಿ ನಾಯಿಗಳಿಗೆ ಆಹಾರ ನೀಡುತ್ತಿದ್ದಾರೆ.

  ವಿಡಿಯೋಕ್ಕೆ ಉತ್ತಮ ಪ್ರತಿಕ್ರಿಯೆ

  ವಿಡಿಯೋಕ್ಕೆ ಉತ್ತಮ ಪ್ರತಿಕ್ರಿಯೆ

  ಐಂದ್ರಿತಾ ರೇ ಅವರು ಬೀದಿ ನಾಯಿಗಳಿಗೆ ಆಹಾರ ನೀಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋಕ್ಕೆ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.

  ಪ್ರಾಣಿ ಪ್ರಿಯೆ ಐಂದ್ರಿತಾ ರೇ

  ಪ್ರಾಣಿ ಪ್ರಿಯೆ ಐಂದ್ರಿತಾ ರೇ

  ಐಂದ್ರಿತಾ ರೇ ಅವರು ಮುಂಚಿನಿಂದಲೂ ಪ್ರಾಣಿ ಪ್ರಿಯರು. ಹಲವು ನಾಯಿಗಳನ್ನು ಸಾಕಿರುವ ಅವರು, ಬೀದಿ ನಾಯಿಗಳನ್ನು ದತ್ತು ತೆಗೆದುಕೊಂಡು ನೋಡಿಕೊಳ್ಳುತ್ತಿದ್ದಾರೆ.

  English summary
  Actress Aindritha Ray feed street dogs in this Coronavirus lock down situation. She put video to social media people praised her job.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X