Don't Miss!
- News
ಜನರ ಆಕ್ರೋಶಕ್ಕೆ ಮಣಿದ ಸರ್ಕಾರ: ನೇಪಾಳದಲ್ಲಿ ಇಳಿಯಿತು ಪೆಟ್ರೋಲ್, ಡೀಸೆಲ್ ಬೆಲೆ
- Sports
Eng vs NZ 3rd Test: ಪಂದ್ಯಕ್ಕೆ ಮಳೆ ಕಾಟ, ಸಂಕಷ್ಟದಲ್ಲಿ ನ್ಯೂಜಿಲೆಂಡ್
- Technology
ಇನ್ಸ್ಟಾಗ್ರಾಮ್ನಲ್ಲಿ ಬೇರೆಯವರ ಲಾಸ್ಟ್ ಸೀನ್ ನೋಡುವುದು ಹೇಗೆ?
- Finance
ಇಂಡಿಯನ್ ಓವರ್ಸೀಸ್ ಬ್ಯಾಂಕ್ ಮೇಲೆ ದಂಡ ವಿಧಿಸಿದ ಆರ್ಬಿಐ
- Lifestyle
18 ವರ್ಷಗಳ ಬಳಿಕ ಬರಿಗಣ್ಣಿಗೆ ಗೋಚರಿಸುತ್ತಿದೆ 5 ಗ್ರಹಗಳ ಸಂಯೋಗದ ಅಪರೂಪದ ದೃಶ್ಯ: ನೋಡಲು ಮಿಸ್ ಮಾಡದಿರಿ
- Automobiles
ಶೀಘ್ರದಲ್ಲಿ ಜಾರಿಗೆ ಬರಲಿದೆ ದೇಶಿಯ ಮಾರುಕಟ್ಟೆಯಲ್ಲಿನ ಕಾರುಗಳಿಗೆ ಭಾರತ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್
- Education
SSC MTS Admit Card 2022 : ಪ್ರವೇಶ ಪತ್ರ ಡೌನ್ಲೋಡ್ ಮಾಡುವುದು ಹೇಗೆ ?
- Travel
ನಿಮ್ಮ ಮುಂದಿನ ಪ್ರವಾಸದ ಪಟ್ಟಿಯಲ್ಲಿ ಕರ್ನಾಟಕದ ಬಾದಾಮಿ ಯಾಕಿರಬೇಕು? ಇಲ್ಲಿದೆ ಕಾರಣ!
ದಿಗಂತ್ ಡಿಸ್ಚಾರ್ಜ್ ಯಾವಾಗ ? ಗೋವಾ ಅಪಘಾತದ ಬಗ್ಗೆ ಐಂದ್ರಿತಾ ಹೇಳಿದ್ದೇನು?
ದೂದ್ ಪೇಡಾ ದಿಗಂತ್ ಪತ್ನಿ ಐಂದ್ರಿತಾ ರೇ ಹಾಗೂ ಆಪ್ತರೊಂದಿಗೆ ಗೋವಾ ಟ್ರಿಪ್‌ಗೆ ತೆರಳಿದ್ದರು. ಈ ವೇಳೆ ದಿಗಂತ್ ಸಮ್ಮರ್ ಸಾಲ್ಟ್ ಮಾಡಲು ಹೋಗಿ ಕತ್ತಿಗೆ ಪಟ್ಟು ಮಾಡಿಕೊಂಡಿದ್ದರು. ಗೋವಾದಲ್ಲಿಯೇ ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ಅಲ್ಲಿಂದ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗಿತ್ತು. ಇದು ಕನ್ನಡ ಚಿತ್ರರಂಗ ಹಾಗೂ ಅಭಿಮಾನಿಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ಗೋವಾದಿಂದ ನಿನ್ನೆ (ಜೂನ್ 21) ಬೆಂಗಳೂರಿಗೆ ಏರ್‌ಲಿಫ್ಟ್ ಮೂಲಕ ಬೆಂಗಳೂರಿಗೆ ಕರೆದುಕೊಂಡು ಬರಲಾಗಿತ್ತು. ತಕ್ಷಣವೇ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗಿತ್ತು. ಈಗ ದಿಗಂತ್‌ರನ್ನು ವಾರ್ಡ್‌ಗೆ ಶಿಫ್ಟ್ ಮಾಡಿದ್ದು, ಐಂದ್ರಿತಾ ರೇ ಪತ್ನಿ ದಿಗಂತ್ ಆರೋಗ್ಯದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಶಸ್ತ್ರಚಿಕಿತ್ಸೆ
ಬಳಿಕ
ದಿಗಂತ್
ಆರೋಗ್ಯ
ಹೇಗಿದೆ?

ನಮ್ಮ ರೆಸಾರ್ಟ್ 3 ಗಂಟೆ ದೂರವಿತ್ತು
" ದಿಗಂತ್ ಮತ್ತು ನಾನು ನಮ್ಮ ಅತಿಯಾದ ಶೂಟಿಂಗ್ ಶೆಡ್ಯೂಲ್ ಅನ್ನು ಮುಗಿಸಿಕೊಂಡು ನಾವು ರಜೆಗೆ ಅಂತ ಹೋಗಿದ್ದೆವು. ನಾವಿರುವ ರೆಸಾರ್ಟ್ ಗೋವಾದಿಂದ 3 ಗಂಟೆ ದೂರದಲ್ಲಿತ್ತು. ನಿಮ್ಮೆಲ್ಲರಿಗೂ ಗೊತ್ತು. ಅವನಿಗೆ ಸ್ಪೋರ್ಟ್ಸ್ ಆಕ್ಟಿವಿಟಿಸ್ ತುಂಬಾ ಇಷ್ಟ ಅಂತ. ಸಮ್ಮರ್ ಸಾಲ್ಟ್ ಮಾಡುವುದಕ್ಕೆ ತುಂಬಾನೇ ಇಷ್ಟ. ದುರಾದೃಷ್ಟವಶಾತ್ ಈ ಬಾರಿ ಸಮ್ಮರ್ ಸಾಲ್ಟ್ ಸ್ಪಲ್ಪ ರಾಂಗ್ ಆಗಿ, ಲಾಂಡ್ ಆಗುವಾಗ ತಲೆ ತಾಗಿ ಕತ್ತಿಗೆಗೆ ಪೆಟ್ಟು ಬಿದ್ದಿದೆ."
ಮೊದಲು
ಕಣ್ಣಿಗೆ
ಪೆಟ್ಟು,
ಈಗ
ಕತ್ತಿಗೆ
ಗಂಭೀರ
ಗಾಯ:
ಅಭಿಮಾನಿಗಳಿಗೆ
ಆತಂಕ!

ನಮ್ಮ ಬಳಿ ಸಮಯ ಕಡಿಮೆ ಇತ್ತು
"ನಾನು ತಕ್ಷಣ ಗೋವಾದಲ್ಲಿರುವ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋದಾಗಿದ್ದೆ, ತಕ್ಷಣ ಎಂಆರ್‌ಐ, ಎಕ್ಸ್‌ರೇ ರಿಪೋರ್ಟ್ ಎಲ್ಲಾ ಇಲ್ಲಿನ ಮಣಿಪಾಲ್ ಆಸ್ಪತ್ರೆಗೆ ಕಳುಹಿಸಿದ್ದೆ. ಡ್ಯಾಮೇಜ್ ತುಂಬಾನೇ ಸೀರಿಯಸ್ ಆಗಬಹುದಾಗಿತ್ತು. ಆದರೆ ದಿಗಂತ್ ತುಂಬಾ ಶಿಸ್ತಿನಿಂದ ಇದ್ದ ಹಾಗೂ ವರ್ಕ್‌ಔಟ್ ಮಾಡುತ್ತಿದ್ದ. ಅದು ಅವನ ಮೇಲೆ ಆಗಬಹುದಾದ ಪರಿಣಾಮವನ್ನು ತಡೆದಿದೆ. ನಮ್ಮ ಬಳಿ ಸಮಯ ಜಾಸ್ತಿ ಇರಲಿಲ್ಲ. ಅವನನ್ನು ಗೋವಾದಿಂದ ಏರ್‌ಲಿಫ್ಟ್ ಮಾಡಿ ಬೆಂಗಳೂರಿಗೆ ಶಿಫ್ಟ್ ಮಾಡಬೇಕಿತ್ತು."

ಮತ್ತೆ ದಿಗಂತ್ ಸಮ್ಮರ್ ಸಾಲ್ಟ್‌ಗೆ ರೆಡಿ
"ಈಗ ಅವನ ಆರೋಗ್ಯ ತುಂಬಾನೇ ಚೆನ್ನಾಗಿದೆ. ಈಗಾಗಲೇ ಡಾಕ್ಟರ್‌ಗೆ ಮತ್ತೆ ಸಮ್ಮರ್ ಸಾಲ್ಟ್‌ಗೆ ರೆಡಿಯಾಗಿದ್ದೀನಿ ಅಂತ ಹೇಳಿದ್ದಾನೆ. ಏನೂ ಟೆನ್ಷನ್ ಇಲ್ಲ. ನನಗೆ ಗೋವಾದಲ್ಲಿದ್ದಾಗ ನನಗೆ ಸ್ವಲ್ಪ ಟೆನ್ಷನ್ ಇತ್ತು. ತಕ್ಷಣ ಬೆಂಗಳೂರಿಗೆ ಬಂದಾಗ ರಿಲೀಫ್ ಆಯ್ತು. ಫ್ಯಾಮಿಲಿ, ಫ್ರೆಂಡ್ಸ್ ಎಲ್ಲರೂ ಇದ್ದಾರೆ. ಸಪೋರ್ಟ್ ಮಾಡಿದ್ದಕ್ಕೆ ಎಲ್ಲರಿಗೂ ಧನ್ಯವಾದಗಳು. ಇವತ್ತು ಅಥವಾ ನಾಳೆ ಡಿಸ್ಚಾರ್ಜ್ ಆಗಬಹುದು."
ಅಡ್ವೆಂಚರ್
ಹವ್ಯಾಸದಿಂದಲೇ
ದಿಗಂತ್‌ಗೆ
ಕುತ್ತು!

ಗೋವಾ ಸಿಎಂಗೆ ಧನ್ಯವಾದ ಹೇಳಿದ ಐಂದ್ರಿತಾ
"ನಾನು ಈ ಸಂದರ್ಭದಲ್ಲಿ ಗೋವಾ ಸರ್ಕಾರ ಹಾಗೂ ಸಿಎಂ ಪ್ರಮೋದ್ ಸಾವಂತ್ ಅವರಿಗೆ ಗೋವಾದಿಂದ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲು ಸಹಕರಿಸಿದ್ಧಕ್ಕೆ ಧನ್ಯವಾದಗಳನ್ನು ಹೇಳುತ್ತೇನೆ. ಇಲ್ಲಿನ ಮಣಿಪಾಲ್ ಆಸ್ಪತ್ರೆಯ ಡಾ. ವಿದ್ಯಾಧರ್ ಜೊತೆ ಸಂಪರ್ಕದಲ್ಲಿದ್ದೆ. ದಿಗಂತ್ ಅವರನ್ನುಆರೋಗ್ಯದ ಮೇಲೆ ನಿಗಾ ಇಟ್ಟಿದ್ದಕ್ಕೆ ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ. ದಿಗಂತ್ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಆರೋಗ್ಯ ಈಗ ಸುಧಾರಿಸಿದೆ. ಈಗ ಗುಣಮುಖನಾಗುತ್ತಿದ್ದಾನೆ."