»   » ಐಂದ್ರಿತಾ ಬರ್ತಡೇಗೆ ರಿವಿಲ್ ಆಯ್ತು ಹೊಸ ಲುಕ್

ಐಂದ್ರಿತಾ ಬರ್ತಡೇಗೆ ರಿವಿಲ್ ಆಯ್ತು ಹೊಸ ಲುಕ್

Posted By:
Subscribe to Filmibeat Kannada

ಸ್ಯಾಂಡಲ್ ವುಡ್ನ ಗೊಂಬೆ ನಟಿ ಐಂದ್ರತಾ ರೇ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 2008 ರಲ್ಲಿ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟ ಐಂದ್ರಿತಾ ತಮ್ಮ ಅಭಿನಯದ ಮೂಲಕ ಸಾಕಷ್ಟು ಜನ ಅಭಿಮಾನಿಗಳನ್ನ ಪಡೆದುಕೊಂಡ ಆಂಡಿ ಸದ್ಯ ಸಿನಿಮಾ ಆಯ್ಕೆಯ ವಿಚಾರದಲ್ಲಿ ಇತ್ತೀಚಿಗೆ ಚ್ಯೂಸಿ ಆಗಿದ್ದಾರೆ.

'ಚೌಕಾ' ಸಿನಿಮಾದ ನಂತರ ಯಾವುದೇ ಚಿತ್ರದಲ್ಲಿ ಕಾಣಿಸಿಕೊಳ್ಳದ ಐಂದ್ರಿತಾ ಸದ್ಯ 'ಗರುಡ' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಅದಷ್ಟೇ ಅಲ್ಲದೆ Rambo2 ಚಿತ್ರದಲ್ಲಿ ವಿಶೇಷ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ.

 Aindrita Ray is celebrating her birthday.

ಹುಟ್ಟುಹಬ್ಬದ ವಿಶೇಷವಾಗಿ Rambo2 ಮತ್ತು ಗರುಡ ಚಿತ್ರದ ಐಂದ್ರಿತಾ ಫೋಸ್ಟರ್ ಬಿಡುಗಡೆ ಆಗಿದ್ದು ಆಂಡಿ ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ ಎನ್ನುವುದು ತಿಳಿದು ಬರ್ತಿದೆ.

ಮನಸಾರೆ ಜೋಡಿಗೆ ಶುರುವಾಯ್ತು ಪ್ರಾಣಿ ಕಾಳಜಿ

ಗರುಡ ಸಿನಿಮಾವನ್ನ ಧನಕುಮಾರ್ ನಿರ್ದೇಶನ ಮಾಡುತ್ತಿದ್ದು ಸಿದ್ಧಾರ್ಥ್ ನಾಯನಾಗಿ ಅಭಿನಯ ಮಾಡುತ್ತಿದ್ದಾರೆ. ಎಸ್ ಪ್ರಸಾದ್ ರೆಡ್ಡಿ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಪೋಸ್ಟರ್ ನಲ್ಲಿನ ಐಂದ್ರಿತಾ ಲುಕ್ ನೋಡಿದ್ರೆ ಸಿನಿಮಾದಲ್ಲಿ ಬೋಲ್ಡ್ ಆಗಿಯೇ ಕಾಣಿಸಿಕೊಂಡಿದ್ದಾರೆ ಎನ್ನುವುದು ತಿಳಿದು ಬರ್ತಿದೆ.

 Aindrita Ray is celebrating her birthday.

ಇನ್ನು Rambo2 ಸಿನಿಮಾದ ಪೋಸ್ಟರ್ ನಲ್ಲಿ ಆಂಡಿ ಲುಕ್ ಕಂಪ್ಲೀಟ್ ಬದಲಾಗಿದೆ. ಕಲರ್ ಫುಲ್ ಕಾಸ್ಟ್ಯೂಮ್ಸ್ ನಲ್ಲಿ ಮಿಂಚುತ್ತಿದ್ದು ಹಾಡಿಗೆ ಸಖತ್ತಾಗಿಯೇ ಹೆಜ್ಜೆ ಹಾಕಿದ್ದಾರೆ ಎನ್ನುವುದನ್ನ ಊಹೆ ಮಾಡಿಕೊಳ್ಳಬಹುದು. ಒಟ್ಟಾರೆ ಐಂದ್ರಿತಾ ಮತ್ತಷ್ಟು ಸಿನಿಮಾಗಳಲ್ಲಿ ಬ್ಯುಸಿ ಆಗಲಿ.ಹೆಚ್ಚು ಹೆಚ್ಚು ಆಫರ್ ಗಳು ಸಿಗಲಿ ಎನ್ನುವುದು ಅವರ ಅಭಿಮಾನಿಗಳ ಬಯಕೆ.

English summary
Kannada actress Aindrita Ray is celebrating her birthday. Birthday special Sharan starring 'Rambo 2' and actor Siddharth's 'Garuda' film posters are released

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X