»   » ಮಗದೊಮ್ಮೆ 'ಐಟಂ ಗರ್ಲ್' ಆದ 'ಬಸಂತಿ' ಐಂದ್ರಿತಾ ರೇ.!

ಮಗದೊಮ್ಮೆ 'ಐಟಂ ಗರ್ಲ್' ಆದ 'ಬಸಂತಿ' ಐಂದ್ರಿತಾ ರೇ.!

Posted By:
Subscribe to Filmibeat Kannada

'ಪ್ರೇಮ್ ಅಡ್ಡ', 'ಕಡ್ಡಿಪುಡಿ' ಮತ್ತು 'ಶಾರ್ಪ್ ಶೂಟರ್' ಚಿತ್ರಗಳಲ್ಲಿ ಬಿಸಿ ಬಿಸಿ ಆಗಿ ಕಾಣಿಸಿಕೊಂಡಿದ್ದ ನಟಿ ಐಂದ್ರಿತಾ ರೇ 'ಮುಂಗಾರು ಮಳೆ-2' ಚಿತ್ರದಲ್ಲಿ ವಿಶೇಷ ಪಾತ್ರ ನಿರ್ವಹಿಸುತ್ತಿರುವ ಬಗ್ಗೆ ಇದೇ 'ಫಿಲ್ಮಿಬೀಟ್ ಕನ್ನಡ'ದಲ್ಲಿ ನೀವು ಓದಿದ್ರಿ.

ಈಗ ಐಂದ್ರಿತಾ ರೇ ಬಗ್ಗೆ ಮತ್ತೊಂದು ಅಪ್ ಡೇಟ್ ತಂದಿದ್ದೀವಿ ಕೇಳಿ...ಗುರು ದೇಶಪಾಂಡೆ ನಿರ್ದೇಶನದ 'ಜಾನ್ ಜಾನಿ ಜನಾರ್ಧನ್' ಚಿತ್ರದ ಐಟಂ ಹಾಡಿಗೆ ನಟಿ ಐಂದ್ರಿತಾ ರೇ ಸೊಂಟ ಬಳುಕಿಸಿದ್ದಾರೆ. ['ಮುಂಗಾರು ಮಳೆ 2' ನಲ್ಲಿ ಗಣಿ ಜೊತೆ ಐಂದ್ರಿತಾ ಡ್ಯುಯೆಟ್]


aindrita-ray-shake-her-legs-for-john-jani-janardhan-item-song

'ಲೂಸ್ ಮಾದ' ಯೋಗಿ, 'ಕೃಷ್ಣ' ಅಜೇಯ್ ರಾವ್ ಮತ್ತು 'ಮದರಂಗಿ' ಕೃಷ್ಣ ಅಭಿನಯದ ಸಿನಿಮಾ 'ಜಾನ್ ಜಾನಿ ಜನಾರ್ಧನ್'. ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿರುವ ಡ್ಯಾನ್ಸಿಂಗ್ ನಂಬರ್ ಗೆ ಐಂದ್ರಿತಾ ರೇ ಹೆಜ್ಜೆ ಹಾಕಿದ್ದಾರೆ. [ದಿಗಂತ್ ಜೊತೆ ನಟಿ ಐಂದ್ರಿತಾ ರೇ ಐಟಂ ಡಾನ್ಸ್]


ಈಗಾಗಲೇ ಬೆಂಗಳೂರಿನ ಸುತ್ತಮುತ್ತ ಈ ಐಟಂ ಸಾಂಗ್ ನ ಚಿತ್ರೀಕರಣ ಮುಗಿದಿದೆ. ಚಿತ್ರದಲ್ಲಿ ಮೂಡಿಬರುವ ನಾಯಕ ನಟರ ಡ್ರೀಮ್ ಸಾಂಗ್ ಗೆ 'ಕನಸಿನ ರಾಣಿ' ಆಗಿ ಹೆಜ್ಜೆ ಹಾಕಿದ್ದಾರೆ ನಟಿ ಐಂದ್ರಿತಾ ರೇ.


'ಜಾನ್ ಜಾನಿ ಜನಾರ್ಧನ್' ಹಾಗೂ ನಟಿ ಐಂದ್ರಿತಾ ರೇ ಬಗೆಗಿನ ಹೆಚ್ಚಿನ ಅಪ್ ಡೇಟ್ಸ್ ಗಾಗಿ 'ಫಿಲ್ಮಿಬೀಟ್ ಕನ್ನಡ' ಓದುತ್ತಿರಿ.

English summary
Kannada Actress Aindrita Ray has made her special appearance in Item Song for the movie 'John Jani Janardhan'.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada