India
  For Quick Alerts
  ALLOW NOTIFICATIONS  
  For Daily Alerts

  ದೇವರಂತೆ ಬಂದು ಕಾಪಾಡಿದರು ವೆಂಕಟ್ ನಾರಾಯಣ: ಧನ್ಯವಾದ ಹೇಳಿದ ಐಂದ್ರಿತಾ ರೇ

  |

  ನಟ ದಿಗಂತ್‌ಗೆ ಕೆಲವು ದಿನಗಳ ಹಿಂದೆ ಗೋವಾ ಪ್ರವಾಸಕ್ಕೆ ತೆರಳಿದ್ದಾಗ ಬೆನ್ನು ಮೂಳೆ ಹಾಗೂ ಕತ್ತಿನ ಭಾಗಕ್ಕೆ ಪೆಟ್ಟಾಗಿತ್ತು, ಸೂಕ್ತ ಚಿಕಿತ್ಸೆಯ ಬಳಿಕ ಮನೆಗೆ ತೆರಳಿರುವ ದಿಗಂತ್ ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.

  ಆದರೆ ದಿಗಂತ್‌ಗೆ ಗಾಯವಾದ ಸಮಯದಲ್ಲಿ ಆ ಬಗ್ಗೆ ಹಲವು ಗಾಳಿ ಸುದ್ದಿಗಳು ಹರಡಿದ್ದವು. ದಿಗಂತ್‌ ಬೆನ್ನು ಮೂಳೆಗೆ ತೀವ್ರ ಪೆಟ್ಟಾಗಿದೆಯೆಂದು, ಅವರ ಪರಿಸ್ಥಿತಿ ಗಂಭೀರವಾಗಿದೆ ಅದೇ ಕಾರಣಕ್ಕೆ ಅವರನ್ನು ಗೋವಾದಿಂದ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗುತ್ತಿದೆ ಎಂದೆಲ್ಲ ಹೇಳಲಾಗಿತ್ತು.

  ಗೋವಾದಲ್ಲಿದ್ದ ದಿಗಂತ್‌ ಅಲ್ಲಿ ಸಮರ್‌ಸಾಲ್ಟ್ (ಒಂದು ಬಗೆಯ ಸಾಹಸ ಜಂಪಿಂಗ್) ಮಾಡುವಾಗ ತಲೆ ಕೆಳಗಾಗಿ ಬಿದ್ದ ಕಾರಣ ಅವರ ಬೆನ್ನು ಮೂಳೆ ಹಾಗು ಕುತ್ತಿಗೆಯ ಮೂಳೆಗೆ ಪೆಟ್ಟಾಗಿತ್ತು. ಆಗ ಅವರಿಗೆ ಸರಿಯಾದ ಸಮಯಕ್ಕೆ ಚಿಕಿತ್ಸೆಯ ಅಗತ್ಯವಿತ್ತು. ಆದರೆ ದಿಗಂತ್‌ ಜೊತೆ ಪತ್ನಿ ಐಂದ್ರಿತಾ ರೇ ಇದ್ದರು. ಹಾಗೋ ಹೀಗೋ ಅವರನ್ನು ಗೋವಾದ ಆಸ್ಪತ್ರೆಗೆ ಸೇರಿದರಾದರೂ ಅವರಿಗೆ ಶೀಘ್ರವಾಗಿ ಶಸ್ತ್ರಚಿಕಿತ್ಸೆ ಮಾಡಬೇಕಿತ್ತು. ತನ್ನ ಕತ್ತಲ್ಲು ಅಲುಗಾಡಿಸಲೂ ಆಗದ ಸ್ಥಿತಿಯಲ್ಲಿದ್ದ ದಿಗಂತ್‌ ಅನ್ನು ಗೋವಾದಿಂದ ಬೆಂಗಳೂರಿಗೆ ಅದೂ ಶೀಘ್ರವಾಗಿ ಕರೆದುಕೊಂಡು ಹೋಗುವುದು ಹೇಗೆಂಬ ಆತಂಕದಲ್ಲಿದ್ದ ಐಂದ್ರಿತಾಗೆ ಆಗ ವ್ಯಕ್ತಿಯೊಬ್ಬರು ಸಹಾಯ ಮಾಡಿದರು. ಅವರನ್ನು ನೆನಪಿಸಿಕೊಂಡು ಧನ್ಯವಾದ ಹೇಳಿದ್ದಾರೆ ಐಂದ್ರಿತಾ ರೇ.

  ಐಂದ್ರಿತಾ-ದಿಗಂತ್‌ಗೆ ನೆರವು ನೀಡಿದ್ದು ಈ ನಿರ್ಮಾಪಕ

  ಐಂದ್ರಿತಾ-ದಿಗಂತ್‌ಗೆ ನೆರವು ನೀಡಿದ್ದು ಈ ನಿರ್ಮಾಪಕ

  ದಿಗಂತ್‌ ಅನ್ನು ಶೀಘ್ರವಾಗಿ ಗೋವಾದಿಂದ ಬೆಂಗಳೂರಿಗೆ ಕರೆತರುವಲ್ಲಿ ಐಂದ್ರಿತಾ ರೇಗೆ ಅಗತ್ಯ ನೆರವು ನೀಡಿದ್ದು ಕೆವಿಎನ್‌ ಗ್ರೂಫ್ಸ್‌ನ ಸಂಸ್ಥಾಪಕ ಹಾಗೂ ನಿರ್ಮಾಪಕ ವೆಂಕಟ್ ನಾರಾಯಣ. ಈ ಬಗ್ಗೆ ಸ್ವತಃ ಐಂದ್ರಿತಾ ರೇ ನಿನ್ನೆ ಟ್ವೀಟ್ ಮಾಡಿ, ವೆಂಕಟ್ ನಾರಾಯಣ‌ಗೆ ಧನ್ಯವಾದ ಹೇಳಿದ್ದಾರೆ. ದೇವರಂತೆ ಬಂದು ನಮಗೆ ಸಹಾಯ ಮಾಡಿದಿರಿ ಎಂದು ಭಾವುಕರಾಗಿದ್ದಾರೆ ಐಂದ್ರಿತಾ.

  ದೇವರೇ ನಿಮ್ಮನ್ನು ಕಳಿಸಿದ ಎನಿಸುತ್ತದೆ: ಐಂದ್ರಿತಾ ರೇ

  ದೇವರೇ ನಿಮ್ಮನ್ನು ಕಳಿಸಿದ ಎನಿಸುತ್ತದೆ: ಐಂದ್ರಿತಾ ರೇ

  ''ಕೆಟ್ಟ ಕನಸಿನಂತೆ ಕಾಡಿದ ಆ ಘಟನೆಯಿಂದ ಸುಧಾರಿಸಿಕೊಂಡು ಈಗ ನಾವು ಮನೆಗೆ ಬಂದಿದ್ದೀವಿ. ನಮ್ಮ ಕಷ್ಟದ ಸಮಯದಲ್ಲಿ ಒಬ್ಬ ವ್ಯಕ್ತಿ ನಮಗೆ ಬಹಳ ಸಹಾಯ ಮಾಡಿದರು. ಅವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಅದುವೇ ವೆಂಕಟ್ ನಾರಾಯಣ. ನಿಮ್ಮನ್ನು ಆ ದೇವರೇ ಕಳಿಸಿಕೊಟ್ಟ ಎನ್ನಬೇಕು, ಬಹಳ ತುರ್ತು ಸಮಯದಲ್ಲಿ ನಾವಿದ್ದಾಗ ನೀವು ನಮಗಾಗಿ ಗೋವಾದಿಂದ ಬೆಂಗಳೂರಿಗೆ ಏರ್‌ಲಿಫ್ಟ್ ಅರೇಂಜ್ ಮಾಡಿದಿರಿ. ಬಹಳ ಧನ್ಯವಾದ'' ಎಂದಿದ್ದಾರೆ. ದಿಗಂತ್‌ ಅನ್ನು ಸ್ಟ್ರೆಚರ್‌ನಲ್ಲಿ ಮಲಗಿಸಿಕೊಂಡು ವಿಮಾನದಲ್ಲಿ ಬರುತ್ತಿರುವ ಚಿತ್ರವನ್ನು ಸಹ ಐಂದ್ರಿತಾ ರೇ ಹಂಚಿಕೊಂಡಿದ್ದಾರೆ.

  ಕನ್ನಡ ಸಿನಿಮಾ ನಿರ್ಮಾಪಕ ವೆಂಕಟ್ ನಾರಾಯಣ

  ಕನ್ನಡ ಸಿನಿಮಾ ನಿರ್ಮಾಪಕ ವೆಂಕಟ್ ನಾರಾಯಣ

  ಪ್ರೆಸ್ಟಿಜ್ ಸಂಸ್ಥೆಯ ಸಿಇಓ ಸಹ ಆಗಿರುವ ವೆಂಕಟ್ ನಾರಾಯಣ, ಕೆವಿಎನ್ ಫೌಂಡೇಶನ್‌ನ ಸಂಸ್ಥಾಪಕ ಹಾಗೂ ಕನ್ನಡ ಸಿನಿಮಾ ನಿರ್ಮಾಪಕರು ಆಗಿದ್ದಾರೆ. ಈಗಾಗಲೇ 'ಪೊಗರು', 'ಸಖತ್', 'ಬೈ ಟು ಲವ್', 'ಅವತಾರ ಪುರುಷ' ಇನ್ನೂ ಕೆಲವು ಸಿನಿಮಾ ನಿರ್ಮಾಣ ಮಾಡಿರುವ ಇವರು, ಧೃವ ಸರ್ಜಾ ನಟನೆಯ ಹೊಸ ಸಿನಿಮಾ ಸೇರಿದಂತೆ ಇನ್ನೂ ಕೆಲವು ಕನ್ನಡ ಸಿನಿಮಾಗಳಿಗೆ ಬಂಡವಾಳ ಹೂಡುತ್ತಿದ್ದಾರೆ. ನಟ ಯಶ್ ನಟನೆಯ ಮುಂದಿನ ಸಿನಿಮಾವನ್ನು ವೆಂಕಟ್ ನಾರಾಯಣ ಅವರೇ ನಿರ್ಮಾಣ ಮಾಡಲಿದ್ದಾರೆ ಎನ್ನಲಾಗುತ್ತಿದೆ. 'RRR' ಸಿನಿಮಾವನ್ನು ಕರ್ನಾಟಕದಲ್ಲಿ ವಿತರಣೆ ಮಾಡಿದ್ದು ಸಹ ವೆಂಕಟ್ ನಾರಾಯಣ ಅವರೇ.

  ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ನಟ ದಿಗಂತ್

  ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿರುವ ನಟ ದಿಗಂತ್

  ಇನ್ನು ನಟ ದಿಗಂತ್‌ ಜೂನ್ 2೦ ರಂದು ಗೋವಾದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದರು. ಅಂದು ಗೋವಾದ ಖಾಸಗಿ ಆಸ್ಪತ್ರೆಗೆ ಅವರನ್ನು ಅಡ್ಮಿಟ್ ಮಾಡಲಾಗಿತ್ತು. ಆದರೆ ಅವರಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆ ಇದ್ದ ಕಾರಣ ಅವರನ್ನು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ಶೀಘ್ರವಾಗಿ ವರ್ಗಾವಣೆ ಮಾಡಬೇಕಾಯಿತು. ಆಗ ವೆಂಕಟ್ ನಾರಾಯಣ ಸಹಾಯದಿಂದ ಏರ್‌ಲಿಫ್ಟ್ ಮೂಲಕ ಜೂನ್ 21 ರಂದು ಬೆಂಗಳೂರಿಗೆ ಕರೆತಂದು ಮಣಿಪಾಲ್ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಯ್ತು. ಅಲ್ಲಿ ಕೂಡಲೇ ಅವರಿಗೆ ಶಸ್ತಚಿಕತ್ಸೆ ಸಹ ಮಾಡಲಾಗಿದೆ. ಇದೀಗ ನಿನ್ನೆ ಆಸ್ಪತ್ರೆಯಿಂದ ಡಿಸ್‌ಚಾರ್ಜ್ ಆಗಿ ಮನೆ ಸೇರಿದ್ದಾರೆ ನಟ ದಿಗಂತ್.

  English summary
  Actress Aindrita Ray thanked KVN production owner Venkat Nrayana for helping her to airlift injured Diganth from Goa to Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X