For Quick Alerts
  ALLOW NOTIFICATIONS  
  For Daily Alerts

  ಮತ್ತೆ ಬೆಳ್ಳಿ ತೆರೆ ಮೇಲೆ ಐಶಾನಿ ಶೆಟ್ಟಿ ಮೋಡಿ

  By Pavithra
  |
  ಯಾಕೆ ಸ್ಯಾಂಡಲ್‌ವುಡ್ ನಟಿ ನಡುವೆ ಅಂತರವಿರಲಿ ಅಂತಿದ್ದಾರೆ ನೋಡಿ..! | Filmibeat Kannada

  ಐಶಾನಿ ಶೆಟ್ಟಿ... 'ವಾಸ್ತು ಪ್ರಕಾರ' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟು ಪಡ್ಡೆ ಹುಡುಗರ ನಿದ್ದೆ ಕೆಡೆಸಿದ ನಟಿ. ಅದಾದ ಮೇಲೆ ನೀನಾಸಂ ಸತೀಶ್ ಜೊತೆಯಲ್ಲಿ 'ರಾಕೆಟ್' ಚಿತ್ರದಲ್ಲಿ ಮತ್ತೆ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ನಂತರ ಮತ್ತೆ ಯಾವುದೇ ಸಿನಿಮಾದಲ್ಲಿ ಅಭಿನಯ ಮಾಡದ ಐಶಾನಿ 'ಕಾಜಿ' ಕಿರುಚಿತ್ರ ನಿರ್ದೇಶನ ಮಾಡಿ ಪ್ರಖ್ಯಾತಿ ಗಳಿಸಿದ್ದರು.

  ಸದ್ಯ ಐಶಾನಿ ಅಭಿನಯದ ಮತ್ತೊಂದು ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಪ್ರಖ್ಯಾತ್ ಪರಮೇಶ್ ನಾಯಕನಾಗಿರುವ 'ನಡುವೆ ಅಂತರವಿರಲಿ' ಚಿತ್ರದಲ್ಲಿ ಐಶಾನಿ ಶೆಟ್ಟಿ ಮತ್ತೆ ಬೆಳ್ಳಿ ತೆರೆ ಮೇಲೆ ಮಿಂಚಲಿದ್ದಾರೆ. ಈಗಿನ ಟ್ರೆಂಡ್ ಗೆ ಸೂಟ್ ಆಗುವಂತಹ ಕಥೆ ಇದಾಗಿದ್ದು ನೈಜ ಘಟನೆಯೇ ಸಿನಿಮಾದ ಕಥಾವಸ್ತುವಂತೆ.

  ಬೃಂದಾ ಪ್ರೊಡಕ್ಷನ್ಸ್ ಲಾಂಛನದಲ್ಲಿ ರವೀನ್-ಜಿ.ಕೆ. ನಾಗರಾಜು ನಿರ್ಮಾಣದ, ನಡುವೆ ಅಂತರವಿರಲಿ ಸಿನಿಮಾ ಚಿತ್ರೀಕರಣ ಕಂಪ್ಲೀಟ್ ಮಾಡಿ ತೆರೆಗೆ ಬರೋದಕ್ಕೆ ಸಿದ್ದವಾಗಿದೆ. ರವೀನ್ ನಿರ್ದೇಶನ ಮಾಡಿದ್ದು ಮಂಜು ಮಾಂಡವ್ಯ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.

  ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನವಿರುವ 'ನಡುವೆ ಅಂತರವಿರಲಿ' ಚಿತ್ರಕ್ಕೆ ವಿ. ನಾಗೇಂದ್ರ ಪ್ರಸಾದ್, ಯೋಗರಾಜ್ ಭಟ್, ಗೌಸ್ ಫೀರ್ ಸಾಹಿತ್ಯ ಬರೆದಿದ್ದಾರೆ.

  ಐಶಾನಿ ಶೆಟ್ಟಿ ಸೇರಿದಂತೆ ಚಿಕ್ಕಣ್ಣ, ರಕ್ಷಿತ್ ಕುಮಾರ್, ತುಳಸಿ ಶಿವಮಣಿ, ಅರುಣಾ ಬಾಲರಾಜ್, ಶ್ರೀನಿವಾಸಪ್ರಭು ಮುಂತಾದವರು ಅಭಿನಯ ಮಾಡಿದ್ದಾರೆ.

  English summary
  Kannada actress aishani shetty has acted as a heroine in Naduve Antaravirali Kannada movie. Naduve Antaravirali The movie is being released this month.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X