ಕಥೆಯೇ ನಾಯಕನಾಗಿರುವ ಚಿತ್ರಕ್ಕೆ ಐಶಾನಿ ನಾಯಕಿ
ಐಶಾನಿ ಶೆಟ್ಟಿ 'ರಾಕೆಟ್' ಸಿನಿಮಾ ನಂತರ ಎಲ್ಲಿಯೂ ಕಾಣಿಸಿಕೊಳ್ಳದ ಈಕೆ ಮತ್ತೆ ತಮ್ಮ ನಿರ್ದೇಶನದ ಕಿರು ಚಿತ್ರದ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಇತ್ತೀಚಿಗಷ್ಟೆ ವಿದ್ಯಾಭ್ಯಾಸ ಮುಗಿಸಿಕೊಂಡು ಮತ್ತೆ ಸಿನಿಮಾರಂಗದತ್ತ ಮುಖ ಮಾಡಿರುವ ಐಶಾನಿ 'ನಡುವೆ ಅಂತರವಿರಲಿ' ಎನ್ನುವ ಚಿತ್ರದಲ್ಲಿ ಅಭಿನಯ ಮಾಡಿದ್ದಾರೆ.
ಹಾಡುಗಳು ಮತ್ತು ಟ್ರೇಲರ್ ನಿಂದ ಸದ್ದು ಮಾಡುತ್ತಿರುವ 'ನಡುವೆ ಅಂತರವಿರಲಿ' ಸಿನಿಮಾದಲ್ಲಿ ಕಥೆಯೇ ಚಿತ್ರಕ್ಕೆ ನಾಯಕ ಅಂತೆ. ಇದೇ ಕಾರಣದಿಂದ ಐಶಾನಿ ಚಿತ್ರದಲ್ಲಿ ಅಭಿನಯ ಮಾಡಲು ಒಪ್ಪಿಗೆ ನೀಡಿದ್ದಾರೆ.

ಚಿತ್ರೀಕರಣ ಮುಗಿಸಿ ಸೆನ್ಸಾರ್ ನಿಂದ ಯು/ಎ ಸರ್ಟಿಫಿಕೇಟ್ ಪಡೆದುಕೊಂಡಿರುವ 'ನಡುವೆ ಅಂತರವಿರಲಿ' ಸಿನಿಮಾವನ್ನು ರವೀನ್ ಕುಮಾರ ನಿರ್ದೇಶನ ಮಾಡಿದ್ದಾರೆ. ಬೃಂದ ಪ್ರೊಡಕ್ಷನ್ಸ್ ನಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ರವೀನ್ ಕುಮಾರ ಹಾಗೂ ಕಿ ಜೆ ನಾಗರಾಜ ಬಂಡವಾಳ ಹಾಕಿದ್ದಾರೆ.

ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿರುವ ಚಿತ್ರದಲ್ಲಿ ಪ್ರಖ್ಯಾತ್ ಪರಮೇಶ್, ಐಶಾನಿ ಶೆಟ್ಟಿ, ಅಚ್ಚುತ್ ಕುಮಾರ್, ಚಿಕ್ಕಣ್ಣ, ತುಳಸಿ ಶಿವಮಣಿ ಇನ್ನು ಅನೇಕರು ಅಭಿನಯ ಮಾಡಿದ್ದಾರೆ. ಸದ್ಯ ಪ್ರಚಾರ ಕೆಲಸದಲ್ಲಿ ಬ್ಯುಸಿ ಆಗಿರುವ ಸಿನಿಮಾತಂಡ ಇದೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ.


Click it and Unblock the Notifications











