»   » ಧ್ರುವ - ಐಶ್ವರ್ಯ ಒಟ್ಟಿಗೆ ಸಿನಿಮಾ ಮಾಡಿದರೆ ಹೇಗಿರುತ್ತೆ ?

ಧ್ರುವ - ಐಶ್ವರ್ಯ ಒಟ್ಟಿಗೆ ಸಿನಿಮಾ ಮಾಡಿದರೆ ಹೇಗಿರುತ್ತೆ ?

Posted By:
Subscribe to Filmibeat Kannada

ನಟ ಧ್ರುವ ಸರ್ಜಾ ಮತ್ತು ಅವರ ಮಾವನ ಮಗಳು ನಟಿ ಐಶ್ವರ್ಯ ಅರ್ಜುನ್ ಇಬ್ಬರು ಜೊತೆಗೆ ಒಂದು ಸಿನಿಮಾ ಮಾಡಿದರೆ ಹೇಗಿರುತ್ತೆ ಎಂಬ ಕುತೂಹಲ ಸದ್ಯ ಹುಟ್ಟಿದೆ. ಅದಕ್ಕೆ ಕಾರಣ ಆಗಿರುವುದು 'ಪ್ರೇಮ ಬರಹ' ಸಿನಿಮಾ.

'ಪ್ರೇಮ ಬರಹ' ಸಿನಿಮಾ ಇಂದು ರಾಜ್ಯಾದಂತ್ಯ ರಿಲೀಸ್ ಆಗಿದೆ. ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಇನ್ನೂ ಸಿನಿಮಾದ ಒಂದು ಹಾಡಿನಲ್ಲಿ ನಟ ದರ್ಶನ್, ಅರ್ಜುನ್ ಸರ್ಜಾ, ಚಿರಂಜೀವಿ ಸರ್ಜಾ ಧ್ರುವ ಸರ್ಜಾ ಮತ್ತು ಐಶ್ವರ್ಯ ಅರ್ಜುನ್ ಹೆಜ್ಜೆ ಹಾಕಿದ್ದಾರೆ. ಅದರಲ್ಲಿಯೂ ಆ ಹಾಡಿನ ಒಂದು ಮ್ಯೂಸಿಕ್ ಬೀಟ್ ನಲ್ಲಿ ಧ್ರುವ ಮತ್ತು ಐಶ್ವರ್ಯ ಇಬ್ಬರೇ ಕಾಣಿಸಿಕೊಂಡಿದ್ದಾರೆ.

ವಿಮರ್ಶೆ : ಕಾರ್ಗಿಲ್ ಕದನದಲ್ಲಿ ಕಣ್ಬಿಟ್ಟ ಶುಭ್ರ 'ಪ್ರೇಮ' ಬರಹ

ಹಾಡಿನ ಸಣ್ಣ ತುಣುಕಿನಲ್ಲಿ ಈ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು ನೋಡುಗರ ಗಮನ ಸೆಳೆಯುತ್ತಾರೆ. ಇಬ್ಬರು ಒಳ್ಳೆಯ ಡ್ಯಾನ್ಸರ್ಸ್ ಆಗಿದ್ದು, ಸೂಪರ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇಬ್ಬರ ಫೇರ್ ನೋಡುವುದಕ್ಕೆ ಸಖತ್ ಮುದ್ದಾಗಿ ಕಾಣುತ್ತದೆ.

Aishwarya Arjun and Dhruva Sarja shared screen space in Prema Baraha song

ಸದ್ಯ 'ಪ್ರೇಮ ಬರಹ' ಮೂಲಕ ಐಶ್ವರ್ಯ ಅರ್ಜುನ್ ಕನ್ನಡಕ್ಕೆ ಕಾಲಿಟ್ಟಿದ್ದಾರೆ. ಮುಂದೆ ಅವರು ಧ್ರುವ ಸರ್ಜಾ ಜೊತೆ ಸಿನಿಮಾ ಮಾಡುತ್ತಾರಾ ಎನ್ನುವುದು ಎಲ್ಲರ ಕುತೂಹಲ.

English summary
Actor Arjun Sarja daughter Aishwarya Arjun and Dhruva Sarja shared screen space in 'Prema Baraha' kannada movie song. 'Prema Baraha' movie released today (February 9).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada