ಶ್ರುತಿ ಹರಿಹರನ್ ಗೆ ಪ್ರಶ್ನೆಗಳ ಬಾಣಗಳನ್ನು ತೂರಿದ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ.!
#ಮೀಟೂ ಅಭಿಯಾನದಿಂದಾಗಿ ಸ್ಯಾಂಡಲ್ ವುಡ್ ನಲ್ಲಿ ಕೋಲಾಹಲವೇ ಸೃಷ್ಟಿಯಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ಶುರುವಾಗಿದ್ದ #ಮೀಟೂ ಚಳುವಳಿ ಇದೀಗ ಕೋರ್ಟ್ ಮೆಟ್ಟಿಲೇರಿದೆ. ನಟಿ ಶ್ರುತಿ ಹರಿಹರನ್ ಮಾಡಿದ ಆರೋಪದಿಂದ ನೊಂದ ನಟ ಅರ್ಜುನ್ ಸರ್ಜಾ ಆಕೆಯ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಿದ್ದಾರೆ.
ಶ್ರುತಿ ಹರಿಹರನ್ ವಿರುದ್ಧ ಅರ್ಜುನ್ ಸರ್ಜಾ ಕೋರ್ಟ್ ಮೆಟ್ಟಿಲು ಏರುತ್ತಿದ್ದಂತೆಯೇ, ಅವರ ಮೇಲೆ ಆಕೆ ಕಂಪ್ಲೇಂಟ್ ಕೊಟ್ಟಿದ್ದಾರೆ. 2015 ರಲ್ಲಿ 'ವಿಸ್ಮಯ' ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ಏನೇನಾಯಿತು ಎಂಬುದನ್ನ ಐದು ಪುಟಗಳಲ್ಲಿ ವಿವರಿಸಿ ಪೊಲೀಸರಿಗೆ ಶ್ರುತಿ ಹರಿಹರನ್ ದೂರು ಕೊಟ್ಟಿದ್ದಾರೆ.
ಶ್ರುತಿ ಹರಿಹರನ್ ಕೊಟ್ಟಿರುವ ದೂರಿನ ಬಗ್ಗೆ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಸಿಡಿಮಿಡಿಗೊಂಡಿದ್ದಾರೆ. ಶ್ರುತಿ ಹರಿಹರನ್ ಗೆ ಐಶ್ವರ್ಯ ಸರ್ಜಾ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ. ಅದನ್ನೆಲ್ಲ ನೀವೇ ಓದಿರಿ ಫೋಟೋ ಸ್ಲೈಡ್ ಗಳಲ್ಲಿ...

ನನ್ನ ತಂದೆ ಮೇಲೆ ಮಾತ್ರ ಆರೋಪ ಯಾಕೆ.?
''ನಾನು ಅವರ (ಶ್ರುತಿ ಹರಿಹರನ್) ಸಂದರ್ಶನಗಳನ್ನು ನೋಡಿದ್ದೇನೆ. ಕಾಸ್ಟಿಂಗ್ ಕೌಚ್ ನಡೆದಿದೆ, ತಮಿಳು ನಿರ್ಮಾಪಕರಿಂದ ಅವರಿಗೆ ಕಾಸ್ಟಿಂಗ್ ಕೌಚ್ ಆಗಿದೆ ಅಂತ ಹೇಳಿದ್ದಾರೆ. ಇದು ತುಂಬಾ ದೊಡ್ಡ ಆರೋಪ. ಆ ತಮಿಳು ನಿರ್ಮಾಪಕ ಯಾರು ಅಂತ ಬಹಿರಂಗ ಪಡಿಸದೆ, ನನ್ನ ತಂದೆ ಮೇಲೆ ಮಾತ್ರ ಯಾಕೆ ಆರೋಪ ಮಾಡಿದ್ದಾರೆ.?'' - ಐಶ್ವರ್ಯ ಸರ್ಜಾ, ಅರ್ಜುನ್ ಸರ್ಜಾ ಪುತ್ರಿ

ಅಂದು ಯಾಕೆ ಹಾಗೆ ಹೇಳಬೇಕಿತ್ತು.?
''ಪ್ರೀಮಿಯರ್ ಶೋ ನಡೆದಾಗ, ಅರ್ಜುನ್ ಸರ್ಜಾ ಜೊತೆ ಕೆಲಸ ಮಾಡಿರುವುದು ಖುಷಿ ಕೊಟ್ಟಿದೆ ಅಂತ ಹೇಳಿದ್ದಾರೆ. ಅದಕ್ಕೆ ವಿಡಿಯೋ ಸಾಕ್ಷಿ ಕೂಡ ಇದೆ. ಅವರಿಗೆ ನನ್ನ ತಂದೆಯಿಂದ ತೊಂದರೆ ಆಗಿದ್ದರೆ, ಅಂದು ನನ್ನ ಜೊತೆಗೆ ನಗುತ್ತ ಮಾತನಾಡುವ ಅವಶ್ಯಕತೆ ಏನಿತ್ತು.?'' - ಐಶ್ವರ್ಯ ಸರ್ಜಾ, ಅರ್ಜುನ್ ಸರ್ಜಾ ಪುತ್ರಿ

ಇದನ್ನ ಲೈಂಗಿಕ ಕಿರುಕುಳ ಎನ್ನಬಹುದೇ.?
''ಶ್ರುತಿ ಹರಿಹರನ್ ಗೆ ಚೇತನ್ ಸಪೋರ್ಟ್ ಮಾಡಿದ್ದಾರೆ. ಚೇತನ್ ನನ್ನ ಜೊತೆ ಫೋಟೋ ಶೂಟ್ ನಲ್ಲಿ ಪಾಲ್ಗೊಂಡಿದ್ದರು. ಚೇತನ್ ಕೂಡ ನನ್ನ ಕೆನ್ನೆ ಹಾಗೂ ಬೆನ್ನು ಮುಟ್ಟಿದ್ದರು. ಚೇತನ್ ನನ್ನ ಊಟಕ್ಕೆ ಕರೆದಿದ್ದರು. ಅದನ್ನ ನಾನು ಲೈಂಗಿಕ ಕಿರುಕುಳ ಅಂತ ಕರೆಯಲು ಆಗುತ್ತಾ.? ಅವರ ಪ್ರಕಾರ ಅದು ಲೈಂಗಿಕ ಕಿರುಕುಳ ಆಗಿದ್ದರೆ, ಇದೂ ಕೂಡ ಲೈಂಗಿಕ ಕಿರುಕುಳವೇ.!'' - ಐಶ್ವರ್ಯ ಸರ್ಜಾ, ಅರ್ಜುನ್ ಸರ್ಜಾ ಪುತ್ರಿ

ಒಂದು ತಿಂಗಳ ಹಿಂದೆ ಆಗಿದ್ದೇನು.?
''ನನ್ನ ತಂದೆಯನ್ನ ಶ್ರುತಿ ಟ್ವಿಟ್ಟರ್ ನಲ್ಲಿ ಅನ್ ಫಾಲೋ ಮಾಡಿರುವುದು ಒಂದು ತಿಂಗಳ ಮುಂಚೆ. ಯಾಕೆ.? ಅಲ್ಲಿವರೆಗೂ ಏನಾಗಿತ್ತು... ಸ್ವಾಭಿಮಾನ ಇರಲಿಲ್ವಾ ಅವರಿಗೆ.? ಈ ಬಗ್ಗೆ ನನ್ನ ಬಳಿ ಪ್ರೂಫ್ ಇದೆ'' - ಐಶ್ವರ್ಯ ಸರ್ಜಾ, ಅರ್ಜುನ್ ಸರ್ಜಾ ಪುತ್ರಿ

ಎಷ್ಟು ಬೇಕಾದರೂ ಸುಳ್ಳು ಹೇಳಬಹುದು
''ಸಹಾಯಕ ನಿರ್ದೇಶಕರು ಸಾಕ್ಷಿ ಅಂತ ಹೇಳಿದ್ದಾರೆ. ಅವರು ಯಾರು ಅನ್ನೋದು ನನಗೆ ಗೊತ್ತು. ಅವರುಗಳು ನಮ್ಮ ಸಿನಿಮಾದಲ್ಲೂ ಕೆಲಸ ಮಾಡಿದ್ದಾರೆ. ಅವರೊಂದಿಗೆ ನನಗೆ ತುಂಬಾ ಕೆಟ್ಟ ಅನುಭವ ಆಗಿದೆ. ಇಂತಹ ಜನರನ್ನು ಇಟ್ಟುಕೊಂಡು 'ಸಾಕ್ಷಿ' ಅಂತ ಎಷ್ಟು ಬೇಕಾದರೂ ಸುಳ್ಳು ಹೇಳಬಹುದು'' - ಐಶ್ವರ್ಯ ಸರ್ಜಾ, ಅರ್ಜುನ್ ಸರ್ಜಾ ಪುತ್ರಿ

ನಾಚಿಕೆ ಆಗುತ್ತೆ
''ಧೈರ್ಯ ಇರಲಿಲ್ಲ ಅಂತಾರೆ. ಕಾಸ್ಟಿಂಗ್ ಕೌಚ್ ಇದೆ ಅಂತ ಹೇಳುವಾಗ ಧೈರ್ಯ ಎಲ್ಲಿಂದ ಬಂದಿತ್ತು.? ಶ್ರುತಿ ಅಂಥವರು ಹೆಣ್ಮಕ್ಕಳನ್ನ ಪ್ರತಿನಿಧಿಸಬಾರದು. ಯಾಕಂದ್ರೆ, ಮುಗ್ಧರ ಮೇಲೆ ಆರೋಪ ಮಾಡುವುದು ಸರಿ ಅಲ್ಲ. ನನಗೆ ನಾಚಿಕೆ ಆಗುತ್ತೆ. ಸಮಾಜದಲ್ಲಿ ಇಷ್ಟು ಕೀಳು ಮಟ್ಟಕ್ಕೆ ಜನ ಇಳಿಯುತ್ತಾರೆ ಅಂತ ಗೊತ್ತಿರಲಿಲ್ಲ'' - ಐಶ್ವರ್ಯ ಸರ್ಜಾ, ಅರ್ಜುನ್ ಸರ್ಜಾ ಪುತ್ರಿ

ರಾಮ್ ಯಾರು.?
''ರಾಮ್ ಯಾರು ಅಂತ ನನಗೆ ಗೊತ್ತಾಗಬೇಕು. ರಾಮ್ ಬಾಯ್ ಫ್ರೆಂಡ್ ಅಂತ ಎಲ್ಲರೂ ಹೇಳಿದ್ದರು. ಈಗ ಪತಿ-ಪತ್ನಿ ಆಗಿದ್ದಾರಂತೆ. ಮೀಡಿಯಾದವರು ರಾಮ್ ನ ಕರೆಯಲಿ. ಆತ ಯಾರು ಅಂತ ನಾನು ನೋಡಬೇಕು'' - ಐಶ್ವರ್ಯ ಸರ್ಜಾ, ಅರ್ಜುನ್ ಸರ್ಜಾ ಪುತ್ರಿ


Click it and Unblock the Notifications











