ಜೂ.ಚಿರು ನೋಡಿ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಹೇಳಿದ್ದೇನು?
ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಮಗನನ್ನು ನೋಡಲು ಚಿರು ಸರ್ಜಾ ಮಾವ ಅರ್ಜುನ್ ಸರ್ಜಾ ಕುಟುಂಬ ಸಮೇತ ಚೆನ್ನೈನಿಂದ ಬೆಂಗಳೂರಿಗೆ ಆಗಮಿಸಿದ್ದಾರೆ. ಇಂದು ಬೆಳಗ್ಗೆ ಅರ್ಜುನ್ ಸರ್ಜಾ ಪತ್ನಿ ಮತ್ತು ಇಬ್ಬರ ಮಕ್ಕಳೊಂದಿಗೆ ಚಿರು ಪುತ್ರನನ್ನು ನೋಡಲು ಆಸ್ಪತ್ರೆಗೆ ಭೇಟಿಕೊಟ್ಟಿದ್ದಾರೆ.
ಜೂ.ಚಿರುನನ್ನು ನೋಡಿ ಕಣ್ತುಂಬಿಕೊಂಡ ಅರ್ಜುನ್ ಸರ್ಜಾ ಮತ್ತು ಕುಟುಂಬ ಕೆಲವು ಸಮಯ ಮಗವಿನ ಜೊತೆ ಕಾಲಕಳೆದಿದ್ದಾರೆ. ಬಳಿಕ ಆಸ್ಪತ್ರೆಯಿಂದ ಹೊರಬಂದ ಅರ್ಜುನ್ ಸರ್ಜಾ ಫ್ಯಾಮಿಲಿ ಮಾಧ್ಯಮದರ ಜೊತೆ ಮಾತನಾಡಿದ್ದಾರೆ. ಚಿರು ಪುತ್ರನ ಬಗ್ಗೆ ನಟಿ ಮತ್ತು ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಸರ್ಜಾ ಮಾತನಾಡಿ, ಮಗು ತುಂಬಾ ಮುದ್ದಾಗಿದೆ ಎಂದಿದ್ದಾರೆ. ಮುಂದೆ ಓದಿ...

ಮೂಗು ಥೇಟ್ ಚಿರುಹಾಗೆ ಇದೆ
ತುಂಬಾ ಕ್ಯೂಟ್ ಆಗಿದ್ದಾನೆ. ಚಿರು ತರಾನೇ ಇದಾನೆ. ಮುದ್ದಾಗಿದೆ. ಮೂಗು ಮಾತ್ರ ಥೇಟ್ ಚಿರು ಹಾಗೆ ಇದೆ ಎಂದಿದ್ದಾರೆ. ಈ ಅನುಭವವನ್ನು ಹೇಳಿಕೊಳ್ಳಲು ಸಾಧ್ಯವೇ ಇಲ್ಲ. ತುಂಬಾ ಖುಷಿಯಾಗುತ್ತಿದೆ. ಆದರೆ ಅದೇ ಸಮಯದಲ್ಲಿ ಚಿರು ನೆನಪು ಸಹ ಬರುತ್ತಿದೆ. ಆದರೆ ಅವನ ಆಶೀರ್ವಾದ ಯಾವಾಗಲೂ ಮಗು ಮೇಲೆ ಇರುತ್ತದೆ ಎಂದರು.

ಹೆಣ್ಣು ಮಗು ಆಗಬಹುದು ಎಂದು ಅನಿಸಿತ್ತು
ಈ ಮಗು ತುಂಬಾ ಸ್ಪೆಷಲ್, ಯಾಕಂದ್ರೆ ನಮ್ಮ ಕುಟುಂಬದ ಪ್ರೀತಿ ಒಂದು ಕಡೆಯಾದರೆ. ಮತ್ತೊಂದು ಕಡೆ ಇಡೀ ಕರ್ನಾಟಕದ ಪ್ರೀತಿ, ಆಶೀರ್ವಾದ ಈ ಮಗು ಮೇಲಿದೆ. ಗಂಡು ಮಗುನೇ ಆಗುತ್ತೆ ಎಂದು ಎಲ್ಲರೂ ಗೆಸ್ ಮಾಡಿದ್ದೆವು. ಆದರೆ ನನಗೆ ಎಲ್ಲೋ ಒಂದು ಕಡೆ ಹೆಣ್ಣು ಮಗು ಆಗಬಹುದು ಎಂದು ಅನಿಸಿತ್ತು. ಮೇಘನಾ ತುಂಬಾ ಮುದ್ದಾಗಿ ಕಾಣಿಸುತ್ತಿದದ್ದರಿಂದ ಹಾಗೆ ಅನಿಸಿತ್ತು. ಆದರೆ ಯಾವುದೇ ಮಗುವಾದರೂ ನಮಗೆ ಖುಷಿ ಇತ್ತು. ಈಗ ಗಂಡು ಮಗುವಾಗಿದ್ದಕ್ಕೆ ಎಲ್ಲರಿಗೂ ಹೆಚ್ಚು ಸಂತಸವಾಗಿದೆ ಎಂದು ಐಶ್ವರ್ಯಾ ಹೇಳಿದ್ದಾರೆ.

ಮೊಮ್ಮಗನ ಬಗ್ಗೆ ಅರ್ಜುನ್ ಸರ್ಜಾ ಪತ್ನಿ ಹೇಳಿದ್ದೇನು?
ಇನ್ನೂ ಅರ್ಜುನ್ ಸರ್ಜಾ ಪತ್ನಿ ಆಶಾ ರಾಣಿ ಮಾತನಾಡಿ, ತುಂಬಾ ಖುಷಿಯಾಗಿದೆ. ಮಗುವನ್ನು ದೇವರು ಚೆನ್ನಾಗಿ ನೋಡಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ. ಅಜ್ಜಿ ಆಗಿರೋ ಸಂಭ್ರಮ ಹೇಳೋಕೆ ಆಗಲ್ಲ ಎಂದಿದ್ದಾರೆ.
Recommended Video

ಚಿರು ಪುತ್ರನ ಬಗ್ಗೆ ಅರ್ಜುನ್ ಸರ್ಜಾ ಮಾತು
''ನಾಲ್ಕೈದು ತಿಂಗಳ ಹಿಂದೆ ನಮ್ಮ ಕುಟುಂಬದಲ್ಲಿ ದೊಡ್ಡ ಅನಾಹುತ ಆಗಿತ್ತು. ಆ ನೋವಿನಲ್ಲಿದ್ದ ನಮ್ಮ ಮನೆಯಲ್ಲಿ ಈಗ ಸಂಭ್ರಮ ಹುಟ್ಟಿದೆ. ಮಗು ಹುಟ್ಟಿದೆ ಎನ್ನುವುದಕ್ಕಿಂತ ಪ್ರತಿಯೊಬ್ಬರಲ್ಲೂ ಸಂತೋಷ ಹುಟ್ಟಿದೆ ಎಂದು ಹೇಳಬಹುದು, ಈ ಸಂತಸ ನೋಡಲು ಚಿರು ಇಲ್ಲ ಎಂಬ ದುಃಖ ಇದೆ'' ಎಂದರು. ''ಬಹುಶಃ 20 ವರ್ಷದ ಆದ್ಮೇಲೆ ನಾನು ಇವನನ್ನು ಹೀರೋ ಆಗಿ ಪರಿಚಯ ಮಾಡ್ತೀನಿ ಅಂತ ಅನಿಸುತ್ತಿದೆ'' ಎಂದು ಅರ್ಜುನ್ ಸರ್ಜಾ ಹೇಳಿದರು.


Click it and Unblock the Notifications











