For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆಗೂ ಮುಂಚೆ ಐಶ್ವರ್ಯ ರೈ ಬಗ್ಗೆ ಟ್ವಿಸ್ಟ್ ನೀಡಿದ '2.0'.!

  |
  2.0 Movie: ಬಿಡುಗಡೆಗೂ ಮುಂಚೆ ಐಶ್ವರ್ಯ ರೈ ಬಗ್ಗೆ ಟ್ವಿಸ್ಟ್ ನೀಡಿದ '2.0'.!

  ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ '2.0' ಸಿನಿಮಾ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ನವೆಂಬರ್ 29 ರಂದು ವರ್ಲ್ಡ್ ವೈಡ್ ರಜನಿ ಸಿನಿಮಾ ತೆರೆಕಾಣುತ್ತಿದೆ.

  ಈ ಮೆಗಾ ಸಿನಿಮಾ ರಿಲೀಸ್ ಗೆ ಇನ್ನೇನೂ ಒಂದು ವಾರ ಬಾಕಿಯಿರುವಾಗ, ಸರ್ಪ್ರೈಸ್ ಸುದ್ದಿಯೊಂದನ್ನ ಬಿಚ್ಚಿಟ್ಟಿದ್ದಾರೆ ನಿರ್ದೇಶಕರು. ರಜನಿ, ಅಕ್ಷಯ್ ಕುಮಾರ್ ಜೊತೆ ಆಮಿ ಜಾಕ್ಸನ್ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಆದ್ರೆ, ನಟಿ ಐಶ್ವರ್ಯ ರೈ ಬಚ್ಚನ್ ಅವರ ಪಾತ್ರವನ್ನ ಕೂಡ ಚಿತ್ರದಲ್ಲಿ ನೋಡಬಹುದು ಎಂದು ನಿರ್ದೇಶಕ ಶಂಕರ್ ಬಹಿರಂಗಪಡಿಸಿದ್ದಾರೆ.

  ಕನ್ನಡದಲ್ಲಿ ಬರ್ತಿದ್ಯಾ ರಜನಿಯ '2.0'.? ಎಲ್ಲೆಲ್ಲೂ ಹರಿದಾಡ್ತಿದೆ ಕನ್ನಡ ಟೀಸರ್.!ಕನ್ನಡದಲ್ಲಿ ಬರ್ತಿದ್ಯಾ ರಜನಿಯ '2.0'.? ಎಲ್ಲೆಲ್ಲೂ ಹರಿದಾಡ್ತಿದೆ ಕನ್ನಡ ಟೀಸರ್.!

  ರೋಬೋ ಚಿತ್ರದಲ್ಲಿ ರಜನಿಕಾಂತ್ ಗೆ ಜೋಡಿಯಾಗಿ ಐಶ್ವರ್ಯ ನಟಿಸಿದ್ದರು. ಇದು ಆ ಚಿತ್ರದ ಮುಂದುವರೆದ ಭಾಗವಾಗಿದ್ದರಿಂದ ವಸಿಗರನ್ (ರಜನಿ ಪಾತ್ರದ ಹೆಸರು) ಐಶ್ ಪಾತ್ರವೂ ಮುಂದುವರೆಯಲಿದೆ ಎನ್ನಲಾಗಿತ್ತು. ಬಟ್, ಕೊನೆ ಕ್ಷಣದಲ್ಲಿ ಐಶ್ ಇಲ್ಲದೇ ಆಮಿ ಜಾಕ್ಸನ್ ನಾಯಕಿ ಎಂದು ಘೋಷಿಸಿದ್ದರು.

  ಶಾರೂಖ್, ರಜನಿಯನ್ನ ಹಿಂದಿಕ್ಕಿದ 'ಕೆಜಿಎಫ್' ಭಾರತದ ನಂ.1 ಸಿನಿಮಾ ಶಾರೂಖ್, ರಜನಿಯನ್ನ ಹಿಂದಿಕ್ಕಿದ 'ಕೆಜಿಎಫ್' ಭಾರತದ ನಂ.1 ಸಿನಿಮಾ

  ಆದ್ರೀಗ, ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕ ಶಂಕರ್, ಐಶ್ವರ್ಯ ವಿಚಾರದಲ್ಲಿ ಟ್ವಿಸ್ಟ್ ನೀಡಿದ್ದಾರೆ. ''ಆಮಿ ಜಾಕ್ಸನ್ ಈ ಚಿತ್ರದಲ್ಲಿ ರೋಬೋ ಪಾತ್ರ ಮಾಡಿದ್ದಾರೆ. ರಜನಿಕಾಂತ್ ವಿಜ್ಞಾನಿ ಪಾತ್ರದಲ್ಲಿ ಹಾಗೂ ರೋಬೋ ಪಾತ್ರದಲ್ಲಿ ಮಿಂಚಿದ್ದಾರೆ. ಬಟ್, ವಸಿಗರನ್ ಪತ್ನಿ ಪಾತ್ರದಲ್ಲಿ ಐಶ್ವರ್ಯ ರೈ ಇಲ್ಲಿ ಬರ್ತಾರೆ. ಆದ್ರೆ, ಅವರ ಅಭಿನಯ ಇರುವುದಿಲ್ಲ. ಅವರ ಪಾತ್ರದ ಹೆಸರನ್ನ ಮಾತ್ರ ಹಲವು ಬಾರಿ ಪ್ರಸ್ತಾಪಿಸಲಾಗಿದೆ'' ಎಂದು ಹೇಳಿಕೊಂಡಿದ್ದಾರೆ.

  ರಜನಿಯ '2.0' ಚಿತ್ರದ ಗ್ರಾಫಿಕ್ಸ್ ಗೆ ಖರ್ಚಾಗಿದ್ದು ಬರೋಬ್ಬರಿ 543 ಕೋಟಿ.! ರಜನಿಯ '2.0' ಚಿತ್ರದ ಗ್ರಾಫಿಕ್ಸ್ ಗೆ ಖರ್ಚಾಗಿದ್ದು ಬರೋಬ್ಬರಿ 543 ಕೋಟಿ.!

  ಅಂದ್ರೆ, ಈ ಹಿಂದಿನ ಸಿನಿಮಾದಲ್ಲಿ ರಜನಿಗೆ ಪತ್ನಿಯಾಗುವ ಮೂಲಕ ಸಿನಿಮಾ ಮುಗಿದಿತ್ತು. ಈ ಚಿತ್ರದಲ್ಲಿ ಪತ್ನಿಯ ಹೆಸರನ್ನ ಉಲ್ಲೇಖ ಮಾಡಲಾಗಿದೆ. ಹೀಗಾಗಿ, ಐಶ್ ನಟಿಸಿದಿದ್ದರೂ, ಅವರ ಪಾತ್ರ ಇಲ್ಲಿಯೂ ಇದೆ ಎಂದು ಸರ್ಪ್ರೈಸ್ ನೀಡಿದ್ದಾರೆ.

  ಬಹುಶಃ '3.0' ಅಂತ ಸಿನಿಮಾ ಏನಾದರೂ ಬಂದ್ರೆ, ಆ ಚಿತ್ರದಲ್ಲಿ ಸನಾ (ಐಶ್ವರ್ಯ ರೈ ಬಚ್ಚನ್ ಪಾತ್ರ) ಬಂದರೂ ಬರಬಹುದು. ಇನ್ನುಳಿದಂತೆ ಶಂಕರ್ ನಿರ್ದೇಶನ, ಎ ಆರ್ ರೆಹಮಾನ್ ಸಂಗೀತ ಈ ಚಿತ್ರಕ್ಕಿದೆ. ಸುಮಾರು 600 ಕೋಟಿ ವೆಚ್ಚದಲ್ಲಿ '2.0' ಸಿದ್ಧವಾಗಿದೆ.

  English summary
  Aishwarya Rai Bachchan played the main lead in 2.0's prequel Robot but has been missing from the trailers and promotional material of 2.0. Director Shankar has now confirmed that she'll be a part of the film. 2.0

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X